For Quick Alerts
  ALLOW NOTIFICATIONS  
  For Daily Alerts

  ವೀರ ಮದಕರಿ: ನೂರಕ್ಕೆ ಅರುವತ್ತು ಮಾರ್ಕುಡು!

  By Super
  |

  Sudeep in Veera Madakari
  ಸಾವಂದ್ರೆ ಭಯ ಪಡೋಕೆ ಅಲಾಲ್ ಟೋಪಿ ಅಂದುಕೊಂಡ್ರಾ... ಮದಕರಿ... ವೀರ ಮದಕರಿ... -ಡಗಡ ಗಡಗಡಗಡಗ (ಇದು ಹಿನ್ನೆಲೆ ಸಂಗೀತ).

  *ವಿನಾಯಕರಾಮ್ ಕಲಗಾರು

  *ಭಯ ನನಗಲ್ರೋ ಸಾವಿಗೆ, ನಂಗಾಗಿ ಆರು ತಿಂಗಳಿಂದಅಲೀತಾ ಇದ್ದೀರಾ. ಪೌರುಷದಿಂದ ತಿರುವೋ ಈ ನನ್ ಮೀಸೆಮೇಲಾಣೆ; ನಿಮ್ಗಿಂತ ಒಂದು ಕ್ಷಣ ಮುಂಚೆ ಸತ್ರೂ ನನ್ ಮೀಸೆ
  ಗೀಚಿ ನನ್ ಶವ ಹೂಳಕ್ ಹೇಳ್ತೀನ್ರೊ... ಬನ್ರೊ... (ಹಾಕಾಕಾಕಾ ಕಾಕ್)

  *ಒಬ್ಬ ಪೊಲೀಸ್ ಆಫೀಸರ್ ಟ್ರಾನ್ಸ್‌ಫರ್ ಆದ್ರೆ ಹೋಗೋದ್ ಇನ್ನೊಂದ್ ಪೊಲೀಸ್ ಸ್ಟೇಷನ್‌ಗೇನೆ, ಪೋಸ್ಟ್ ಆಫೀಸಿಗಲ್ಲ... ಮದಕರ್ರೀ... ಯಾರೋ ಕಾಂಜಿ ಪೀಂಜಿ ಅಲ್ಲ. (ಡಿಶುಂ ಡಿಶುಂ ಡಿಶುಂ...ಡುಂ ಡುಂ ಡುಂಡುಂ)

  *ಸಾವು ಖಂಡಿತ ಒಂದಲ್ಲಾ ಒಂದು ದಿನ ನನ್ ಕಣ್ಣೆದುರಿಗೆಬಂದು ನಿಂತೇ ನಿಲ್ಲುತ್ತೆ. ಅವತ್ತು ಕೂಡ ನನ್ ಕೈ ಮೀಸೆ ಮೇಲೆ, ಮುಖದ ಮೇಲೆ ನಗು ಇರಬೇಕು ಎನ್ನೋದೆ ಈ ಮದಕರಿ ಆಸೆ...

  ***

  ಇದು ಮದಕರಿ ಚಿತ್ರದ ಸಂಭಾಷಣೆಯ ಸ್ಯಾಂಪಲ್. ಸುದೀಪ್ ಸಿನಿಮಾ-ಮಾತಿಗೆ ಹೆಚ್ಚು ಕೆಲಸ, ಮಚ್ಚಿಗೆ ಮನ್ನಣೆ, ಕುಣಿತಕ್ಕೆ ಮಣೆ,ಸೆಂಟಿಮೆಂಟಿಗೆ ರತ್ನಗಂಬಳಿ ಇರಲೇಬೇಕು. ಅವರಿಗೆ ರಿಮೇಕ್ ಮೇಲೆ ನಂಬಿಕೆ ಹೆಚ್ಚು. ಅದಕ್ಕೆ ಸ್ಟಾರ್ ಪಟ್ಟ ಕೊಟ್ಟ ಹುಚ್ಚ ಚಿತ್ರಕಾರಣವಾ? ಗೊತ್ತಿಲ್ಲ...

