For Quick Alerts
  ALLOW NOTIFICATIONS  
  For Daily Alerts

  Thunivu Twitter Review: 'ವಾರಿಸು' ಎದುರಿಗೆ ಬಂದ ಅಜಿತ್ 'ತುನಿವು' ಚಿತ್ರ ಹೇಗಿದೆ? ವೀಕ್ಷಕರು ಹೇಳಿದ್ದೇನು?

  |

  ತಮಿಳುನಾಡಿನಲ್ಲಿ ಸಂಕ್ರಾಂತಿ ಸಡಗರ ಅಜಿತ್ ಕುಮಾರ್ ನಟನೆಯ ತುನಿವು ಹಾಗೂ ವಿಜಯ್ ನಟನೆಯ ವಾರಿಸು ಚಿತ್ರಗಳ ಬಿಡುಗಡೆಯ ಮೂಲಕವೇ ಆರಂಭಗೊಂಡಿದೆ. ಹೌದು, ತಮಿಳು ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಇಂದು ( ಜನವರಿ 11 ) ಭರ್ಜರಿಯಾಗಿ ಬಿಡುಗಡೆಗೊಂಡಿವೆ.

  ಎರಡೂ ಚಿತ್ರಗಳೂ ಸಹ ಮಧ್ಯರಾತ್ರಿಯಿಂದಲೇ ಪ್ರದರ್ಶನಗಳನ್ನು ಕಂಡಿದ್ದು ಸೂರ್ಯ ಉದಯಿಸುವ ಮುನ್ನವೇ ಹಲವು ಪ್ರದರ್ಶನಗಳು ಮುಗಿದಿವೆ. ಬೆಂಗಳೂರಿನಲ್ಲೂ ಸಹ ಈ ಎರಡು ಚಿತ್ರಗಳು ಭರ್ಜರಿ ಓಪನಿಂಗ್ ಪಡೆದುಕೊಂಡಿವೆ. ಇನ್ನು ಚಿತ್ರಗಳ ಮೊದಲ ಪ್ರದರ್ಶನಗಳನ್ನು ನೋಡಿ ಹೊರಬಂದ ಸಿನಿ ರಸಿಕರು ಟ್ವಿಟರ್‌ನಲ್ಲಿ ಚಿತ್ರ ಹೇಗಿದೆ ಎಂಬುದನ್ನು ಈ ಕೆಳಕಂಡಂತೆ ಹಂಚಿಕೊಂಡಿದ್ದಾರೆ.

  ತುನಿವುಗೆ ಮಿಶ್ರ ಪ್ರತಿಕ್ರಿಯೆ

  ತುನಿವುಗೆ ಮಿಶ್ರ ಪ್ರತಿಕ್ರಿಯೆ

  ತುನಿವು ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಜಿತ್ ಕುಮಾರ್ ಅಭಿಮಾನಿಗಳು ಚಿತ್ರ ಸೂಪರ್ ಎಂದು ಮೆಚ್ಚಿ ಕೊಂಡಾಡುತ್ತಿದ್ದರೆ, ಸಿನಿ ರಸಿಕರು ಮಾತ್ರ ಚಿತ್ರ ಸಾಧಾರಣ ಹಾಗೂ ಸಾಧಾರಣಕ್ಕಿಂತ ಉತ್ತಮ ಮತ್ತು ಚಿತ್ರದಲ್ಲಿ ಒಂದೊಳ್ಳೆ ಸಂದೇಶವಂತೂ ಇದೆ ಎಂಬ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಆದರೆ ಚಿತ್ರಕ್ಕೆ ಹೆಚ್ಚಾಗಿ ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿಲ್ಲ.

  ತೆಲುಗು ಪ್ರೇಕ್ಷಕರು ಹೇಳಿದ್ದೇನು?

  ತೆಲುಗು ಪ್ರೇಕ್ಷಕರು ಹೇಳಿದ್ದೇನು?

  ತುನಿವು ತೆಲುಗಿನಲ್ಲಿ ತೆಗಿಂಪು ಎಂಬ ಶೀರ್ಷಿಕೆಯಲ್ಲಿ ಡಬ್ ಆಗಿ ಬಿಡುಗಡೆಗೊಂಡಿದೆ. ಈ ಚಿತ್ರವನ್ನು ನೋಡಿದ ತೆಲುಗು ಪ್ರೇಕ್ಷಕರು ಚಿತ್ರದ ಮೊದಲಾರ್ಧ ಪರವಾಗಿಲ್ಲ, ಅಭಿಮಾನಿಗಳಿಗೆ ಇಷ್ಟವಾಗಲಿದೆ ಹಾಗೂ ದ್ವಿತೀಯಾರ್ಧ ಚೆನ್ನಾಗಿದೆ ಹಾಗೂ ಒಳ್ಳೆಯ ಸಂದೇಶವಿದೆ ಎಂದು ಹೇಳುತ್ತಿದ್ದಾರೆ. ಹೌದು, ಚಿತ್ರದಲ್ಲಿ ಹಣಕಾಸಿನ ಕುರಿತಾಗಿ ಒಂದು ಗಟ್ಟಿಯಾದ ಸಂದೇಶವಿದೆ ಹಾಗೂ ಅದು ಪ್ರತಿಯೊಬ್ಬ ಸಿನಿ ರಸಿಕನಿಗೂ ಕನೆಕ್ಟ್ ಆಗಲಿದೆ ಎಂದು ಬಹುತೇಕರು ಹೇಳುತ್ತಿದ್ದಾರೆ.

  ಧನುಷ್ ಅಭಿಮಾನಿಗಳ ವಿಮರ್ಶೆ ಇದು

  ಧನುಷ್ ಅಭಿಮಾನಿಗಳ ವಿಮರ್ಶೆ ಇದು

  ಇನ್ನು ತಮಿಳಿನ ಪ್ರಮುಖ ನಟ ಧನುಷ್ ಅಭಿಮಾನಿಗಳಲ್ಲಿ ಕೆಲವರು ತುನಿವು ಚಿತ್ರವನ್ನು ನೋಡಿ ಟ್ವಿಟರ್‌ನಲ್ಲಿ ವಿಮರ್ಶೆ ಹಂಚಿಕೊಂಡಿದ್ದಾರೆ. ಕೊಕ್ಕಿ ಟ್ರೋಲ್ಸ್ ಎಂಬ ಧನುಷ್ ಅಭಿಮಾನಿ ತುನಿವು ಚಿತ್ರಕ್ಕೆ 5ಕ್ಕೆ 2.5 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಅಷ್ಟೇ ಅಲ್ಲದೇ ವಿಜಯ್ ನಟನೆಯ ವಾರಿಸು ಚಿತ್ರವನ್ನೂ ಸಹ ನೋಡಿರುವ ಈತ ವಾರಿಸುಗೆ 5ಕ್ಕೆ 4 ಸ್ಟಾರ್‌ಗಳನ್ನು ನೀಡಿದ್ದಾರೆ. ಈ ಮೂಲಕ ತುನಿವು ಎದುರಿಗೆ ವಾರಿಸು ಗೆಲ್ಲಲಿದೆ ಎಂದು ಬರೆದುಕೊಂಡಿದ್ದಾರೆ.

  ರಿವ್ಯೂ ಮಂದಿ ಹೇಳಿದ್ದಿಷ್ಟು

  ರಿವ್ಯೂ ಮಂದಿ ಹೇಳಿದ್ದಿಷ್ಟು

  ಇನ್ನು ತುನಿವು ಚಿತ್ರ ವೀಕ್ಷಿಸಿದ ಚಿತ್ರ ವಿಮರ್ಶಕರ ಪೈಕಿ ಬಹುತೇಕರು ಮೂರರಿಂದ ಮೂರೂವರೆ ಸ್ಟಾರ್‌ಗಳನ್ನು ನೀಡಿದ್ದಾರೆ ಹಾಗೂ ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ಚೆನ್ನಾಗಿದೆ ಎಂದು ಹೇಳಿದ್ದಾರೆ. ಚಿತ್ರ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಲಿದ್ದು, ಉಳಿದವರು ಒಂದೊಮ್ಮೆ ನೋಡಲು ಅಡ್ಡಿ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತುನಿವು ಒಳ್ಳೆಯ ಟಾಕ್ ಪಡೆದುಕೊಂಡಿದ್ದು ಸೂಪರ್ ಹಿಟ್ ಚಿತ್ರವಾಗುವ ಸಾಧ್ಯತೆ ಇದೆ.

  English summary
  Ajith Kumar starrer Thunivu movie twitter review; movie getting mixed reviews. Take a look,
  Wednesday, January 11, 2023, 12:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X