For Quick Alerts
ALLOW NOTIFICATIONS  
For Daily Alerts

ಶಾರುಖ್ ಖಾನ್ ಮ್ಯಾಜಿಕ್ ನ ರಾ ಒನ್ ಚಿತ್ರವಿಮರ್ಶೆ

By * ಶ್ರೀರಾಮ್ ಭಟ್
|

Sharuk Khan Kareena
ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಚಿತ್ರ "ರಾ. ಒನ್" ಬಿಡುಗಡೆ ಆಗಿದೆ. ಈ ಚಿತ್ರವನ್ನು ನೋಡಲು ಶಾರುಖ್ ಅಭಿಮಾನಿಗಳು ಮಾತ್ರವಲ್ಲ, ಪ್ರಪಂಚವೇ ಕಾದು ಕೂತಿತ್ತು ಎಂದರೆ ತಪ್ಪಿಲ್ಲ. ಜನರ ನಿರೀಕ್ಷೆಗೂ ಮೀರಿ ಚಿತ್ರ ಶ್ರೀಮಂತವಾಗಿ ಮೂಡಿ ಬಂದಿದೆ. ಹಾಲಿವುಡ್ ಮ್ಯಾಜಿಕ್, ಬಾಲಿವುಡ್ ಲಾಜಿಕ್ ಇಲ್ಲಿದೆ. ಶಾರುಖ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಜೊತೆ ಈ 'ರಾ. ಒನ್' ಹಬ್ಬ ಕೂಡ ಸಂತೋಷ ನೀಡಲಿದೆ.

ಈ ಬಾಲಿವುಡ್ ಮೂವಿ ಹಾಲಿವುಡ್ ಮೂವಿಯನ್ನು ವೀಕ್ಷಸಿದಂತೆ ಭಾಸವಾಗಲಿದೆ. ಕಾರಣ ಬರೋಬ್ಬರಿ ರು. 175 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿರುವ ನಿರ್ಮಾಪಕರು ಎಲ್ಲಿಯೂ ದೃಶ್ಯ ಮೆರವಣಿಗೆಯಲ್ಲಿ ರಾಜಿ ಆಗಿಲ್ಲ. ಇದು ಬಾಲಿವುಡ್ ಬಾರ್ಡರ್ ದಾಟಿ ಪ್ರಪಂಚವೆಲ್ಲ ನೋಡುವಷ್ಟು ರಿಚ್ ಟಚ್ ನಲ್ಲಿ ಮೂಡಿ ಬಂದಿದೆ.

ನಿರ್ದೇಶಕ ಅನುಭವ್ ಸಿನ್ಹಾ ಆಯ್ಕೆ ಮಾಡಿರುವ ಕಥೆ ಚೆನ್ನಾಗಿದೆ. ಭಾರತೀಯ ಅಪ್ಪ ಹಾಗೂ ಮಗನ ಕಥೆಯಲ್ಲಿ ಸಂಪೂರ್ಣ ಸ್ವದೇಶಿ ವಾಸನೆ ಇದೆ. ಈ ಮೊದಲು ಬಂದು ಸುಪರ್ ಹಿಟ್ ಆಗಿರುವ ಕ್ರಿಷ್ ಹಾಗೂ ರೊಬೊಟ್ ಕಥೆಯ ಸುವಾಸನೆ ಈ ರಾ. ಒನ್ ದಲ್ಲಿ ಇದೆ. ಆದರೆ ಇನ್ನೂ ಆಳಕ್ಕೆ ಇಳಿದು ಸುಪರ್ ಹೀರೋ ಟ್ರೆಂಡ್ ನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಆದರೂ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಎನಿಸುವುದು ಸುಳ್ಳಲ್ಲ.

ಸಿನಿಮಾ ನಿರೂಪಣೆ ಕೂಡ ಚೆನ್ನಾಗಿ ಮೂಡಿ ಬಂದಿದೆ. ವೈಜ್ಯಾನಿಕ ಅಂಶಗಳನ್ನು ಎಳೆದು ತಂದಿರುವ ನಿರ್ದೇಶಕರು ಅದಕ್ಕೆ ತಾರ್ಕಿಕ ಮೌಲ್ಯ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಆ ಮೂಲಕ ಇನ್ನೂ ಒಳ್ಳೆಯ ಸಿನಿಮಾ ಆಗುವುದನ್ನು ತಪ್ಪಿಸಿದ್ದಾರೆ. ಆದರೆ ಕೇವಲ ಮೋಡಿ ಮಾಡಬಲ್ಲ ಕಥೆ ಹಾಗೂ ಚಿತ್ರಕಥೆಯನ್ನು ಹೆಣೆಯುವುದರಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ.

ಶಾರುಖ್ ಖಾನ್ ಪಾತ್ರ ಸಿನಿಮಾದ ಹೈಲೈಟ್. ಆದರೆ ಶಾರುಖ್ ಅಭಿನಯಿಸುವ (ಪಾತ್ರವೇ ಆಗುವುದು) ಬದಲು ಎಂದಿನಂತೆ ತಮ್ಮ ನಟನೆ ಮುಂದುವರಿಸಿದ್ದಾರೆ. ಪಂಚಿಂಗ್ ಡೈಲಾಗ್, ಸೂಪರ್ ಸ್ಟಾರ್ ಮ್ಯಾನರಿಸಂ, ಎಂದಿನ ಲವಲವಿಕೆ ಅಸ್ತ್ರಗಳನ್ನು ಇಲ್ಲೂ ಪ್ರಯೋಗಿಸಿದ್ದಾರೆ. ಅದನ್ನು ಬಿಟ್ಟು ಪರಕಾಯ ಪ್ರವೇಶಿಸುವುದನ್ನು ಶಾರುಖ್ ಕಲಿಯಬೇಕು. ಪಾತ್ರಕ್ಕೆ ತಕ್ಕ ಅಭಿನಯ ಬರಬೇಕು. ನಟನೆಯನ್ನೇ ಇಷ್ಟ ಪಡುವುದಾದರೆ ಶಾರುಖ್ ಸೂಪರ್.

ಆದರೆ ಕರೀನಾ ಕಪೂರ್ ನಟಿಸದೇ ಅಭಿನಯಿಸಿದ್ದಾರೆ, ಪಾತ್ರವೇ ತಾನಾಗಿದ್ದಾರೆ. ನೃತ್ಯದಲ್ಲೂ ಕರೀನಾ ಲೀಲಾಜಾಲತೆ ಮೆರೆದಿದ್ದಾರೆ, ಪ್ರತಿಭಾವಂತೆ ಎಂಬ ಹೆಸರನ್ನು ಉಳಿಸಿಕೊಂಡಿದ್ದಾರೆ. ಅರ್ಮಾನ್ ವರ್ಮಾ ಅಭಿನಯ ಮನಮುಟ್ಟುವಂತಿದೆ. ಉಳಿದ ತಾರಾಬಳಗವೆಲ್ಲವೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸೋತಿಲ್ಲ. ರಜನಿಕಾಂತ್ ಸ್ಟೈಲ್, ಪ್ರಿಯಾಂಕ್ ಸ್ಮೈಲ್ ಸೂಪರ್..!

ಆದರೆ ಎಲ್ಲರ ಅಭಿನಯವನ್ನು ಮೀರಿಸಿ ಮನಸ್ಸಿನಲ್ಲಿ ನಿಲ್ಲವುದು, ವಿಲನ್ ರೋಲ್ ಸರದಾರ 'ಅರ್ಜುನ್ ರಾಂ ಪಾಲ್'. ಸಾಕ್ಷಾತ್ ಶಾರೂಖ್ ಪಾತ್ರವೇ ಅರ್ಜುನ್ ಅಭಿನಯದ ಎದುರಲ್ಲಿ 'ಮಂಕಾಗಿದ್ದಾರೆ' ಅಂದ್ರೆ ಅರ್ಜುನ್ ರಾಂ ಪಾಲ್ ಬಗ್ಗೆ ಬೇರೆ ಮಾತೇ ಬೇಡ. ಸಿನಿಮಾದ ನಿಜವಾದ ಹೀರೋ ಈ ಅರ್ಜನ್ ಎಂದು ಯಾರಿಗಾದರೂ ಅನಿಸಿಲ್ಲವಾದರೆ ಅವರು ಮತ್ತೊಮ್ಮೆ ನೋಡುವುದು ಒಳ್ಳೆಯದು.

ಗ್ರಾಫಿಕ್ಸ್, ಕಾಸ್ಟ್ಯೂಮ್, ಕೋರಿಯೋಗ್ರಫಿ, ಅಂತಾರಾಷ್ಟ್ರೀಯ ಮಟ್ಟದ ಆಡಿಯೋ ಮತ್ತು ವೀಡಿಯೋ ಕ್ವಾಲಿಟಿ ಎಲ್ಲವೂ ಈ ಸಿನಮಾದಲ್ಲಿ ಅತ್ಯುತ್ಕೃಷ್ಟವಾಗಿದೆ. ಹಾಲಿವುಡ್ ಸಿನಿಮಾದ ಪ್ರಭಾವ ದಟ್ಟವಾಗಿ ಗೋಚರಿಸುವ ಈ ರಾ. ಒನ್, ಬಾಲಿವುಡ್ ಮಟ್ಟಿಗಂತೂ ನಿಜವಾಗಿಯೂ ಕಂಡಿರಿಯದ ಮಾಸ್ಟರ್ ಫೀಸ್. ಶಾರುಖ್ ಮ್ಯಾಜಿಕ್ ಪ್ರಪಂಚದ ತುಂಬೆಲ್ಲಾ ಹರಡಲಿರುವ ಈ ಚಿತ್ರ ನೋಡಿದರೆ ಬೇರೆಯದೇ ಲೋಕ ನೋಡಿದಂತೆ.

ಸಂಗೀತ ನೀಡಿರುವ ವಿಶಾಲ್ ಶೇಖರ್ ಸಿನಿಮಾಗೆ ಬಹುದೊಡ್ಡ ಪ್ಲಸ್ ಪಾಯಿಂಟ್. ಚಮಕ್ ಚಲ್ಲೋ, ದಿಲ್ದಾರ ಮುಂತಾದ ಹಾಡುಗಳಲ್ಲಿ ಸುಪರ್ ಮ್ಯಾಜಿಕ್ ಮಾಡಿರುವ ವಿಶಾಲ್, ಹಿನ್ನೆಲೆ ಸಂಗೀತದಲ್ಲೂ ತಮ್ಮ ಮಾಂತ್ರಿಕತೆ ಮೆರೆದಿದ್ದಾರೆ. ಛಾಯಾಗ್ರಹಣವೂ ಸಿನಿಮಾಗೆ ಪೂರಕವಾಗಿದ್ದು ಫುಲ್ ಸ್ಕೋರ್ ಪಡೆದಿದೆ. ತಾಂತ್ರಿಕತೆಯ ಶ್ರೇಷ್ಠತೆಗೆ ಇಲ್ಲಿ ಮೋಸವಿಲ್ಲ.

ಛೇಸಿಂಗ್ ದೃಶ್ಯಗಳು, ಸ್ಟಂಟ್ ಗಳು ಮೈನವಿರೇಳಿಸುವಂತಿದೆ. ಅದನ್ನು ನೋಡುತ್ತಾ ನೀವು ಮುಂದಿನ ಸೀಟಿನವರ ಮೇಲೆ ಬಿದ್ದರೆ ಅದಕ್ಕೆ ಆಂಡಿ ಗಿಲ್ ಮತ್ತು ಸ್ಪಿರೋ ಅವರೇ ಜವಾಬ್ದಾರಿ ಎಂದರೆ ಖಂಡಿತ ಅವರೂ ಕೋಪಗೊಳ್ಳಲಾರರು. ನಿರಂಜನ್ ಅಯ್ಯಂಗಾರ್ ಅವರ ಡೈಲಾಗ್ ನಿಮಗೆ ಮನೆಗೆ ಬಂದ ಮೇಲೂ ಮರೆಯಲಾಗದು.

ಒಟ್ಟಿನಲ್ಲಿ ಬಿಡುಗಡೆಯಾಗಿರುವ ರಾ. ಒನ್ ಚಿತ್ರ ನಿರೀಕ್ಷೆಗೆ ತಕ್ಕದಾಗಿದೆ. ಕೊಟ್ಟ ಕಾಸಿಗೆ ಮೋಸವಿಲ್ಲ. ದೀಪಾವಳಿಗೆ ಬಿಡುಗಡೆಯಾಗಿ ಹಬ್ಬದ ಸಡಗರ ಹೆಚ್ಚಿಸುವಲ್ಲಿ ರಾ. ಒನ್ ಯಶಸ್ವಿಯಾಗಿದೆ ಎನ್ನಬಹುದು. "ಸೂಪರ್ ಹೀರೋ" ಕಾನ್ಸೆಪ್ಟ್ 'ಇಷ್ಟವಾಗದವರು' ಅರ್ಧಕ್ಕೆ ಎದ್ದು ಬರಲು ಯಾವ ತೊಂದರೆಯೂ ಇಲ್ಲ.

ಚಿತ್ರ: ರಾ. ಒನ್

ನಿರ್ಮಾಪಕರು: ಈರೋಸ್ ಇಂಟರ್ ನ್ಯಾಷನಲ್ ಮತ್ತು ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್

ನಿರ್ದೇಶನ: ಅನುಭವ್ ಸಿನ್ಹಾ

ತಾರಾಗಣ: ಶಾರೂಖ್ ಖಾನ್, ಕರೀನಾ ಕಪೂರ್, ಅರ್ಜುನ್ ರಾಂ ಪಾಲ್, ಅರ್ಮಾನ್ ವರ್ಮಾ, ಪ್ರಿಯಾಂಕ ಛೋಪ್ರಾ, ಸಂಜಯ್ ದತ್ತ್, ಸತೀಶ್ ಷಾ, ದಿಲಿಪ್ ತಹಿಲ್, ಸುರೇಶ್ ಮೆನನ್, ರಜನೀಕಾಂತ್

ಸಂಗೀತ: ವಿಶಾಲ್ ಶೇಖರ್

English summary
Director Anubhav Sinha latest superhero film Ra.One is science fiction film, which features actors Shahrukh Khan, Kareena Kapoor, Arjun Rampal and Armaan Varma in the leads. Read Ra.One movie review and other Bollywood reviews.
 

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more