»   » ಚಿತ್ರವಿಮರ್ಶೆ:ಈ ಚಿತ್ರ ನಿಜಕ್ಕೂ ವಿಸ್ಮಯ

ಚಿತ್ರವಿಮರ್ಶೆ:ಈ ಚಿತ್ರ ನಿಜಕ್ಕೂ ವಿಸ್ಮಯ

By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ಕನ್ನಡದಲ್ಲಿ ಪ್ರೀತಿಗೆ ಸಂಬಂಧಿಸಿದ ಚಿತ್ರಗಳು ಅದೆಷ್ಟೋ ಬಂದಿವೆ. ಬರುತ್ತಿವೆ. ಬರುತ್ತಲೇ ಇರುತ್ತವೆ. ಆದರೆ, ಎಲ್ಲ ಹೊಡೆತಗಳೂ ತೆಂಡೂಲ್ಕರ್ ಹೊಡೆತ ಆಗುವುದಿಲ್ಲ. ಅದೇ ರೀತಿ ಇತ್ತೀಚೆಗೆ ಬರುತ್ತಿರುವ ಲವ್ ಸ್ಟೋರಿಗಳು ಖಂಡಿತ 'ಒಲವೇವಿಸ್ಮಯ' ಆಗುವುದಿಲ್ಲ. ಚೊಚ್ಚಲ ನಿರ್ದೇಶನದಲ್ಲೇ ಟಿ.ಎನ್. ನಾಗೇಶ್ ಅಚ್ಚರಿ ಮೂಡಿಸುತ್ತಾರೆ.

ಒಂದು ಮಂದ ಹಾಗೂ ಸ್ವಾದಿಷ್ಟ ಚಿತ್ರವನ್ನು ನೋಡಿದ ಅನುಭವ ಆಗುವಂತೆ ನಿರೂಪಿಸಿದ್ದಾರೆ. ಪ್ರೀತಿಯಿಂದ ಪರದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಂತರ ಅದು ಮದುವೆಗೆ ತಿರುಗುತ್ತದೆ. ಇನ್ನೇನು ಎಲ್ಲ ಆಗಿಬಿಟ್ಟಿತು ಎನ್ನುವ ಹೊತ್ತಿಗೆ ಒಲವು ವಿಸ್ಮಯ ರೀತಿಯಲ್ಲಿ ಸೋಲುತ್ತದೆ. ವಿಧಿ ವಿಲನ್ ಆಗುತ್ತದೆ. ಆಕೆ ಆಕಡೆ, ಈತ ಈ ಕಡೆ...

ಕತೆಗೆ ತಕ್ಕ ಛಾಯಾಗ್ರಹಣ, ಛಾಯಾಗ್ರಹಣಕ್ಕೆ ತಕ್ಕ ಸಂಗೀತ, ಸಂಗೀತಕ್ಕೆ ತಕ್ಕ ನಿರೂಪಣೆ, ಚಿತ್ರಕತೆ ಸಿನಿಮಾಗೆ ಮತ್ತಷ್ಟು ಮೆರಗು ನೀಡಿದೆ. ವೀರಸಮರ್ಥ್ ಸಂಗೀತದಲ್ಲಿ ಮೂರು ಹಾಡುಗಳು ಮಂದ ಸ್ಮಿತದಂತಿವೆ. ಮೊದಲ ಬಾರಿಗೆ ನಾಯಕನ ಪಟ್ಟ ಅಲಂಕರಿಸಿರುವ ಧರ್ಮ ಕೀರ್ತಿರಾಜ್ ಥೇಟ್ ಕನ್ನಡದ ರಣಬೀರ್ ಕಪೂರ್.

ಒಲವೇ ವಿಸ್ಮಯ ಚಿತ್ರದ ಮೂಲಕ ನಮ್ಮಲ್ಲೊಬ್ಬ ಚಾಕೊಲೇಟ್ ಹೀರೋ ಹುಟ್ಟಿಕೊಂಡಿದ್ದಾನೆ. ನಾಯಕಿ ಪ್ರತಿಭಾ ರಾಣಿ ಸದ್ಯದ ನಾಯಕಿಯರಿಗೆ ಸಡ್ಡು ಹೊಡೆಯುವಂತೆ ನಟಿಸಿದ್ದಾಳೆ. ದ್ವಿತಿಯಾರ್ಧದಲ್ಲಂತೂ ವಂಡರ್‌ಫುಲ್ ನಟನೆ. ಇನ್ನೊಬ್ಬಾಕೆ ಸ್ಫೂರ್ತಿ ಸ್ನೇಹ ಪೂರ್ವಕವಾಗಿ ಬಂದು ನಿಮ್ಮ ಸ್ನೇಹಿತೆಯಾಗುತ್ತಾಳೆ.

ಅನಂತನಾಗ್ ನಟ ನೆಗೆ ಹ್ಯಾಟ್ಸ್ ಆಫ್. ರಾಜು ತಾಳೀಕೋಟೆಯನ್ನು ಸರಿ ಯಾಗಿ ಬಳಸಿಕೊಂಡಿಲ್ಲ. ಕುರಿ ಪ್ರತಾಪನ ಪ್ರಲಾಪ ಕೊಂಚ ಜಾಸ್ತಿ ಆಯ್ತು. ಮೊದಲಾರ್ಧವನ್ನು ಇನ್ನಷ್ಟು ಟ್ರಿಮ್ ಮಾಡಿದ್ದರೆ ಚೆನ್ನಾಗಿತ್ತು. ಹಾಗೇ ಮಿತ್ರ, ಸಂಗ ಮೇಶ ಉಪಾಸೆ, ಸುಧಾ ಬೆಳವಾಡಿ, ಪದ್ಮಜಾ ರಾವ್ ಎಲ್ಲರೂ ತಮ್ಮ ಕೆಲಸಕ್ಕೆ ಅನ್ಯಾಯ ಮಾಡಿಲ್ಲ.

ಮೊದ ಲಾರ್ಧಕ್ಕಿಂತ ದ್ವಿತಿಯಾರ್ಧ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲಿಯೂ ರೀಮೇಕ್ ವಾಸನೆ ಹೊಡೆಯುವುದಿಲ್ಲ. ಪಕ್ಕಾ ಕನ್ನಡ ಮಣ್ಣಿನ ಘಮಲು ಘಮ ಘಮಿಸುತ್ತದೆ... ಇದು ನಿಜಕ್ಕೂ ವಿಸ್ಮಯ...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada