twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ರೆಬೆಲ್ ತಾಯಿಗೆ ರೆಬೆಲ್ ಮಗ

    |

    Recommended Video

    ರೆಬೆಲ್ ತಾಯಿಗೆ ರೆಬೆಲ್ ಮಗ..! | FILMIBEAT KANNADA

    'ಒಳ್ಳೆ ಸಮಾಜ ಬೇಕು ಅಂದ್ರೆ ಯಾರಾದ್ರೂ ಕೋಪ ಮಾಡ್ಕೊಳ್ಳೇ ಬೇಕು'......ಇದೇ 'ತಾಯಿಗೆ ತಕ್ಕ ಮಗ' ಚಿತ್ರದ ಇಡೀ ಕಥೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಆಕ್ಷನ್ ಪ್ಯಾಕೇಜ್ ಮೂಲಕ ಪ್ರೇಕ್ಷರನ್ನ ರಂಜಿಸುವ ಆಕ್ಷನ್ ಸಿನಿಮಾ 'ತಾಯಿಗೆ ತಕ್ಕ ಮಗ'.

    Rating:
    3.0/5
    Star Cast: ಅಜಯ್ ರಾವ್, ಆಶಿಕಾ ರಂಗನಾಥ್, ಸುಮಲತಾ ಅಂಬರೀಶ್, ಭಜರಂಗಿ ಲೋಕಿ
    Director: ಶಶಾಂಕ್

    ರೆಬೆಲ್ ತಾಯಿಗೆ ರೆಬೆಲ್ ಮಗ

    ರೆಬೆಲ್ ತಾಯಿಗೆ ರೆಬೆಲ್ ಮಗ

    ಮೋಹನ್ ದಾಸ್ (ಅಜಯ್ ರಾವ್) ಗೆ ಅನ್ಯಾಯ ಕಂಡ್ರೆ ಆಗಲ್ಲ. ಅದು ಚಿಕ್ಕದೇ ಇರಲಿ, ದೊಡ್ಡದೇ ಇರಲಿ ಅನ್ಯಾಯ ಕಂಡ್ರೆ ಬೆಂಕಿಯಂತೆ ಸಿಡಿದೇಳುತ್ತಾನೆ. ಶಿವ ಮೂರನೇ ಕಣ್ಣು ಬಿಟ್ರೆ ಹೇಗೆ ಅಲ್ಲೋಲ ಕಲ್ಲೋಲ ಆಗುತ್ತೋ ಹಾಗೆ, ಮೋಹನ್ ದಾಸ್ ಗೆ ಕೋಪ ಬಂದ್ರೆ, ಅನ್ಯಾಯ ಮಾಡಿದವರು ಯಾರೇ ಆಗಲಿ ಅವರ ಕಥೆ ಮುಗಿತು ಅಂತಾನೆ ಅರ್ಥ. ಮಗನ ರೆಬೆಲ್ ಸಮಾಜ ಸೇವೆಗೆ ಸ್ಫೂರ್ತಿ ರೆಬೆಲ್ ತಾಯಿ ಪಾರ್ವತಿ (ಸುಮಲತಾ). ತನ್ನ ಮಗ ತನಗೆ ಮಾತ್ರ ಮಗನಲ್ಲ, ಸಮಾಜಕ್ಕೆ ಒಳ್ಳೆಯ ಮಗ ಎಂದು ಭಾವಿಸುವ ತಾಯಿ ಪಾರ್ವತಿ ಜನರಿಗೆ ಒಳ್ಳೆಯದು ಮಾಡು ಎಂದು ಬೆನ್ನ ಹಿಂದೆ ನಿಲ್ಲುತ್ತಾರೆ.

    'ತಾಯಿಗೆ ತಕ್ಕ ಮಗ'ನ ಬಗ್ಗೆ ನೀವು ತಿಳಿಯಬೇಕಾದ ಆ 'ನಾಲ್ಕು' ಅಂಶಗಳು'ತಾಯಿಗೆ ತಕ್ಕ ಮಗ'ನ ಬಗ್ಗೆ ನೀವು ತಿಳಿಯಬೇಕಾದ ಆ 'ನಾಲ್ಕು' ಅಂಶಗಳು

    ತಾಯಿಗೆ ತಕ್ಕ ಮಗ, ಮಗನಿಗೆ ತಕ್ಕ ತಾಯಿ

    ತಾಯಿಗೆ ತಕ್ಕ ಮಗ, ಮಗನಿಗೆ ತಕ್ಕ ತಾಯಿ

    'ನಮ್ಮಮ್ಮ ಕಾನೂನು ಫಾಲೋ ಮಾಡ್ತಾರೆ, ನಾನು ನಮ್ಮಮ್ಮನ ಮಾತ್ರ ಫಾಲೋ ಮಾಡ್ತೀನಿ' ಇದು ಚಿತ್ರದ ಒಂದು ಡೈಲಾಗ್. ಈ ಡೈಲಾಗ್ ನಂತೆ ಮೋಹನ್ ದಾಸ್ ಗೆ ತಾಯಿಯೇ ಸರ್ವಸ್ವ. ಇಲ್ಲಿ ತಾಯಿ ಮತ್ತು ಮಗನ ಪ್ರೀತಿ, ವಾತ್ಸಲ್ಯ, ಮಮತೆ, ಕರ್ತವ್ಯ ಎಲ್ಲವೂ ಇದೆ. ಜನರಿಗೆ ನ್ಯಾಯ ಕೊಡಿಸುವುದು ತಾಯಿಯ ಕೆಲಸ. ತಾಯಿಗೆ ರಕ್ಷಣೆ ನೀಡುವುದು ಮಗನ ಕರ್ತವ್ಯ. ಇವರಿಬ್ಬರ ಜುಗಲ್ ಬಂದಿ ನೋಡೋದೇ ಒಂದು ಮಜಾ. ಇದೇ ಚಿತ್ರದ ಪ್ರಮುಖ ಆಕರ್ಷಣೆ.

    'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಪ್ರೇರಣೆ.?'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಪ್ರೇರಣೆ.?

    ಸರಸ್ವತಿ ಪ್ರೀತಿಯ ಬಂಧನ

    ಸರಸ್ವತಿ ಪ್ರೀತಿಯ ಬಂಧನ

    ಹೀಗೆ, ತಾಯಿ ಮಗನ ಜೀವನದಲ್ಲಿ ಎಂಟ್ರಿ ಕೊಡುವ ಹುಡುಗಿಯೇ ಸರಸ್ವತಿ (ಆಶಿಕಾ ರಂಗನಾಥ್). ಚಿತ್ರದ ಹೈವೋಲ್ಟೇಜ್ ಗ್ಲಾಮರ್ ಎನ್ನಬಹುದು. ಈ ಸಿನಿಮಾದಲ್ಲಿ ಅಷ್ಟು ಹಾಟ್ ಆಗಿ ಆಶಿಕಾ ಅಭಿನಯಿಸಿದ್ದಾರೆ. ಎಲ್ಲ ಲವ್ ಸ್ಟೋರಿಯಿಂತೆ ಇಲ್ಲಿಯೂ ಪ್ರೀತಿ, ಭಾವನೆ, ಬ್ರೇಕ್ ಅಪ್, ಹೀಗೆ ಎಲ್ಲವೂ ಇದೆ. ಹಾಗ್ನೋಡಿದ್ರೆ, ಅಜಯ್-ಆಶಿಕಾ ಜೋಡಿ ಕ್ಯೂಟ್ ಆಗಿದೆ.

    'ತಾಯಿಗೆ ತಕ್ಕ ಮಗ'ನ ಜೊತೆ 'ರಾಘು' ಮೊದಲ ಹೆಜ್ಜೆ 'ತಾಯಿಗೆ ತಕ್ಕ ಮಗ'ನ ಜೊತೆ 'ರಾಘು' ಮೊದಲ ಹೆಜ್ಜೆ

    ಸ್ಕ್ರಿಪ್ಟ್ ಗೆ ಬಲ ಬೇಕಿತ್ತು

    ಸ್ಕ್ರಿಪ್ಟ್ ಗೆ ಬಲ ಬೇಕಿತ್ತು

    ಸಿನಿಮಾದಲ್ಲಿ ಹೇಳಿರುವ ಅಂಶಗಳು ಚೆನ್ನಾಗಿದೆ. ಆದ್ರೆ, ಅದನ್ನ ಪ್ರೆಸೆಂಟ್ ಮಾಡುವಾಗ ಕೆಲವು ಕಡೆ ನೈಜತೆ ಕಾಣುವುದಿಲ್ಲ. ಸ್ಕ್ರಿಪ್ಟ್ ನಲ್ಲಿ ಇನ್ನಷ್ಟು ರೋಚಕತೆ ಬೇಕಿತ್ತು. ಜ್ವಾಲಾಮುಖಿಯಂತಿದ್ದ ಹೀರೋ ಪುಡಿರೌಡಿಗಳಿಗೆ ಎದುರಿ ಮನೆಯೊಳಗೆ ಅಸಹಾಯಕನಾಗಿ ಕೂರುವುದನ್ನ ಸಹಿಸಲಾಗುವುದಿಲ್ಲ. ಇನ್ನು ಮನೆಯೊಳಗೆ ಮತ್ತು ಹೊರಗೆ ನಡೆಯುವ ಟಾಮ್ ಅಂಡ್ ಜೆರಿ ಆಟ ಇಂತಹ ಟೈಮಲ್ಲಿ ಇದೆಲ್ಲಾ ಬೇಕಾ ಎನಿಸುತ್ತೆ. ಕೆಲವೊಮ್ಮೆ ಈ ಚಿತ್ರವನ್ನ ಶಶಾಂಕ್ ನಿರ್ದೇಶನ ಮಾಡಿದ್ದಾರಾ ಎಂಬ ಅನುಮಾನ ಕೂಡ ಮೂಡುತ್ತೆ. ಅಂತಿಮವಾಗಿ ಒಂದೊಳ್ಳೆ ಸಂದೇಶ ನೀಡುವ ಸಿನಿಮಾದ ಶ್ರಮವನ್ನ ಅಲ್ಲೆಗಳೆಯುವಂತಿಲ್ಲ.

