twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಇದು ಅರ್ಭಟವಲ್ಲ ಆರ್ತನಾದ!

    By Mahesh
    |

    ಇದು ಮತ್ತೊಂದು ಮಾಮೂಲಿ ತ್ರಿಕೋನ ಪ್ರೇಮದ ಕಥೆ. ಜತೆಗೆ ಮಚ್ಚಿನ ಅಚ್ಚೂ ಇದೆ. ಹೀಗಾಗಿ ಹೊಸತನವನ್ನು ಹುಡುಕುವಂತಿಲ್ಲ. ಕಾಲೇಜು ಸಹಪಾಠಿಯನ್ನು ಪ್ರೀತಿಸುವ ನಾಯಕ (ರೂಪೇಶ್), ತನ್ನದೇ ಆದ ಕಾರಣಗಳಿಂದಾಗಿ ಅವನನ್ನು ಇಷ್ಟಪಡದ ನಾಯಕಿ(ಸೋನಿಯಾ) ಚಿತ್ರದಲ್ಲಿ ಪ್ರಮುಖರು. ನಾಯಕನನ್ನು ಕೊಲ್ಲಿಸಲು ಕಳಿಸಿದವರೆಲ್ಲ ಸೋತು ಸುಣ್ಣವಾಗಿ ಬಂದಾಗ ಅವನನ್ನು ಎದುರಿಸಲು ಹೋದ ಲೇಡಿ ವಿಲನ್ ಕಾಳಿ (ಜ್ಯೋತಿಕಾ), ನಾಯಕನ 'ಆರ್ಭಟ"ವನ್ನು ಮೆಚ್ಚಿ ಮದುವೆಯಾಗಲು ಬಯಸುವುದು- ಇಷ್ಟೇ ಚಿತ್ರದ ಕಥೆ. ಇವುಗಳ ಸುತ್ತಲೇ ಸುತ್ತುತ್ತದೆ ಚಿತ್ರ. ಚಿತ್ರದ ಮೊದಲರ್ಧ ನೋಡುವುದು ಕಷ್ಟ.

    ಉತ್ತರಾರ್ಧದ ತುಂಬ ತುಂಬಿಕೊಂಡಿರುವ ಲೇಡಿ ವಿಲನ್‌ಳಿಂದಾಗಿ ಕಥೆ ಸುಲಭವಾಗಿ ಮುನ್ನಡೆಯುತ್ತದೆ. ಚಿತ್ರದ ಕ್ಯಾಮೆರಾ ಕೆಲಸದ ಬಗ್ಗೆ ಹೆಚ್ಚು ಹೇಳುವಂಥದ್ದೇನಿಲ್ಲ, ಅಷ್ಟೊಂದು 'ಚಲನಶೀಲ"ವಾಗಿದೆ ಕ್ಯಾಮೆರಾ! ಮತ್ತಷ್ಟು ಅಚ್ಚುಕಟ್ಟಾಗಿ ಸಂಕಲನ ಮಾಡಿದ್ದರೆ ಸಿನಿಮಾ ಇನ್ನಷ್ಟು ಸಹನೀಯವಾಗಿರುತ್ತಿತ್ತು. ರಾಜೇಶ್ ರಾಮನಾಥ್ ಸಂಗೀತ ನೀಡಿರುವ ಹಾಡುಗಳೂ ಅಷ್ಟೇ, ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ.

    ಫೈಟಿಂಗ್ ಸದ್ದುಗಳಿಗಿಂತ ಹಿನ್ನೆಲೆ ಸಂಗೀತವೇ ಹೆಚ್ಚು ಆರ್ಭಟಿಸುತ್ತದೆ. ಎಂದಿನಂತೆ ಕಾಲೇಜು, ಫ್ರೆಂಡ್ಸು, ಅವರಲ್ಲೊಬ್ಬ ಜೋಕರ್, ಜೋಕರ್‌ನಂಥ ಲೆಕ್ಚರರ್‌ಗಳು, ಹಾಸ್ಟೆಲ್, ಲವ್ವು, ಹಾಸ್ಯ ಹೀಗೆ ಎಲ್ಲವೂ ಇದೆ. ಆದರೆ ನಾಯಕ ರೂಪೇಶ್‌ನಲ್ಲಿ ಅಭಿನಯ ಹುಡುಕಬೇಕು.

    ನಾಯಕಿ ಮಾತಿಗಿಂತ ಮೌನವಾಗಿದ್ದರೇ ಹೆಚ್ಚು ಚೆಂದ. ಇವರಿಬ್ಬರಿಗಿಂತ ವಿಲನ್ ಪಾತ್ರದಲ್ಲಿ ಕೋಟೆ ಪ್ರಭಾಕರ್ ಅಭಿನಯ ಮೆಚ್ಚುವಂತಿದೆ. ಕೊನೆಯದಾಗಿ ಹೇಳಬೇಕೆಂದರೆ ಇದರ ಕಥೆಯನ್ನು ತಮಿಳಿನ 'ತಿಮಿರು" ಚಿತ್ರದಿಂದ ಎತ್ತಿ ಕೊಳ್ಳಲಾಗಿದೆ. ಈ ಚಿತ್ರ 'ಮಿಂಚು" ಎನ್ನುವ ಹೆಸರಲ್ಲಿ ಕಳೆದ ವರ್ಷ ಕನ್ನಡದಲ್ಲೂ ರೀಮೇಕ್ ಆಗಿತ್ತು. ಈ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಮಾತ್ರ ಬದಲಾಯಿಸಲಾಗಿದೆ. ಹೀಗಾಗಿ ಪ್ರೇಕ್ಷಕ ಪ್ರಭುವಿನ ನಿರ್ಧಾರವೇ ಅಂತಿಮ.

    Sunday, November 21, 2010, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X