twitter
    For Quick Alerts
    ALLOW NOTIFICATIONS  
    For Daily Alerts

    ಐಡ್ಯಾ ಮಾಡ್ಯಾರ: ಕಿಲಕಿಲ...ಕಿಲಕಿಲ...ಕಿಲಕಿಲ

    By *ದೇವಶೆಟ್ಟಿ ಮಹೇಶ್
    |

    Idya Madyara, Kannda movie review
    ಮಾಧವ ಭಟ್ಟ...
    ಸರಕಾರಿ ನೌಕರಿಯಲ್ಲಿರುವ ಬ್ರಾಹ್ಮಣ. ಸಭ್ಯ, ಆದರೂ ಅನ್ಯಾಹಾರ' ಸೇವನೆ ಬಗ್ಗೆ ಚಪಲ ಜಾಸ್ತಿ. ಹಾಗಂತ ಹುಂಬ ಅಲ್ಲ. ಮಾತಿನಲ್ಲೇ ಮನೆ ಕಟ್ಟುವ ಮಲ್ಲ. ಹಿಡಿಂಬೆಯಂಥ ಹೆಂಡತಿ ಜತೆ ಏಗುವುದು ಅವನಿಗೆ ಅನಿವಾರ್ಯ. ಆದರೂ ಬಿಂದಾಸ್ ಬದುಕು, ಡೈಲಾಗ್‌ನಲ್ಲೇ ಮೈಸೂರು ಅರಮನೆ ಕಟ್ಟುವ ಚಾಲಾಕಿ...
    ***
    ರಾಧಾಬಾಯಿ
    ಮಾಧವಭಟ್ಟರ ಅರ್ಧಾಂಗಿ. ಅಣ್ಣಾ ಮಹಾರಾಜ್ ಎಂಬ ಮಾಡರ್ನ್ ಸ್ವಾಮೀಜಿಯ ಪರಮ ಭಕ್ತೆ. ಈ ಕಡ್ಡಿ ಎತ್ತಿ ಆ ಕಡೆ ಇಡಬೇಕು ಎಂದಾದರೂ ಅಣ್ಣಾ ಮಹಾರಾಜ್... ಅಣ್ಣಾ ಮಹಾರಾಜ್... ಗಂಡನನ್ನು ಕಂಡರೆ ಗುರ್ರ್. ವಾಚಾಳಿತನದಲ್ಲಿ ಎತ್ತಿದ ಕೈ. ಬೆರಳು ಕೊಟ್ಟರೆ ನೋಡನೋಡುತ್ತಿದ್ದಂತೆ ನುಂಗಿ ಏವ್ ಅಣ್ಣಾ ಮಹಾರಾಜ್ ಎಂದುಬಿಡುತ್ತಾಳೆ...

    ***
    ಅಶ್ವಿನಿ
    ಭಟ್ರ-ಬಾಯಿಯ ಏಕಾಂಗಿ ಮಗಳು. ಅಪ್ಪ ಆಫೀಸಿಗೆ, ಅಮ್ಮ ಸ್ವಾಮಿಗಳ ಆಶ್ರಮಕ್ಕೆ ಹೋದರೆ ಅಶು ಕಾಲೇಜಿಗೆ ಹೋಗುತ್ತಾಳೆ. ಹೋಗುವ ಹಾದಿಯಲ್ಲಿ ಆಟೊ ಹತ್ತುತ್ತಾಳೆ. ಅಲ್ಲೊಬ್ಬ ಡ್ರೈವರ್‌ನನ್ನು ಪ್ರೀತಿಸುತ್ತಾಳೆ. ಅದಕ್ಕೆ ಕಾರಣ: ಅವನಿಗೆ ಒಂದು ಫೋನ್ ಬರುತ್ತದೆ. ಓ... ಒ ನೆಗೆಟಿವ್ ರಕ್ತ ತಾನೆ...? ನಾನೇ ಕೊಡುತ್ತೇನೆ. ಇಗೋ ಈಗಲೇ ಆಟೋನಾ ಆಸ್ಪತ್ರೀ ಕಡೀಕ್ ತಿರುಗಿಸ್ದೆ...' ಅಂತಾನೆ. ಮುಂದಿನ ದೃಶ್ಯದಲ್ಲಿ ಅದನ್ನೇ ಮಾಡ್ತಾನೆ. ಅಲ್ಲಿಗೆ ಅಶ್ವಿನಿ ಪ್ರೇಮ ಪ್ರಸಂಗ ಶುರು...
    ***
    ಬಾಬೂ ರಾವ್
    ಆಟೊ ಡ್ರೈವರ್. ಮಾತು ಕಡಿಮೆ, ಕೆಲಸ ಜಾಸ್ತಿ. ಹೊಡೆದಾಟ, ಗುದ್ದಾಟಗಳೂ ಗೊತ್ತು. ಅಶ್ವಿನಿಯನ್ನು ಪ್ರೀತಿಸಿ, ಮದುವೆಯಾಗುತ್ತಾನೆ. ಆದರೆ ಮಾಧವ ಭಟ್ರಿಗೆ ಅಳಿಯ ಮನೆ ತೊಳೆಯ. ಅಲ್ಲಿಂದ ಶುರುವಾಗುತ್ತದೆ ಅನಂತ ಅವಾಂತರ. ಅತ್ತೆ- ಬಾಬಾ... ಮಾವ -ಗೋ ಗೋ... ಕೊನೆಗೆ ಇಬ್ಬರೂ ಸೇರಿ ಮುದ್ದಿನ ಮಾವಯ್ಯನಿಗೆ ಬುದ್ಧಿ ಕಲಿಸಲು ಐಡಿಯಾ ಮಾಡ್ತಾರೆ...ಇವು ಯಶವಂತ ಸರದೇಶಪಾಂಡೆ ನಿರ್ದೇಶನದಾಗ ಮೂಡಿ ಬಂದಿರುವ ಐಡ್ಯಾ ಮಾಡ್ಯಾರ' ಚಿತ್ರದ ಪಾತ್ರಗಳ ತುಣುಕು ಪರಿಚಯ. ನಗಲಿಕ್ಕೆ ಇಷ್ಟು ಸಾಕು, ನಮಗೆ ಅದೊಂದೇ ಬೇಕು ಎಂದಿದ್ದರ ಈಗಲೇ ನೋಡುವ ಐಡ್ಯಾ ಮಾಡಿ!

