twitter
    For Quick Alerts
    ALLOW NOTIFICATIONS  
    For Daily Alerts

    'ಗಂಗೂಬಾಯಿ ಕಾಠಿಯಾವಾಡಿ' ಬಣ್ಣಗಳಲ್ಲಿ ವೇಶ್ಯೆ ಕತ್ತಲೆ ಜೀವನದ ಕತೆ

    By ಮಾಧುರಿ ವಿ
    |

    'ತಖ್ದೀರ್‌ಮೆ ಆಸು ಲಿಖೇತೆ, ಫಿತ್ರತ್ ಮೇ ಹಸಿ. ಹಿರೋಯಿನ್ ಬನ್‌ ನೆ ಆಯೀತಿ ಖುದ್ ಸಿನಿಮಾ ಬನ್‌ಗಯಿ' (ಹಣೆಬರಹದಲ್ಲಿ ಅಳು ಬರೆದಿದ್ದರೆ ಸ್ವಭಾವದಲ್ಲಿ ನಗು ಬರೆದಿತ್ತು. ನಟಿ ಆಗಲು ಬಂದೆ, ಆದರೆ ನಾನೇ ಸಿನಿಮಾ ಆಗಿಹೋದೆ) ಹಿನ್ನೆಲೆಯಲ್ಲಿ ಬರುವ ಈ ಸಾಲುಗಳು ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದ ನಾಯಕಿ 'ಗಂಗಾ ಹರಿಜೀವನ್‌ದಾಸ್ ಕಾಠಿಯಾವಾಡಿ' 'ಗಂಗೂಬಾಯಿ ಕಾಠಿಯಾವಾಡಿ' ಆಗಿ ಬದಲಾದ ಪಯಣವನ್ನು ಸೂಚಿಸುತ್ತದೆ.

    ಸಂಜಯ್ ಲೀಲಾ ಬನ್ಸಾಲಿಯ ಹೊಸ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಸತ್ಯ ಕತೆಗೆ ಕಾಲ್ಪನಿಕತೆ ಬೆರೆಸಿ ಸಂಜಯ್‌ರ 'ಅದ್ಧೂರಿ' ಮಾದರಿಯಲ್ಲಿ ಪ್ರೆಸೆಂಟ್ ಮಾಡಲಾಗಿರುವ ಸಿನಿಮಾ. 'ದೇವದಾಸ್', 'ಬಾಜಿರಾವ್ ಮಸ್ತಾನಿ', 'ಪದ್ಮಾವತ್' ಅಂಥ ಐತಿಹಾಸಿಕ ಪ್ರೇಮಕತೆಗಳ ಬಳಿಕ ಇದೀಗ ಸಂಜಯ್ ಲೀಲಾ ಬನ್ಸಾಲಿ ಸಾಮಾನ್ಯ ಜನರ ಜೀವನದ ಕತೆ ಹೇಳಿದ್ದಾರೆ. ಜೀವನ ಎಲ್ಲಿಗೋ ಕರೆದುಕೊಂಡು ಬಂದಾಗ ಅಲ್ಲಿಯೂ ತನ್ನ ಜೀವನಕ್ಕೆ ಅರ್ಥ ಹುಡುಕಿಕೊಳ್ಳುವ ಸಾಮಾನ್ಯ ವ್ಯಕ್ತಿಯ ಕತೆ ಇದಾಗಿದೆ. ಆದರೆ ಈ ಸಿನಿಮಾ ಪ್ರೇಕ್ಷಕನಿಗೆ ಹಿಡಿಸುತ್ತದೆಯೇ? ಇಲ್ಲವೇ? ಅರಿಯೋಣ ಬನ್ನಿ.

    Rating:
    2.5/5

    ಸಿನಿಮಾದಲ್ಲಿ ಆಲಿಯಾ ಭಟ್‌ರ ಅಭಿನಯ ಅದ್ಭುತವಾಗಿದೆ. ಸಿನಿಮಾದ ಸಂಭಾಷಣೆ ಸಿನಿಮಾದ ಕಳಶ. ಸಿನಿಮಾದ ಕೊರತೆಯೆಂದರೆ ಸಿನಿಮಾದ ಸಡಿಲ ಚಿತ್ರಕತೆ.

    Old Monk Movie Review: ಕಾಮಿಡಿ ಪಂಚ್ ಮೂಲಕವೇ ನಶೆ ಏರಿಸುವ 'ಓಲ್ಡ್ ಮಾಂಕ್'!Old Monk Movie Review: ಕಾಮಿಡಿ ಪಂಚ್ ಮೂಲಕವೇ ನಶೆ ಏರಿಸುವ 'ಓಲ್ಡ್ ಮಾಂಕ್'!

    ಬಾಲಕಿಯೊಬ್ಬಳನ್ನು ಆಕೆಯ 'ಮೊದಲ ರಾತ್ರಿ'ಗೆ ಬಲವಂತವಾಗಿ ತಯಾರು ಮಾಡಲಾಗುತ್ತಿದೆ. ಮುಖಕ್ಕೆ ಪೌಡರ್ ಹಚ್ಚಿ, ತುಟಿಗೆ ಲಿಪ್‌ಸ್ಟಿಕ್ ಹಚ್ಚಿ, ಮೂಗಿಗೆ ಮೂಗುತಿ ಚುಚ್ಚಲಾಗುತ್ತದೆ. ಆಕೆಯ ಮೂಗಿನಿಂದ ರಕ್ತ ಸುರಿಯುವಾಗ ಆಕೆಯ ಕಣ್ಣುಗಳು ಉರಿಯುತ್ತಿರುತ್ತವೆ. ಇದು 60ರ ದಶಕದ ಕಾಮಾಟಿಪುರದ ಸನ್ನಿವೇಶ. ಮತ್ತೊಂದೆಡೆ ಕಾಠಿಯಾವಾಡಿಯಲ್ಲಿ ಯುವತಿ ಗಂಗಾ (ಆಲಿಯಾ ಭಟ್) ಬಾಲಿವುಡ್ ಹೀರೋಯಿನ್ ಆಗುವ ಕನಸು ಕಾಣುತ್ತಿದ್ದಾಳೆ. ತನ್ನ ಕನಸು ಈಡೇರಿಸಿಕೊಳ್ಳಲು ತನ್ನ ಬಾಯ್‌ಫ್ರೆಂಡ್ ಜೊತೆ ಮುಂಬೈಗೆ ಪರಾರಿಯಾಗುತ್ತಾಳೆ.

    ಹೇಗೆ ಮೇಲೇರುತ್ತಾಳೆ ಎಂಬುದೇ ಕತೆ

    ಹೇಗೆ ಮೇಲೇರುತ್ತಾಳೆ ಎಂಬುದೇ ಕತೆ

    ಆದರೆ ಆ ಬಾಯ್‌ಫ್ರೆಂಡ್ ಮೋಸಗಾರ, ನಯವಾಗಿ ಮಾತನಾಡುವ ಅವನು ಗಂಗಾಳನ್ನು ಕಾಮಾಟಿಪುರದ ವೇಶ್ಯಾಗೃಹಕ್ಕೆ ಮಾರಿ ಹೊರಟುಹೋಗುತ್ತಾನೆ. ಗಂಗಾಳ ಹಣೆಬರಹ ಬದಲಾಗುತ್ತದೆ. ನಾಯಕಿ ಆಗಬೇಕಿದ್ದವಳು ವೇಶ್ಯೆಯಾಗುತ್ತಾಳೆ. ಮುಂದೆ ಗಂಗೂಬಾಯಿ ಆಗುತ್ತಾಳೆ. ಕೆಟ್ಟ 'ಕಸ್ಟಮರ್' ಒಬ್ಬನಿಂದ ತೊಂದರೆಗೊಳಗಾದಾಗ ಆಕೆ ಮುಂಬೈನ ಮಾಫಿಯಾ ಡಾನ್ ರಹೀಮ್ ಲಾಲಾ (ಅಜಯ್ ದೇವಗನ್) ಅನ್ನು ಭೇಟಿಯಾಗುತ್ತಾಳೆ. ಆಕೆಯ ಧೈರ್ಯಕ್ಕೆ ಮೆಚ್ಚಿ ಆಕೆಯನ್ನು ಮಾಫಿಯಾ ಕ್ವೀನ್ ಎಂದು ಘೋಷಿಸುತ್ತಾನೆ ರಹೀಮ್ ಲಾಲಾ. ಗಂಗೂಬಾಯಿ, ತನ್ನ ರಾಜಕೀಯ, ಅಂಡರ್‌ವರ್ಲ್ಡ್ ಸಂಪರ್ಕಗಳು ಹಾಗೂ ತನ್ನ ಬುದ್ಧಿಶಕ್ತಿಯಿಂದ ಬಹುಬೇಗ ಎತ್ತರಕ್ಕೆ ಬೆಳೆಯುತ್ತಾಳೆ. ಕಾಮಾಟಿಪುರದ ವೇಶ್ಯೆಯರು ಅವರ ಕುಟುಂಬದವರ ಪಾಲಿಗೆ ದೇವರಾಗುತ್ತಾಳೆ. ಬೇರೆಯವರ ಸೇವೆಯಲ್ಲಿ ತನ್ನ ಜೀವನಕ್ಕೆ ಅರ್ಥ ಹುಡುಕಿಕೊಳ್ಳುತ್ತಾಳೆ.

