»   » ಮುಲಾಜಿಲ್ಲದೆ ನೋಡಬಹುದಾದ ಚಿತ್ರ ಅಲೆಮಾರಿ

ಮುಲಾಜಿಲ್ಲದೆ ನೋಡಬಹುದಾದ ಚಿತ್ರ ಅಲೆಮಾರಿ

Posted By: *ಉದಯರವಿ
Subscribe to Filmibeat Kannada

ಎಲ್ಲ ಪ್ರೇಮ ಕತೆಗಳಲ್ಲಿರುವಂತೆ ಇಲ್ಲೂ ಒಂದಷ್ಟು ತಿರುವುಗಳಿವೆ, ಹೊಡೆದಾಟ, ಬದಿದಾಟಗಳಿವೆ. ಸೆಂಟಿಮೆಂಟು, ಹಾಡು ಕುಣಿತ, ಡಿಶುಂ ಡಿಶುಂಗೂ ಬರವಿಲ್ಲ.

ಪಕ್ಕಾ ಮಾಸ್ ಚಿತ್ರಕ್ಕೆ ಬೇಕಾದ ಎಲ್ಲಾ ಮಸಾಲೆಗಳನ್ನು ನಿರ್ದೇಶಕ ಸಂತು ಚೆನ್ನಾಗಿ ಅರಿದು ಕೊಟ್ಟಿದ್ದಾರೆ. ಅಲೆಮಾರಿ ಚಿತ್ರಕ್ಕೆ ಚಿತ್ರಕತೆಯೇ ಉಸಿರು, ಸಂಭಾಷಣೆಯೇ ಜೀವ. ಲೂಸ್ ಮಾದ ಅಲಿಯಾಸ್ ಯೋಗೇಶ್ ಮತ್ತೆ 'ಅಂಬಾರಿ'ಯನ್ನು ನೆನಪಿಸಿದ್ದಾರೆ.

ಕೂಲಿ ಕಾರ್ಮಿಕ ಪರದೇಶಿಯಾಗಿ ಯೋಗೇಶ್ ಹಾಗೂ ನೀಲಿಯಾಗಿ ರಾಧಿಕಾ ಪಂಡಿತ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕೆಳ ಮತ್ತು ಮೇಲ್ಜಾತಿಯ ಸಂಘರ್ಷಗಳ ತಾಕಲಾಟದಲ್ಲಿ ಕತೆ ಸಾಗುತ್ತದೆ. ಕಡೆಗೆ ಬ್ರಾಹ್ಮಣರ ಹುಡುಗಿ ನೀಲಿ ಹಾಲು ಮಾರುವ ಮೋಹನನಿಗೆ ಸಿಗುತ್ತಾಳಾ ಎಂಬುದೇ ಚಿತ್ರದ ಕತೆ.

ಮಧ್ಯಂತರದಲ್ಲಿ ಕತೆ ಸ್ವಲ್ಪ ಹಿಗ್ಗಿ ಜಗ್ಗಾಡಿದ್ದಾರೆ ಅನ್ನಿಸುತ್ತದೆ. ವಿರಾಮದ ಬಳಿಕ ಕತೆ ಸ್ಪಲ್ಪ ಡಲ್ ಅನ್ನಿಸಿದರೂ ಕೆಲವು ಸನ್ನಿವೇಶಗಳು ಮನಸ್ಸಿಗೆ ಮುದ ನೀಡುತ್ತವೆ. ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೂ ಕತ್ತರಿ ಹಾಕಬಹುದಿತ್ತು.

ಹದಿನೈದು ಇಪ್ಪತ್ತು ನಿಮಿಷಗಳಷ್ಟು ಕತೆಯನ್ನು ಕಡಿಮೆ ಮಾಡಿದ್ದರೆ ಪ್ರೇಕ್ಷಕರನ್ನು ನಿದ್ರಾದೇವಿ ಆವರಿಸುತ್ತಿರಲಿಲ್ಲ. ಪ್ರೇಮ್ ಅಡ್ಡಾದಲ್ಲಿ ಪಳಗಿರುವ ಸಂತು ಇಲ್ಲೂ ಒಂದಷ್ಟು ಜೋಗಿ ಛಾಯೆಗಳನ್ನು ಉಳಿಸಿದ್ದಾರೆ.

ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಸಂತು ಗೆದ್ದಿದ್ದಾರೆ. ಉಳಿದಂತೆ ರಾಜು ತಾಳಿಕೋಟೆ, ಉಮಾಶ್ರೀ ಸಂಭಾಷಣೆ ಚುರುಕಾಗಿದೆ. ಆದಿ ಲೋಕೇಶ್ ಹಾಗೂ 'ಜೋಶ್' ಖ್ಯಾತಿಯ ರಾಕೇಶ್ ಅವರ ಅಭಿನಯ ಮೆಚ್ಚುವಂತಿದೆ. ಅರ್ಜುನ್ ಜನ್ಯಾ ಅವರ ಕೆಲವು ಟ್ಯೂನುಗಳು ಮತ್ತೆ ಮತ್ತೆ ಗುನುಗುವಂತಿವೆ. ಒಟ್ಟಿನಲ್ಲಿ ಒಮ್ಮೆ ಯಾವುದೇ ಮುಲಾಜಿಲ್ಲದಂತೆ ನೋಡಬಹುದಾದ ಸಿನೆಮಾ.

English summary
Read Kannada movie Alemari review. Debutante Santhu has done a neat job in this film. Yogesh alias Loose Maada and Radhika Pandit deserves appreciation for deciding to play such an unglamorous character role in this film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada