For Quick Alerts
ALLOW NOTIFICATIONS  
For Daily Alerts

ಮರ್ಯಾದೆ ರಾಮಣ್ಣನ ರಾಜ್ಯಭಾರ ಒಮ್ಮೆ ನೋಡ್ರಣ್ಣ

By * ಚಕ್ರತೀರ್ಥ, ಕುಂದಾಪುರ
|

Maryade Ramanna review
1920ರ ಸುಮಾರಿಗೆ 'ದಿ ಹಾಸ್ಪಿಟಾಲಿಟಿ' ಎನ್ನುವ ಚಿತ್ರ ಬಂದಿತ್ತು. ಆ ಚಿತ್ರವನ್ನೇ ಹೋಲುವಂತೆ 'ಬಲಗಾಲಿಟ್ಟು ಒಳಗೆ ಬಾ' ಎನ್ನುವ ಚಿತ್ರ ಬಂತು. ಈ ಚಿತ್ರವನ್ನೇ ಹೋಲುವಂತಹ ಸಿನಿಮಾ ತೆಲುಗಿನಲ್ಲಿ ರಾಜಮೌಳಿ ನಿರ್ದೇಶನದ 'ಮರ್ಯಾದಾ ರಾಮನ್ನ'. ಈಗ ಅದರ ಕನ್ನಡದ ರಿಮೇಕ್ 'ಮರ್ಯಾದೆ ರಾಮಣ್ಣ'.

ಕಥೆಯ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ - ರಾಮ (ಕೋಮಲ್ ಕುಮಾರ್) ತನ್ನ ಐದು ಎಕರೆ ಜಮೀನನ್ನು ಮಾರಲು ಊರಿಗೆ ಟ್ರೈನ್‌ನಲ್ಲಿ ಬರುತ್ತಿರಬೇಕಾದರೆ ಅಪರ್ಣ (ನಿಶಾ ಶಾ) ಪರಿಚಯವಾಗುತ್ತದೆ. ಇಬ್ಬರೂ ಒಳ್ಳೆ ಸ್ನೇಹಿತರಾಗುತ್ತಾರೆ. ನಾಯಕ ದೇಸಾಯಿಯ ಬಂಗಲೆಗೆ ಬರುತ್ತಾನೆ. ಆತನಿಗೆ ಅಲ್ಲಿ ಒಳ್ಳೆ ಉಪಚಾರವೂ ಸಿಗುತ್ತೆ. 25 ವರ್ಷಗಳ ಹಿಂದೆ ನಾಯಕನ ತಂದೆ ತನ್ನ ಮಗನನ್ನು ಕೊಂದಿರುವ ವಿಷಯ ಗೊತ್ತಾದಾಗ ದೇಸಾಯಿ ಕಡೆಯವರು ರಾಮನ ಮೇಲೆ ಸೇಡು ತೀರಿಸಿ ಕೊಳ್ಳಲು ಕಾಯುತ್ತಿರುತ್ತಾರೆ.

ಇದನ್ನರಿತ ರಾಮ ಸಂದರ್ಭೋಚಿತವಾಗಿ ದೇಸಾಯಿ ಕುಟುಂಬಕ್ಕೆ ಹತ್ತಿರವಾಗುತ್ತಾನೆ. ಅಲ್ಲದೆ ಅಪರ್ಣಾ ಮತ್ತು ರಾಜೇಶ್ (ಧರ್ಮಾ) ಮದುವೆಗೂ ಸಹಾಯ ಮಾಡುತ್ತಾನೆ. ಆದರೂ ದೇಸಾಯಿ ಇವನ ಮೇಲೆ ಸೇಡು ತೀರಿಸಲು ಸೂಕ್ತ ಸಮಯ ಹುಡುಕುತ್ತಿರುತ್ತಾನೆ. ದೇಸಾಯಿ ಮನೆಯಲ್ಲಿ ರಾಮನಿಗೆ ಮುಂದೇನಾಗುತ್ತೆ? ದೇಸಾಯಿ ಕುಟುಂಬವನ್ನು ಯಾವ ರೀತಿಯಲ್ಲಿ ನಿಭಾಯಿಸುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.

ಚಿತ್ರದ ಪ್ಲಾಸ್ ಪಾಯಿಂಟ್

1. ಎಂ ಎಂ ಕೀರವಾಣಿ ಅವರ ಎರಡು ಹಾಡುಗಳು

2. ಆರ್ ಗಿರಿಯವರ ಕ್ಯಾಮರಾ ಕೈಚಳಕ

3. ಎಂದಿನಂತೆ ಹಿರಿಯ ನಟ ದೊಡ್ಡಣ್ಣ ಅವರ ಪ್ರಬುದ್ಧ ನಟನೆ

4. ಕೋಮಲ್ ಕುಮಾರ್ ಅವರ ಸೂಪರ್ ಅಭಿನಯ

5. ರಮೇಶ್ ಭಟ್, ಧರ್ಮಾ ಉತ್ತಮ ನಟನೆ

6. ಒಂದು ವಿಶೇಷ ಮತ್ತು ವಿಭಿನ್ನ ಪಾತ್ರಕ್ಕೆ ರಿಯಲ್ ಸ್ಟಾರ್ ಉಪ್ಪಿ ಡಿಫರೆಂಟ್ ಶೈಲಿಯಲ್ಲಿ ಧ್ವನಿ ನೀಡಿರುವುದು

ಚಿತ್ರದ ಮೈನಸ್ ಪಾಯಿಂಟ್

1. ಮೊದಲಾರ್ಧ ಬೋರೋ ಬೋರ್. ಕೋಮಲ್ ಅಭಿಮಾನಿಗಳ ತಾಳ್ಮೆ ಪರೀಕ್ಷಿಸಬಹುದು

2. ನಾಯಕಿ ನಿಶಾ 'ಹಿರೋಯಿನ್ ಮೆಟೀರಿಯಲ್' ಅಲ್ಲವೇ ಅಲ್ಲ

3. ಕೋಮಲ್ ಚಿತ್ರದಲ್ಲಿ ಕಾಮಿಡಿಗೆ ಪ್ರಾಮುಖ್ಯತೆ ಇದೆ ಎಂದು ನೀವು ಥಿಯೇಟರ್ ಹೋದರೆ ಅದಕ್ಕೆ ನಾವು ಜವಾಬ್ದಾರರಲ್ಲ

4. ತೆಲುಗು ಚಿತ್ರದ ಫ್ರೇಮ್ ಟು ಫ್ರೇಮ್ ರಿಮೇಕ್ ಮಾಡಿದ ನಿರ್ದೇಶಕ ಪತ್ತಿ ಗುರುಪ್ರಸಾದ್.

ಇಷ್ಟಕ್ಕೂ ಚಿತ್ರ ನೋಡಬೇಕೆ ಬೇಡವೆ?! ಮಾರ್ಯಾದೆ ರಾಮಣ್ಣನ ಪ್ಲಸ್ ಮತ್ತು ಮೈನಸ್ ಪಾಯಿಂಟುಗಳು ನಿಮ್ಮ ಮುಂದಿವೆ. ಆಯ್ಕೆ ನಿಮಗೇ ಬಿಟ್ಟಿದ್ದು. ಚಿತ್ರವನ್ನು ನೋಡದೆ ಇರುವವರು ಹೋಗಿ ನೋಡಿ. ಈಗಾಗಲೆ ನೋಡಿದ್ದರೆ ಮತ್ತೊಮ್ಮೆ ಹೋಗಿ ನೋಡಿ. ಮೊದಲಾರ್ಧ ಬೋರ್ ಹೊಡಿಸಿದರೂ ಇಂಟರ್ವಲ್ ನಂತರ ಚಿತ್ರದಲ್ಲಿ ಸ್ಪೀಡ್ ಇದೆ. ಕೋಮಲ್ ನಟನೆ ಮಸ್ತಾಗಿದೆ. ಹತ್ತರಲ್ಲಿ ಆರು ಅಂಕ ನೀಡಬಹುದು.

English summary
Read Kannada movie Maryade Ramanna reveiw. Komal Kumar, Nisha Shah, Mukesh Rishi, Dharma, Rajesh are in cast and movie is directed by director P V S Guruprasad. A fine story and screenplay prop up this film, which stutters in the first half but manages to keep the audience riveted in the second.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more