    ಯಶವಂತ್ ಆ ಮಟ್ಟಿಗೆ ಬಲು ಬುದ್ಧಿವಂತರು. ಅತ್ಲಾಗ್, ಸಿನಿಮಾನೂ ಅಲ್ಲ, ಇತ್ಲಾಗ್ ಧಾರಾವಾಹಿಯೂ ಅಲ್ಲ. ಇದು ಪಕ್ಕಾ ನಾಟಕವೇ ಎಂದು ಪರಿಗಣಿಸಲೂ ಆಗುವುದಿಲ್ಲ. ಇದೊಂಥರಾ ಮೆಲೋ ಸಿನಿನಾಟಕ ಇದ್ದ ಹಾಗೆ. ಒಂದೇ ಮನೆ, ಒಂದೇ ರಸ್ತೆ, ಒಂದೇ ವರಾಂಡದ ಸುತ್ತ ಕತೆ ಗಿರಕಿ ಹೊಡೆಯುತ್ತದೆ. ಅಲ್ಲಲ್ಲಿ ಮಾತಿನ ಔತಣಕೂಟ, ನಾಯಕ/ನಾಯಕಿಯ ಕಣ್ಣಾಮುಚ್ಚಾಲೆ ಆಟ, ನಗೆಗಡಲಿನಲ್ಲಿ ಹಾಸ್ಯಮಂಥನ, ಆಗಾಗ ಬರುವ ಹಾಡಿನ ತಂದಾನ... ಎಲ್ಲಾ ಹೊಸಾ ಐಡ್ಯಾರೀ...

    ಯಶವಂತ್-ಅವರ ಆ ಹಾವಭಾವ, ಡೈಲಾಗ್ ಡಿಲೆವರಿ, ಇಷ್ಟಗಲ ಕಣ್ಣು, ಅದಕ್ಕೆ ಅನುರೂಪವಾದ ಗಲ್ಲ...ಅಲಲಲಲಲಾ... ಸರ್-ದೇಶ-ಪಾಂಡೆರೀ ಅವ್ರು...ಸುನೇತ್ರಾ ಪಂಡಿತ್ ಕೆಲವು ಕಡೆ ಅರಚಾಟ, ದೊಂಬರಾಟ ನಡೆಸಿದರೂ... ಅಕಟಕಟಾ ಎನ್ನುವಂತಿಲ್ಲ. ಆದರೆ ಕ್ಯಾಮೆರಾವನ್ನು ಮಾತ್ರ ಮುಖಕ್ಕೆ ಹಿಡಿದರೆ ಕಷ್ಟ ಕಷ್ಟ. ಪೂರ್ಣಚಂದ್ರ ತೇಜಸ್ವಿ ನಟನೆಯಲ್ಲಿ ಸ್ಕೋರ್ ಮಾಡುತ್ತಾ ಹೋಗುತ್ತಾರೆ. ಕೊನೆಗೆ ಗೋಲು ಮುಟ್ಟುವ ಮುನ್ನ ಮಾತ್ರ ಕಚಪಚಕಪಚ ಎಂದುಬಿಡುತ್ತಾರೆ. ಫೈಟಿಂಗ್ ಚೆನ್ನಾಗಿಲ್ಲದಿದ್ದರೂ ಅಲ್ಲಿನ ಆಕ್ಟಿಂಗ್ ಇಷ್ಟವಾಗುತ್ತೆ.

    ನಾಯಕಿ ನವ್ಯಶ್ರೀ ನಾಲ್ಕು ಗೋಡೆಗಳ ಮಧ್ಯೆ ಇರುವಾಗ ಹೆಚ್ಚು ಚೆನ್ನಾಗಿ ಕಾಣುತ್ತಾಳೆ. ಹೊರಗಡೆ ಬಂದರೆ ಅರೆರೆ ಇವಳು ಅವಳಾ ಎಂಬ ಅನುಮಾನ ಕಾಡುತ್ತದೆ. ಇತ್ತೀಚೆಗೆ ಹೊಟ್ಟೆ - ಬಾಯಿ ತುಂಬಾ ನಗುವ ಸಿನಿಮಾ ಬಂದಿರಲಿಲ್ಲ. ಅದನ್ನು ಐಡ್ಯಾ ಮಾಡ್ಯಾರ ಪೂರ್ತಿ ಮಾಡಿದೆ. ನೀವೊಮ್ಮೆ ಥಿಯೇಟರ್‌ಗೆ ಹೋಗುವ ಐಡ್ಯಾ ಮಾಡ್ರಿ...

    ಬಿರುಗಾಳಿ: ಗಾಳಿಯಲ್ಲೊಂದು ಹೊಸ ಗೋಪುರ

    Monday, February 9, 2009, 12:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X