For Quick Alerts
ALLOW NOTIFICATIONS  
For Daily Alerts

ಕೂಲ್ ವಿಮರ್ಶೆ: ನೋ ಲಾಜಿಕ್ ಓನ್ಲಿ ಮ್ಯಾಜಿಕ್

By * ಉದಯರವಿ
|

ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶಗಳು ಹೊರಬಿದ್ದಿವೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ 'ಕೂಲ್' ಕೂಲ್ ಎಂದು ವಿದ್ಯಾರ್ಥಿಗಳ ಮುಂದೆ ಬಂದಿದ್ದಾರೆ. ಚಿತ್ರ ಒಂಚೂರು ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದೇ ಆದರೂ ಪ್ರೀತಿ, ಪ್ರೇಮ, ಪ್ರಣಯಗಳು ಓವರ್ ಟೇಕ್ ಮಾಡಿಬಿಡುತ್ತವೆ. ವಿದ್ಯಾರ್ಥಿಗಳು ಹಿಂದೆ ಉಳಿಯುತ್ತಾರೆ ಲವ್ ಸ್ಟೋರಿ ಮುಂದೆ ಸಾಗುತ್ತದೆ.

ಇದು ಸೀದಾಸಾದಾ ಲವ್ ಸ್ಟೋರಿ. ಒಬ್ಬ ನಾಯಕ. ಅವನು ಕಾಲೇಜು ಹೀರೋ. ಅವನ ಸುತ್ತ ಒಂದಷ್ಟು ಗೆಳೆಯರ ಗುಂಪು. ಅವರೋ ಶುದ್ಧಾತಿ ಶುದ್ಧ ತರ್ಲೆಗಳು. ಕಾಲೇಜಿಗೆ ಹೊಸ ಹುಡುಗಿ ಎಂಟ್ರಿ. ಮೊದಲ ನೋಟದಲ್ಲೆ ಲವ್ವು. ಹುಡುಗಿಯನ್ನು ಪಟಾಯಿಸಲು ಡವ್ವು. ಒಂದಷ್ಟು ಡಿಂಗು ಡಾಂಗು ಸಾಂಗು. ಸ್ಪೀಡ್ ಆಗಿ ಓಡುತ್ತಿರುವ ಕತೆಗೆ ಇದ್ದಕ್ಕಿದ್ದಂತೆ ಬ್ರೇಕು ಬೀಳುತ್ತದೆ. ಅಷ್ಟರಲ್ಲಾಗಲೆ ಮೊದಲಾರ್ಧ ಮುಗಿದಿರುತ್ತದೆ.

ಚಿತ್ರದ ಮೊದಲಾರ್ಧ ಗಾಳಿ ತೆಗೆದ ಟ್ಯೂಬಿನಂತಾದ ಕಾರಣ ಪ್ರೇಕ್ಷಕರಿಗೆ ದ್ವಿತಿಯಾರ್ಧದ ಬಗ್ಗೆ ಯಾವುದೇ ಆಸಕ್ತಿ ಉಳಿಯುವುದಿಲ್ಲ. ಅಂದಹಾಗೆ ಚಿತ್ರದಲ್ಲಿ ಸಂದೇಶವೂ ಇದೆ. ಅದೇನೆಂದರೆ ದುಡುಕಿ ಆತ್ಮಹತ್ಯೆಗೆ ಶರಣಾಗಬೇಡಿ ಎಂಬುದು. ಆದರೆ ಈ ಸಂದೇಶ ಚಿತ್ರದ ಸೂತ್ರವೂ ಅಲ್ಲ ದಾರವೂ ಅಲ್ಲ. ಅದು ಹಾಗೆ ಸುಮ್ಮನೆ ಎಂಬಂತಿದೆ.

ಗಣೇಶ್ ನಟನೆಯಲ್ಲಿ ಲವಲವಿಕೆಯಿದೆ ಆದರೆ ಮುಂಬೈ ಗೊಂಬೆ ಸನಾ ಖಾನ್ ಅಭಿನಯದಲ್ಲಿ ಉಪ್ಪಿಲ್ಲ ಹುಳಿಯಿಲ್ಲ. ಹಾಡುಗಳ ಚಿತ್ರೀಕರಣದಲ್ಲಿ ತಾಜಾತನವಿದೆ. ಒಂದೆರಡು ಹಾಡುಗಳು ಕಣ್ಣಿಗೆ ಕೂಲ್ ಕೂಲ್, ಮನಸಿಗೆ ಹಾಟ್ ಹಾಟ್. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಹೊಸತನವಿಲ್ಲ. ಹಳೆ ಟ್ಯೂನ್‌ಗಳನ್ನೇ ರಿಪೇರಿ ಮಾಡಿ ಹೊಸದಾಗಿ ನುಡಿಸಿದ್ದಾರೆ. ಒಂದೆರಡು ಹಾಡುಗಳೇ ಚಿತ್ರದ ಪ್ಲಸ್ ಪಾಯಿಂಟ್.

ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಹಾಸ್ಯ. ಶರಣ್, ಸಾಧು ಕೋಕಿಲ, ದತ್ತಣ್ಣ ಅವರ ಕಾಮಿಡಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ರತ್ನವೇಲು ಅವರ ಛಾಯಾಗ್ರಹಣಕ್ಕೂ ಒಂದಷ್ಟು ಅಂಕಗಳನ್ನು ನೀಡಬಹುದು. ಹಿರಿಯ ನಟ ರಾಮಕೃಷ್ಣ ಅವರಿಗೆ ತಂದೆ ಪಾತ್ರ ನೀಡಿದ್ದರೂ, ಅವರ ಪಾತ್ರ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ.

ಚಿತ್ರ ನಿರ್ದೇಶನ ಅಷ್ಟು 'ಕೂಲ್" ವ್ಯವಹಾರವಲ್ಲ ಎಂಬುದು ಚಿತ್ರ ನೋಡಿದ ಮೇಲೆ ಅನ್ನಿಸದೆ ಇರದು. ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಹಾಟೂ ಅಲ್ಲದ ಸಖತ್ ಕೂಲೂ ಅಲ್ಲದ ಏನೋ ಒಂಥರಾ ಚಿತ್ರವನ್ನು ಕೊಟ್ಟಿದ್ದಾರೆ. ಲಾಜಿಕ್ ಇಲ್ಲದೆ ಬರಿ ಮ್ಯಾಜಿಕ್‌ನಲ್ಲೇ ಗೋಲ್ಡನ್ ಸ್ಟಾರ್ ಸರ್ಕಸ್ ಮಾಡಿರುವುದು ಎದ್ದುಕಾಣುತ್ತದೆ. ಕತೆ ಮತ್ತು ನಿರೂಪಣೆಯಲ್ಲಿ ಒಂಚೂರು ಬಿಗಿತನವಿದ್ದಿದ್ದರೆ ಚಿತ್ರ ಸೂತ್ರಹರಿದ ಗಾಳಿಪಟದಂತಾಗುತ್ತಿರಲಿಲ್ಲ.

English summary
Here is the review of Kannada movie Kool. It is an romantic entertainer and message oriented film. Ganesh himself directed the film, he has walked down the same old path in "Kool" too. The film have more humor elements that have been a part of Ganesh's previous movies. Sana Khan is the heroine of the film.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more