»   » ಪ್ರೇಮಿಸಂ: ರತ್ನಜ ಇನ್ ನ್ಯೂ ಫ್ರೇಮ್

ಪ್ರೇಮಿಸಂ: ರತ್ನಜ ಇನ್ ನ್ಯೂ ಫ್ರೇಮ್

By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

ಪ್ರೇಮ ಒಂದು ಜರ್ನಿ. ಅದು ಹದಿಹರೆಯದಲ್ಲಿ ಮೂಡುವ ಕಾದಂಬರಿ. ಹಸಿಹಸಿ ಕನಸಿನ ಲೋಕ ಕಸಿ ಮಾಡುವ ಕಾವ್ಯಾಂಜಲಿ. ಅದು ಆಡುವ ವಯಸ್ಸು ದಾಟಿದಾಗ ಮೀಟುವ ವೀಣೆ ಎನ್ನುತ್ತದೆ 'ಪ್ರೇಮಿಸಂ". ಪ್ರೀತಿಗೆ ಅರ್ಥವಿಲ್ಲ, ಸ್ವಾರ್ಥವಿಲ್ಲ. ಅಲ್ಲಿ ಕೇವಲ ಕಾಮನೆಗಳಷ್ಟೇ ಕುಂಟಾಬಿಲ್ಲೆ ಆಡುತ್ತವೆ ಎಂಬ ಸಿದ್ಧಾಂತಕ್ಕೆ ಗೋಲಿ ಮಾರೋ ಎನ್ನುತ್ತಾರೆ ನಿರ್ದೇಶಕ ರತ್ನಜ.

ಇದು ತೆಲುಗಿನ 'ಪ್ರೇಮ ದೇಶಂ' ಚಿತ್ರದ ಎಳೆ ಆಧರಿಸಿದ ಚಿತ್ರ.ಮೊದಲಾರ್ಧದ ಅರ್ಧ ಭಾಗದಲ್ಲಿ ಆ ಛಾಯೆಯಿದೆ. ಹೀಗಿದ್ದೂ ಚಿತ್ರದಲ್ಲಿ ನಮ್ಮತನವಿದೆ. ಹಂಸಲೇಖಾ ಸಂಗೀತದ ರಸದೋಕುಳಿಯಿದೆ. ಮೂರು ಹಾಡುಗಳಂತೂ ಮಸ್ತ್ ಮಜಾ ಕೊಡುತ್ತವೆ.

ನಾಯಕಿ ಅಮೂಲ್ಯಾ ತನ್ನ ಪಾತ್ರವನ್ನು ಪ್ರೇಮಿಸಿ ಮಾಡಿದ್ದಾರೆ. ಚೇತನ್/ವರುಣ್ ನಟನೆಯಲ್ಲಿ ವಿಶೇಷ ಎನರ್ಜಿಯಿದೆ. ಇಬ್ಬರಿಗೂ ಉತ್ತಮ ಭವಿಷ್ಯವಿದೆ. ಸುನೀಲ್‌ರಾವ್ ಒಂದಷ್ಟು ಹೊತ್ತು ಕಚಗುಳಿ ಇಡುತ್ತಾ ಸಾಗುತ್ತಾರೆ. ಅವಿನಾಶ್, ಅನಂತನಾಗ್, ನೀನಾಸಂ ಅಶ್ವತ್ಥ್ ಬಗ್ಗೆ ಹೇಳಬೇಕಿಲ್ಲ.ಚಿತ್ರ ನೋಡಿ ಹೊರಬಂದಾಗ ಒಂದಷ್ಟು ವಿಷಯಗಳು ನಮ್ಮ ಹೆಗಲೇರಿಕುಳಿತಿರುತ್ತವೆ. ಅದು ಏನೆಂದು ಗೊತ್ತಾಗಲು ಸಿನಿಮಾ ನೋಡಬೇಕು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada