»   » ಚಿತ್ರ ವಿಮರ್ಶೆ: ಗುಬ್ಬಿ ನೋಡಲಡ್ಡಿಯಿಲ್ಲ

ಚಿತ್ರ ವಿಮರ್ಶೆ: ಗುಬ್ಬಿ ನೋಡಲಡ್ಡಿಯಿಲ್ಲ

By: * ಮಹೇಶ್ ದೇವಶೆಟ್ಟಿ
Subscribe to Filmibeat Kannada

ಇದು ನಿರ್ದೇಶಕರ ಮೊದಲ ಚಿತ್ರ ಎಂಬ ಕಾರಣಕ್ಕಾದರೂ ಒಮ್ಮೆ "ಗುಬ್ಬಿ" ಗೂಡಿನ ಕಡೆ ಕಣ್ಣಾಯಿಸಬೇಕು..! ಇಲ್ಲಿ ಹೇಳಿಕೊಳ್ಳುವಂಥ ಕತೆಯಿಲ್ಲ. ಆದರೆ, ಒಂದು
ಸುಲಲಿತ ಮಾರ್ಗದಲ್ಲಿ ಆ ಕಡೆಯನ್ನು ಕ್ಯಾರಿ ಮಾಡಿದ್ದಾರೆ ವಿಜಯ್.

ಇಲ್ಲಿ ನಿರ್ದೇಶಕರು ಹೆಚ್ಚು ಕನ್‌ಫ್ಯೂಶನ್ ಮಾಡುವುದಿಲ್ಲ. ಕೆಲ ಹೊತ್ತು ಕೌತುಕತೆ ಕಾಡುತ್ತದೆ. ಗೆಳೆತನದ ಹಲವು ಮುಖಗಳು ಅನಾವರಣಗೊಳ್ಳುತ್ತದೆ. ಪ್ರೀತಿ ಎಂದರೆ ಬರೀ ಸುತ್ತಾಟ, ತುಂಟಾಟವಲ್ಲ. ಅದು ಪವಿತ್ರ ಮತ್ತು ಶಾಶ್ವತ ಎನ್ನುವುದನ್ನು ತುಣುಕುತುಣುಕಾಗಿ ಹೇಳುತ್ತಾ ಹೋಗುತ್ತಾರೆ. ತನ್ನ ಬಾಲ್ಯದ ಗೆಳತಿಯ ನಿರೀಕ್ಷೆಯಲ್ಲಿದ್ದ ಅವನಿಗೆ ಅವಳೇ ಆ ಮುಸ್ಸಂಜೆ ಗೆಳತಿ ಎಂದು ಗೊತ್ತಾದಾಗ ಕತೆ ತೆರೆದುಕೊಳ್ಳುತ್ತದೆ....

ನಿರ್ದೇಶಕರು ಇಲ್ಲಿ ಪ್ರೀತಿಗೆ ಸಂಬಂಧಿಸಿದಂತೇ ಒಂದಷ್ಟು ವರ್ಕ್ ಮಾಡಿರುವುದು ಗೊತ್ತಾಗುತ್ತದೆ. ಕೆಲ ಸೆಂಟಿಮೆಂಟ್ ದೃಶ್ಯಗಳು, ಮೌನದಲ್ಲೇ ವ್ಯಕ್ತವಾಗುವ ಪ್ರೇಮ, ಒಂದಷ್ಟು ತರಲೆಗಳ ಜತೆ ಸಾಗುವ ಚಿತ್ರಕತೆ ಎಲ್ಲ ಸೊಗಸೋ ಸೊಗಸು. ಅನಗತ್ಯ ಎನಿಸುವ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದರೆ ಗುಬ್ಬಿ ಒಂದು ಪರಿಪೂರ್ಣ ಕಮರ್ಷಿ ಯಲ್ ಪಿಕ್ಚರ್.

ಇಲ್ಲಿ ನಿರ್ಮಾಪಕ ಅಣಜಿ ನಾಗರಾಜ್ ಅವರ ಧೈರ್ಯ ಮೆಚ್ಚಲೇಬೇಕು. ಹೊಸಬರ ಮೇಲೆ ಭರವಸೆ ಇಟ್ಟು ಸಿನಿಮಾ ಮಾಡಿದ್ದಾರೆ. ಅವರ ಭರವಸೆಗೆ ವಿಜಯ್ ತಣ್ಣೀರೆರಚಿಲ್ಲ. ನಾಯಕ ಪಟ್ರೆ ಅಜಿತ್ ಕಷ್ಟಪಟ್ಟು ನಟಿಸಿದ್ದಾರೆ. ಪಟ್ರೆ ಲವ್ಸ್ ಪದ್ಮಾ ಚಿತ್ರಕ್ಕೆ ಹೋಲಿಸಿದರೆ ಇಲ್ಲಿ ಸಪ್ಪೆ ಸಪ್ಪೆ.

ನಾಯಕಿ ರೀಮಾ ಕಲರ್‌ಟಿವಿ ಆಗಿದ್ದರೂ ಆಡಿಯೊ ಸ್ವಲ್ಪ ಕೈಕೊಟ್ಟಿದೆ. ರಂಗಾಯಣ ರಘು ಪಾತ್ರ ಮಾಮೂಲಿ ಎನ್ನುವಂತಿಲ್ಲ. ಗಿರಿ, ಕೈಲಾಶ್ ಮತ್ತು ದೀಪಕ್ ಪಾತ್ರಗಳು
ರಿಜಿಸ್ಟರ್ ಆಗುತ್ತವೆ. ಪೆಟ್ರೋಲ್ ಪ್ರಸನ್ನ ಮ್ಯಾನರಿಸಂ ಸೂಪರ್. ಅರ್ಜುನ್ ಸಂಗೀತ ಓಕೆ, ಹಳೇ ಹಾಡು- ನೀರಿನಲ್ಲಿ ಅಲೆಯ ಉಂಗುರ ಹಾಡನ್ನು ಕೆಡಿಸಿದ್ದು ತಪ್ಪು ತಪ್ಪು! ಒಟ್ಟಾರೆ ಗುಬ್ಬಿ ಬ್ರಹ್ಮಾಸ್ತ್ರವಾಗಿ ಬದಲಾಗಿದ್ದರೂ ಪ್ರೇಕ್ಷಕರ ಪಾಲಿನ "ಪಾಶ"ಪತಾಸ್ತ್ರ ಆಗಿಲ್ಲ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada