For Quick Alerts
  ALLOW NOTIFICATIONS  
  For Daily Alerts

  ಶೌರ್ಯ ಚಿತ್ರ ವಿಮರ್ಶೆ: ಮತ್ತೊಮ್ಮೆ ಶೌರ್ಯ ಪ್ರ'ದರ್ಶನ'

  By * ವಿನಾಯಕರಾಮ್ ಕಲಗಾರು
  |

  ದರ್ಶನ್ ಚಿತ್ರಗಳೇ ಹಾಗೆ. ಒಂದಷ್ಟು ಹೊಡಿ, ಬಡಿ, ಕಡಿಮಾಮೂಲಿ. ಅಲ್ಲಿ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ. ಅಲ್ಲಿ "ಶಾಸ್ತ್ರಿ"ಯ ಸ್ಥಾನಮಾನವನ್ನು ಕಮರ್ಷಿಯಲ್ ಅಂಶಗಳಿಗೆ ಕೊಡಲಾಗುತ್ತದೆ! ನಿರ್ದೇಶಕ ಸಾಧುಕೋಕಿಲ ಇಲ್ಲಿ ಮತ್ತೊಮ್ಮೆ “ಶೌರ್ಯ" ಪ್ರದರ್ಶನಕ್ಕೆ ನಾಂದಿ ಹಾಡಿದ್ದಾರೆ.

  ದರ್ಶನ್ ಮ್ಯಾನರಿಸಂಗೆ ಮತ್ತಷ್ಟು ಸುಣ್ಣಬಣ್ಣ ಮಾಡಿದ್ದಾರೆ ಸಾಧು.ಆ ಕಡೆಯಿಂದ ರೌಡಿಗಳ ಚೀರಾಟ, ಈ ಕಡೆ ನಾಯಕನ ಮೆರೆದಾಟ. ಅವರು ಇವನನ್ನು ಯಾಕೆ ಹುಡುಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಮುನ್ನ ನಾಯಕಿಯ ಎಂಟ್ರಿ.ಕಂಡಲ್ಲೇ ಗುಂಡು ಎಂಬಂತೆ ಕಂಡಲ್ಲೇ “ಕನಸು ಮೇಲೋಗರ".

  ಆಕೆ ಹುಂಬತನದಿಂದ ನಾಯಕನಿಗೆ ಬುದ್ಧಿ ಕಲಿಸಲು ಹೋಗಿ, ಕೊನೆಗೆ ಕ್ಲೀನ್ ಬೋಲ್ಡ್ ಆಗುತ್ತಾಳೆ. ಮುಂದೇನು ಎಂದು ಮತ್ತೆ ಹೇಳುವ ಅಗತ್ಯವಿಲ್ಲ! ದರ್ಶನ್ ಎಂದಿನಂತೆ ಸಲೀಸಾಗಿ ನಟಿಸಿದ್ದಾರೆ. ಹೊಡೆದಾಟಕ್ಕೆ ಮೋಸವಿಲ್ಲ. ಮಾತಿಗೆ ಕಮ್ಮಿಯಿಲ್ಲ. ಡೈಲಾಗ್ ಹೊಡೆಯುತ್ತಾ ಸಿಕ್ಕ ಸೀರುಂಡೆಗಳನ್ನು ಹೊಡೆಯುತ್ತಾರೆ. ಅಯ್ಯ, ಅರ್ಜುನ್ ಚಿತ್ರದ ನಂತರ ಮತ್ತೊಮ್ಮೆ ಪೊಲೀಸ್ ಗೆಟಪ್‌ನಲ್ಲಿ ಮಿಂಚಿದ್ದಾರೆ. ಹಿಂದೆ ಬಂದವಕ್ಕೆ ಹೋಲಿಸಿದರೆ ಇದು ಸಾವಿರ ಪಾಲು ವಾಸಿ.

  ಮೊದಲಾರ್ಧದ ಒಂದಷ್ಟು ಅನಗತ್ಯ ಸನ್ನಿವೇಶ, ಬಿಲ್ಡಪ್ ಗಳನ್ನು ಸಹಿಸಿಕೊಂಡರೆ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ನಿರ್ದೇಶಕರು ಇಡೀ ಚಿತ್ರದಲ್ಲಿ ಒಂದು ಹದವಾದವೇಗ ಕಾಪಾಡಿಕೊಂಡು ಹೋಗಿದ್ದಾರೆ. ಎಲ್ಲೋ ಒಂದು ಕಡೆ ಕತೆ ಮುಗ್ಗರಿಸಿತು ಎನ್ನುವ ಹೊತ್ತಿಗೆ ಕಾಮಿಡಿ ಕಿಲಾಡಿಗಳಾದ ಬುಲೆಟ್ ಪ್ರಕಾಶ್, ಓಂ ಪ್ರಕಾಶ್ ರಾವ್ ಹಾಸ್ಯದ ಹೊಳೆ ಹರಿಸುತ್ತಾರೆ.

  ಮೊದಮೊದಲು ದರ್ಶನ್ ಪಕ್ಕಾ "ಪೊರ್ಕಿ"ಯಂತೆ ಕಂಡರೂ ದ್ವಿತಿಯಾರ್ಧದನಂತರ ಮತ್ತೊಂದು ರೀತಿಯ ವಿಶ್ವರೂಪ “ದರ್ಶನ"ವಾಗುತ್ತದೆ. ಹಾಡುಗಳಲ್ಲಿ ಹೇಳುವಂಥ ಮಜಾ ಇಲ್ಲದಿದ್ದರೂ ನೃತ್ಯ ಸಂಯೋಜನೆಯ ಮುಂದೆ ಅದು ಬೂದಿ ಮುಚ್ಚಿದಕೆಂಡ. ಛಾಯಾಗ್ರಹಣ ಅದ್ಧೂರಿತನಕ್ಕೆ ಮೋಸ ಮಾಡಿಲ್ಲ.ಸಂಕಲನ ಸುಮಾರಾಗಿದೆ. ಫೈಟಿಂಗ್ ದೃಶ್ಯಗಳು ಚಿಂದಿ.

  ನಾಯಕಿ ಮಾದಲಾಸ ಅವರನ್ನು ಪರಭಾಷೆಯಿಂದ ಕರೆಸಿದ್ದುಲಾಸ್ ಆಗಿಲ್ಲ. ತಕ್ಕಮಟ್ಟಿಗೆ ನಟನೆಯಲ್ಲೂ ಸ್ಕೋರ್ ಮಾಡಿದ್ದಾರೆ. ಆದರೆ, ಬೆಳ್ಳಗೆ ಇರೋದೆಲ್ಲ

  ಹಾಲಲ್ಲ ಎನ್ನುವುದು ಪರಭಾಷಾ ಆಮದುದಾರರ ತುರ್ತುಗಮನಕ್ಕೆ!ಅವಿನಾಶ್, ಜಾನ್ ಕೊಕ್ಕಿನ್, ಸಂಪತ್ ಎಲ್ಲರಿಗೂ ಹೊಂದುವ ಪಾತ್ರ ಕೊಡಲಾಗಿದೆ. ರಮೇಶ್ ಭಟ್-ಚಿತ್ರಾಶೆಣೈಗೆ ಪಾತ್ರ ಸರಿಯಾಗಿ ಒಪ್ಪಿದೆ.

  ತಂಗಿಯ ಪಾತ್ರಮಾಡಿರುವ ರೀಮಾ ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ರಾಧಿಕಾ. ಮುಮೈದ್ ಖಾನ್ ಐಟಂ ಸಾಂಗ್ ನೋಡಲೆರಡು ಕಣ್ಣು ಸಾಲದಮ್ಮ...ಸಾಧು ಹಿಂದೆ ಮಾಡಿದ ಕೇಜಿಗಟ್ಟಲೇ ಮಿಸ್ಟೇಕ್‌ಗಳನ್ನು ಇಲ್ಲಿ ತಿದ್ದುಕೊಂಡಿರುವುದು ಗೊತ್ತಾಗುತ್ತದೆ. ಅವರಿಗೆ ಈ ವರ್ಷದ ಬೆಸ್ಟ್ ರೀಮೇಕ್ ಡೈರೆಕ್ಟರ್ ಪ್ರಶಸ್ತಿ ಕೊಡಬಹುದು!(ಸ್ನೇಹಸೇತು: ವಿಜಯ ಕರ್ನಾಟಕ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X