For Quick Alerts
  ALLOW NOTIFICATIONS  
  For Daily Alerts

  ನಾ ಕಂಡ ಯೋಗರಾಜ್ ಭಟ್ಟರ ಪರಮಾತ್ಮ

  By * ಬಾಲರಾಜ್ ತಂತ್ರಿ
  |

  ಪುನೀತ್ ಮತ್ತು ಯೋಗರಾಜ್ ಭಟ್ ಚಿತ್ರವೆಂದರೆ ನಿರೀಕ್ಷೆ ಸಹಜ. ಬಹಳ ನಿರೀಕ್ಷೆ ಇಟ್ಟುಕೊಂಡು ಹೋದರೆ ನಿರಾಶೆ ಕೂಡಾ ಅಷ್ಟೇ ಸಹಜ. ಆದರೆ ನಿರೀಕ್ಷೆಗೂ ಮೀರಿ ಅಥವಾ ನಿರಾಸೆ ಮೂಡಿಸುವ ಚಿತ್ರ ಅಂತೂ ಖಂಡಿತ ಇದಲ್ಲ.

  ದಸರಾ ರಜೆಗೆ ಸಹೋದರಿ ಮನೆಗೆ ಹೋಗಿದ್ದ ನಾನು ದಾವಣಗೆರೆಯ ಅಶೋಕ ಚಿತ್ರಮಂದಿರದಲ್ಲಿ ಫ್ಯಾಮಿಲಿ ಸಮೇತ ತುಂಬಿದ ಪ್ರದರ್ಶನ ಕಂಡಿದ್ದ ಮಾರ್ನಿಂಗ್ ಶೋನಲ್ಲಿ ಚಿತ್ರ ವೀಕ್ಷಿಸಿದೆ. ಕನ್ನಡದ ಯಾವುದೇ ಚಿತ್ರದ ಹಣೆಬರಹ ಫಸ್ಟ್ ಡೇ ಫಸ್ಟ್ ಶೋನಲ್ಲೇ ಗೊತ್ತಾಗಿ ಬಿಡುತ್ತೆ. ಚಿತ್ರ ಚೆನ್ನಾಗಿಲ್ಲಾಂತ audience ಕಡೆಯಿಂದ ಪ್ರತಿಕ್ರಿಯೆ ಬಂದರೆ ಚಿತ್ರ ಗೋತಾ ಹೊಡೆಯುವುದು ಮೊದಲ ದಿನವೇ ಗ್ಯಾರಂಟಿಯಾಗುತ್ತದೆ.

  ಅದಕ್ಕೆ ಈ ವರ್ಷ ಬಿಡುಗಡೆಗೊಂಡ ಬಹಳಷ್ಟು ಹೈಪ್ ಚಿತ್ರಗಳ ಉದಾಹರಣೆ ನೀಡಬಹುದು. ಹಾಗಿರುವಾಗ ಮಿಶ್ರ ಪ್ರತಿಕ್ರಿಯೆ ಕಂಡ 'ಪರಮಾತ್ಮ' ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಮತ್ತು ಈಗಾಲೇ ಚಿತ್ರ ಹಿಟ್ ಪಟ್ಟಿಗೆ ಸೇರಿದೆ ಅಂದರೆ ಅದು ಪುನೀತ್ ಅವರ ಪವರ್ ಅಥವಾ ಭಟ್ರ ಕಮಾಲ್.

  ಚಿತ್ರದಲ್ಲಿ ಗಮನಿಸಬೇಕಾದ ಬಹಳಷ್ಟು ಅಂಶಗಳನ್ನು ಗುರುತಿಸದೇ ಚಿತ್ರ ಚೆನ್ನಾಗಿಲ್ಲ ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತೆ ಎನ್ನುವುದು ನನ್ನ ಅನಿಸಿಕೆ. ಇಡೀ ಚಿತ್ರದ Production value ಬಗ್ಗೆ ನಾವು ಮೆಚ್ಚುಗೆ ಸೂಚಿಸಲೇಬೇಕಾಗುತ್ತೆ. ಚಿತ್ರದಲ್ಲಿ ಬಳಸಿಕೊಂಡ ಕಾಸ್ಟ್ಯೂಮ್ಸ್, ಲೋಕೇಷನ್, ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕೆಲಸ. ಇಮ್ರಾನ್ ಸರ್ದಾರಿಯಾ ಅವರ ಕೊರಿಯೋಗ್ರಫಿ, ತನ್ನ ಎರಡನೇ ಚಿತ್ರದಲ್ಲಿ ನಾಯಕಿ ದೀಪಾ ಸನ್ನಿಧಿಯ ನಟನೆ, ಐಂದ್ರಿತಾ ಮುದ್ದಾದ ನಟನೆ, ಹರಿಕೃಷ್ಣ ಅವರ ಸಂಗೀತ ಮುಂತಾದವು...

  ತನ್ನ ಸಿನಿಮಾ ವೃತ್ತಿ ಜೀವನದಲ್ಲಿ ಪುನೀತ್ ಈ ರೀತಿಯ ಕ್ಯಾರೆಕ್ಟರ್‌ನಲ್ಲಿ ನಟಿಸಿಲ್ಲ. ಇದೊಂದು ಟಫ್ ಕ್ಯಾರೆಕ್ಟರ್ ಅಂದರೆ ತಪ್ಪಾಗಲ್ಲಾ. ಬಹಳ ಲೀಲಾಜಾಲವಾಗಿ ಪುನೀತ್ ಅಭಿನಯಿಸಿದ ರೀತಿ ಬಹುಶಃ ಅವರ ತಂದೆಯ ವರಪ್ರಸಾದವೇ ಇರಬಹುದು. ಚೈನಾ ದೇಶದ ಕುಂಗ್ ಫು ಫೈಟ್ ಮತ್ತು ನೀರು ಗದ್ದೆಯಲ್ಲಿನ ಸ್ಟಂಟ್ ದೃಶ್ಯಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ. ಕಾಲೇಜು ಗೇಟಿನಲ್ಲಿ... ಮತ್ತು ಕರಡಿ ಹಾಡಿನಲ್ಲಿ ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ಸಖತ್.

  ಚಿತ್ರದಲ್ಲಿ ಋರಾಣಾತ್ಮಕ ಸನ್ನಿವೇಶಗಳ ಬಗ್ಗೆ ಹೇಳುವುದಾದರೆ ದ್ವಿತೀಯಾರ್ಧದಲ್ಲಿ ಚಿತ್ರಕಥೆಯ ಮೇಲೆ ಭಟ್ರು ಇನ್ನಷ್ಟು ಹಿಡಿತ ಸಾಧಿಸಬೇಕಿತ್ತು. ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಂಗೀತ ಪರಿಕರಗಳನ್ನು ಗುಜುರಿ ಎಂದು ಸಂಬೋಧಿಸುವುದು, ಅಳಿಯನನ್ನು ಹೊಡೆಯುವ ದೃಶ್ಯಗಳು, ಕೆಲವೊಂದು ಸನ್ನಿವೇಶದಲ್ಲಿ ರಂಗಾಯಣ ರಘು ಅವರ ಓವರ್ ಆಕ್ಟಿಂಗ್, ಅವಿನಾಶ್ ಬಾಯಿಂದ ಬರುವ ಮಂಗಳೂರು ಕನ್ನಡ etc.. etc..

  ಒಟ್ಟಾರೆ ನಾವು ಎಂಜಾಯ್ ಮಾಡಿದ ಚಿತ್ರವಿದು. ಕೆಲವೊಂದು ಸನ್ನಿವೇಶಗಳು ಬೋರ್ ಹೊಡಿಸುತ್ತೆ ನಿಜ. ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವುದೂ ಕೂಡಾ ಅಷ್ಟೇ ನಿಜ. ಯಾವುದೇ ಮುಜುಗರ, ಬಿಂಕ, ಆತಂಕವಿಲ್ಲದೆ ಪರಮಾತ್ಮನನ್ನು ಒಮ್ಮೆ ದರ್ಶನ ಮಾಡಬಹುದು.

  English summary
  Read Kannada movie Paramathma readers review. The film directed by eminent Kannada filmmaker Yogaraj Bhat with versatile actor Puneet Raj Kumar in the lead is an out-of-box film which is quite different from their previous films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X