»   »  ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರವಿಮರ್ಶೆ

ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರವಿಮರ್ಶೆ

Posted By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಕೋಮಲ್ ಮತ್ತೆ ನಾಯಕನಾಗುವುದು ಯಾವಾಗ?ಈ ಪ್ರಶ್ನೆಗೆ ನಿರ್ದೇಶಕ ಎ.ಆರ್.ಬಾಬು ಉತ್ತರಕೊಟ್ಟಿದ್ದಾರೆ. ಕೋಮಲ್ ಇಲ್ಲಿ ನಾಯಕಿ ಜತೆಸುಯ್ ಟಪಕ್ ಅಂತ ಕುಣಿದಿದ್ದಾರೆ. ಕೇಡಿ ಜತೆ ಆ ರಿಬಾಕ್ ಅಂತಹೊಡೆದಾಡಿದ್ದಾರೆ. ನಾಯಕ ನಾನೇ ಈ ಕತೆಗೆ ಎಂದು ಪರದೆ ತುಂಬಾಓಡಾಡಿದ್ದಾರೆ. ಹಾಗೆ ಮಾಡುವ ಮೂಲಕ ಮತ್ತೆ 'ಗರಗಸ" ಕುಯ್ಯಲುಶುರುಮಾಡಿದ್ದಾರೆ.

ಆದರೆ ಎಲ್ಲೋ ಒಂದು ಕಡೆ ಎಡವಿದ್ದಾರಾ?ಹೌದೌದು ಎನಿಸುವುದು ಸಿನಿಮಾ ಶುರುವಾದ ಹತ್ತುನಿಮಿಷದ ನಂತರ. ನಿರ್ದೇಶಕ ಎ.ಆರ್. ಬಾಬುಅಪ್‌ಡೇಟ್ ಆಗಿಲ್ಲ. ಯಾವುದೋ ಹಳಸಲು ಕತೆಗೆಕೋಮಲ್ ಮುಖವಾಡ ಹಾಕಿ,ಜನರ ಕಿವಿಗೆ ಹೂವಿನ ಬಾಣಸಿಕ್ಕಿಸಿದ್ದಾರೆ.

ಇಲ್ಲಿ ಒಂದು ಪುಟ್ಟಬದಲಾವಣೆ ಎಂಬಂತೆ ಈ ತನಕಬಾಬು ಕಡಿಮೆ ಬಜೆಟ್ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದರು. ಚಮಕಾಯ್ಸಿಚಿಂದಿ ಉಡಾಯ್ಸಿ ಚಿತ್ರದಲ್ಲಿ ನಿರ್ಮಾಪಕರ ದುಡ್ಡನ್ನುಮಲೇಷಿಯಾ ಬೀಚ್‌ನಲ್ಲಿ ಸುರಿದಿದ್ದಾರೆ. ಸಿನಿಮಾ ದ್ವಿತಿಯಾರ್ಧಪೂರ್ತಿ ಮಲೇಷಿಯಾದಲ್ಲಿ ಕೊಮಲ್ ಮತ್ತು ನಾಯಕಿ ನಿಸುಬ್ಬಯ್ಯ...

ಒಂದು ಹುಡುಗಿಯ ಹಿಂದೆ ಹೋಗುವ ಮೂರು ಹುಡುಗರ ಕತೆಇದು. ಅವಳನ್ನು ಪಡೆಯಲು ಅವರು ಏನೆಲ್ಲಾ ಹರಸಾಹಸ ಪಡುತ್ತಾರೆಎಂಬುದನ್ನು ಬಾಬು ಒಗರು ಒಗರಾಗಿ ಚಿತ್ರಿಸಿದ್ದಾರೆ. ಕೆಲವು ದೃಶ್ಯಗಳುಅನಗತ್ಯ ಎನಿಸುತ್ತವೆ. ಮತ್ತೆ ಕೆಲವು ಎಷ್ಟು ಹೊತ್ತಾದರೂಮುಗಿಯುವುದಿಲ್ಲ.

ಕಾಮಿಡಿ ಚಿತ್ರನೋಡಿ ಹೊರಬಂದಾಗ ಒಂದಷ್ಟು ದೃಶ್ಯಗಳು ಮನಸ್ಸಿನಲ್ಲಿ ಉಳಿಯಬೇಕು. ಆದರೆ ಇಲ್ಲಿ ಅವೆಲ್ಲಾ ಇಲ್ಲ.ಕೋಮಲ್ ಇದ್ದಷ್ಟು ಹೊತ್ತು ಕೆಲ ಸಂಭಾಷಣೆ ಇಷ್ಟವಾಗುತ್ತದೆ. ಅದನ್ನುಅವರೇ ತಿದ್ದಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಮಂಜು ಮಾಂಡವ್ಯ ಡೈಲಾಗ್ ಬರೆಯುವ ಮುನ್ನ ಕೊಂಚ ತಲೆಗೆ ಕೆಲಸ್ಕೊಡಬೇಕಿತ್ತು.