    ನಟಿ ಸುಮಲತಾ ಟ್ಯಾಟೂ ಹಾಕಿಸಿಕೊಂಡ ಅಜಯ್ ರಾವ್ನಟಿ ಸುಮಲತಾ ಟ್ಯಾಟೂ ಹಾಕಿಸಿಕೊಂಡ ಅಜಯ್ ರಾವ್

    ಇನ್ನುಳಿದಂತೆ ಸಿನಿಮಾದಲ್ಲಿ ಏನಿದೆ.?

    ಇನ್ನುಳಿದಂತೆ ಸಿನಿಮಾದಲ್ಲಿ ಏನಿದೆ.?

    ಅಧಿಕಾರ ದಾಹಕ್ಕಾಗಿ ಏನೂ ಬೇಕಾದರು ಮಾಡುವ ರಾಜಕಾರಣಿ, ಗಣ್ಯ ವ್ಯಕ್ತಿಯ ಮಗ ಎಂಬ ಕಾರಣಕ್ಕೆ ಸಾಮಾನ್ಯ ಜನರನ್ನ ಹಿಂಸಿಸುವ ಕ್ರೂರಿ ಯುವಕ (ಭಜರಂಗಿ ಲೋಕಿ), ಇವರ ವಿರುದ್ಧ ತಾಯಿ ಮತ್ತು ಮಗನ ಹೋರಾಟ. ಈ ಮಧ್ಯೆ ಆಗಾಗ ಬರುವ ಸಾಧುಕೋಕಿಲಾ ಕಾಮಿಡಿ ಕೊಂಚ ಮಟ್ಟಿಗೆ ಕಚಕುಳಿ ನೀಡುತ್ತೆ. ಇದರ ಮಧ್ಯೆ ನಾಲ್ಕೈದು ಜಬರ್ ದಸ್ತ್ ಫೈಟ್ ಆಕ್ಷನ್ ಪ್ರಿಯರಿಗೆ ಜೋಶ್ ನೀಡುತ್ತೆ. ಅಗಾಗಾ ಬರುವ ಹಾಡುಗಳು ಕೂಡ ನೋಡುಗರಿಗೆ ಖುಷಿ ನೀಡುತ್ತೆ. ಸಿನಿಮಾಟೋಗ್ರಫಿ (ಶೇಖರ್ ಚಂದ್ರ), ಸಂಗೀತವೂ (ಜುಡಾ ಸ್ಯಾಂಡಿ) ಚಿತ್ರಕ್ಕೆ ಪೂರಕವಾಗಿದೆ.

    ಕೊನೆಯದಾಗಿ ಹೇಳುವುದೇನು...

    ಕೊನೆಯದಾಗಿ ಹೇಳುವುದೇನು...

    ಶಶಾಂಕ್ ಸಿನಿಮಾಗಳಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರು ನೋಡಬಹುದಾದ ಅಂಶಗಳು ಇರುತ್ತೆ. ಇದು ಅಂತಹದ್ದೇ ಸಿನಿಮಾ.ಸಿಂಪಲ್ ಕಥೆಯನ್ನ ಕಮರ್ಷಿಯಲ್ ಆಗಿ ಪ್ರೆಸೆಂಟ್ ಮಾಡಿದ್ದಾರೆ. ಅಜಯ್ ರಾವ್ ಅವರನ್ನ ಇಷ್ಟು ದಿನ ಲವರ್ ಬಾಯ್ ಆಗಿದ್ದ ನೋಡಿದವರಿಗೆ 'ತಾಯಿಗೆ ತಕ್ಕ ಮಗ' ಸರ್ಪ್ರೈಸ್ ಪ್ಯಾಕೇಜ್.

    English summary
    Kannada actor ajay rao starrer thayige thakka maga movie has released. the movie get good response from audience.
    Friday, November 16, 2018, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X