For Quick Alerts
ALLOW NOTIFICATIONS  
For Daily Alerts

ಕಳ್ಳ ಮಳ್ಳ ಸುಳ್ಳ ಕ್ರೇಜಿ ಫ್ಯಾಮಿಲಿ ಪ್ಯಾಕೇಜ್

By * ಬಾಲರಾಜ್ ತಂತ್ರಿ
|

Kalla Malla Sulla still
ತಮ್ಮತಮ್ಮ ಗಂಡಂದಿರು ಕಲಿಯುಗದ ಶ್ರೀರಾಮಚಂದ್ರ ಎಂದುಕೊಂಡ ಹೆಂಡತಿಯರಿಗೆ ತಮ್ಮ ಪತಿ ಮಹಾಶಯರು ಕಳ್ಳ, ಮಳ್ಳ, ಸುಳ್ಳ ಎಂದು ಗೊತ್ತಾದಾಗ ಏನಾಗುತ್ತೆ? ಇದೇ ಚಿತ್ರದ ಒನ್ ಲೈನ್ ಸ್ಟೋರಿ. ಇದು 2005 ರಲ್ಲಿ ಬಿಡುಗಡೆಗೊಂಡ ಹಿಂದಿ 'ನೋ ಎಂಟ್ರಿ' ಚಿತ್ರದ ಕನ್ನಡ ಅವತರಿಣಿಕೆ.

ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡುವ ರಮೇಶ್ (ರಮೇಶ್ ಅರವಿಂದ್). ಅವರ ಪತ್ನಿ ರಮ್ಯಾ (ಯಜ್ಞಾ ಶೆಟ್ಟಿ). ಈಕೆ ಸಂಶಯ ಪಿಶಾಚಿ. ಮನೆಯ ತೊಂದರೆಗಳನ್ನು ಬದಿಗೊತ್ತಿ ರಮೇಶ್, ಸ್ತ್ರೀಲೋಲ ಸಚಿವರೊಬ್ಬರ (ರಾಜು ತಾಳಿಕೋಟೆ) ಹಿಂದೆ ಬಿದ್ದು ಆತನ ಆಟ ಬಯಲು ಮಾಡಲು ಫೋಟೋಗ್ರಾಫರ್ ರಘು (ವಿಜಯ್ ರಾಘವೇಂದ್ರ) ಸಹಾಯ ಪಡೆಯುತ್ತಾನೆ.

ವಿಮಾನನಿಲ್ದಾಣದಲ್ಲಿ ಸಚಿವನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಧಾವಿಸುತ್ತಿದ್ದಾಗ ರವಿ (ರಸಿಕರರಾಜ, ರವಿಚಂದ್ರನ್) ಪಬ್ಲಿಕ್ ರೋಡ್ ನಲ್ಲಿ ವಿದೇಶಿ ತರುಣಿಯೂಬ್ಬಳಿಗೆ ಖುಲ್ಲಂ ಖುಲ್ಲಾ ಚುಮ್ಮಾ ನೀಡುತ್ತಿರುತ್ತಾನೆ. ರಘು ಈ ದೃಶ್ಯವನ್ನು ರವಿ ಹೆಂಡತಿಗೆ (ಮಾಳವಿಕಾ) ತೋರಿಸಲು ಕ್ಲಿಕ್ಕಿಸುತ್ತಾನೆ. ಕಥೆ ಸಾಗುತ್ತಾ ಸುಸೈಡ್ ಪಾಯಿಂಟ್‌ನಲ್ಲಿ ರಘುವಿಗೆ ನ್ಯಾಯಾಧೀಶರ ಮಗಳ (ಸಂಜನಾ) ಪರಿಚಯಾಗುತ್ತೆ.

ಈ ಮಧ್ಯೆ ರಮೇಶ್ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತೆ. ಇದನ್ನೇ ಬಳಸಿಕೊಂಡು ರವಿ, ರಮೇಶ್‌ನನ್ನು ಕ್ಲಬ್‌ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಖುಷ್ಬೂ (ರಾಗಿಣಿ) ಪರಿಚಯವಾಗುತ್ತೆ. ರಾಗಿಣಿ ರಮೇಶ್‌ನನ್ನು ತನ್ನ ಗಾಳಕ್ಕೆ ಬೀಳಿಸಿಕೊಳ್ಳುತ್ತಾಳೆ. ಆದರೆ ಪತ್ನಿಗೆ ಮೋಸ ಮಾಡಲಾಗದೆ ಕ್ಲಬ್ ಬಿಟ್ಟು ಹೋಗುತ್ತಾನೆ. ರವಿ ಖುಷ್ಬೂಗೆ ರಮೇಶ್ ನಡತೆಯ ಮೇಲೆ ಕಳಂಕ ತರಲು ಎರಡು ಲಕ್ಷ ರೂಪಾಯಿ ಆಫರ್ ನೀಡುತ್ತಾನೆ.

ಒಂದು ಸುಳ್ಳು ಹೇಳಿ ಮೂವರು ನಾಯಕರ ಗತಿ ಅಯೋಮಯವಾಗುತ್ತೆ. ಮೂವರು ನಾಯಕಿಯರಿಗೆ ತಮ್ಮ ತಮ್ಮ ಗಂಡಂದಿರ ನಿಜ ದರುಶನವಾದಾಗ ತಮ್ಮ ಕುಟುಂಬ ತೊರೆದು ಬರುತ್ತಾರಾ? ಅಥವಾ ಗಂಡಂದಿರನ್ನು ಕ್ಷಮಿಸುತ್ತಾರಾ? ಕನ್ನಡ ಚಿತ್ರಗಳನ್ನು ಕನ್ನಡ ಚಿತ್ರಮಂದಿರದಲ್ಲೇ ನೋಡಿ..

ನಿರ್ದೇಶಕ ಉದಯ್ ಪ್ರಕಾಶ್ ಮೂಲ ಚಿತ್ರದ ದೃಶ್ಯಗಳಿಗೆ ಕನ್ನಡ ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಾಯಿಸಿ ಉತ್ತಮ ಹಾಸ್ಯ ಪ್ರಧಾನ ಚಿತ್ರ ನೀಡಿದ್ದಾರೆ. ನಿರ್ಮಾಪಕ ಕೊಬ್ಬರಿ ಮಂಜು ದುಡ್ಡು ಸುರಿಯೋಕೆ ಕಂಜೂಸ್ ಮಾಡಿಲ್ಲ. ಇಮ್ರಾನ್ ಸರ್ದಾರಿಯ (ಕೊರಿಯೋಗ್ರಫಿ), ಸೀತಾರಾಮ್ (ಛಾಯಾಗ್ರಹಣ), ಅಲೆಕ್ಸ್ ಪಾಲ್ (ಸಂಗೀತ) ತಮ್ಮ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಮೂವತ್ತು ವರುಷ ಅನುಭವವಿರುವ ರವಿಚಂದ್ರನ್ ಸೇರಿದಂತೆ ರಮೇಶ್ ಮತ್ತು ವಿಜಯ್ ರಾಘವೇಂದ್ರ ನಟನೆಯಲ್ಲಿ ಸೈ. ಯಜ್ಞಾ ಶೆಟ್ಟಿ, ರುಷಿಕಾ, ಸಂಜನಾ, ಮಾಳವಿಕಾ ನಟನೆಯಲ್ಲಿ ಜೈ. ಆದರೆ ರಾಗಿಣಿ ನಟನೆ ಮತ್ತು ಮೈಮಾಟ ನೋಡಿ ಸಿನಿಮಾ ಹಾಲ್‌ನಲ್ಲಿ ಪಡ್ಡೆಗಳ ಶೀಟಿ ಮೇಲೆ ಶೀಟಿ. ಆಕೆಯ ತುಪ್ಪ..ತುಪ್ಪ.. ಬೇಕಾ.. ಎನ್ನೋ ಐಟಂ ಸಾಂಗೊಂದು ಮಸ್ತ್...ಮಸ್ತ್...

ಆದರೆ, ಇವೆಲ್ಲಕ್ಕಿಂತ ಮಿಗಿಲಾಗಿ ಇಡೀ ಚಿತ್ರದ Stand out Performance ಅಂದರೆ ಕಾಮಿಡಿ ನಟರಾದ ಸಾಧು ಕೋಕಿಲಾ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್ ಮತ್ತು ರಾಜು ತಾಳಿಕೋಟೆ ಅಭಿನಯ ಮತ್ತು ಎಂ ಎಸ್ ರಮೇಶ್ ಅವರ ಸಂಭಾಷಣೆ.

English summary
Kannada movie Kalla Malla Sulla review. Ravichandran, Ramesh Arvind, Vijay Raghavendra, Yajna Shetty, Rushika Singh, Malavika, Sadhu Kokila, Raju Talikote, SihiKahi Chandru are in cast. The movie had been directing by Udayprakash. The story and screenplay are sourced from middle-class couples’ insecurity their struggles et al and make for an engaging drama with neither the husband nor the wife any worse for it.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more