»   »  ಚಿತ್ರವಿಮರ್ಶೆ: ಸ್ವತಂತ್ರ ಪಾಳ್ಯದ ಗಲ್ಲಿಯೊಳಗೆ

ಚಿತ್ರವಿಮರ್ಶೆ: ಸ್ವತಂತ್ರ ಪಾಳ್ಯದ ಗಲ್ಲಿಯೊಳಗೆ

Subscribe to Filmibeat Kannada

*ವಿನಾಯಕರಾಮ್ ಕಲಗಾರು

ರೌಡಿಸಂ, ಭೂಗತ ಜಗತ್ತು, ಕಾಲೇಜು ಹುಡುಗ/ಹುಡುಗಿ, ಮಧ್ಯಮ ವರ್ಗದ ನಾಯಕ, ಹೈಕ್ಲಾಸ್ ನಾಯಕಿ, ಮಚ್ಚಿನ ತೂರಾಟ, ಲಾಂಗಿನಹಾರಾಟ, ಕಂಡಕಂಡಲ್ಲಿ ಕಿತ್ತಾಟ, ಹೀರೊ- ವಿಲನ್ ಕಾದಾಟ...ಕೇಳ್ರಪ್ಪೋ ಕೇಳ್ರಿ; ಈ ಬೀದಿರಂಪಾಟ, ರಸ್ತೆರಾಮಾಯಣ ಬಿಟ್ಟುಬಿಡಿ, ರಕ್ತಪಾತಕ್ಕೆ ಮಂಗಳ ಹಾಡಿ ಎಂಬಮಹಾನ್ ಸಂದೇಶದೊಂದಿಗೆ ದಿ ಎಂಡ್.ಇತ್ತೀಚೆಗೆ ಈ ಸಿದ್ಧ ಸೂತ್ರ, ಅದು ಮತ್ತೆ ಮತ್ತೆ ಮರುಕಳಿಸುವುದು ಮಾಮೂಲಿಯಾಗಿದೆ. ಅದನ್ನು ಈ ಫಿಲ್ಮಿ 'ದುನಿಯಾ"ಎಂದರೂ ಸೂರಿ ನಗುವುದಿಲ್ಲ, ...ಮಳೆ ಮಹಿಮೆ ಎಂದರೆ ಯೋಗರಾಜ್ ಭಟ್ರು ಬೇಸರ ಮಾಡಿಕೊಳ್ಳುವುದಿಲ್ಲ...

ಅದೇ ತಾಳಕ್ಕೆ ತಾನಿ ತಂದಾನ ಎಂದು ಹೆಜ್ಜೆ ಹಾಕಲು ಈ ವಾರವೂ ಒಂದು ಸಿನಿಮಾ ಬಂದಿದೆ; ಸ್ವತಂತ್ರ ಪಾಳ್ಯ. ಹಾಗಂತ ಚಿತ್ರದಲ್ಲಿ ಅದನ್ನು ಹೊರತಾಗಿ ಬೇರೇನಿಲ್ಲ ಎಂದಲ್ಲ. ಏಕೆಂದರೆ ಜನ ಚೇಂಜ್ ಕೇಳುತ್ತಾರೆ, ಕೇಳುತ್ತಲೇ ಇರುತ್ತಾರೆ...ನಿರ್ದೇಶಕ ವೆಂಕಟ್ ಅದು ಕಲಾಸಿಪಾಳ್ಯ, ಕಾಮಾಕ್ಷಿಪಾಳ್ಯ,ಗೌರಿ ಪಾಳ್ಯದ ಆಣೆಗೂ ಸತ್ಯ ಎನ್ನುತ್ತಿದ್ದಾರೆ. ಆ ಮೂಲಕ ಮತ್ತೊಂದು ಅಂಡರ್‌ವರ್ಲ್ಡ್ ಕತೆಗೆ ಕನ್ನಡಿ ಹಿಡಿದಿದ್ದಾರೆ.ಸಿನಿಮಾ ಚೆನ್ನಾಗಿಲ್ಲ ಎಂದಲ್ಲ. ನಾಯಕ ಅರ್ಜುನ್ ಸ್ವತಂತ್ರಪಾಳ್ಯದ ಗಲ್ಲಿಯೊಳಗೆ ಗಿಲಿಗಿಲಿ ಎನ್ನುತ್ತಾರೆ. ಹಿಂದೆ ಹದಿ ಹರೆಯದ ಹುಡುಗನ ಪಾತ್ರ ಮಾಡಿ, ಅಬ್ಬಬ್ಬಾ ಎಂಥ ಹುಡುಗ ಎನಿಸಿಕೊಂಡಿದ್ದ ಅಜ್ಜು ಇಲ್ಲಿ ಸೆಟೆದುನಿಲ್ಲುವಸರದಾರ.

ಒಬ್ಬ ಅಮಾಯಕ ಹುಡುಗ. ಅಪ್ಪ ಅಮ್ಮ, ಸೋದರಿಯ ಮಡಿಲಲ್ಲಿ ಹಾಯಾಗಿರುತ್ತಾನೆ. ಆದರೆ ಆ ಪಾಳ್ಯ ರೌಡಿಪಾಳ್ಯ. ಪೊಲೀಸರ ಪಾಲಿಗೆ ರಣವೀಳ್ಯ. ಬೀದಿ ಬೀದಿಯಲ್ಲಿಭೂಗತ ಜಗತ್ತಿನ ಕಮಟು ವಾಸನೆ. ಹುಳುವಾಗಿದ್ದ ಹುಡುಗಹುಲಿಯಾಗಿ ಬದಲಾಗುತ್ತಾನೆ. ಕಾರಣ ಅಪ್ಪನ ಮರಣ.ರೌಡಿಗಳ ರಾಂಗಾಯಣ. ಮೊದಲಾರ್ಧ ಬರೀ ಬಾಯಲ್ಲಿಮಾತು. ಇನ್ನರ್ಧಮಾತಾಡ್ ಮಾತಾಡ್ ಮಚ್ನಲ್ಲಿ. ನಾಯಕಿಇದ್ದಕ್ಕಿದ್ದಂತೆ ನಾಟ್ ರೀಚೆಬಲ್ ಆಗುತ್ತಾಳೆ. ಯಾಕೆ ಯಾಕೆ...ನೋಡಿ ಸ್ವತಂತ್ರಪಾಳ್ಯ...

ಅರ್ಜುನ್ ಅಚ್ಚುಕಟ್ಟಾಗಿ ನಟಿಸಲುಯತ್ನಿಸಿದ್ದಾರೆ. ಆದರೆ ಆತನ ಮೈಕಟ್ಟು ಆಯಕಟ್ಟಿನಪ್ರದೇಶದಂತಿದೆ. ಮಚ್ಚು ಹೆಚ್ಚು ಮಾತನಾಡುವಾಗ ಆತಅದಕ್ಕಿಂತ ಎತ್ತರ ಇದ್ದರೆ ಅಂದ-ಚೆಂದ ಎಂದ ಲಾಂಗೇಶ್ವರ...ಉದಾಹರಣೆಗೆ ಶಿವಣ್ಣ, ದರ್ಶನ್, ಯೋಗೀಶ್... ಅಷ್ಟೇ ಏಕೆಮೆಂಟಲ್ ಮಂಜ... ನಟನೆ ಬಗ್ಗೆ ಕಾಮೆಂಟ್ ಮಾಡಲುಅವಕಾಶವಿಲ್ಲ. ಅದು ಇಷ್ಟವಾಗುತ್ತದೆ. ಮೊದಲು ಮಾಮೂಲಿ, ಆಮೇಲೆ ಕಪಾಲಿ, ಅಲ್ಲಿಗೂ ಇಲ್ಲಿಗೂ ಅಜಗಜಾಂತರ;ಮಾತಿನಲ್ಲಿ ಧಮ್ ಇದೆ, ಭುಜದಲ್ಲಿ ಬಲವಿದೆ. ಆದರೂಸಣ್ಣಪುಟ್ಟ ಲೋಪದೋಷ ಇದೆ, ಇದ್ದರೂ ಚೆನ್ನಾಗಿದೆ...

ದಾಮಿನಿ ಮೊದಲು ಬಂದು ಅರ್ಧಕ್ಕೇ 'ಏನಿಲ್ಲ...ಏನಿಲ್ಲ... ನನ್ನ ಕೆಲಸ ಇನ್ನೇನಿಲ್ಲ..." ಎಂದು ಮಾಯಾಬಜಾರ್ ನಲ್ಲಿ ಮಾಯವಾಗುತ್ತಾರೆ. ಮತ್ತೆ ಬರುತ್ತಾರೆ, ಬಂದುಮೂರು ದೃಶ್ಯ ಇದ್ದು, ಬಂದ ಹಾದಿಯಲ್ಲಿ.. ಎದೆಗೆನಾಟುವಂತೆ ನಟಿಸುವಲ್ಲಿ ಕೊಂಚಎಡವಿದ್ದಾರೆ. ಕುಣಿತ ಮಾಡದಿದ್ದರೆ ಯಾರೂ ಕೇಳುತ್ತಿರಲಿಲ್ಲ.

ನಿರ್ದೇಶಕವೆಂಕಟ್ ಪ್ರಯತ್ನದಲ್ಲಿವೆರೈಟಿ ಇದೆ.ಚಿತ್ರಕತೆಯಲ್ಲಿಚಮಕ್ ತೋರುವ ಯತ್ನಎದ್ದುಕಾಣುತ್ತದೆ.ನಾಯಕ ಪೊಲೀಸನ ಬೂಟು ನೆಕ್ಕುವ ದೃಶ್ಯ ಕಣ್ಣಿಗೆಕಟ್ಟುತ್ತದೆ. ಸೆಂಟಿಮೆಂಟ್ ದೃಶ್ಯಗಳು ಮನಸ್ಸಿನ ಸುತ್ತ ಗಿರುಕಿಹೊಡೆಯುತ್ತವೆ. ಅದಕ್ಕೆ ತಕ್ಕ ಸಿ.ಆರ್. ಸಿಂಹ-ಜಯಂತಿಜೋಡಿಯ ಅಭಿನಯವಿದೆ. ಸತ್ಯಜಿತ್, ಕಿಲ್ಲರ್ ವೆಂಕಟೇಶ್ ಪೊಲೀಸ್ ಪಾತ್ರದಲ್ಲಿ ಲಕಲಕಲಕ. ಕೀರ್ತಿರಾಜ್ ಬಹಳದಿನಗಳ ನಂತರ ಮತ್ತೊಮ್ಮೆ ಹೆದರಿಸಿ, ಗದರಿಸುವ ಪಾತ್ರಮಾಡಿದ್ದಾರೆ. ಒಂದು ರೇಪ್ ಕೂಡ ಮಾಡು ತ್ತಾರೆ. ಮತ್ತೆಅದೇ ಧಾಟಿ ಮುಂದು ವರಿಸು ತ್ತಾರೆ.

ಕೃಪಾಕರ್ ಸಂಗೀತ ದಲ್ಲಿ ಎರಡು ಹಾಡು ಕೇಳಿ ಕೇಳಿಸಿ, ತಲೆಅಲ್ಲಾಡಿಸಿ...ಹೃದಯಾಹೃದಯಾ... ಸೆಂಟಿಮೆಂಟ್ ಹಾಡುಸೆಂಟ್ ಪರಿಮಳ ಸೂಸುತ್ತದೆ. ಫೈಟಿಂಗ್ ದೃಶ್ಯಗಳು ಎಷ್ಟುಚೆನ್ನಾಗಿದೆ ಎಂದರೆ ಅರ್ಜುನ್‌ಗೆ ಹೊಡೆದಾ ಡಲುಬರುವುದಿಲ್ಲ ಎಂಬ ಸತ್ಯ ಗೊತ್ತಾಗುವುದೇ ಇಲ್ಲ. ಸುದರ್ಶನ್ಎಂ.ಎಲ್.ಎ. ಪಾತ್ರ ಪ್ರೇಕ್ಷಕರಿಗೆ ಹಲ್ಲು ಕಡಿಯಲು ಪ್ರೇರೇಪಿಸುತ್ತದೆ. ವಿಲನ್ ಅಂದರೆ ಹಾಗಿರಬೇಕು ಎಂದ ನಮ್ಮ "ವಜ್ರಮುನಿ"ಶ್ವರ!

ನಾಗಶೇಖರ್ ಕಾಮಿಡಿ ಅರ್ಥವಾಗದಿದ್ರೂ ಅದುಕಾಮಿಡಿ, ನಗಿಸಲು ಅವರು ನಾನಾ ರೀತಿಯ ನಾಟಕ ಆಡಿದ್ದಕ್ಕೆ ಒಮ್ಮೆ ನಕ್ಕುಬಿಡಿ. ಉಮೇಶ್, ಬ್ಯಾಂಕ್ ಜನಾರ್ಧನ್, ವಿಜಯ ಸಾರಥಿ... ಪಾತ್ರವರ್ಗ ನ್ಯಾಯ ಸಲ್ಲಿಸಿದ್ದಾರೆ. ಕ್ಲ್ಮೆಮ್ಯಾಕ್ಸ್ ಹೇಗಿದೆ ಎಂದು ಕೇಳಬೇಡಿ ಪ್ಲೀಸ್... ಅದೊಂಥರಾ ಹಳೇಟ್ರೆಂಡ್. ಬಿರುಗಾಳಿಗಳಿಗೆ ಮಣ್ಣು ಮುಕ್ಕಿಸುವ ಅದೇ ಮಂತ್ರ,ಅದೇ ತಂತ್ರ...

ಕೊನೇ ವೀಳ್ಯ : ಕೊನೆಯಲ್ಲಿ ಒಂದು ಪಾತ್ರ ತೇಲಾಡುತ್ತ,ವಾಲಾಡುತ್ತ ಬರುತ್ತದೆ. ಕೆಲ ಹೊತ್ತಿನಲ್ಲೇ ಕಾಡಲು ಶುರುಮಾಡುತ್ತದೆ. ಖಾರ ಮಾತು, ಖಡಕ್ ಗತ್ತು, ಕಣ್ಣಲ್ಲೇ ಗೆಲ್ಲುವತಾಕತ್ತು...ಎಲ್ಲರೂ ಆಶ್ಚರ್ಯ ಸೂಚಕ ಚಿಹ್ನೆಯಾಗಿ, ಯಾರೀತಯಾರೀತ ಎನ್ನಲು ಶುರುಮಾಡು ತ್ತಾರೆ. ಆತ ಯಾರು ಗೊತ್ತೆ:ನಿರ್ದೇಶಕ ವೆಂಕಟ್. ಖಳ ಪಾತ್ರದಲ್ಲಿ ಅವರು ಗೆಲ್ಲುತ್ತಾರೆ.ಎದುರಿಗೆ ಕುಳಿತಿರುವ ವರನ್ನು ಗಿಲ್ಲುತ್ತಾರೆ. ಕನ್ನಡದಲ್ಲಿ ಖಳನಟರಿಗೆ ಬರ ಎಂಬ ಮಾತನ್ನು ಸುಳ್ಳಾಗಿಸುತ್ತಾರೆ. ಅಕಸ್ಮಾತ್ಅವರು ನಿರ್ದೇಶನ ಬಿಟ್ಟು ಖಳ ಪಾತ್ರಗಳ ಪರಕಾಯ ಪ್ರವೇಶಮಾಡಿದರೂ ಭವಿಷ್ಯ ಬೆಳಗುವ ಎಲ್ಲಾ ಲಕ್ಷಣಗಳಿವೆ!

ಕೆಎ 99 ಬಿ 333: ಶಕಲಕ ಭೂಮ್ ಭೂಮ್ ಚಿತ್ರ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada