»   » ಸೆನ್ಸಾರ್ ಮಂದಾಕಿನಿಗೆ ಬಿಸಿ ಮುಟ್ಟಿಸಿದ್ದು ಯಾಕೆ?

ಸೆನ್ಸಾರ್ ಮಂದಾಕಿನಿಗೆ ಬಿಸಿ ಮುಟ್ಟಿಸಿದ್ದು ಯಾಕೆ?

Posted By: Super
Subscribe to Filmibeat Kannada

ಮಾನ್ಯ ನಿರ್ದೇಶಕ ರಮೇಶ್ ಸುರ್ವೆಯವರೆ... ತಮ್ಮ ಮಂದಾಕಿನಿ ಸಿನಿಮಾ ನಿಜವಾಗಿಯೂ ಅದ್ಭುತ'. ಅಥವಾ ಇದೊಂದು ಹೊಸ ಪ್ರಯೋಗ ಎಂದರೂ ದೇವರಾಣೆಗೂ ತಪ್ಪಿಲ್ಲ. ಅಥವಾ ಇದೂ ಒಂದು ಆಕಸ್ಮಿಕ ಎಂದರೂ ಸರೀನೆ. ತುಂಬಾ ಸಿಂಪಲ್ ಆಗಿ ಹೇಳುವುದಾದರೆ ಇದೊಂದು ಅದ್ಧೂರಿ ಸೆಕ್ಸ್  ಸಾಕ್ಷ್ಯಚಿತ್ರ! 

ವಿನಾಯಕ ರಾಮ್ ಕಲಗಾರು

ತಾವು ಇನ್ನಷ್ಟು ಪಾತ್ರ, ಕ್ಯಾಮೆರಾಗಳನ್ನು ಬಳಸಿಕೊಂಡಿದ್ದರೆ ಇದು ವಯಸ್ಕರಿಗೆ ಮಾತ್ರ ಮೀಸಲಾಗಿರುವ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸುತಿತ್ತು. ದುನಿಯಾ ರಶ್ಮಿ ಅವರನ್ನು ಎಷ್ಟು  ಕೆಟ್ಟದಾಗಿ ತೋರಿಸಬಹುದೋ ಅದಕ್ಕಿಂತ ಹೆಚ್ಚಾಗಿ ತೋರಿಸಿದ್ದೀರಿ. ಕೆ.ಕಲ್ಯಾಣ್‌ರ ಸುಮಧುರ ಹಾಡುಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕುಲಗೆಡಿಸಿದ್ದೀರಿ. ಪರೋಕ್ಷವಾಗಿ ಪ್ರೇಕ್ಷಕರಿಗೆ ಉಚಿತ ಲೈಂಗಿಕ ಶಿಕ್ಷಣ ನೀಡಿದ್ದೀರಿ.

ನಿಮ್ಮ ಸಿನಿಮಾದಲ್ಲಿನ ಈ ದೃಶ್ಯಗಳು ತುಂಬಾ ಹಿಡಿಸಿತು. ಹೆಂಡತಿ, ಗಂಡ  ...'  ಎಂದು ಗೊತ್ತಾದ ಮೇಲೆ ಮೈದುನನ ಸಂಗ ಮಾಡುವುದು. ಯಾರೊ ಯಾರನ್ನೋ ಅತ್ಯಾಚಾರ ಮಾಡುವುದನ್ನು ನೋಡಿ, ಆ ಮುಗ್ಧ ಹುಡುಗಿ ಆತಂಕಕ್ಕೀಡಾಗುವುದು. ಗಂಡ, ಹೆಂಡತಿ ಗರ್ಭಿಣಿಯಾಗಲು ಯಾರು ಕಾರಣ ಎಂದು ಶಂಕಿಸುವುದು, ಕಂಡಕಂಡೋರ ಮೇಲೆ ಕೂಗಾಡುವುದು. ಕೊನೆಗೆ ಮಂಪರು ಪರೀಕ್ಷೆ ಮಾಡಿಸುವುದು...! 

ನಿರ್ದೇಶಕರೇ ತಮ್ಮ  ಕಲ್ಪಾನಾತೀತ ಮಂದಾಕಿನಿ'ಗೆ   ಶತಕೋಟಿ ನಮನಗಳು.        

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada