»   » ಚಿತ್ರ ವಿಮರ್ಶೆ: 'ಪಿ.ಕೆ' ಅಮೀರ್ ಖಾನ್ ಡಬಲ್ ಓಕೆ

ಚಿತ್ರ ವಿಮರ್ಶೆ: 'ಪಿ.ಕೆ' ಅಮೀರ್ ಖಾನ್ ಡಬಲ್ ಓಕೆ

Posted By:
Subscribe to Filmibeat Kannada

  ವರ್ಷದಿಂದಲೂ ತೀವ್ರ ಕುತೂಹಲ ಕೆರಳಿಸಿದ್ದ ಪಿ.ಕೆ. ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ನಿರ್ದೇಶಕ ರಾಜ್ ಕುಮಾರ್ ಹಿರಾನಿಯವರ ಐದು ವರ್ಷಗಳ ಸತತ ಪರಿಶ್ರಮ ಇಂದು ತೆರೆಮೇಲೆ ಅನಾವರಣವಾಗಿದೆ. ಮತ್ತೊಂದು ಮ್ಯಾಜಿಕಲ್ ಸಿನಿಮಾ ಮೂಲಕ ಅಮೀರ್ ಖಾನ್ ಪರದೆ ಮೇಲೆ ಪ್ರತ್ಯಕ್ಷವಾಗಿದ್ದಾರೆ.

  ವಿಭಿನ್ನ ಕಥಾಹಂದರ ಇರುವ 'ಪಿ.ಕೆ' ಕಂಪ್ಲೀಟ್ ಎಂಟರ್ ಟೇನರ್. ಉತ್ತಮ ಕಥೆ, ಚಿತ್ರಕಥೆ, ಹೊಸ ನಿರೂಪಣಾ ಶೈಲಿ ಹೊಂದಿರುವ ಪಿ.ಕೆ ಸಿನಿಮಾ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ರವರ ಭಿನ್ನವಿಭಿನ್ನ ಅವತಾರ ಮತ್ತು ಡೈಲಾಗ್ ಗಳನ್ನ ನೋಡಿ, ಪಿ.ಕೆ. ಸಂಪೂರ್ಣ ಕಾಮಿಡಿ ಸಿನಿಮಾ ಅಂತ ಚಿತ್ರಮಂದಿರಕ್ಕೆ ತೆರಳಿದ್ದವರಿಗೆ ಇಂದು ಸರ್ಪ್ರೈಸ್ ಸಿಕ್ಕಿದೆ. ಹಾಗಾದ್ರೆ ಪಿ.ಕೆ. ಕಥೆ ಏನು? ಮುಂದೆ ಓದಿ... [ವಿಮರ್ಶಕ ಕೆಂಗಣ್ಣು ಕೂಡಾ ತಂಪಾಗಿಸಿದ 'ಪಿಕೆ' ಅಮೀರ]

  Rating:
  3.5/5

  ಚಿತ್ರ: ಪಿ.ಕೆ.
  ನಿರ್ದೇಶನ: ರಾಜ್ ಕುಮಾರ್ ಹಿರಾನಿ
  ನಿರ್ಮಾಣ: ರಾಜ್ ಕುಮಾರ್ ಹಿರಾನಿ, ವಿಧು ವಿನೋದ್ ಛೋಪ್ರ, ಸಿದ್ಧಾರ್ಥ್ ರಾಯ್ ಕಪೂರ್
  ತಾರಾಗಣ: ಅಮೀರ್ ಖಾನ್, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಾಜ್ ಪುತ್, ಬೋಮನ್ ಇರಾನಿ ಮತ್ತು ಇತರರು.
  ಸಂಗೀತ: ಅಜಯ್ ಅತುಲ್, ಅಂಕಿತ್ ತಿವಾರಿ
  ಛಾಯಾಗ್ರಹಣ: ಸಿ.ಕೆ.ಮುರಳೀಧರನ್
  ಸಂಕಲನ: ರಾಜ್ ಕುಮಾರ್ ಹಿರಾನಿ

  ಕಥಾಹಂದರ
    

  ಕಥಾಹಂದರ

  ಬೆಲ್ಜಿಯಂ ನಲ್ಲಿರುವ ಭಾರತೀಯ ಮೂಲದ ಪತ್ರಿಕೋದ್ಯಮ ವಿದ್ಯಾರ್ಥಿನಿ ಜಗ್ಗು (ಅನುಷ್ಕಾ ಶರ್ಮಾ) ಪಾಕಿಸ್ತಾನಿ ಹುಡುಗ ಸರ್ಫರಜ್ (ಸುಶಾಂತ್ ಸಿಂಗ್ ರಾಜ್ ಪುತ್) ಗೆ ಫಿದಾ ಆಗಿರುತ್ತಾಳೆ. ಆದ್ರೆ ಇಬ್ಬರ ಪ್ರೇಮ ಪರಿಣಯಕ್ಕೆ ಮನೆಯಲ್ಲಿ ಒಪ್ಪಿಗೆ ಸಿಗುವುದಿಲ್ಲ. ಕಾರಣ ಅಂತರ-ಧರ್ಮೀಯ!

  ಪಿ.ಕೆ ಯಾರು?
    

  ಪಿ.ಕೆ ಯಾರು?

  ಧರ್ಮದ ಕಾರಣದಿಂದ ಪ್ರೇಮಕ್ಕೆ ಕೊಳ್ಳಿ ಇಡುವ ಜಗ್ಗು ಭಾರತಕ್ಕೆ ಬರುತ್ತಾಳೆ. ಸುದ್ದಿ ಮಾಧ್ಯಮವೊಂದರಲ್ಲಿ ಕೆಲಸ ಆರಂಭಿಸುತ್ತಾಳೆ. ಆಗ ಅವಳಿಗೆ 'ಚಿತ್ರ'ವಿಚಿತ್ರ ಹುಡುಗ ಪಿ.ಕೆ (ಆಮೀರ್ ಖಾನ್) ಪರಿಚಯವಾಗುತ್ತಾನೆ. ಅಲ್ಲಿಂದ ನಡೆಯುವುದೇ ವಿಭಿನ್ನ ಸ್ಟೋರಿ

  ದೇವರ ಹುಡುಕಾಟದಲ್ಲಿ...
    

  ದೇವರ ಹುಡುಕಾಟದಲ್ಲಿ...

  ಅನ್ಯಗ್ರಹದಿಂದ ಪ್ರತ್ಯಕ್ಷವಾಗುವ ಪಿ.ಕೆ ದೇವರ ಹುಡುಕಾಟದಲ್ಲಿ ತೊಡಗುತ್ತಾನೆ. ಇದಕ್ಕೆ ಹೆಜ್ಜೆ ಹೆಜ್ಜೆಗೂ ಜಗ್ಗು ಜೊತೆಯಾಗಿರುತ್ತಾಳೆ. ಪಿ.ಕೆ.ಗೆ ದೇವರು ಯಾಕೆ? ಈ ಪ್ರಶ್ನೆಗೆ ಉತ್ತರ ತಿಳ್ಕೋಬೇಕಾದ್ರೆ ನೀವು ಸಿನಿಮಾ ನೋಡಲೇಬೇಕು.

  ಆಮೀರ್ ಖಾನ್ ಮ್ಯಾಜಿಕ್
    

  ಆಮೀರ್ ಖಾನ್ ಮ್ಯಾಜಿಕ್

  ಚಿತ್ರ-ವಿಚಿತ್ರ ಉಡುಗೆ ತೊಡುಗೆ ತೊಟ್ಟಿರುವ ಅಮೀರ್ ಇಡೀ ಪಿ.ಕೆ ಚಿತ್ರದ ಹೈಲೈಟ್ ಅಂದ್ರೆ ಅತಿಶಯೋಕ್ತಿ ಅಲ್ಲ. ಟ್ಯೂಬ್ ಲೈಟ್ ಕಣ್ಣುಗಳು, ಟೋಮ್ಯಾಟೋ ತುಟಿಗಳಿಂದ ಕಣ್ ಸೆಳೆಯುವ ಆಮೀರ್, ತಮ್ಮ ಭೋಜ್ ಪುರಿ ಭಾಷೆಯಿಂದ ಕಚಗುಳಿ ಇಡುತ್ತಾರೆ. 'ಪಿ.ಕೆ'ಯಂಥ ಚಾಲೆಂಜಿಂಗ್ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿರುವ ಅಮೀರ್, ತಮ್ಮ ಜೀವಮಾನದ ಶ್ರೇಷ್ಠ ಅಭಿನಯ ನೀಡಿದ್ದಾರೆ ಅಂದರೂ ತಪ್ಪಲ್ಲ.

  ಅನುಷ್ಕಾ ಕಮಾಲ್
    

  ಅನುಷ್ಕಾ ಕಮಾಲ್

  ಪತ್ರಕರ್ತೆಯ ಪಾತ್ರ ನಿರ್ವಹಿಸಿರುವ ಅನುಷ್ಕಾ ಚಿತ್ರದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ ಜೊತೆಗೆ ಕೊಟ್ಟಿರುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

  ಇನ್ನಿತರರು
    

  ಇನ್ನಿತರರು

  ಉಳಿದಂತೆ ಬೋಮನ್ ಇರಾನಿ, ಸುಶಾಂತ್, ಸಂಜಯ್ ದತ್ ಗೆ ಸಣ್ಣ-ಪುಟ್ಟ ಪಾತ್ರಗಳಿದ್ದರೂ, ಅದನ್ನ ಎಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

  ಎಲ್ಲೂ ಬೋರಾಗಲ್ಲ!
    

  ಎಲ್ಲೂ ಬೋರಾಗಲ್ಲ!

  ಪಿ.ಕೆ, ಎರಡುವರೆ ಗಂಟೆಯ ಸುದೀರ್ಘ ಸಿನಿಮಾ ಆಗಿದ್ದರೂ ಪ್ರೇಕ್ಷಕರಿಗೆ ಟೈಮ್ ಹೋಗುವುದು ಗೊತ್ತೇ ಆಗಲ್ಲ. ಅಷ್ಟರಮಟ್ಟಿಗೆ ಸಿನಿಮಾ ಮಜಾ ಕೊಡುತ್ತೆ. ರಾಜ್ ಕುಮಾರ್ ಹಿರಾನಿಯ ಕಚಗುಳಿ ಇಡುವ ಸಂಭಾಷಣೆ ಚಿತ್ರದುದ್ದಕ್ಕೂ ಇವೆ. ಹೀಗಾಗಿ ಪ್ರೇಕ್ಷಕರಿಗೆ 'ಪಿ.ಕೆ.' ಮನರಂಜನೆಯ ಮಹಾಪೂರ.

  ಕಾಡುವ ಸಂಗೀತ
    

  ಕಾಡುವ ಸಂಗೀತ

  ಚಿತ್ರಕಥೆಗೆ ಪೂರಕವಾಗಿರುವ ಪಿ.ಕೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ಚಿತ್ರಮಂದಿರದಿಂದ ಹೊರಗೆ ಬಂದಮೇಲೂ ಪ್ರೇಕ್ಷಕರಿಗೆ ಕಾಡುತ್ತಿರುತ್ತವೆ ಅಂದ್ರೆ, ಅದಕ್ಕೆ ಶಂತನೂ ಮೋಯಿತ್ರಾ, ಅಜಯ್ ಅತುಲ್ ಮತ್ತು ಅಂಕಿತ್ ತಿವಾರಿ ಪರಿಶ್ರಮ ಕಾರಣ.

  ಪೈಸಾ ವಸೂಲ್ ಸಿನಿಮಾ
    

  ಪೈಸಾ ವಸೂಲ್ ಸಿನಿಮಾ

  ಹೊಸತನವನ್ನು ಬಯಸುವ ಪ್ರೇಕ್ಷಕರಿಗೆ ಪಿ.ಕೆ. ಬೆಸ್ಟ್ ಚಾಯ್ಸ್. ಮನರಂಜನೆ, ಮನಸ್ಸಿಗೆ ಮುದ ನೀಡುವ ಹಾಡುಗಳು, ಹೊಟ್ಟೆ ಹುಣ್ಣಾಗಿಸುವಷ್ಟು ಕಾಮಿಡಿ, ಹೀಗೆ ಎಲ್ಲಾ ಅಂಶಗಳನ್ನು ಹೊಂದಿರುವ 'ಪಿ.ಕೆ.' ಟೆನ್ಷನ್ ಮರೆಸಿ ರಿಲ್ಯಾಕ್ಸ್ ಮಾಡುವ ಸಿನಿಮಾ. ಹಾಗಾದ್ರೆ ಇನ್ಯಾಕೆ ತಡ, ಈಗಲೇ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಪಿ.ಕೆ. ಟಿಕೆಟ್ ಬುಕ್ ಮಾಡಿ.

  English summary
  Mr.Perfectionist Aamir Khan starrer PK has released worldwide today (Dcember 19th). PK is out and out Entertaining movie with innovative concept and a must watch film.
  Please Wait while comments are loading...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more