twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರವಿಮರ್ಶೆ: ಇದು ಒನ್‌ಡೇ ಮ್ಯಾಚೂ ಕಣೋ!

    By * ಚಿತ್ರಗುಪ್ತ
    |

    ಅಪ್ಪು ವೆಂಕಟೇಶ್ ನಿಜಕ್ಕೂ ಒಳ್ಳೆ ಬಾಡಿ ಬಿಲ್ಡರ್. ಅಪ್ಪುವಂಥ ಅಪ್ಪು ಪುನೀತ್ ರಾಜ್‌ಕುಮಾರ್ ಅವರಿಗೇ "ಬಾಡಿ"ಲ್ಯಾಂಗ್ವೇಜ್ ಕಲಿಸಿಕೊಟ್ಟ ಜಗಜ್ಜಟ್ಟಿ.

    ಅಂತಹ ಅಪ್ಪು ವೆಂಕಟೇಶ್ "ಒನ್‌ಡೇ" ಮ್ಯಾಚ್ ಆಡಲು ಹೋಗಿ, ನಗೆಪಾಟಲಿಗೆ ಗುರಿಯಾಗಿದ್ದಾರೆ. ಅವರು ನಟಿಸಿರುವ ಒನ್‌ಡೇ ಚಿತ್ರ ಒಂಥರಾ ಒನ್‌ಮ್ಯಾನ್ ಶೋ. ನಿರ್ದೇಶಕ ನವೀನ್ ಇಡೀ ಚಿತ್ರವನ್ನು ಮ್ಯೂಜಿಕ್ಕು ರಹಿತವಾಗಿ ಮಾಡಿದ್ದಾರಷ್ಟೇ ಅಲ್ಲ, ಲಾಜಿಕ್ಕು ರಹಿತವಾಗಿಯೂ ಮಾಡಿದ್ದಾರೆ.

    ಇದು ಒಂಥರಾ ರೀಮೇಕ್ ಎನ್ನುವುದಕ್ಕಿಂತ ರೀಮಿಕ್ಸ್ ಎನ್ನಬಹುದು. ಹಿಂದಿಯ ಎರಡು ಚಿತ್ರಗಳನ್ನು ಹಿಂದೆ ಮುಂದೆ ಮಾಡಿ, ಒನ್‌ಡೇ ಮ್ಯಾಚ್ ಆಡಿದ್ದಾರೆ ನವೀನ್. ಹಿಂದಿಯ ವೆಡ್ನೆಸ್ ಡೇ ಮತ್ತು ಅಮೀರ್ ಚಿತ್ರಗಳ ಅಂಶಗಳನ್ನು ಕಾಪಿ ಮಾಡಲಾಗಿದೆ.

    ಏರ್‌ಪೋರ್ಟ್‌ನಲ್ಲಿ ಇಳಿದ ವ್ಯಕ್ತಿ ತನ್ನ ಮೊಬೈಲ್ ಮತ್ತು ಸೂಟ್‌ಕೇಸ್ ಅನ್ನು ಮಿಸ್‌ಪ್ಲೇಸ್ ಮಾಡಿಕೊಂಡು, ವಿಲವಿಲ ಒದ್ದಾಡುತ್ತಾನೆ. ಅವನ ಬದಲಾದ ಮೊಬೈಲ್‌ಗೆ ಇನ್ನೊಬ್ಬ ಫೋನ್ ಮಾಡಿ, ಟಾರ್ಚರ್ ಕೊಡುತ್ತಾನೆ. ಆತ ಆ ಕಡೆ ಟಾರ್ಚರ್ ಕೊಡುತ್ತಿದ್ದರೆ ಈ ಕಡೆ ಪ್ರೇಕ್ಷಕರು ಟಾರ್ಚರ್ ತಾಳಲಾರದೇ ಟಾರ್ಚ್ ಬೆಳಕು ಅರಸುತ್ತಾ ಹೋದರೆ ಆಶ್ಚರ್ಯವಿಲ್ಲ!

    ಒಬ್ಬ ಸಿಎಂನನ್ನು ಸಾಯಿಸುವ ಸಲುವಾಗಿ ಹೋಟೆಲ್ ಒಂದರಲ್ಲಿ ಬಾಂಬ್ ಇಟ್ಟಿರುತ್ತಾನೆ ವಿಲನ್. ಅಲ್ಲಿ ಇನ್ನೊಂದಿಷ್ಟು ಮಕ್ಕಳಿರುತ್ತಾರೆ. ಅವರನ್ನು ಬಚಾವ್ ಮಾಡಲು ಹೀರೋ ವೆಂಕಟೇಶ್ ಹೋರಾಡುತ್ತಾನೆ, ಹಾರಾಡುತ್ತಾನೆ. ಅಲ್ಲಿಗೆ ಉದಯವಾಯಿತು ನಮ್ಮ ಚೆಲುವ ಚಿತ್ರರಂಗ.. ರಂಗರಂಗಾ...

    ಇಲ್ಲಿ ಹೀರೋಯಿನ್ ಕಾಟ ಇಲ್ಲ, ಸಂಗೀತದ ಓಟ ಇಲ್ಲ. ಏನಿದ್ದರೂ ಸಸ್ಪೆನ್ಸ್ ಥ್ರಿಲ್ಲರ್ ಕಿಲ್ಲರ್! ಡೈಲಾಗ್‌ನಲ್ಲಿ ಪಂಚ್ ಇಲ್ಲ, ಚಿತ್ರಕತೆಯಲ್ಲಿ ಮಿಂಚಿಲ್ಲ. ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಒಬ್ಬ ಹೀಗೆ ಹೇಳುತ್ತಿದ್ದರಂತೆ-ಒನ್‌ಡೇ ಖಂಡಿತ ಒನ್‌ಡೇಗೇ ಎಂಡ್‌ಡೇ ಆಗುತ್ತದೆ.. ಮಂಡೆ ಬಿಸಿಯಾಗುತ್ತದೆ!

    English summary
    Kannada Movie One Day Review, Actor and Stuntman Appu Venkatesh debut as hero and directed by Naveen. Apart from hero’s muscles and action sequences nothing much for viewers.
    Saturday, February 12, 2011, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X