    ನಿರ್ದೇಶನ ಹೇಗಿದೆ?

    ನಿರ್ದೇಶನ ಹೇಗಿದೆ?

    ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ 'ಮಾಫಿಯಾ ಕ್ವೀನ್ಸ್ ಆಫ್ ಮುಂಬೈ' ಪುಸ್ತಕದ ಒಂದು ಭಾಗವನ್ನು ಎತ್ತಿಕೊಂಡು ಈ ಸಿನಿಮಾ ಮಾಡಿದ್ದಾರೆ. ನಿಜ ಘಟನೆಗೆ ಸಾಕಷ್ಟು ಕಲ್ಪಿತ ದೃಶ್ಯಗಳನ್ನು ಸೇರಿಸಿದ್ದಾರೆ. ಅಸಹಾಯಕ ಹೆಣ್ಣೊಬ್ಬಳು ಗಂಗೂಬಾಯಿ ಆಗುವ ಪ್ರಮುಖ ವ್ಯಕ್ತಿಯಾಗಿ ಬದಲಾಗುವುದನ್ನು ಹೋರಾಟದ ರೂಪದಲ್ಲಿ ಸಂಜಯ್ ಲೀಲಾ ಬನ್ಸಾಲಿ ತೋರಿಸಿದ್ದಾರೆ. ಸಿನಿಮಾಕ್ಕೆ ತಮ್ಮ ಶೈಲಿಯಾದ ಕಾವ್ಯಾತ್ಮಕತೆ, ವೈಭವ, ಸುಂದರತೆ, ಅದ್ಭುತ ಸಂಗೀತವನ್ನು ಸೇರಿಸಿದ್ದಾರೆ.

    ಚಿತ್ರಕತೆ ಪೇಲವವಾಗಿದೆ

    ಚಿತ್ರಕತೆ ಪೇಲವವಾಗಿದೆ

    ಆದರೆ ಚಿತ್ರಕತೆ ಬರವಣಿಗೆ ಸಿನಿಮಾವನ್ನು ಪೇಲವಗೊಳಿಸಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಚಿತ್ರಕತೆಯನ್ನು ಹೆಣೆಯುವಲ್ಲಿ ಸಂಜಯ್ ಲೀಲಾ ಬನ್ಸಾಲಿ ಸೋತಿದ್ದಾರೆ. ಗಂಗೂಬಾಯಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಟ್ಟಿಕೊಡುವಲ್ಲಿಯೂ ಸೋತಿದ್ದಾರೆ. ಕೆಲ ದೃಶ್ಯಗಳು ಸಿನಿಮಾದ ಕತೆಗೆ ಏನೊಂದೂ ಸಂಬಂಧವಿಲ್ಲದ ಪ್ರತ್ಯೇಕ ದೃಶ್ಯಗಳಾಗಿ ಅಷ್ಟೆ ನಿಂತುಬಿಟ್ಟಿವೆ. ಆದರೆ ಸಿನಿಮಾದ ಸಂಭಾಷಣೆ ಜೋರು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ.

    ಆಲಿಯಾ ನಟನೆ ಹೇಗಿದೆ?

    ಆಲಿಯಾ ನಟನೆ ಹೇಗಿದೆ?

    'ಗಂಗೂಬಾಯಿ' ಪಾತ್ರಕ್ಕೆ ಆಲಿಯಾ ಭಟ್‌ರನ್ನು ಆಯ್ಕೆ ಮಾಡಿದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಲಿಯಾ ಎಲ್ಲರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ. ಸಿನಿಮಾದ ಆರಂಭದಲ್ಲಿ ಅಮಾಯಕ ಯುವತಿಯಾಗಿ, ನಂತರ ಗತ್ತು ಗಮ್ಮತ್ತಿನ, ಅಹಂ, ಆತ್ಮಾಭಿಮಾನದ ಗಂಗೂಬಾಯಿಯಾಗಿ ಅವರ ನಟನೆ ಅದ್ಭುತ. ಗಂಗೂಬಾಯಿ ಪಾತ್ರದ ಎಲ್ಲ ಶೇಡ್‌ಗಳಲ್ಲೂ ನೀರು ಕುಡಿದಂತೆ ಆಲಿಯಾ ನಟಿಸಿದ್ದಾರೆ.

    ಪಾತ್ರಗಳಿಗೆ ಇನ್ನಷ್ಟು ಅವಕಾಶ ಕೊಡಬೇಕಿತ್ತು

    ಪಾತ್ರಗಳಿಗೆ ಇನ್ನಷ್ಟು ಅವಕಾಶ ಕೊಡಬೇಕಿತ್ತು

    ಸಿನಿಮಾದಲ್ಲಿ ಬರುವ ಸೀಮಾ ಬಾಯಿ ಪಾತ್ರದಲ್ಲಿ ನಟಿಸಿರುವ ಸೀಮಾ ಪಹ್ವಾ, ರಜಿಯಾಬಾಯಿ ಪಾತ್ರದಲ್ಲಿ ನಟಿಸಿರುವ ವಿಜಯ್ ರಾಜ್ ಚೆನ್ನಾಗಿ ನಟಿಸಿದ್ದಾರೆ. ಆದರೆ ನಿರ್ದೇಶಕ ಬನ್ಸಾಲಿ ಎಲ್ಲ ಪಾತ್ರಗಳಿಗೂ ಸಮಾನ ಅವಕಾಶ ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಶಂತನು ಮಹೇಶ್ವರಿ ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆಯುತ್ತಾರೆ. ಆಲಿಯಾ ಜೊತೆಗೆ ಅವರ ಕೆಮಿಸ್ಟ್ರಿ ಚೆನ್ನಾಗಿದೆ. ಅಜಯ್ ದೇವಗನ್ ಅತಿಥಿ ಪಾತ್ರದಲ್ಲಷ್ಟೆ ಕಾಣಿಸಿಕೊಂಡಿದ್ದಾರೆ. ಅವರಿಂದ ಹೊಡೆಸಿರುವ ಮಾಸ್ ಡೈಲಾಗ್‌ಗಳು ಚೆನ್ನಾಗಿವೆ.

    ತಾಂತ್ರಿಕ ಅಂಶಗಳು ಹೇಗಿವೆ?

    ತಾಂತ್ರಿಕ ಅಂಶಗಳು ಹೇಗಿವೆ?

    ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಸಿನಿಮಾವನ್ನು ಸಾಧ್ಯಂತ ಸುಂದರಗೊಳಿಸಿದ್ದಾರೆ. ಇದಕ್ಕೆ ಸಹಾಯ ಮಾಡಿರುವುದು ಸಿನಿಮಾಟೊಗ್ರಫರ್ ಸುದೀಪ್ ಚಟರ್ಜಿ. 70-80ರ ದಶಕದ ಅದ್ಭುತ ಲೋಕವನ್ನು ಸಂಜಯ್ ಲೀಲಾ ಬನ್ಸಾಲಿ ಸೃಷ್ಟಿಸಿದ್ದಾರೆ. ದೃಶ್ಯಗಳಿಗೆ ತಕ್ಕಂತೆ ಬಣ್ಣಗಳನ್ನು ಬಳಸಿದ್ದಾರೆ. ಕಪ್ಪು-ಬಿಳುಪು ಅಥವಾ ಗ್ರೇ ಬಣ್ಣವನ್ನು ಸಹ ಅವರು ಬಳಸಿದ್ದಾರೆ. ಸಂಕಲನದ ವಿಷಯದಲ್ಲಿ ಇನ್ನಷ್ಟು ಹಿಡಿತದಿಂದ ಕತ್ತರಿ ಪ್ರಯೋಗ ಮಾಡಬಹುದಿತ್ತು ಎನಿಸುತ್ತದೆ. ಕೆಲವು ದೃಶ್ಯಗಳಂತೂ ಅನವಶ್ಯಕವಾಗಿ ಎಳೆದಾಡಿದ ಅನುಭವ ನೀಡುತ್ತವೆ.

    English summary
    Alia Bhatt starer Hindi movie Gangubai Kathiawadi review in Kannada. Movie is directed by Sanjay Leela Sanjay Leela Bhansali.
    Saturday, February 26, 2022, 8:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X