'3rd Class' review: ಅನಾಥನ ಕತೆಯಲ್ಲೊಂದು ಪುರಾತನ ಟ್ವಿಸ್ಟ್..!

ಚಿತ್ರ: 3rd ಕ್ಲಾಸ್
ನಿರ್ದೇಶನ: ಅಶೋಕ್ ದೇವ್
ತಾರಾಗಣ: ರೂಪಿಕಾ, ನಮ್ ಜಗದೀಶ್, ಅವಿನಾಶ್, ಸಂಗೀತಾ ಮೊದಲಾದವರು.

Rating:
3.5/5

ಜಗ್ಗಿ ಒಬ್ಬ ನಿಯತ್ತಿನಲ್ಲಿ ಬದುಕುವ ಬಡ ಅನಾಥ ಯುವಕ. ಆತ ಬಡವ, ಕೆಳಮಟ್ಟದವನು ಎನ್ನುವ ಕಾರಣದಿಂದಲೇ ದ್ವೇಷಿಸುವ ಶ್ರೀಮಂತ ಯುವತಿ. ಆತನ ಒಳ್ಳೆಯತನ ಅರಿತ ಮೇಲೆ ಆಕೆಗೆ ಜಗ್ಗಿಯೆಂದರೆ ಪ್ರೀತಿ. ಸಿರಿವಂತಿಕೆಯಲ್ಲಿ ಬೆಳೆಸಿದ ತಂದೆಯಿಂದಾಗಿಯೇ ಮಗಳಲ್ಲಿ ಇಂಥ ಮನಸ್ಥಿತಿ. ಜಗ್ಗಿ ಅವಳನ್ನು ಪ್ರೀತಿಸುತ್ತಾನ? ಆ ಮದುವೆ ನಡೆಯುತ್ತದಾ ಎನ್ನುವುದು ಥಿಯೇಟರ್ ನಲ್ಲಿ ನೋಡಬೇಕಾದ ಸಂಗತಿ.

3rd class Kannada movie review

ರೂಪಿಕಾ ರಾಕ್ಸ್..!

ಶ್ರೀಮಂತನ ಮಗಳಾಗಿ ರೂಪಿಕಾ ನಟಿಸಿದ್ದಾರೆ. ಬಾಲನಟಿಯಾಗಿ ಬಂದು ಮುಗ್ದ ಪಾತ್ರಗಳಲ್ಲೇ ನಟಿಸುವ ಮೂಲಕ ಗುರುತಿಸಿಕೊಂಡ ರೂಪಿಕಾ ಚಿತ್ರದ ಮೂಲಕ ತಾವು ಕೂಡ ಬಿಂಕದ ಸಿಂಗಾರಿಯಾಗಬಲ್ಲೆನೆಂದು ತೋರಿಸಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಹತಾಶೆ, ನೋವಿನ ಸುದೀರ್ಘ ಸಂಭಾಷಣೆಗಳಿಂದ ಸಿಕ್ಸರ್ ಬಾರಿಸಿದ್ದಾರೆ.

ಪಿಟೀಲು ನುಡಿಸುತ್ತಾ ನೀಡುವ ಇಂಟ್ರಡಕ್ಷನ್ ದೃಶ್ಯ ನೋಡಲು ಚಂದ. ಆದರೆ ಸಹನಾ ಎನ್ನುವ ಹೆಸರಿದ್ದರೂ ಜಗ್ಗಿ ಜತೆಗಿನ ಮೊದಲ ಭೇಟಿಯಲ್ಲಿ ಅವಳು ಸಿಡಿ ಸಿಡಿ ಕೆಂಡ. ಆದರೆ ಆತನೂ ಸಂಗೀತ ಬಲ್ಲನೆಂದು ಅರಿತಾಗ ಆಕೆಯೊಳಗೆ ಶುರುವಾಗುವುದು ಹೊಸ ಥರ ಬಂಧ. ಆದರೆ ಗ್ಯಾರೇಜ್ ಹುಡುಗನಾಗಿ ಜಗ್ಗಿ ಮಾತು ಮರೆತ ಕಂದ. ಆದರೆ ಹೊಡೆದಾಟಕ್ಕೆ ನಿಂತರೆ ಎದುರಾಳಿಗಳ ದೇಹ ಗಾಳಿಯಲ್ಲಿ ಹಾರಾಡುತ್ತದೆ.

3rd class Kannada movie review

ನಾಯಕನ ನಡೆಯೇ ಗೌಣ

ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ನಮ್ ಜಗದೀಶ್ ಸೇಫ್ ಗೇಮ್ ಆಡಲು ಟ್ರೈ ಮಾಡಿದ್ದಾರೆ. ಬಹುಶಃ ಅದಕ್ಕಾಗಿಯೇ ನಿರ್ದೇಶಕರು ರೂಪಿಕಾ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯನ್ನು ನವ ನಾಯಕನಿಗೆ ನೀಡಿಲ್ಲ. ಆದರೆ ತಾನೋರ್ವ ಅನಾಥ; ತನ್ನನ್ನು ಪ್ರೀತಿಸಿದರೆ ನಾಯಕಿಯ ಅಂತಸ್ತಿಗೆ ಕುಂದಾಗುತ್ತದೆ ಎನ್ನುವ ಆತನ ಅನಿಸಿಕೆಗಳೇ ಅರ್ಥಹೀನ. ತನ್ನನ್ನು ಥರ್ಡ್ ಕ್ಲಾಸ್ ಅಲ್ಲ ಎಂದು ಸಮರ್ಥಿಸುತ್ತಲೇ ಪ್ರೇಯಸಿಯಿಂದ ದೂರಾಗುತ್ತಾನೆ; ವಿನಾ ಕಾರಣ! ಅದು ನಾಯಕನೊಳಗಿನ ಕೀಳರಿಮೆಯನ್ನು ತೋರಿಸಿದೆಯೇ ಹೊರತು ಬೇರೇನಲ್ಲ. ಆದರೆ ಕ್ಲೈಮ್ಯಾಕ್ಸ್ ಏನು ಎನ್ನುವುದನ್ನು ತೋರಿಸಿರುವ ರೀತಿ ಮಾತ್ರ ಖಂಡಿತ ವಿಭಿನ್ನ.

3rd class Kannada movie review

ಹಾಡುಗಳು ಆಕರ್ಷಕ

ಸಹನಾಳ ಶ್ರೀಮಂತ ತಂದೆ ಗೃಹಮಂತ್ರಿಯ ಪಾತ್ರದಲ್ಲಿ ಅವಿನಾಶ್ ನಟಿದ್ದಾರೆ. ಅವರ ಪತ್ನಿಯಾಗಿ ಸಂಗೀತಾ ಇದ್ದಾರೆ. ಸಹಾಯಕನಾಗಿ ಗಿರೀಶ್ ಜತ್ತಿ; ಅವರ ಮಡದಿಯಾಗಿ ಶಶಿಕಲಾ ಅಭಿನಯಿಸಿದ್ದು ಪುತ್ರಿಯಾಗಿ ನವನಟಿ ದಿವ್ಯಾ ರಾವ್ ಭರವಸೆಯ ನಟನೆ ನೀಡಿದ್ದಾರೆ. ನಾಯಕಿಯ ಸಂಗೀತದ ಶಿಕ್ಷಕರಾಗಿ ರಮೇಶ್ ಭಟ್ ಕಾಣಿಸಿಕೊಂಡಿದ್ದಾರೆ. ನಾಯಕನ ಗ್ಯಾರೇಜ್ ಸಹಕರ್ಮಿಗಳಾಗಿ ಪವನ್ ಕುಮಾರ್ ಕೂಡ ಇದ್ದಾರೆ. ಉಳಿದಂತೆ ಹಾಡುಗಳು ಆಕರ್ಷಕ; ಉಲ್ಲಾಸ. ಅಷ್ಟೇ ವಿಶೇಷ.

More from Filmibeat

English summary
3rd class is new kannada movie from director. In this film leading roles are performed by Roopika and nam jagadeesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X