twitter
    For Quick Alerts
    ALLOW NOTIFICATIONS  
    For Daily Alerts

    ಡೆಡ್ಲಿ 2 ವಿಮರ್ಶೆ: ಸಾಹಸಪ್ರಿಯರಿಗೆ ಹಬ್ಬ

    By * ವಿನಾಯಕರಾಮ್
    |

    ಬಹುಶಃ ಕನ್ನಡದಲ್ಲಿ ಈ ಮಟ್ಟದ ಕಡಿಮೆ ಖರ್ಚಿನಲ್ಲೇ ತಯಾರಾದ ಅದ್ದೂರಿ ಚಿತ್ರ ಬಂದಿರಲಿಕ್ಕಿಲ್ಲ... ನಿಜ. ಪ್ರತಿಯೊಂದು ಶಾಟ್‌ಗಳೂ ಬೆಚ್ಚಿಬೀಳಿಸುತ್ತವೆ. ಹಾಗಂತ ಕೋಟಿ ಕೋಟಿ ಸುರಿದು ರಾಮು ಸಿನಿಮಾ ಥರ ಬಕೆಟ್‌ಗಟ್ಟಲೇ ಹಣ ಖರ್ಚು ಮಾಡಿಲ್ಲ.

    ಡೆಡ್ಲಿಯ ವಿಶೇಷತೆ ನಿರ್ದೇಶಕರು ಬಳಸಿರುವ ಕೆಲ ಖತರ್‌ನಾಕ್ ಶಾಟ್‌ಗಳು. ಕ್ಯಾಮೆರಾಮನ್ ಮ್ಯಾಥ್ಯೂ ಎಲ್ಲಿ ಕ್ಯಾಮೆರಾ ಇಟ್ಟಿದ್ದಾರೆ ಎನ್ನುವುದು ಬಿಡಿಸಲಾಗದ ಕಗ್ಗಂಟು! ಒಂದು ಮಾಮೂಲಿ ಕತೆಯನ್ನು ಜೋಡಿಸುವ ದೃಶ್ಯಗಳಿಂದ ವಿಭಿನ್ನವಾಗಿ ಹೇಳಬಹುದು ಎಂಬುದನ್ನು ರವಿ ಶ್ರೀವತ್ಸ ಮತ್ತೊಮ್ಮೆ ನಿರೂಪಿಸಿದ್ದಾರೆ.

    ಒಂದು ದೃಶ್ಯದಲ್ಲಿ ಲೆಕ್ಕಕ್ಕೇ ಸಿಗದಷ್ಟು ಶಾಟ್‌ಗಳಿವೆ. ಇಲ್ಲಿ ಇಟ್ಟ ಕ್ಯಾಮೆರಾ ಕ್ಷಣಾರ್ಧದಲ್ಲಿ ಮತ್ತೆಲ್ಲೋ, ಮರುಕ್ಷಣದಲ್ಲಿ ಇನ್ನೆಲ್ಲೋ... ಬಹುಶಃ ನಟ ಆದಿತ್ಯಾ ಚಿತ್ರಬದುಕಿನಲ್ಲಿ ಈ ಮಟ್ಟದ ಓಪನಿಂಗ್ ಪಡೆದ ಚಿತ್ರ ಇನ್ನೊಂದಿಲ್ಲ. ಅದು ಅಂದು ಬಂದ ಡೆಡ್ಲಿ ಸೋಮ ಚಿತ್ರದ ಸೈಡ್ ಎಫೆಕ್ಟ್ ಇದ್ದರೂ ಇರ ಬಹುದು.

    ಒಂದು ಹಂತದವರೆಗೆ ಹಿಂದಿ ಸಿನಿಮಾ ನೋಡಿದ ಅನುಭವವಾಗುತ್ತದೆ. ಆಶ್ಚರ್ಯ ಎನ್ನುವಂತೇ ಆದಿತ್ಯನ ಗೆಟಪ್ಪು, ನೋಟ, ಮಾತಿನ ಧಾಟಿ, ಆ ಖದರ್ ಎಲ್ಲ ವಿಚಿತ್ರ ರೀತಿಯಲ್ಲಿ ಇಷ್ಟವಾಗುತ್ತದೆ. ಬಹುಶಃ ಒರಿಜಿನಲ್ ಡೆಡ್ಲಿ ಸೋಮನೇ ಈ ಮಟ್ಟಕ್ಕೆ ಬಿಲ್ಡಪ್ ಕೊಟ್ಟಿರಲಿಕ್ಕಿಲ್ಲ!

    ನಿರ್ದೇಶಕರ ಸಿನಿಮಾ ಪ್ರೀತಿ ಪ್ರತೀ ಫ್ರೇಮ್‌ನಲ್ಲೂ ಎದ್ದುಕಾಣುತ್ತದೆ. ಚಿತ್ರದ ನಿರೂಪಣೆಗೆ ಬಳಸಿರುವ ಹೊಸ ಆಯಾಮ ಇಷ್ಟವಾಗುತ್ತದೆ. ದೇವರಾಜ್ ಮತ್ತೊಮ್ಮೆ ಡೈನಾಮಿಕ್ ಸಿಡಿಸುತ್ತಾರೆ. ರವಿ ಕಾಳೆ ಅಭಿನಯ ಮತ್ತಷ್ಟು ಕಳೆ ನೀಡುತ್ತದೆ.

    ನಾಯಕಿ ಮೇಘನಾ ಮೌನವಾಗಿದ್ದು, ಕಿಲೊಮೀಟರ್‌ಗಟ್ಟಲೇ ಮಾತನಾಡುವ ನಾಯಕಿಯರಿಗೆ
    ಸವಾಲು ಹಾಕುತ್ತಾರೆ. ತಾಯಿಯ ಪಾತ್ರದಲ್ಲಿ ಸುಹಾಸಿನಿ ಮಗುವಂತೆ ಕಾಣುತ್ತಾರೆ. ಮುಗ್ಧ ನಟನೆಯಿಂದ ತಾಯಿಯ ಪಾತ್ರಕ್ಕೆ ತಾಯ್ತನ ನೀಡಿದ್ದಾರೆ. ಸಂಗೀತ ಮಾಮೂಲಿ.

    ಥ್ರಿಲ್ಲರ್ ಮಂಜು ಸಾಹಸ ನೋಡುವುದೇ ಒಂದು ಕಣ್ಣಿಗೆ ಹಬ್ಬ. ಒಂದೊಂದು ಹೊಡೆತಗಳೂ ರಿಜಿಸ್ಟರ್ ಆಗುತ್ತವೆ. ಕನ್ನಡದಲ್ಲಿ ಅಪರೂಪಕ್ಕೆ ಇಂಥ ಚಿತ್ರಗಳು ಬರುತ್ತವೆ. ಗಾಳಿ ಬಂದ ಕಡೆ ತೂರಿಕೊಳ್ಳು ವುದು ಬುದ್ಧಿವಂತ ಪ್ರೇಕ್ಷಕನ ಲಕ್ಷಣ!

    Sunday, August 15, 2010, 12:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X