  ಇದು ತೆಲುಗಿನ ಹಿಟ್ಟಾಹಿಟ್ ಚಿತ್ರ ವಿಕ್ರಮಾರ್ಕುಡು ಕನ್ನಡಾವತಾರಂ. ಸರ್ವಂ ಸರಪರಸದ್ದುಮಯಂ. ಒಂಥರಾ ಪೊಲೀಸ್, ಇನ್ನೊಂಥರಾ ಲವ್ ಸ್ಟೋರಿ. ಎರಡನ್ನೂ ಸರಿ ದೂಗಿಸಲು ಸುದೀಪ್ ಹೋರಾಡಿದ್ದಾರೆ. ಅವರದ್ದು ದ್ವಿಪಾತ್ರ. ನಿಮಗೆ ವಿಷ್ಣುವರ್ಧನ್ ಅಭಿನಯದ ಪೋಲಿಸ್ ಮತ್ತು ದಾದ ಚಿತ್ರ ನೋಡಿದ ನೆನಪಿದ್ದರೆ ಮದಕರಿ ಕತೆಯ ದಿಕ್ಕು ತೋಚುತ್ತದೆ. ಅವ ಇವನಾಗಿ,ಇವ ಅವನಾಗಿ ಇನ್ನೇನೇನೋ ಆಗಿ, ಕ್ಲೈಮ್ಯಾಕ್ಸ್ ...

  ಇಲ್ಲಿ ಕತೆಯೇ ಕೇಂದ್ರ ಬಿಂದು.ಚಿತ್ರಕತೆ ಅದರಬಂಧು. ವಿಕ್ರಮಾರ್ಕುಡುಒಂದು ದೃಶ್ಯವೂ ಆಕಳಿಕೆಗೆ ಆಸ್ಪದ ಕೊಡುವುದಿಲ್ಲ.ಇಲ್ಲಿ ಕೆಲ ಕಡೆ ತೂಕಡಿಕೆ ತೂರಿಕೊಳ್ಳುತ್ತದೆ.ಶುರುವಿನಲ್ಲಿ ಸುದೀಪ್ ನಂ.1 ಅತಿಯಾದ ತರಲೆ ತುಂಟತನ ಮಾಡುತ್ತಾನೆ. ಹೆಂಗಸರಿಂದ ಏಟು ತಿಂದು, ಕಚಪಚಕಚಪಚ ಎಂದು ಕಿರುಚುತ್ತಾನೆ. ಅದುಅತಿರೇಕದ ಪರಮಾವಧಿ. ಪಂಚ್ ಕೊಡುವ ಸಂಭಾಷಣೆ ಇರುವುದರಿಂದ ಕೊಂಚ ಸಹಿಸಬಲ್ ಅಷ್ಟೇ. ಹೀರೊಯಿಣಿ ರಾಗಿಣಿ ಬಂದದ್ದು ಗೊತ್ತೇ ಆಗುವುದಿಲ್ಲ. ಕಾರಣ ಜಿಮ್ತ್‌ಕ್ತಾ ಜಿತಾ ಜಿತಾ ಹಾಡು. ಚರಣ ಬರುವಾಗ ಆಕೆಯ ಚಾರಣ... ಮಧ್ಯ ಪ್ರವೇಶ ಮಾಡಿ, 'ಮಧ್ಯ ಪ್ರದೇಶ" ತೋರುತ್ತಾಳೆ. ಅಲ್ಲಿಂದ ಸೊಂಟದ ಇಸ್ಯ ಬ್ಯಾಡಮ್ಮ ಸಿಸ್ಯ... ಕೊನೆಯ ಹತ್ತುನಿಮಿಷ ನೀಟಾಗಿ ನಟಿಸಿ, ಸೈ ಎನಿಸಿಕೊಳ್ಳುತ್ತಾಳೆ.

  ಸುದೀಪ್ ಕಲ್ಪನೆಗೂ ಮೀರಿ ತೆಳ್ಳಗಾಗಿದ್ದಾರೆ. ನೋಡಿ ಸ್ವಾಮಿ ನಾನ್ ಇರೋದೆ ಹೀಗೆ ಎಂದು ಬಳುಕುವ ಬಳ್ಳಿಯಾಗಿದ್ದಾರೆ. ಕಳ್ಳನ ಪಾತ್ರಕ್ಕೆ ಅದು ಒಪ್ಪುತ್ತದೆ. ಆದರೆ ಎಸಿಪಿ ಪಾತ್ರ ಪೇದೆ ಕೈಲಿರುವ ಕೋವಿಥರ ಆಗಿಬಿಟ್ಟರೆ ಹೇಗೆ ಮಾರಾಯ್ರೆ? ಕಿಚ್ಚನ ಕುಣಿತ, ಹೊಡೆತ, ಬಡಿತ,ತುಡಿತ, ಮಿಡಿತ, ಸೆಳೆತ ಎಲ್ಲವೂ ಜಿಮ್ತ್‌ಕ ಜಿತಾಜಿತಾ...

  ಛಾಯಾಗ್ರಹಣ ಕ್ಲೈಮ್ಯಾಕ್ಸ್‌ನಲ್ಲಿ ಚಿಂದಿ ಚಿಂದಿ. ಕೀರವಾಣಿ ಸಂಗೀತದಲ್ಲಿ ಆಹಾ.. ಓಹೊ.. ಎನ್ನುವ ಕಿಕ್ ಇಲ್ಲ. ಅದಕ್ಕಿಂತ ರಾಜೇಶ್ ರಾಮ್‌ನಾಥ್ ರೀರೆಕಾರ್ಡಿಂಗೇ ವಾಸಿ. ನೃತ್ಯ ಸಂಯೋಜನೆ ಹಾಗೂ ಹಿನ್ನೆಲೆ ದೃಶ್ಯಗಳು ಸೂಪರ್ರ್. ಥ್ರಿಲ್ಲರ್ ಮಂಜು- ಆಕ್ಷನ್ ಪೂಜೆಗೆ ಬಂದೇ ಮಚ್ಚೇಶ್ವರಾ... ತಲೆ ನೋವು ಬರಿಸುವಷ್ಟು ಹೊಡೆದಾಟ ಇದ್ದರೆ ಸಹಿಸಲಸಾಧ್ಯ ಎನ್ನುವುದು ಥ್ರಿಲ್ಲರ್ ತುರ್ತು ತಿಳಿವಳಿಕೆಗೆ... ಗೋಪಿನಾಥ್ ಭಟ್ ಖಳ ಪಾತ್ರಕ್ಕೆ ಒಗ್ಗಿಕೊಳ್ಳುವುದು ಕಷ್ಟ. ದೇವರಾಜ್ ಹಾಗ್ ಬಂದ್ ಹೀಗ್...

  ಒಟ್ಟಾರೆ ಕೆಲ ಅಂಶಗಳನ್ನು ಪಕ್ಕಕ್ಕಿಟ್ಟು,ಯಾರು ಹಿತವರು ನಿಮಗೆಈ ನೂರರೊಳಗೆ ಎಂದರೆ ಮದಕರಿ ಇರಲಿ ಬಿಡ್ರೀ ಎಂದುಕಿಚ್ಚಾಭಿಮಾನಿಗಳು ಕೈ ಎತ್ತಿದರೆ ಆಶ್ಚರ್ಯವಿಲ್ಲ. ಕ್ಯೂಂ ಕೀ.. ಇಲ್ಲಿ ಪಕ್ಕಾ ಟಿಪಿಕಲ್ ಸುದೀಪಿಸಂ ಇದೆ. ಅದನ್ನು ಬಯಸುವವರಿಗೆ ತಿಂಡಿ, ತೀರ್ಥ, ಊಟೋಪಚಾರ ಎಲ್ಲವೂ ಇವೆ!

  ಇತ್ತೀಚಿನ ಚಿತ್ರಗಳ ವಿಮರ್ಶೆ
  ಅಂಜದಿರು: ಲಾಂಗು,ಮಚ್ಚಿಲ್ಲದೆ ಕೊಚ್ಚುವ ಚಿತ್ರ!
  ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ
  ನಮ್ 'ಆಪ್ತಮಿತ್ರ' ಯಜಮಾನ್ರು
  ಹಾಸ್ಯದ ಸುನಾಮಿ ಉಕ್ಕಿಸುವ ವೆಂಕಟ ಇನ್ ಸಂಕಟ

  Saturday, June 30, 2012, 14:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X