For Quick Alerts
  ALLOW NOTIFICATIONS  
  For Daily Alerts

  ತರುಣ್ ಚಂದ್ರ ಚಿತ್ರ 'ಅಚ್ಚು-ಮೆಚ್ಚು' ಚಿತ್ರವಿಮರ್ಶೆ

  |

  ಚಿತ್ರಕ್ಕೆ 'ಅಚ್ಚುಮೆಚ್ಚು' ಅನ್ನುವ ಶೀರ್ಷಿಕೆ ಚಿತ್ರತಂಡಕ್ಕೆ ಅಚ್ಚುಮೆಚ್ಚು ಆಗಿದೆ. ಆದರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಲು ಸಾಧ್ಯವಾಗದಂತಿದೆ ಸಿನಿಮಾ. ನಿರ್ದೇಶಕ ಹಿಮಾಯತ್ ಖಾನ್, ಕಥೆ, ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ಹಿಡಿತವಿಲ್ಲದೆ ಆಡಿದ ದೊಂಬರಾಟ 'ಅಚ್ಚುಮೆಚ್ಚು' ಚಿತ್ರವಾದರೂ, ನಟ ತರುಣ್ ಹಾಗೂ ಪೋಷಕನಟರ ಅಭಿನಯದಿಂದ ಚಿತ್ರ, ಪ್ರೇಕ್ಷಕ ಸೀಟಿನಲ್ಲಿ ಕೊನೆಯವರೆಗೆ ಕುಳಿತಿರುವಂತೆ ಮಾಡಿದೆ.

  ತಾಯಿಯ ಮದುವೆಯನ್ನು ಅವಳ ಹಳೆಯ ಪ್ರಿಯಕರನ ಜೊತೆ ಮಾಡುವ ನಾಯಕನ ಕಥೆಯೇ ಈ ಚಿತ್ರದ ಕಥೆ. ಆದರೆ ಗಂಭೀರವಾಗಿ ಸಾಗಬೇಕಾಗಿದ್ದ ಚಿತ್ರಕಥೆಗೆ ಅನಾವಶ್ಯಕ ಹಾಸ್ಯ ತುರುಕಿ ಅದನ್ನು ಚಿತ್ರ ಮಾಡುವ ಬದಲು ಚಿತ್ರಾನ್ನ ಮಾಡಿಬಿಟ್ಟಿದ್ದಾರೆ ನಿರ್ದೆಶಕ ಹಿಮಾಯತ್. ಭವಿಷ್ಯ ಹೇಳಿಕೊಂಡು ಕಾಲೇಜಿನಲ್ಲಿ ಓಡಾಡುವ ನಾಯಕನ ಪಾತ್ರವೇ ನಗೆಪಾಟಲು. ಆದರೂ ಹ್ಯಾಂಡ್ ಸಮ್ ಹುಡುಗ ತರುಣ್ ಆ ಪಾತ್ರವನ್ನು ಸಹನೀಯವಾಗಿಸಿದ್ದಾರೆ.

  ಈ ಚಿತ್ರಾನ್ನದಲ್ಲೂ ಆಸೆ ಹುಟ್ಟಿಸುವ ಕಡ್ಲೇಬೀಜವಾಗಿ ಗೋಚರಿಸುವುದು 'ಒನ್ ಅಂಡ್ ಓನ್ಲೀ' ನಟ ತರುಣ್. ಚಿತ್ರದುದ್ದಕ್ಕೂ ಅವರ ಲೀಲಾಜಾಲ ನಟನೆ ಹಾಗೂ ಲವಲವಿಕೆ ಎದ್ದು ಕಾಣುತ್ತದೆ. ವಯಸ್ಸಾದಷ್ಟೂ ಸುಂದರವಾಗುತ್ತಿರುವ ತರುಣ್ ಆ ಗುಟ್ಟು ರಟ್ಟಾಗಿಸಿದರೆ ಸಾಕಷ್ಟು ಜನರಿಗೆ ಅನುಕೂಲ. ನಟಿ ಅರ್ಚನಾಗುಪ್ತ 'ಸರ್ಕಸ್' ಮಾಡಿದರೂ ನಟನೆ ಅವರಿಂದ ಬಂದಿಲ್ಲ. ಚಿತ್ರಕ್ಕೆ ಅವರ ಅಗತ್ಯವೂ ಅಷ್ಟಾಗಿ ಇಲ್ಲ.

  ಚಿತ್ರದ ಕಥೆಯನ್ನು ಇಲ್ಲಿ ವಿವರವಾಗಿ ಹೇಳುವುದಕ್ಕಿಂತ ತೆರೆಯಲ್ಲಿ ನೋಡಿದರೇನೇ ಚೆಂದ. ಪ್ರೊಫೆಸರ್ ಪಾತ್ರಧಾರಿ ಅಚ್ಯುತ್, ವೀಣಾ ಸುಂದರ್ ಸೆಂಟಿಮೆಂಟ್, ಚಿತ್ರದಿಂದ ಬೇರೆಯಾದ ಸಾಧುಕೋಕಿಲಾ ಹಾಸ್ಯ ಪ್ರೇಕ್ಕರಿಗೆ 'ಅಚ್ಚುಮೆಚ್ಚು' ಆಗಬಹುದು. ನಿರ್ದೇಶಕರು ಗಟ್ಟಿಯಾದ ಕಥೆ, ಚಿತ್ರಕಥೆ ಹಾಗೂ ನಿರೂಪಣೆಯನ್ನು ನೆಚ್ಚಿಕೊಂಡು ಮಾಡಿದಿದ್ದರೆ ಪ್ರೇಕ್ಷಕರಿಗೆ ಚಿತ್ರ 'ಅಚ್ಚುಮೆಚ್ಚು' ಆಗುತ್ತಿತ್ತೇನೋ...(ಒನ್ ಇಂಡಿಯಾ ಕನ್ನಡ)

  English summary
  Kannada movie Achchu Mechchu is screening all over Karnataka. Tarun Archana Gupta pair for this. Himayath Khan, the director made this film a unsuccessful. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X