Don't Miss!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Amar Review : ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..
ನಿರ್ದೇಶಕ ನಾಗಶೇಖರ್ ಲವ್ ಸ್ಟೋರಿ ಮಾಡುವುದರಲ್ಲಿ ಎತ್ತಿದ ಕೈ ಎಂದು ಈಗಾಗಲೇ ತೋರಿಸಿದ್ದಾರೆ. ಅದೇ ರೀತಿ ಇಲ್ಲಿಯೂ ಒಂದು ಸುಂದರ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಹೇಳಿದ್ದಾರೆ. ಅಪ್ಪನಂತೆ ಗತ್ತು ತೋರಿಸುತ್ತ, ಡೈಲಾಗ್, ಫೈಟ್ ಜೊತೆಗೆ ಲವರ್ ಬಾಯ್ ಆಗಿ ಅಭಿ ಆಗಮನ ಆಗಿದೆ.

'ಅಮರ್' ಕಥೆ ಏನು?
'ಅಮರ್' ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಅಮರ್ (ಅಭಿಷೇಕ್) ಮತ್ತು ಬಾರ್ಬಿ (ತಾನ್ಯಾ) ಇಬ್ಬರ ನಡುವೆ ಮೊದಲು ವಿರಸ ಬಳಿಕ ಪ್ರೀತಿ ಅರಳುತ್ತದೆ. ಮದುವೆ ಆಗುವ ಸಮಯದಲ್ಲಿ ಬಾರ್ಬಿ ಯನ್ನು ಅಮರ್ ಬಿಟ್ಟು ಹೋಗುತ್ತಾನೆ. ಪ್ರೀತಿಸಿದ್ದ ಹುಡುಗಿಯನ್ನು ಕೈ ಹಿಡಿದು ಕಾಪಾಡಬೇಕಿದ್ದ ಅಮರ್ ಏಕೆ ಅರ್ಧದಲ್ಲಿ ಬಿಟ್ಟು ಹೋಗುತ್ತಾನೆ?, ಕೊನೆಗೆ ಈ ಜೋಡಿ ಒಂದಾಗುತ್ತದೆಯೇ ಎನ್ನುವುದೇ ಸಿನಿಮಾ.
ಅಂಬಿ ಪುತ್ರನ 'ಅಮರ್' ನೋಡಲು ಪ್ರಮುಖ 5 ಕಾರಣಗಳು

ಪ್ರೀತಿ... ತ್ಯಾಗ... ಮುಂದೇನು?
ನಾಯಕ ನಾಯಕಿಯ ಪ್ರೀತಿ, ಅದನ್ನು ಇಷ್ಟ ಪಡದ ಅಪ್ಪ, ನಾಯಕನ ತ್ಯಾಗ ಹೀಗೆ ಸಿನಿಮಾದಲ್ಲಿ ಇರುವ ಪ್ರೇಮ ಕಥೆ ಅಷ್ಟೊಂದು ವಿಶೇಷವಾಗಿಯೇನು ಇಲ್ಲ. ಆದರೆ, ಕಥೆಯಲ್ಲಿ ಬರುವ ಕೆಲವು ತಿರುವುಗಳು, ಹಾಡುಗಳು, ಸಣ್ಣ ಸಣ್ಣ ಅಂಶಗಳು ಇಷ್ಟ ಆಗುತ್ತವೆ. ತನ್ನ ಪ್ರೀತಿಯನ್ನು ತಾನೇ ಕಳೆದುಕೊಂಡ ಪ್ರೇಮಿ ಮತ್ತೆ ಅದನ್ನು ಪಡೆದುಕೊಳ್ಳುವ ಕಥೆಯೇ ಅಮರ್.
'ಅಮರ್' ಚಿತ್ರಕ್ಕೆ ಮನಸಾರೆ ಶುಭ ಹಾರೈಸಿದ ರಜನಿಕಾಂತ್

ಅಪ್ಪನಂತೆ ಕಾಣುವ ಅಭಿಷೇಕ್
ಅಭಿಷೇಕ್ ನಟನೆ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ಅಮರ್. ಅಮರ್ ಇಲ್ಲಿ ಲವರ್ ಬಾಯ್ ಹಾಗೂ ಮಾಸ್ ಹೀರೋ ಎರಡೂ ಆಗಿದ್ದಾರೆ. ಅವರು ಫೈಟ್ ಹಾಗೂ ಡೈಲಾಗ್ ಹೇಳುವ ಶೈಲಿ ಅಪ್ಪನನ್ನು ನೆನೆಪು ಮಾಡುತ್ತದೆ. ಅಭಿ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ. ಡ್ಯಾನ್ಸ್ ಮತ್ತು ನಟನೆಯಲ್ಲಿ ಇನ್ನಷ್ಟು ಅನುಭವ ಬೇಕಿದೆ ಎನ್ನುವುದು ಅನೇಕ ದೃಶ್ಯಗಳಲ್ಲಿ ಕಾಣುತ್ತದೆ.
ಅಂಬಿ ಪುತ್ರ ಅಭಿಷೇಕ್ ಗೆ ಸಿಕ್ಕ ನಾಲ್ಕು ಸರ್ಪ್ರೈಸ್ ವಿಶ್ ಗಳಿವು.!

ತಾನ್ಯ ಪಾತ್ರಕ್ಕೆ ಎರಡು ಶೇಡ್
ನಟಿ ತಾನ್ಯ ಹೂಪ್ ಪಾತ್ರಕ್ಕೆ ಎರಡು ಶೇಡ್ ಇದೆ. ಗ್ಲಾಮರ್ ಗರ್ಲ್ ಆಗಿ, ಅಮರ್ ಪ್ರಿಯತಮೆಯಾಗಿ ಅವರು ಸುಂದರವಾಗಿ ಕಾಣುತ್ತಾರೆ. ಲುಕ್ ಹಾಗೂ ಆಕ್ಟಿಂಗ್ ಎರಡರಲ್ಲಿಯೂ ಹಿಂದೆ ಬಿದ್ದಿಲ್ಲ. ಸೆಕೆಂಡ್ ಹಾಫ್ ನಲ್ಲಿಯೂ ತಮ್ಮ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ, ಸಾಧುಕೋಕಿಲ ಚಿಕ್ಕಣ್ಣ ಸಿಕ್ಕಾಪಟ್ಟೆ ನಗಿಸುತ್ತಾರೆ. ದೇವರಾಜ್, ಸುಧಾರಾಣಿ, ರಾಜ್ ದೀಪಕ್ ಶೆಟ್ಟಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.

ದರ್ಶನ್ ಪಾತ್ರ ಏನು?
ನಟ ದರ್ಶನ್ ಸಿನಿಮಾದಲ್ಲಿ ಯಾವ ಪಾತ್ರ ಮಾಡಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೆ ಇತ್ತು. ಕೊಡವ ಹಾಡಿನ ಮೂಲಕ ಡಿ ಬಾಸ್ ಎಂಟ್ರಿ ಆಗುತ್ತದೆ. ದರ್ಶನ್ ಚಿತ್ರದಲ್ಲಿ ಎರಡು ದೃಶ್ಯದಲ್ಲಿ ಬಂದು ಹೋಗುತ್ತಾರೆ. ಅವರಿಗೆ ಎರಡೇ ಎರಡು ಡೈಲಾಗ್ ಇವೆ. ಸಿನಿಮಾದಲ್ಲಿ ದರ್ಶನ್ ರದ್ದು ಒಂದು ಅತಿಥಿ ಪಾತ್ರ.

ಪ್ಲಾಸ್ ಪಾಯಿಂಟ್ ಗಳು
ಸಿನಿಮಾದ ದೊಡ್ಡ ಪ್ಲಾಸ್ ಪಾಯಿಂಟ್ ಗಳು ಹಾಡುಗಳು ಲೊಕೇಶನ್, ಕ್ಯಾಮರಾ ವರ್ಕ್ ಹಾಗೂ ಕಾಮಿಡಿ. ಅರ್ಜುನ್ ಜನ್ಯ ಅವರ ಎಲ್ಲ ಹಾಡುಗಳು ಸಿನಿಮಾವನ್ನು ಪ್ರೇಕ್ಷಕರಿಗೆ ಆತ್ಮೀಯ ಆಗುವಂತೆ ಮಾಡುತ್ತದೆ. ಸತ್ಯ ಹೆಗ್ಡೆ ಕ್ಯಾಮರಾ ವರ್ಕ್ ಬಗ್ಗೆ ಜಾಸ್ತಿ ಹೇಳುವ ಅಗತ್ಯ ಇಲ್ಲ. ಒಳ್ಳೆಯ ಲೊಕೇಶನ್ ಗಳು ಸಿನಿಮಾದ ಅಂದವನ್ನು ಹೆಚ್ಚು ಮಾಡಿದೆ. ಚಿಕ್ಕಣ್ಣ ಮತ್ತು ಸಾಧು ಕೋಕಿಲ ಬೋರ್ ಆಗದಂತೆ ಬಂದು ಹೋಗುತ್ತಾರೆ.

ಸಣ್ಣ ಪುಟ್ಟ ತಪ್ಪುಗಳು
ಮತ್ತೆ ನಾಗಶೇಖರ್ ಲವ್ ಸ್ಟೋರಿ ಹೊತ್ತ ಬಂದಿದ್ದಾರೆ. ಒಂದು ಸುಂದರ ಪ್ರೇಮ ಕಥೆಯನ್ನು ಅವರ ಸ್ಟೈಲ್ ನಲ್ಲಿ ಹೇಳಿದ್ದಾರೆ. ಸಣ್ಣ ಪುಟ್ಟ ತಪ್ಪುಗಳು, ಕೆಲ ಅನಗತ್ಯ ಸೀನ್ ಇವೆ. ಅಭಿಷೇಕ್ ಅವ್ರೇ ಹೇಳಿದ ಹಾಗೆ ಅವರ ಕೆಲ ಮೈನಸ್ ಗಳನ್ನು ನಾಗಶೇಖರ್ ಮರೆ ಮಾಡಿದ್ದಾರೆ. ಈ ಎಲ್ಲದರ ನಡುವೆಯೂ ಸಿನಿಮಾ ಇಷ್ಟ ಆಗುತ್ತದೆ.

ಕೊನೆಯ ದೃಶ್ಯ ಮಿಸ್ ಮಾಡ್ಕೋಬೇಡಿ
ಸಿನಿಮಾದ ಕೊನೆಯ ದೃಶ್ಯವನ್ನು ಮಿಸ್ ಮಾಡದೆ ನೋಡಿ ಯಾಕೆಂದರೆ, ಅದು ಅಂಬರೀಶ್ ನಟನೆಯ ಕೊನೆಯ ದೃಶ್ಯ. ಅಂಬರೀಶ್ ಕೊನೆಯ ಆಸೆ, ಮಗನ ಮೊದಲ ಹೆಜ್ಜೆಯಾಗಿರೋ 'ಅಮರ್' ಒಂದು ಅಂದದ ಪ್ರೇಮ ಕಥೆ. ಅಭಿಷೇಕ್ ಸ್ಟೈಲ್ ನಲ್ಲಿಯೇ ಹೇಳಬೇಕು ಅಂದರೆ, ಇದು 'ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..'