»   » ಜನನಿ ಚಿತ್ರ ವಿಮರ್ಶೆ; ಹಳೆ ಪಾತ್ರೆ ಹಳೆ ಸೀಸೆ!

ಜನನಿ ಚಿತ್ರ ವಿಮರ್ಶೆ; ಹಳೆ ಪಾತ್ರೆ ಹಳೆ ಸೀಸೆ!

Posted By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಆತ ನಡೆದರೆ ಶಾರೂಖ್, ನಿಂತರೆ ಅನಿಲ್ ಕಪೂರ್, ಬೈಕ್ ಏರಿ ಹೊರಟರೆ ಶಾಹೀದ್ ಕಪೂರ್, ಹೊಡೆದಾಟಕ್ಕೆ ನಿಂತರೆ ಕಲಿಯುಗದ ಅಕ್ಷಯ್ ಕುಮಾರ್! ಕುಣಿತಕ್ಕೆ ಲಂಗಿಲ್ಲ. ಜಿಗಿತಕ್ಕೆ ಲಗಾಮಿಲ್ಲ. ಜಗತ್ತಿನ ವಿಚಿತ್ರ ಸೃಷ್ಟಿಯಲ್ಲಿ ಒಂದು ಆ ಪಾತ್ರ. ಹೆಸರು ಶಿವಾ.

ಆರೋಪಿ ತಾಯಿ ಅನಿವಾರ್ಯ ಕಾರಣಕ್ಕೆ ಅಪರಾಧಿಯಾಗಿ ಕಂಬಿಯನ್ನು ಮೇಲಿಂದ ಕೆಳಕ್ಕೆ ಎಣಿಸುತ್ತಿರುತ್ತಾಳೆ. ಮಗ ಕಾಲೇಜ್ ಹೀರೊ. ಹುಡುಗಿಯೊಬ್ಬಳು ಆ ಶಿವನ ಹಿಂದೆ ತಾಂಡವವಾಡುತ್ತಾಳೆ. ನರ್ತನಕ್ಕೂ ನಿಲ್ಲುತ್ತಾಳೆ. ಆದರೆ ಅದೆಲ್ಲ ಬರೀ ಕನಸು. ನನಸಾಗುವ ಹೊತ್ತಿಗೆ ಶಿವ ಮಿಲಿಟರಿ ಸೇರಲು ಮುಂದಾಗುತ್ತಾನೆ...

ನಾಯಕನ ಪಾತ್ರ ಮಾಡಿರುವ ಅಬ್ದುಲ್ಲಾ ಅಲಿಯಾಸ್ ಶಿವಾ ಇರುವುದು ಮುಂಬಯಿಯಲ್ಲಿ. ಅಲ್ಲಿಂದ ಇಲ್ಲಿಗೆ ಬಂದು ಕನ್ನಡ ಸಿನಿಮಾ ಮಾಡಿದ್ದಾರೆ ಎನ್ನುವ ಸಿಂಪತಿಗಷ್ಟೇ ಸಿನಿಮಾ ನೋಡಬೇಕು. ಎಂಟು ವರ್ಷದ ಹಿಂದೆ ತಯಾರಾಗಿ ಈಗ ಬಿಡುಗಡೆಯಾಗಿದೆ ಎನ್ನುವುದು ಇನ್ನೊಂದು 'ಪ್ಲಸ್ ಪಾಯಿಂಟ್". ಖುಷ್ಬೂ ಎಂದಿನಂತೆ 'ಆಂಟಿ ಪ್ರೀತ್ಸೆ".

ನಾಯಕಿ ವಿಭಾ ರೈಗೆ ಕೈಕಾಲು ಕುಣಿಸುವುದನ್ನು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಜಯಸುಧಾ ತಾಯಿಯ ಪಾತ್ರಕ್ಕೆ ಬೆಸೆದುಕೊಂಡಿದ್ದಾರೆ. ಈಗಿನ ಪ್ರಕಾಶ್ ರಾಜ್‌ಗೂ ಆಗಿನ ರೈಗೂ ಹೆಚ್ಚು ಸಾಮ್ಯತೆ ಕಾಣುವುದಿಲ್ಲ. ಒಟ್ಟಾರೆ ನಿರ್ದೇಶಕ ರಾಜ್‌ಕುಮಾರ್ ಜೈನ್ ತಕ್ಕ ಮಟ್ಟಿಗೆ ಪ್ರಯತ್ನ ಮಾಡಿದ್ದಾರೆ. ಒಳ್ಳೆ ಹೀರೊ ಸಿಕ್ಕರೆ ಒಳ್ಳೆ ಸಿನಿಮಾ ಮಾಡುತ್ತಾರೆ. ಅಂಥ ಅವಕಾಶ ಅವರಿಗೂ ಸಿಗಲಿ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada