»   » ಚಿತ್ರವಿಮರ್ಶೆ: ಕೋಡಗನ ಕೋಳಿ ನುಂಗಿತ್ತಾ

ಚಿತ್ರವಿಮರ್ಶೆ: ಕೋಡಗನ ಕೋಳಿ ನುಂಗಿತ್ತಾ

Posted By: Staff
Subscribe to Filmibeat Kannada

ನಾಯಕನ ಹೆಸರು ಬಾಲು
ಹುಡುಗೀರ ಕಂಡರೆ ಆಗುತ್ತಾನೆ ಐಲುಪೈಲು
ಸಿಕ್ಕರೆ ಬೆಡಗಿ, ಬಿಡುತ್ತಾನೆ ಕಾ.. ಕಾ..' ರೈಲು
ಮದುವೆ ಆಗಿಲ್ಲ ಅನ್ನೋದು ಅವನ ಗೋಳು
ಕೊಚ್ಚಿ ಇಳಿಸೋದೆಲ್ಲ ಬರೀ ಓಳು

*ವಿನಾಯಕರಾಮ್ ಕಲಗಾರು

ಇದು ಜಗ್ಗೇಶ್ ಅಭಿನಯದ ಕೋಡಗನ ಕೋಳಿ ನುಂಗಿತ್ತಾ' ಚಿತ್ರದ ಕತೆಯ ಸಾರ. ಹಾಸ್ಯ ಎಂಬ ಬಿಲ್ಲು ಬಳಸಿ, ಜಗ್ಗೇಶ್ ಎಂಬ ಧನುರ್ಬಾಣದಿಂದ ಪ್ರೇಕ್ಷಕರ ಎದೆಗೆ ಪಾಶುಪತಾಸ್ತ್ರ ಬಿಟ್ಟಿದ್ದಾರೆ ನಿರ್ದೇಶಕ ವಾಸು. ಇದು ನೂರಕ್ಕೆ ನೂರು ಭಾಗ ಕಾಮಿಡಿ ಚಿತ್ರ. ಕತೆಯ ಮೂಲ ತೆಲುಗಿನ ಮಲ್ಲೇಶ್ವರಿ'. ಅಲ್ಲಿ ವೆಂಕಟೇಶ್ ನಾಯಕ. ಅದರಲ್ಲಿ ಆಕ್ಷನ್‌ಗೆ ಹೆಚ್ಚು ಒತ್ತು ಕೊಡಲಾಗಿತ್ತು. ಆದರೆ ಇಲ್ಲಿ ಜಗ್ಗೇಶ್ ಇರುವುದರಿಂದ ಅದರ ಟ್ರ್ಯಾಕ್ ಬದಲಾಗಿದೆ. ಒಬ್ಬ ರಾಜಕುಮಾರಿಯ ಕತೆ. ಆಕೆಯ ಕೋಟಿ ಕೋಟಿ ರೂ. ಆಸ್ತಿಗಾಗಿ ನಡೆಯುವ ಸಂಘರ್ಷದ ಒಟ್ಟು ಮೊತ್ತವೇ ಮಲ್ಲೇಶ್ವರಿ'. ಅಲ್ಲಿ ಕತ್ರಿನಾ ಕೈಫ್ ನಾಯಕಿ. ಇಲ್ಲಿ ಪೂಜಾ ಗಾಂಧಿ ಆ ಪಾತ್ರ ನಿಭಾಯಿಸಿದ್ದಾರೆ. ಅವರ ಬಗ್ಗೆ ಹೇಳುವುದಾದರೆ:

ಪೂಜಾ ಗಾಂಧಿ ಅಲ್ಲ,
ಆಕೆ ಈಜೋ ಗಾಂಧಿ,
ಜಗ್ಗೇಶ್ ಜತೆ ಸೇರಿ ಆಡುತ್ತಾಳೆ ಜುಗಲ್ ಬಂದಿ!

ಪೂಜಾ, ಮುಂಗಾರು ಮಳೆ' ನಂತರ ಮೊದಲ ಬಾರಿಗೆ ಜಗ್ಗೇಶ್ ಜತೆ ಅಭಿನಯಿಸಿರುವ ಚಿತ್ರವಿದು. ಅವರ ಇತ್ತೀಚಿನ ತಾಜ್ ಮಹಲ್' ಚಿತ್ರಕ್ಕೆ ಹೋಲಿಸಿದರೆ, ಸಖತ್ ತೆಳ್ಳಗೆ ಕಾಣುತ್ತಾರೆ. ಆದರೆ ಅಭಿನಯದಲ್ಲಿ ಇನ್ನಷ್ಟು ಪಕ್ವತೆ ಬೇಕಿತ್ತು. ಏಕೆಂದರೆ ಆಗಿನ್ನೂ ಒಂದೇ ಸಿನಿಮಾದಲ್ಲಿ ಮಾಡಿದ ಅನುಭವ ಮಾತ್ರ ಅವರಿಗಿತ್ತು. ಅದಾದ ನಂತರ ಐದಾರು ಚಿತ್ರಗಳಲ್ಲಿ ನಟಿಸಿದ ಅನುಭವವನ್ನು ಪೂಜಾ ತಾಜ್ ಮಹಲ್'ನಲ್ಲಿ ಧಾರೆ ಎರೆದಿದ್ದಾರೆ.

ಆದರೂ ರಾಜಕುಮಾರಿ ಪಾತ್ರದಲ್ಲಿ ಲವಲವಿಕೆಯಿದೆ. ಈಜುಡುಗೆಯಲ್ಲಿ ಇನ್ನಷ್ಟು ಇಂಪಾಗಿ' ಕಂಡು, ಕಣ್ಣು ತಂಪಾಗಿಸುತ್ತಾಳೆ. ನಿರ್ದೇಶಕರು ಸಿನಿಮಾ ಶುರುವಾಗಿ ಅರ್ಧ ಗಂಟೆಯಾದರೂ ಪೂಜಾಳನ್ನು ತೋರಿಸುವುದಿಲ್ಲ. ಆ ಮಟ್ಟಿಗೆ ಅವರ ಜಾಣ್ಮೆ ಮೆಚ್ಚಲೇಬೇಕು. ಪ್ರೇಕ್ಷಕರು ಪೂಜಾಗಮನಕ್ಕಾಗಿ ಚಾತಕಪಕ್ಷಿಯಂತೆ ಕೂತು:
ಪೂಜಾ ಮೇಡಂ ಪೂಜಾ ಮೇಡಂ ಬೇಗ ಬೇಗ ಬನ್ನಿ... ಎಂದು ಕುರ್ಚಿಯ ತುದಿಗೆ ಬಂದಿರುತ್ತಾರೆ!

ಇನ್ನು ಜಗ್ಗೇಶ್ ಬಗ್ಗೆ ಹೇಳುವುದಾದರೆ:
ಒಟ್ಟಾರೆ ಚಿತ್ರದ ಬಗ್ಗೆ ಹೇಳುವುದಾದರೆ:
ಅವರು ಇಲ್ಲಿಯೂ ಹಾರಿಸಿದ್ದಾರೆ ಕಾಗೆ,
ಅವರ ಲೆವೆಲ್ಲಿಗೆ ಅದು ಇಲ್ಲದಿದ್ದರೆ ಹೇಗೆ?
ನೋಡಿ ಅರಗಿಸಿಕೊಳ್ಳಲಾಗದಿದ್ದರೆ
ಖಂಡಿತಾ ಹೊಗೆ!

ಅವರು ಕಾಮಿಡಿ ಮಾಡುವಲ್ಲಿ ನಯಾಪೈಸೆ ಮೋಸ ಮಾಡಿಲ್ಲ. ಅವರ ಹಾಸ್ಯಕ್ಕೆ ಮತ್ತಷ್ಟು ಒಗ್ಗರಣೆ ಹಾಕಲು ಬುಲೆಟ್ ಪ್ರಕಾಶ್, ಕಾಶಿ, ಬ್ಯಾಂಕ್ ಜನಾರ್ದನ್, ಸಿಹಿ ಕಹಿ ಚಂದ್ರು, ಚಿತ್ರಾ ಶೆಣೈ, ಪದ್ಮಾವಾಸಂತಿ, ಸಾಧುಕೋಕಿಲ, ಸುದರ್ಶನ್, ನಾಗಶೇಖರ್, ಹೊನ್ನವಳ್ಳಿ ಕೃಷ್ಣ... ಅಬ್ಬಬ್ಬಾ ಶಟ್ರಂಗಡಿಯ ಸಾಮಾನು ಚೀಟಿಯಂತೆ ಪಟ್ಟಿ ಬೆಳೆಯುತ್ತದೆ. ನಿರ್ದೇಶಕರು ಇಂತಿಪ್ಪ ಎಲ್ಲರನ್ನೂ ಸರಿಯಾಗಿ ಬಳಸಿಕೊಂಡಿ ದ್ದರೆ ಕೋಡಗನ...' ಕರಾಮತ್ತೇ ಬೇರೆಯಾಗಿರುತ್ತಿತ್ತು. ಹಾಗಂತ ಇಲ್ಲಿ ಕೋಳಿಯೂ ಇಲ್ಲ, ಕೋಡಗವೂ ಇಲ್ಲ. ಶಿಶುನಾಳ ಶರೀಫರಂತೂ ಇಲ್ಲವೇ ಇಲ್ಲ.

ಆದರೆ ವಾಸು ಪ್ರೇಕ್ಷಕರನ್ನು ಕೇಳಿ ಮಸಾಲೆ' ಅರೆದಿಲ್ಲ. ಜಗ್ಗೇಶ್ ಸಾಹೇಬ್ರ ನಾನ್ ವೆಜ್' ಭಾಷಾಸಾಹಿತ್ಯ ಅವರ ಅಭಿಮಾನಿಗಳ ಭಾವನೆ'ಗಳೊಂದಿಗೆ ತಳುಕು ಹಾಕುತ್ತದೆ! ಕುಡಿದ ಮತ್ತಿನಲ್ಲಿ ಜಗ್ಗೇಶ್ ಹೊಡೆದಾಡುವ ಹಾಸ್ಯದ ಟೈಮಿಂಗ್ ಇಷ್ಟವಾಗು ತ್ತದೆ. ಹಳೆಯ ಹಾಡುಗಳನ್ನು ಕಚಪಚಕಚಪಚ'ವಾಗಿ ಜಗ್ಗೇಶ್ ಹಾಡುವುದು, ಅದಕ್ಕೆ ತಕ್ಕಂತೆ ಡೈಲಾಗ್ ಒಗೆಯುವುದು ನಿರ್ದೇಶಕರ ಹೊಸ ಪ್ರಯತ್ನ. ಆ ಬಗ್ಗೆ ಎರಡು ಮಾತಿಲ್ಲ. ಆದರೆ ಪತ್ರಿಕೆಯೊಂದರ ಹೆಸರು ಬಳಸಿ, ಕಿವಿಗೆ ತುಂಬಾ ಇಷ್ಟ...' ಎನ್ನುವ ಸಂಭಾಷಣೆ (ರಂಗಾಯಣ ರಘು ಹೇಳೋದು) ಅತಿರೇಕವೆನಿಸುತ್ತದೆ.

ಮೊದಲಾರ್ಧ ಕಾಮಿಡಿಯ ಪರಾಕಾಷ್ಠೆ' ತಲುಪುತ್ತದೆ. ಇನ್ನರ್ಧದಲ್ಲಿ ಪೂರ್ಣ ಕತೆ ಹೇಳಬೇಕೆಂಬ ಉದ್ದೇಶದಿಂದ ತುಂಬಾ ಎಳೆಯಲಾಗಿದೆ. ಯಡವಟ್ಟಾಗಿದ್ದೇ ಅಲ್ಲಿ, ಅಯ್ಯೋ ನಿಲ್ಲಿಸ್ರಪ್ಪ ಸಾಕು. ಇಲ್ಲಿಯವರೆಗೆ ಬಿಟ್ಟ ಪಾಶುಪ ತಾಸ್ತ್ರವನ್ನೇ ತಡೆದುಕೊಳ್ಳ ಲಾಗುತ್ತಿಲ್ಲ' ಎಂದು ಪ್ರೇಕ್ಷಕರು ಎದ್ದುಹೋದರೆ ಅದಕ್ಕೆ ಸಂಕಲನಕಾರರು ಹೊಣೆಯಾಗುತ್ತಾರೆ. ಅನಗತ್ಯ ಎನಿಸುವ ಕೆಲವನ್ನು ಮುಚ್ಚುಮರೆ ಇಲ್ಲದೆ ಕತ್ತರಿಸಿ ಬಿಸಾಡಬಹುದಿತ್ತು.

ಇನ್ನು ರಂಗಾಯಣ ರಘು. ಮೊದಮೊದಲು ಅವರು ಮೈ ಪರಚಿಕೊಳ್ಳುತ್ತಾ ಮಾತನಾಡುವುದು ಓಕೆ. ಆದರೆ ಕಡೆಕಡೆಗೆ ಅದು ಅತಿರೇಕದ ಉತ್ತುಂಗಕ್ಕೇರುತ್ತದೆ ಏಕೆ? ರಘು ಅವರೇ ತಾವು ಇಂಥ ಅ'ಪರೂಪದ, ಯೋಗ್ಯ'ಪಾತ್ರ ಒಪ್ಪಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ. ಅಥವಾ ರಂಗಾಯಣ' ಎಂಬ ಹೆಸರನ್ನು ದಯವಿಟ್ಟು ಬಳಸಬೇಡಿ. ಶರಣ್ ಕಾಮಿಡಿ ಇಷ್ಟವಾಗುತ್ತದೆ. ಸಾಧು ಕೋಕಿಲ ಹಾಗೂ ಜಗ್ಗೇಶ್ ಕಾಮಿಡಿ ಅಸಹ್ಯ ಹುಟ್ಟಿಸುತ್ತದೆ. ಸಂಗೀತದಲ್ಲಿ ಹೇಳುವಂಥ ವಿಶೇಷತೆ ಇಲ್ಲ. ನಿಂದೇ ಕಣೆ ನಿಂದೇ ಕಣೆ...' ಹಾಡು ಇದ್ದಿದ್ದರಲ್ಲಿ ಪರವಾಗಿಲ್ಲ.
ಒಟ್ಟಾರೆ ಚಿತ್ರದ ಬಗ್ಗೆ ಹೇಳುವುದಾದರೆ!
ಜಗ್ಗೇಶ್ ಕಾಗೆ ಪುರಾಣ
ಪೂಜಾ ವೈಭವೀಕರಣ',
ಮತ್ತೊಂದಿಷ್ಟು ಕಾಮಿಡೀಕರಣ
ಇತ್ಯಾದಿ ಇತ್ಯಾದಿ ಸೇರಿ ಕೋಡಗನ
ಕೋಳಿ ನುಂಗಿತ್ತಾ ಕಣಣ್ಣ!

English summary
Kannada movie kodaganakolinungitta review by vinayakram kalagaru. movie has jaggesh and pooja gandhi in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada