»   » ರಾಮ್ : ರೆಡೀ... 123...ಸ್ಟಾರ್ಟ್

ರಾಮ್ : ರೆಡೀ... 123...ಸ್ಟಾರ್ಟ್

By: * ಮಹೇಶ್ ದೇವಶೆಟ್ಟಿ
Subscribe to Filmibeat Kannada

ಇಲ್ಲಿ ಎಂದಿನಂತೇ ಪುನೀತ್ ತನ್ನ ಫ್ಯಾನ್‌ಗಳಿಗೆ ಮೃಷ್ಟಾನ್ನ ನೀಡಿದ್ದಾರೆ. ಒಂದಷ್ಟು ಕಮರ್ಷಿಯಲ್ ಅಂಶಗಳ ಮುಖವಾಡ ಹಾಕಿ ಬರುವ ಮುತ್ತು' ರಾಮ ಎಂದಿನಂತೇ ಮಾಸ್ ಅವತಾರ ತಾಳುತ್ತಾನೆ.

ಇದು ತೆಲುಗಿನ ರೆಡಿ'ಮೇಡ್ ತಿನಿಸು. ಅಂದರೆ ಮಕ್ಕಿ ಕಾಮಕ್ಕಿ. ಹೀಗಿದ್ದೂ ಪ್ರೇಕ್ಷಕ ಬಿದ್ದು ಬಿದ್ದು ಎಂಜಾಯ್ ಮಾಡುತ್ತಾನೆ. ಕಾಮಿಡಿಯ ಲೇಹ್ಯ ತಿನ್ನುತ್ತಲೇ ಇರಬೇಕು ಎನಿಸುತ್ತದೆ.

ಮೊದಲಾರ್ಧ ಸ್ಲೋ' ಪಾಯಿಸನ್. ಹೋಗ್ತಾ ಹೋಗ್ತಾ ಜನಕ್ಕೆ ಲವಲವಿಕೆಯ ಬುಗ್ಗೆ ಸಿಗುತ್ತಾ ಹೋಗುತ್ತದೆ. ರಂಗಾಯಣ ರಘು, ಸಾಧುಕೋಕಿಲಾ ಸೇರಿ ನಗೆ ಹಬ್ಬ ಮಾಡುತ್ತಾರೆ. ಅರುಣ್ ಸಾಗರ್ ಕಾಮಿಡಿಕಾಂಡ ತೋರಿಸುತ್ತಾರೆ. ಕೆಲ ಹಾಡು ಅನಗತ್ಯ. ಎರಡು ಹಾಡು ಕೇಳಲು ಅಡ್ಡಿಯಿಲ್ಲ. ಕ್ಯಾಮೆರಾ ವರ್ಕ್ ಮಾಮೂಲಿ.

ಪುನೀತ್ ಎಂದಿನಂತೆ ಶೋ ಮ್ಯಾನ್. ಅಪ್ಪು ಗಾನ ಬಜಾನಾ' ಎಂದು ಜಂಪ್ ಮಾಡುತ್ತಿದ್ದರೆ, ಜನ ಪಲ್ಟಿ ಹೊಡೆದು ಕುಣಿಯುತ್ತಾರೆ. ಪ್ರಿಯಾಮಣಿ ಅಪ್ಪು'ಗೆ ಯಲ್ಲಿ ಸ್ಕೋರ್ ಮಾಡ್ತಾಳೆ. ಕಣ್ಣಲ್ಲೇ ಕಾಗದ ಬರೆಯಲು ಯತ್ನಿಸುತ್ತಾಳೆ. ಒಟ್ಟಾರೆ ಪುನೀತ್ ಫ್ಯಾನ್‌ಗಳಿಗೆ ಇದೊಂಥರಾ ಗಜಗಾತ್ರದ ಕ್ರಿಸ್‌ಮಸ್ ಕೇಕ್. ತಿನ್ನೋದಕ್ಕೆ ಸಂತಾಕ್ಲಾಸ್ ಅಪ್ಪಣೆ ಬೇಕಾಗಿಲ್ಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada