»   » ಆದಿತ್ಯ-ಸತ್ಯ ಜೋಡಿಯ 'ಬೆಂಗಳೂರು ಅಂಡರ್ ವರ್ಲ್ಡ್'ನ್ನ ಮೆಚ್ಚಿಕೊಂಡ ವಿಮರ್ಶಕರು!

ಆದಿತ್ಯ-ಸತ್ಯ ಜೋಡಿಯ 'ಬೆಂಗಳೂರು ಅಂಡರ್ ವರ್ಲ್ಡ್'ನ್ನ ಮೆಚ್ಚಿಕೊಂಡ ವಿಮರ್ಶಕರು!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಡೆಡ್ಲಿ ಆದಿತ್ಯ ಮತ್ತು ಪಿ.ಎನ್.ಸತ್ಯ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಿನಿಮಾ 'ಬೆಂಗಳೂರು ಅಂಡರ್ ವರ್ಲ್ಡ್. ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ, ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು.

  ಆದ್ರೆ, ಬೆಂಗಳೂರಿನ ಕತ್ತಲ ಲೋಕವನ್ನ ಹಸಿಹಸಿಯಾಗಿ ತೆರೆಮೇಲೆ ಬಂಬಿಸಿರುವ ನಿರ್ದೇಶಕ ಪಿ.ಎನ್.ಸತ್ಯ ಅವರ ಪ್ರಯತ್ನ, ವಿಮರ್ಶಕರಿಗೆ ಇಷ್ಟವಾಯಿತಾ? ಕನ್ನಡ ಕಲಾಭಿಮಾನಿಗಳಂತೆ ವಿಮರ್ಶಕರು 'ಅಂಡರ್ ವರ್ಲ್ಡ್'ನ್ನ ಮೆಚ್ಚಿಕೊಂಡ್ರಾ?[ವಿಮರ್ಶೆ: ರೌಡಿಗಳನ್ನ ಕೊಂದು, 'ರೌಡಿಸಂ'ನ್ನ ಕೊಲ್ಲದ 'ಬೆಂಗಳೂರು ಅಂಡರ್ ವರ್ಲ್ಡ್']

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ...

  ''ಸೇಡಿಗೆ ಹೆಣೆದ ಚಾಲಾಕಿ ಜಾಲ''- ವಿಜಯಕರ್ನಾಟಕ

  ''ಚಿತ್ರದುದ್ದಕ್ಕು ಕುತೂಹಲ ಕೆರಳಿಸುವ ಸ್ಕ್ರಿಪ್ಟ್ ಮತ್ತು ಸ್ಕ್ರೀನ್ ಫ್ಲೆ ರೆಡಿ ಮಾಡಿದ್ದಾರೆ ನಿರ್ದೇಶಕ ಸತ್ಯ. ಪೊಲೀಸನ ಅನಾಚಾರ, ಸೆಕ್ಸ್ ವರ್ಕರ್ ಗಳನ್ನ ಸಮಾಜ ನೋಡುವ ರೀತಿ, ರೌಡಿಗಳ ಅಟ್ಟಹಾಸಕ್ಕೆ ಅಮಾಯಕರ ಬಲಿ, ಇವುಗಳನ್ನ ಚಿಕ್ಕದಾಗಿ ಕತೆಗೆ ಪೂರಕವಾಗಿ ತೋರಿಸಲಾಗಿದೆ. ಒಪನಿಂಗ್ ನಿಂದಲೂ ಪ್ರೇಕ್ಷಕನನ್ನ ಹಿಡಿದಿಡುವ ಸಿನಿಮಾಗೆ ಡ್ಯುಯೆಟ್ ಹಾಡು ಬ್ರೇಕ್ ಹಾಕುತ್ತೆ. ದ್ವೀತಿಯಾರ್ಧ ಸ್ವಲ್ಪ ನಿಧಾನ ಅನಿಸಿದರೂ ಎಲ್ಲೂ ಬೋರ್ ಆಗಲ್ಲ. ತಾಂತ್ರಿಕವಾಗಿ ಅಚ್ಚುಕಟ್ಟಾಗಿದೆ. ಸಂಭಾಷಣೆ ಮತ್ತು ಫೈಟ್ ಗಮನ ಸೆಳೆಯುತ್ತೆ. ಅನೂಪ್ ಸೀಳಿನ್ ಸಂಗೀತ ಚೆನ್ನಾಗಿದೆ. ಆದಿತ್ಯ ಉತ್ತಮವಾಗಿ ನಟಿಸಿ ಶಿಳ್ಳೆ ಗಿಟ್ಟಿಸುತ್ತಾರೆ. ಆಕ್ಷನ್ ಸಿನಿಮಾ, ಅಂಡರ್ ವರ್ಲ್ಡ್ ಸಿನಿಮಾ ನೋಡುವವರಿಗೆ ಬೆಂಗಳೂರು ಅಂಡರ್ ವರ್ಲ್ಡ್ ಅಡ್ಡಿಯಿಲ್ಲ.''-ವಿಜಯ ಕರ್ನಾಟಕ

  ಅದೇ ಮಚ್ಚು, ಹೊಡಿ ಚಚ್ಚು-ಪ್ರಜಾವಾಣಿ

  ''ಇದು ಪಕ್ಕಾ ಭೂಗತಲೋಕದ ಪಾತಕಗಳ ಕಥೆ, ಮಾರುದ್ದದ ಮಚ್ಚುಗಳು, ಕಬ್ಬಿಣಿದ ಸಲಾಕೆಗಳು, ಫಳ ಫಳ ಹೊಳೆಯುವ ಪಿಸ್ತೂಲುಗಳು, ಬೀಸುವ ಗಾಳಿಗೆ ತರಗಲೆಗಳಂತೆ ಹೆಣಗಳಾಗಿ ಬೀಳುವ ಪುಡಿ ರೌಡಿಗಳು, ಎದೆಯ ಮೇಲೆ ಒದ್ದು ದೂಳೆಬ್ಬಿಸುವ ಖದರಿನ ನಾಯಕ, ಸೇಡಿನ ಹೊಗೆ, ಎದುರಾಳಿಯನ್ನ ಚಚ್ಚಿ ಬಿಸಾಕುವ ಹೊಸ ಹೊಸ ಬಗೆ, ಕೈಯಲ್ಲಿ ಗನ್ ಉಗುಳುವ ಬುಲೆಟ್ ಗಳ ಹಾಗೆಯೇ ಬಾಯಿಂದಲೂ ಸಿಡಿಯುವ ಖಡಕ್ ಡೈಲಾಗ್ ಗಳು, ಈ ಮರಣ ಮಹಹೋಮದ ನೆತ್ತರ ಕಮಿಟನ ನಡುವೆ ಪಕ್ಕನೆ ಅರಳಿ, ಕಂಪುಬೀರಿ ಮಾಯವಾಗುವ ಕೆಂಡಸಂಪಿಗೆಯಂಥ ಹುಡುಗಿ, ಥೀಮ್ ಸಾಂಗ್ ಜತೆಗೊಂದು ಡ್ಯೂಯೆಟ್ ಸಾಂಗ್''. 'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾ ಶೀರ್ಷಿಕೆಯನ್ನ ನೆಚ್ಚಿಕೊಂಡು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕನಿಗೆ ತೀರಾ ನಿರಾಸೆ ಮಾಡುವುದಿಲ್ಲ. ಆದರೆ, ಅವೇ ಮಚ್ಚು-ಗನ್ನಿನ ಕಥೆಯ ಹೊರತಾಗಿ ಹೊಸತೇನನ್ನೂ ಹೇಳುವುದು ಇಲ್ಲ''

  ''ಸತ್ಯ ಬದಲಾಗಿಲ್ಲ, ಅಂಡರ್ ವರ್ಲ್ಡ್ ಕೂಡ''-ಕನ್ನಡ ಪ್ರಭ

  ''ಆದಿತ್ಯ ಸೋಮ ಮತ್ತು ಮೆಜೆಸ್ಟಿಕ್ ಸತ್ಯ ಇದ್ದರೇ ನಿರೀಕ್ಷೆ ಸಹಜವಾಗಿ ಹೆಚ್ಚಾಗುತ್ತೆ. ಆದ್ರೆ, ಪ್ರೇಕ್ಷಕನ ಊಹೆ, ನಿರೀಕ್ಷೆಗಳು ಹುಸಿಯಾಗುತ್ತೆ. ಇಡೀ ಚಿತ್ರವನ್ನ ಸಾಧ್ಯವಾದಷ್ಟು ಲಿಫ್ಟ್ ಮಾಡುವುದು ಆರ್ಯವರ್ಧನ ಕ್ಯಾಮರಾ ವರ್ಕ್. ಜತೆಗೆ ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ತೇಲಿ ಬರುವ ಹಿನ್ನಲೆ ಸಂಗೀತ. ಇದರ ಜೊತೆಗೆ ಆದಿತ್ಯ ಅವರ ಬಿಲ್ಡಪ್ ದೃಶ್ಯದ ಎಂಟ್ರಿಗಳು, ಆದರೆ, ಡೈಲಾಗ್ ಡಿಲವರಿಇಂದ ಹಿಡಿದು ಪ್ರತಿಯೊಂದರಲ್ಲೂ ಆದಿತ್ಯ ಅವರದ್ದು ಒಂದೇ ರೀತಿಯ ಭಾವನೆ. ನಟನೆ ವಿಚಾರದಲ್ಲಿ ಆದಿತ್ಯ ಬಿಟ್ಟರೇ ಬೇರೆ ಯಾರಿಗೂ ಸ್ಕೋಪ್ ಇಲ್ಲ. ಸತ್ಯ ಅವರಂತೆ ಸಿನಿಮಾನೂ ಸೊರಗಿದೆ. ಒಂದು ನಿರೀಕ್ಷೆಯ ಸಿನಿಮಾ ಸುಮ್ಮನೆ ಹಾಗೆ ಬಂದು ಹೀಗೆ ಹೋಗಿದೆ''-ಕನ್ನಡ ಪ್ರಭ

  ತಣ್ಣನೆ ಕ್ರೌರ್ಯದಲ್ಲಿ ನಲುಗುವ ಭೂಗತ ಲೋಕ-ಉದಯವಾಣಿ

  ''ಬೆಂಗಳೂರು ಅಂಡರ್ ವರ್ಲ್ಡ್ ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಇದೊಂದು ರಿವೆಂಜ್ ಸ್ಟೋರಿ. ಸತ್ಯ ಏನೂ ಹೇಳಬೇಕೋ ಅದನ್ನ ನೀಟ್ ಆಗಿ ಹೇಳಿದ್ದಾರೆ. ಅನಾವಶ್ಯಕ ಅಂಶಗಳು, ರೌಡಿಸಂ ಮಧ್ಯೆ ಕಾಮಿಡಿ, ಅತಿಯಾದ ಲವ್ ಟ್ರ್ಯಾಕ್ ಗಳಿಂದ ಬೆಂಗಳೂರು ಅಂಡರ್ ವರ್ಲ್ಡ್ ಅನ್ನು ಮುಕ್ತಗೊಳಿಸಿದ್ದಾರೆ. ಹೀಗಾಗಿ, ಇಲ್ಲಿ ಡೀಲು, ಸ್ಕೆಚ್ಚು. ಮಚ್ಚು ಸ್ಪಾಟ್ ಗಳದ್ದೇ ಹವಾ ಜೋರಾಗಿದೆ. ಅನೂಪ್ ಸೀಳಿನ್ ಅವರ ರೀ-ರೆಕಾರ್ಡಿಂಗ್ ಸಿನಿಮಾಗೆ ಹೊಸ ಫೀಲ್ ಕೊಟ್ಟಿದೆ. ಮಾಲಿಕ್ ಆಗಿ ನಟ ಆಸಿತ್ಯ ಇಷ್ಟವಾಗುತ್ತಾರೆ. ಮಾತಿಗಿಂತ ಕಣ್ಣಲ್ಲೇಗುರಿ ಇಡೋ ಪಂಟನಾಗಿ ಆದಿತ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಪಯಾಲ್ ಗೆ ಹೆಚ್ಚು ಅವಕಾಶವಿಲ್ಲ. ಉಳಿದಂತೆ ಎಲ್ಲರೂ ಅಭಿನಯ ಚೆನ್ನಾಗಿದೆ''-ವಿಜಯ ಕರ್ನಾಟಕ

  BangloreUnderworld -Times of India

  ''PN Satyaa's film promised quite a lot given its title. Insiders even claimed it would give a peek into the city's underworld scene. But, the film is just peppered with names that are synonymous with Bengaluru's underworld. Instead, the film does make a good watch if you like films set against the backdrop of the underworld and its wrong doings. Adityaa continues to impress with some good acting, akin to his roles in Edegarike and the Deadly series. Daniel Balaji and Bhavana hold everyone's attention with their cameos. The film has some interestingly shot action sequences. This is definitely worth a watch if you like films with a crime backdrop. Though, one wonders if just A certificate is enough for films that romanticize underworld''.- Times of India

  English summary
  Kannada Actor Aditya Starrer 'Banglore underworld' Movie has received positive response from the critics. Here is the collection of 'Banglore underworld' reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more