ನಿಧಿ ಸುಬ್ಬಯ್ಯಾ ಕುಣಿಯುವಾಗ, ನಡೆಯುವಾಗ,ನುಡಿಯುವಾಗ ಇಷ್ಟವಾಗುತ್ತಾರೆ. ಮಲೇಷಿಯಾ ಬೀಚಿನಲ್ಲಿ ಕೋಮಲ್ಜತೆ ಹೆಜ್ಜೆ ಹಾಕುವಾಗ ಘಲ್ಲು ಘಲ್ಲೆನುತಾ... ಕೋಮಲ್ ಎಂದಿನಂತೆ ತಮ್ಮ ಕೆಲಸವನ್ನು ಶಿಸ್ತಾಗಿ, ಸಂಯಮದಿಂದ ಮಾಡಿದ್ದಾರೆ. ಆದರೆ ಅವರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ.

ಇನ್ನು ಗಿರಿ ದಿನೇಶ್, ರಾಹುಲ್, ಕಿರಣ್ ಎಲ್ಲಾಆಟಕ್ಕುಂಟು ಲೆಕ್ಕಕ್ಕಿಲ್ಲ. ಅವರ ಪಾತ್ರಗಳಿಗೆ ಅರ್ಥವಿಲ್ಲ,ಸ್ವಾರ್ಥವಿಲ್ಲ, ಹೆಚ್ಚು ಹೊತ್ತು ಇರುವುದೂ ಇಲ್ಲ.ತೊದಲು ನುಡಿಯಲ್ಲಿ ಮಾತನಾಡುವ ನಾಣಿ ಪಾತ್ರದಲ್ಲಿ ಸತ್ವವಿದೆ. ಇನ್ನು ಮುಖ್ಯಮಂತ್ರಿ ಚಂದ್ರು,ಟೆನ್ನಿಸ್ ಕೃಷ್ಣ, ಉಮಾಶ್ರೀ, ಸತ್ಯಜಿತ್, ಆಸಿಫ್, ಧರ್ಮ, ಶೋಭರಾಜ್... ಹೀಗೆ ದೊಡ್ಡ ತಾರಾದಂಡೇ ಇದೆ.

ಇಷ್ಟಿದ್ದೂ ಸಿನಿಮಾದಲ್ಲಿ ಪೌಷ್ಟಿಕಾಂಶದ ಕೊರತೆ ಎದ್ದು ಕಾಣುತ್ತದೆ. ಅಶೋಕ್ ಕಷ್ಯಪ್ ಛಾಯಾಗ್ರಹಣದಲ್ಲಿ ಹಾಡುಗಳ ಭಾಗ ಇಷ್ಟವಾಗುತ್ತದೆ. ಕೋಮಲ್ ಕೂಡ ದಷ್ಟ ಪುಷ್ಟವಾಗಿ, ಸುಂದರಪುರುಷನಂತೆ ಕಾಣುತ್ತಾರೆ ಎಂದರೆ ಅದು ಕಷ್ಯಪ್ ಮ್ಯಾಜಿಕ್ ಎನ್ನಬಹುದೇನೋ!

ಮಸ್ತ್ ಬಾಲಾಜಿ ಸಂಗೀತದಲ್ಲಿ ಧಮ್ ಇಲ್ಲ. ಒಂದು ಹಾಡು ಮಾತ್ರತಕ್ಕ ಮಟ್ಟಿಗಿದೆ. ಉಳಿದದ್ದೆಲ್ಲಾ ಡಮ್ಮಾರೆಡಮ್ಮಮ್ಮಾ... ಸಂಕಲನ ಹಾಗೂರೀರೆಕಾರ್ಡಿಂಗ್ ಚಿತ್ರದ ಹಾದಿ ತಪ್ಪಿಸುವಿಕೆಯ ಪ್ರಧಾನಮೈಲುಗಲ್ಲುಗಳು. ಹಾಗಂತ ಸಿನಿಮಾದಲ್ಲಿ ಏನೂ ಇಲ್ಲ ಎಂದಲ್ಲ,ಕೋಮಲ್ ಇದ್ದಾರೆ, ಅಕಸ್ಮಾತ್ ಸಿನಿಮಾ ಓಡಿದರೆ ಅದು ಕೋಮಲ್ ನಿಂದ ಮಾತ್ರ ಎಂದಷ್ಟೇ ಹೇಳಬಹುದು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada