»   » ಎರಡನೆ ಮದುವೆ:ಕಾಮಿಡಿ ಜೀವನ ಸಾಕ್ಷಾತ್ಕಾರ

ಎರಡನೆ ಮದುವೆ:ಕಾಮಿಡಿ ಜೀವನ ಸಾಕ್ಷಾತ್ಕಾರ

Posted By: * ವಿನಾಯಕ ರಾಮ್
Subscribe to Filmibeat Kannada

ಬಹುಶಃ ಇತ್ತೀಚೆಗೆ ಈ ಮಟ್ಟದ ಮನರಂಜನಾತ್ಮಕ ಚಿತ್ರ ಬಂದಿರಲಿಕ್ಕಿಲ್ಲ. ದಿನೇಶ್ ಬಾಬು ಮತ್ತೊಮ್ಮೆಗೆದ್ದಿದ್ದಾರೆ. ಹತ್ತರಲ್ಲಿ ಒಂಬತ್ತು ಕೆಟ್ಟ ಚಿತ್ರ ಮಾಡಿ, ಒಂದನ್ನುಚೆನ್ನಾಗಿ ಮಾಡು ತ್ತಾರೆ ಎನ್ನುವುದಕ್ಕೆ ಮತ್ತೊಂದು ಪ್ರತ್ಯಕ್ಷ ಪುರಾವೆ 'ಎರಡನೇ ಮದುವೆ'!

ಇಡೀ ಚಿತ್ರ ಪೋಷಕ ನಟರ ಸರೋವರ. ಇತ್ತ ಅನಂತನಾಗ್ ಅವರದ್ದು ಬೆಂಕಿಯಂಥ ನಟನೆ. ಅತ್ತ ಸುಹಾಸಿನಿ ಬಿರುಗಾಳಿ. ಶರಣ್ ನಿಂತಲ್ಲೇ ನಗಿಸುತ್ತಾರೆ. ನಗಿಸುತ್ತಾ ನಿಲ್ಲುತ್ತಾರೆ. ತಾರಾ ಬಹಳ ದಿನಗಳ ನಂತರ ಕಾಮಿಡಿ ಪಾತ್ರ ಮಾಡಿದ್ದಾರೆ.

ದ್ವಿತಿಯಾರ್ಧದಲ್ಲಿ ಶರಣ್-ತಾರಾ ಪರದೆ ಮೇಲೆ ಕಂಡರೆ ಜನ ನಗಲು ಶುರುಮಾಡುತ್ತಾರೆ. ನಗುತ್ತಲೇ ಇರುತ್ತಾರೆ. ಜೆನಿಫರ್‌ಗೆ ಹಲ್ಲು ಕಿರಿಯುವುದನ್ನು ಬಿಟ್ಟು ಮತ್ತೇನೂ ಗೊತ್ತಿಲ್ಲ. ಕತೆಯಲ್ಲಿ ಲಾಜಿಕ್ ಹುಡುಕುವ ಪ್ರಶ್ನೆಯೇ ಇಲ್ಲ. ಎರಡು ತಾಸು ಎಂಜಾಯ್ ಮಾಡಬೇಕು ಎಂದು ಬರುವವರಿಗೆಎರಡನೇ ಮದುವೆ ಮಸ್ತ್ ಮಜಾ ಕೊಡುತ್ತದೆ.

ಅಲ್ಲಲ್ಲಿ ಒಂದೊಂದು ಬ್ರೇಕ್ ಕೊಟ್ಟು ನಗಿಸುತ್ತದೆ. ಸುಸ್ತಾಗುವ ಹಂತಕ್ಕೆ ಸಿನಿಮಾ ಮುಗಿಯುತ್ತದೆ! ಅನಂತನಾಗ್ ಪಾತ್ರದ ಬಗ್ಗೆ ಕಾಮೆಂಟ್ ಮಾಡುವುದೇ ಕಷ್ಟ. ರಂಗಾಯಣ ರಘು ಎಂದಿನಂತೆ ನಗಿಸುತ್ತಾರೆ. ನೆನಪಿರಲಿ ಪ್ರೇಮ್ ಪಾತ್ರ ಕೊನೆತನಕ ಮರೆಯುವುದಿಲ್ಲ.

ರಾಜೇಂದ್ರ ಕಾರಂತ್ ಸಂಭಾಷಣೆ ಚಿತ್ರದ ಮತ್ತೊಂದು ವಿಶೇಷ. ಒಂದೇ ಮನೆಯ ಸುತ್ತ ನಡೆಯುವ ಘಟನೆಯನ್ನು ನವಿರಾಗಿ ಹೆಣೆಯುವುದರಲ್ಲಿ ದಿನೇಶ್ ಬಾಬು ಸಿದ್ಧ ಹಸ್ತರು.

ವರ್ಷದ ಹಿಂದೆ ಮಿಸ್ಟರ್ ಗರಗಸ ಚಿತ್ರಬಂದಿತ್ತು. ಈಗ 'ಎರಡನೇ ಮದುವೆ' ಸರದಿ. ಈಸ್ವಮೇಕ್ ಮದುವೆಯಲ್ಲಿ ಉಂಡೋನೇ ಜಾಣ !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada