For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ನಾರಿ ಚಿತ್ರ ನೋಡಿ ಪ್ರೇಕ್ಷಕ ಪರಾರಿ

  By * ರಾಜೇಶ್ ಮುಂಡಿಗೇಸರ
  |

  ಹೆಣ್ಣು ಮಕ್ಕಳಿಗೆ ಜ್ವರ ಬಂದರೆ ಏನು ಮಾಡಬೇಕು? ಬಿಸಿ ನೀರಿಗೆ ಬ್ರಾಂಡಿ ಸೇರಿಸಿ ಕುಡಿಸಬೇಕು. ಇದು ನಿರ್ದೇಶಕ ಅಣ್ಣಯ್ಯ ಅವರ ಸೂತ್ರ. 'ಜಸ್ಟ್ ಎಂಟರ್‌ಟೇನ್‌ಮೆಂಟ್" ಅಡಿಬರಹದಡಿ ಅವರು ನಿರ್ದೇಶಿಸಿದ 'ನಾರಿಯ ಸೀರೆ ಕದ್ದ" ಚಿತ್ರದಲ್ಲಿ ಇಂತಹ ದೃಶ್ಯ ಇದೆ. ಇಡೀ ಚಿತ್ರದಲ್ಲಿ ಕೆಲ ಸಣ್ಣ ಪುಟ್ಟ ಸನ್ನಿವೇಶ ಬಿಟ್ಟರೆ ಮನರಂಜನೆ ಎಲ್ಲಿಯೂ ಇಲ್ಲ. ಚಿತ್ರಕತೆ ಗೊಂದು ಸೂಕ್ತ ಎಳೆಯೂ ಇಲ್ಲ.

  ಪುರುಷ ಮತ್ತು ಪ್ರೀತಿಯ ದ್ವೇಷಿಯಾಗುವ ಹೆಣ್ಣು ಕೊನೆಗೆ ಪ್ರೀತಿಗೆ ಮಣಿದಿದ್ದೇಕೆ ಎಂದು ಇನ್ನಷ್ಟು ಸುಂದರವಾಗಿ ಹೇಳಲು ಸಾಧ್ಯವಿತ್ತು. ತಾವು ಏನು ಹೇಳಬೇಕು ಅನ್ನುವುದರ ಸ್ಪಷ್ಟತೆ ಇಲ್ಲದೆ ಸಿನಿಮಾ ಮಾಡಿರುವುದು ಎದ್ದು ಕಾಣುತ್ತದೆ. ಆದಾಗ್ಯೂ, ಫ್ಲಾಶ್‌ಬ್ಯಾಕ್ ಜತೆಜತೆಯಲ್ಲೇ ಕತೆ ಹೇಳುವ ವೈಶಿಷ್ಟ್ಯವನ್ನು ತಮ್ಮ ಮೊದಲ ಸಿನಿಮಾದಲ್ಲೇ ಅಣ್ಣಯ್ಯ ತೋರಿಸಿದ್ದಾರೆ.

  ಅಭಿನಯದಲ್ಲಿ ಗ್ಲಾಮರ್ ಗೊಂಬೆ ನಿಖಿತಾಗಿಂತ ಹರ್ಷಿಕಾ ಪೂಣಚ್ಚ ಗೆಲ್ಲುತ್ತಾರೆ. ನವೀನ್‌ಕೃಷ್ಣ ಅಭಿನಯವೂ ಓಕೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರದು ಎಂದಿನ ಸ್ಟೈಲ್. ವಿ.ಮನೋಹರ್ ಸಾಹಿತ್ಯ, ಸಂಗೀತ ನಿರ್ದೇಶನವಿರುವ ಎರಡು ಗೀತೆಗಳಲ್ಲಿ ಮಾಧುರ್ಯವಿದೆ.

  ಚುರುಕು ಸಂಭಾಷಣೆಯಲ್ಲಿ ಮೋಹನ್ ಗೆದ್ದಿದ್ದಾರೆ. ಸ್ವತಃ ರವಿಚಂದ್ರನ್ ರಚಿಸಿ ನಿರ್ದೇಶಿಸಿರುವ 'ನೀರೇ ನೀರೇ ಪನ್ನೀರೇ..." ಗೀತೆಯಲ್ಲಿ ಅವರ 'ಸ್ಪರ್ಶ"ವಿದೆ. ಉಳಿದಂತೆ ಬುಲೆಟ್ ಪ್ರಕಾಶ್, ಚಿದಾನಂದ್, ಯಶವಂತ್, ರೇಖಾದಾಸ್, ಶೋಭರಾಜ್, ಶಿವರಾಂ ಪಾತ್ರಗಳು ಅಚ್ಚುಕಟ್ಟು.

  English summary
  Kannada Movie Naariya Seere Kadda review by Rajesh Mudigesara. Movie has V Ravichandran, Nikita Thukral, Harshika Pooncha in the lead and directed by Annayya P.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X