twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರವಿಮರ್ಶೆ: ಜಿಂದಗಿ, ಅಂದ್ಕೊಂಡಗಿಲ್ಲ ಮಗಾ!

    By Super
    |

    ಒಬ್ಬ ಪತ್ರಕರ್ತ, ಬರವಣಿಗೆ ಶೈಲಿ ಚೆನ್ನಾಗಿದೆ ಎಂದು ತನಗೆ ಬೇಕಾದವರ ಬಗ್ಗೆ ಪುಟಗಟ್ಟಲೇ ಲೇಖನ ಬರೆದರೆ ಏನಾಗುತ್ತೆ ? ಮತ್ತೇನಾಗುತ್ತೆ: ಕೆಲಸ ಕಳೆದುಕೊಳ್ಳಬೇಕಾಗುತ್ತೆ !

    *ವಿನಾಯಕರಾಮ್ ಕಲಗಾರು

    ಅದೇ ರೀತಿ ಒಬ್ಬ ನಿರ್ಮಾಪಕ ಸಿನಿಮಾದ ಕಾನ್ಸೆಪ್ಟ್ ಅದ್ಭುತವಾಗಿದೆ. ಕತೆ, ಚಿತ್ರಕತೆ ಖತರ್‌ನಾಕ್ ಆಗಿದೆ; ಸಂಭಾಷಣೆ ತಕ್ಕ ಮಟ್ಟಿಗಿದೆ, ನಿರ್ದೇಶಕರ ಆಲೋಚನೆಗಳು ಮೊನಚಾಗಿವೆ ಎಂದು ತಮಗೆ ಬೇಕಾದವರನ್ನು ನಾಯಕನ ಪಾತ್ರಕ್ಕೆ ಹಾಕಿಕೊಂಡು ಎರಡೂವರೆ ತಾಸಿನ ಸಿನಿಮಾ ಮಾಡಿದರೆ ಏನಾಗುತ್ತೆ? ಇನ್ನೇನಾಗುತ್ತೆ: ಕಾಸು ಕಳೆದುಕೊಳ್ಳಬೇಕಾಗುತ್ತೆ!

    ಮುಗಿಲ್ ನಿರ್ದೇಶನದ ಜಿಂದಗಿ'ಯ ಕತೆಯೂ ಅಷ್ಟೇ. ಕತೆ, ಚಿತ್ರಕತೆ, ಸಂಭಾಷಣೆ ಎಷ್ಟು ಅಚ್ಚುಕಟ್ಟಾಗಿದೆ ಎಂದರೆ ಸಿನಿಮಾ ಶುರುವಾದ ಹತ್ತು ನಿಮಿಷದಲ್ಲಿ ನೀವು ಕುರ್ಚಿಯ ತುದಿಗೆ ಬಂದು ಕುಂತಿರುತ್ತೀರಿ. ಕುರಿಮಂದೆಯನ್ನು ಅಟ್ಟಿಸಿಕೊಂಡು ಕುಂಟುತ್ತಾ ಬರುವ ನಾಯಕ. ಅವನ ಬೆನ್ನಹಿಂದೆ ಬರುವ ಪೊಲೀಸ್ ಅಕಾರಿ. ಕ್ಷಣಾರ್ಧದಲ್ಲಿ ನಾಯಕನ ಹಣೆಗೆ ನೇರವಾಗಿ ಪಿಸ್ತೂಲ್ ಹಿಡಿಯುವ ಪೊಲೀಸ್. ಇನ್ನೇನು ಶೂಟ್ ಮಾಡಿ ಬಿಸಾಡಬೇಕು; ಆ ದೃಶ್ಯ ಕಟ್. ಮುಂದಿನ ದೃಶ್ಯದಲ್ಲಿ ಪೊಲೀಸ್ ಅಕಾರಿಯೇ ಅಂಗಾತ ಮಲಗಿರುತ್ತಾನೆ, ನಾಯಕ ಸೀನು, ಶರ್ಮಿ ಶರ್ಮಿ' ಎಂದು ಅರಚುತ್ತಿರುತ್ತಾನೆ... !

    ಹೀಗೆ ನಿರ್ದೇಶಕರು ಪ್ರತಿಯೊಂದು ಶಾಟ್‌ಅನ್ನು ಕೂಡ ಬಹಳ ಕುತೂಹಲಕಾರಿಯಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಆದರೆ ಮೊದಲನೇ ಡ್ಯೂಯೆಟ್ ಸಾಂಗು ಶುರು ವಾಗೋದೇ ತಡ: ನಾಯಕ ಕತೆಯ ದಿಕ್ಕನ್ನೇ ಬದಲಿಸಿಬಿಡುತ್ತಾನೆ. ರಾಜೀವ್ ಅಭಿನಯದಲ್ಲಿ ಇನ್ನಷ್ಟು ಪಕ್ವವಾಗಿದ್ದರೆ ಆತನೇ ಇಡೀ ಕತೆಯ ಹೈಲೈಟ್ ಆಗುತ್ತಿದ್ದ. ಹಾಗಂತ ಎಲ್ಲ ಪಾತ್ರಗಳ ಬಗ್ಗೆ ಕೆಮ್ಮುವ ಹಾಗಿಲ್ಲ. ನಾಯಕಿ ಪ್ರಿಯಾಂಕಾ ಪಾತ್ರ ಕೆಲವೆಡೆ ಲವ್‌ಲವಿಕೆಯಿಂದ ಕೂಡಿದೆ. ಮೊದಲ ಹಾಡಿನಲ್ಲೇ ಆಕೆ ಇಷ್ಟವಾಗಿಬಿಡುತ್ತಾಳೆ. ಆದರೆ ಕೊನೆಕೊನೆಗೆ ಅದು ಇಷ್ಟವೋ; ಅನಿಷ್ಟವೋ ಅಥವಾ ಈಕೆಯನ್ನು ಸಹಿಸಿಕೊಳ್ಳುವುದೇ ಕಷ್ಟವೋ' ಎಂಬ ಶಂಕೆ ಶುರುವಾಗುತ್ತದೆ.

    ಕಾರಣ: ಕ್ಲೈಮ್ಯಾಕ್ಸ್‌ನಲ್ಲಿ ಚಿತ್ರಕತೆ ಹುಟ್ಟಿಸುವ ಗೊಂದಲ. ನಾಯಕ ಇದ್ದಕ್ಕಿದ್ದಂತೇ ಅಹಂ ಭಸ್ಮಾಸುರಂ... ಎಂದು ಆರ್ಭಟಿಸುತ್ತಾ ಲಬಲಬ' ಎನ್ನತೊಡಗುತ್ತಾನೆ. ಅವನನ್ನು ಕಂಡ ನಾಯಕಿಯೂ ಚಿತ್ರ: ವಿಚಿತ್ರ'ವಾಗಿ ಆಡಲು ಶುರುಮಾಡುತ್ತಾಳೆ! ಇನ್ನು ಕಿಶೋರ್. ತಾನು ನಿರ್ದೇಶಕರ ಕೂಸು ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಪೊಲೀಸ್ ಪಾತ್ರದ ಜತೆ ನಾಯಕಿಯೊಂದಿಗೆ ಸರಸವಾಡುವ ಪೋಲಿ'ಸ್ ಪಾತ್ರವನ್ನೂ ಅಚ್ಚುಕಟ್ಟಾಗಿ' ನಿಭಾಯಿಸಿದ್ದಾರೆ. ಶರಣ್ ಬಳಗ ಥೇಟ್ ಕಮಂಗಿಗಳು'ಆಡಿದ ಹಾಗೆ ಆಡುತ್ತವೆ. ಹಾಸ್ಯನಟಿ ರೇಖಾದಾಸ್ ಕೂಡ ಇದ್ದಾರೆ. ಆದರೆ ಕಾಮಿಡಿಗಲ್ಲ, ಐಟಂ ಸಾಂಗಿಗೆ. ಕೌರವ ವೆಂಕಟೇಶ್ ಸಾಹಸ'ವನ್ನು ಮೆಚ್ಚಲೇಬೇಕು. ಫೈಟಿಂಗ್ ಸನ್ನಿವೇಶಗಳಲ್ಲಿ ನಾಯಕನ ಎದೆಗಾರಿಕೆ ಇಷ್ಟವಾಗುತ್ತೆ. ಛಾಯಾಗ್ರಹಣ ಕೆಲವು ಕಡೆ ಕೈಕೊಟ್ಟಿದೆ. ಮೈಸೂರು ಮೋಹನ್ ಸಂಗೀತ ಕೇಳೋಹಾಂಗಿಲ್ಲ ಮಗಾ !

    ಕಬಡ್ಡಿಗೆ ಕೈ ಕೊಟ್ಟನೇ ಕಿಶೋರ್
    ಜಿಂದಗಿ ಜತೆ ಪಿಸು ಗುಸು ಮೊಗ್ಗಿನ ಮನಸು ತೆರೆಗೆ

    English summary
    Kannada movie Zindagi review by Vinayakram kalagaru,
    Monday, July 2, 2012, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X