Don't Miss!
- News
ವಂದೇ ಭಾರತ್ ರೈಲಿಗಿಂತ 'ವಂದೇ ಮೆಟ್ರೋ' ಹೇಗೆ ಭಿನ್ನ? ಇಲ್ಲಿವೆ ಪ್ರಮುಖ ವೈಶಿಷ್ಟ್ಯ-ವಿಶೇಷತೆಗಳು
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Automobiles
ಹೆಲ್ಮೆಟ್ ಧರಿಸಿ ಬಂದ್ರೂ ಪತ್ತೆಹಚ್ಚಿದ ಅಭಿಮಾನಿಗಳು... ವಿಡಿಯೋ ವೈರಲ್
- Technology
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pushpa First Review: ತೆಲುಗು ಚಿತ್ರರಂಗದ ಅತ್ಯುತ್ತಮ ಸಿನಿಮಾ ಅಲ್ಲು ಅರ್ಜುನ್ 'ಪುಷ್ಪ'!
ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಥಿಯೇಟರ್‌ಗಳಿಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. 'ಪುಷ್ಪ' ಬಿಡುಗಡೆಗೆ ಇನ್ನು ಕೇವಲ ಎರಡು ದಿನ (ಡಿಸೆಂಬರ್ 17) ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಒತ್ತಡದ ನಡುವೆಯೂ 'ಪಷ್ಪ' ಸಿನಿಮಾದ ಪ್ರಚಾರ ಜೋರಾಗಿ ಸಾಗಿದೆ. ಹೀಗಾಗಿ ಇಂದು(ಡಿಸೆಂಬರ್ 15) ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ದೌಡಾಯಿಸಿದ್ದರು. ಡಾಲಿ ಧನಂಜಯ್ ಬೆಂಗಳೂರಿನಲ್ಲಿ 'ಪುಷ್ಪ' ತಂಡಕ್ಕೆ ಜೊತೆಯಾಗಿದ್ದರು.
'ಪುಷ್ಪ' ಸಿನಿಮಾ ಈ ವರ್ಷದ ಕೊನೆಯ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ, ದೇಶ-ವಿದೇಶದಲ್ಲಿಯೂ ಬಿಡುಗಡೆಯಾಗಲಿದೆ. ಎರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗುತ್ತಿರುವ 'ಪುಷ್ಪ'ದ ಮೊದಲ ಚಾಪ್ಟರ್ ಡಿಸೆಂಬರ್ 17ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ದಿನಗಳಿರುವಾಗಲೇ 'ಪುಷ್ಪ' ಸಿನಿಮಾ ವಿಮರ್ಶೆ ನಿಮಗಾಗಿ.

ಟಾಲಿವುಡ್‌ನ ಅತ್ಯುತ್ತಮ ಸಿನಿಮಾ 'ಪುಷ್ಪ'
'ಪುಷ್ಪ' ಇನ್ನೂ ಬಿಡುಗಡೆಯೇ ಆಗಿಲ್ಲ. ಅದರಲ್ಲೂ ಎರಡು ದಿನಗಳ ಮೊದಲೇ ಈ ಸಿನಿಮಾದ ಫಸ್ಟ್ ರಿವ್ಯೂ ಹೇಗೆ ಸಾಧ್ಯ? ಅನ್ನುವ ಪ್ರಶ್ನೆ ಮೂಡುವುದು ಸಹಜ. ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯರಾಗಿರುವ ಉಮೇರ್ ಸಂಧು 'ಪುಷ್ಪ' ಸಿನಿಮಾ ನೋಡಿ ಚಿಕ್ಕದಾಗಿ ವಿಮರ್ಶೆ ಮಾಡಿದ್ದಾರೆ. 'ಪುಷ್ಪ' ಇದುವರೆಗೂ ಟಾಲಿವುಡ್ ನಿರ್ಮಿಸಿದ ಅತ್ಯುತ್ತಮ ಸಿನಿಮಾಗಳಲ್ಲೊಂದು ಎಂದು ಹೇಳಿದ್ದಾರೆ. ಉಮೇರ್ ಸಂಧು ವಿಮರ್ಶೆಯ ಹೈಲೈಟ್ ಹಾಗೂ ಉಮೇರ್ ಸಂಧು ಸಿನಿಮಾಗೆ ನೀಡಿದ ಮಾರ್ಕ್ಸ್ ಎಷ್ಟು ಅಂತ ತಿಳಿಯಲು ಮುಂದೆ ಓದಿ.
|
ರಾಷ್ಟ್ರ ಪ್ರಶಸ್ತಿ ಪರ್ಫಾಮೆನ್ಸ್ ನೀಡಿದ್ದಾರೆ ಅಲ್ಲು
"ಪುಷ್ಪ ಸಿನಿಮಾ ಟಾಲಿವುಡ್‌ನ ಬೆಸ್ಟ್ ಸಿನಿಮಾ. ಅಲ್ಲು ಅರ್ಜುನ್ ಹಿಂದೆಂದೂ ಇಂತಹ ಅಭಿನಯ ನೀಡಿಲ್ಲ. ರಾಷ್ಟ್ರ ಪ್ರಶಸ್ತಿ ನೀಡುವಂತಹ ಅದ್ಭುತ ನಟನೆಯನ್ನು 'ಪುಷ್ಪ' ಸಿನಿಮಾದಲ್ಲಿ ನೀಡಿದ್ದಾರೆ. ಎಲ್ಲಾ ವಿಭಾಗದಲ್ಲಿಯೂ ಅಲ್ಲು ಅರ್ಜುನ್ ಜನರ ಮನಸ್ಸು ಕದಿಯುತ್ತಾರೆ" ಎಂದು ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯರಾಗಿರುವ ಉಮೆರ್ ಸಂಧು ಟ್ವೀಟ್ ಮಾಡಿದ್ದಾರೆ.
|
ರಶ್ಮಿಕಾ-ಅಲ್ಲು ಜೋಡಿ ಸೂಪರ್
"ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಅದ್ಭುವಾಗಿದೆ. ರಶ್ಮಿಕಾ ಮಂದಣ್ಣ ಅಂತೂ ಅದ್ಭುತ ಅಭಿನಯ ನೀಡಿದ್ದಾರೆ. ಸುಕುಮಾರ್ ಅವರ ಪವರ್ ಫ್ಯಾಕ್ ಆಗಿರುವ ಸ್ಟೋರಿ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಸೂಪರ್. ಸುಕುಮಾರ್ ನಿರ್ದೇಶನವಂತೂ ಅದ್ಭುತ." ಎಂದು ಉಮೇರ್ ಸಂಧು 'ಪುಷ್ಪ' ಸಿನಿಮಾವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
|
ಅಲ್ಲು ಅರ್ಜುನ್‌ಗೆ 'ಪುಷ್ಪ' ಟರ್ನಿಂಗ್ ಪಾಯಿಂಟ್
"ಅಲ್ಲು ಅರ್ಜುನ್ ವೃತ್ತಿ ಬದುಕು ಹಾಗೂ ವೈಯುಕ್ತಿಕ ಬದುಕಿಗೆ 'ಪುಷ್ಪ' ಸಿನಿಮಾ ಟರ್ನಿಂಗ್ ಪಾಯಿಂಟ್. ಈ ಬಾರಿ ಅಲ್ಲು ಅರ್ಜುನ್ ನಟನೆಯನ್ನು ಅತ್ಯದ್ಭುತವೆಂದು ವರ್ಣಿಸಬಹುದು. ಅಲ್ಲು ಅರ್ಜುನ್ ಹೊಸ ಅವತಾರವನ್ನ ಕಂಡು ಅಭಿಮಾನಿಗಳು ಮೂಕ ವಿಸ್ಮಿತರಾಗುತ್ತಾರೆ." ಎಂದು ಉಮೇರ್ ಸಂಧು ಸಿನಿಮಾ ನೋಡಿದ ಬಳಿಕ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಉಮೇರ್ ಸಂಧು ಇದೂವರೆಗೂ ಸಿನಿಮಾಗಳ ಬಗ್ಗೆ ನುಡಿದ ಭವಿಷ್ಯ ಬಹುತೇಕ ನಿಜವಾಗಿದೆ. ಹೀಗಾಗಿ 'ಪುಷ್ಪ' ಸಿನಿಮಾ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತೆ ಎಂದು ನಿರೀಕ್ಷಿಸಲಾಗಿದೆ.

ಕನ್ನಡದಲ್ಲೂ 'ಪುಷ್ಪ' ರಿಲೀಸ್
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್ ಸ್ಟೈಲಿಶ್ ಲುಕ್ ಕಳಚಿ ಪಕ್ಕಕ್ಕಿಟ್ಟು, ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಕೂಡ ಶ್ರೀ ವಲ್ಲಿ ಪಾತ್ರದಲ್ಲಿ ಡಿ ಗ್ಲಾಮರ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಡಾಲಿ ಧನಂಜಯ್ ಜಾಲಿಯಾಗಿ ಹೊಸ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ 'ಪುಷ್ಪ' ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಉಮೇರ್ ಸಂಧು ಭವಿಷ್ಯ ನಿಜವಾಗುತ್ತಾ? ಅನ್ನುವುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.