»   »  ಚಿತ್ರ ವಿಮರ್ಶೆ: ಮೂರು ಗುಟ್ಟು, ಒಂದು ಸುಳ್ಳು, ...

ಚಿತ್ರ ವಿಮರ್ಶೆ: ಮೂರು ಗುಟ್ಟು, ಒಂದು ಸುಳ್ಳು, ...

Posted By: *ವಿನಾಯಕರಾಮ್
Subscribe to Filmibeat Kannada

ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ ಒಂದು ಮನೆ. ಅಲ್ಲಲ್ಲ ಭೂತ' ಬಂಗಲೆ. ಕೂಡು ಕುಟುಂಬ. ಅಪ್ಪ, ಅಮ್ಮ, ಅಣ್ಣ, ತಂಗಿಯರು...ಅಪ್ಪ ಅಮ್ಮ ತಿರುಪತಿಗೆ ಹೊರಡುತ್ತಾರೆ. ಆಗ ಮಕ್ಕಳೆಲ್ಲಾ ಸೇರಿ ತಮ್ಮ ಡೌ ಕಹಾನಿ ಓಪನ್ ಮಾಡುತ್ತಾರೆ. ಆ ರಾತ್ರಿ ಬೆಳಗಾಗುವ ಹೊತ್ತಿಗೆ ಅಲ್ಲಿ ಏನೇನೇನೊ ನಡೆಯುತ್ತದೆ... ಇದು ಪಕ್ಕಾ ದಿನೇಶ್ ಬಾಬು ಮಾದರಿಯ ಸಿನಿಮಾ ಹಾಗೂ ಕತೆ. ಕೋಮಲ್ ಇಲ್ಲಿ ಮುಖ ಹಿಂಡುತ್ತಾ ಹಿಂಡುತ್ತಾ ಹಾಸ್ಯದ ಹುಳಿ ಹಿಂಡುತ್ತಾರೆ. ಬಿದ್ದು ಬಿದ್ದು ನಗುವಂತೆ ಮಾಡುತ್ತಾರೆ.

ರಮೇಶ್ ಅರವಿಂದ್ ಇಲ್ಲಿಯವರೆಗೆ ಪೂರ್ಣಪ್ರಮಾಣದ ಹಳ್ಳಿ ಹೈದನ ಪಾತ್ರ ಮಾಡಿಲ್ಲ. ಮೂರು ಗುಟ್ಟಿನಲ್ಲಿ ಮಾಡಿದ್ದಾರೆ. ಮಾಡಿ, ಗೆದ್ದಿದ್ದಾರೆ. ಅವರ ಮಾತಿನ ವರಸೆ, ಅದನ್ನು ಬಳಸಿರುವ ಟೈಮಿಂಗ್, ಅದಕ್ಕೆ ಸರಿಯಾಗಿ ಸಾಥ್ ನೀಡಿರುವ ಕೋಮಲ್... ಎಲ್ಲವೂ ಇಲ್ಲಿ ಪ್ಲಸ್ ಪಾಯಿಂಟ್. ಇಡೀ ಸಿನಿಮಾ ನೋಡಿ ನೋಡಿ, ನಕ್ಕು ಸುಸ್ತಾದ ಪ್ರೇಕ್ಷಕನ ಕಣ್ಣು ಕೊನೆಯ ಹತ್ತು ನಿಮಿಷದ ನಂತರ ಒದ್ದೆಯಾಗುತ್ತದೆ.

ಸಂಭಾಷಣೆಯಲ್ಲಿ ಹೊಸ ಝಲಕ್ ಇದೆ. ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿರುವ ಸುಮಾ ಶಾಸ್ತ್ರಿ ಅಚ್ಚರಿ ಮೂಡಿಸುತ್ತಾರೆ.ಶ್ರೀನಿವಾಸಮೂರ್ತಿ, ಸುಧಾ ಬೆಳವಾಡಿ, ಆಶಾಲತಾ, ಶರಣ್ ಎಲ್ಲರೂ ಸೇರಿ ಚಿತ್ರಕ್ಕೆ ಮತ್ತಷ್ಟು ಕಳೆಕಟ್ಟುತ್ತಾರೆ. ಒಟ್ಟಾರೆ ಇಡೀ ಚಿತ್ರವನ್ನು ಸಕುಟುಂಬ ಸಪರಿವಾರ ಸಮೇತ ನೋಡಲು ಅಡ್ಡಿಯಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada