For Quick Alerts
  ALLOW NOTIFICATIONS  
  For Daily Alerts

  Ammana mane review : ರಾಜೀವ ನಿಧಾನ.. ಸಂದೇಶವೇ ಪ್ರಧಾನ...

  |

  'ಅಮ್ಮನ ಮನೆ' ಸಿನಿಮಾದ ಮೂಲಕ ನಟ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ರಾಘವೇಂದ್ರ ರಾಜ್ ಕುಮಾರ್ ಅಭಿನಯದಿಂದ ದೂರ ಸರಿದು ಸುಮಾರು 14 ವರ್ಷಗಳೇ ಕಳೆದಿದ್ದವು. ತೆರೆಮರೆಗೆ ಸರಿದಿದ್ದ ರಾಘಣ್ಣ ಅವರನ್ನು ಮತ್ತೆ ತೆರೆ ಮೇಲೆ ಕರೆತಂದಿದೆ 'ಅಮ್ಮನ ಮನೆ' ಸಿನಿಮಾ. ದಶಕದ ನಂತರ ಪರದೆ ಮೇಲೆ ರಾಘವೇಂದ್ರ ರಾಜ್ ಕುಮಾರ್ ಅವರನ್ನು ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

  'ಅಮ್ಮನ ಮನೆ' ಸಿನಿಮಾದಲ್ಲಿ ನಿಧಾನವೆ ಪ್ರಧಾನ ಅನ್ನುವುದೇ ತಿರುಳು. ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ರಾಜೀವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೀವ ಹುಟ್ಟುತ್ತಲೆ ಅಂಗವೈಫಲ್ಯಕ್ಕೆ ಒಳಗಾದವರು. ಮಾತಡುವುದು, ನಡೆಯುವುದು, ತಿನ್ನುವುದು ಎಲ್ಲಾ ವಿಷಯದಲ್ಲೂ ರಾಜೀವ ತುಂಬ ನಿಧಾನ.

  Ondh Kathe Hella Review : ಹಾರರ್ ಪ್ರಿಯರಿಗೆ ಆಪ್ತವಾಗುವ ಸಿನಿಮಾ

  ಮಗ ಅಂಗವೈಫಲ್ಯ, ಕೆಲಸಕ್ಕೆ ಬಾರದವನು ಎಂದು ಅಪ್ಪ ಮನೆ ಬಿಟ್ಟು ಹೋಗುತ್ತಾರೆ. ಆ ನಂತರ ರಾಜೀವ ಅಮ್ಮನ ಆಸರೆಯಲ್ಲಿಯೇ ಬೆಳೆಯುತ್ತಾನೆ. ಕಷ್ಟದ ನಡುವೆಯೂ ತಾಯಿ ರಾಜೀವನನ್ನು ಶಿಕ್ಷಕನನ್ನಾಗಿ ಮಾಡುತ್ತಾಳೆ. ತನ್ನ ಕೈ ಕಾಲಿನ ಬಲಹೀನತೆಯ ಕಷ್ಟದ ನಡುವೆಯೂ ರಾಜೀವ ಶಿಕ್ಷಕ ವೃತ್ತಿ ಪ್ರಾರಂಭಿಸುತ್ತಾನೆ.

  ammana mane kannada movie review

  ಒಂದೆಡೆ ಜೋಕರ್ ಆಗಿ ಕಾಣಿಸಿಕೊಳ್ಳುವ ರಾಜೀವ ,ಮತ್ತೊಮ್ಮೆ ಗಂಭೀರವಾಗಿಯೂ ಗಮನ ಸೆಳೆಯುತ್ತಾನೆ. ತನ್ನೆಲ್ಲ ನೋವುಗಳನ್ನು ಅದುಮಿಟ್ಟುಕೊಂಡು ಇನ್ನೊಬ್ಬರ ಖುಷಿಗೆ ಜೋಕರ್ ಆಗಿ ಆಕ್ಟ್ ಮಾಡುವ ರಾಜೀವನ ಪಾತ್ರ ಮನಮುಟ್ಟುವಂತಿದೆ. ಇದೆಲ್ಲದರ ಜೊತೆಗೆ ಎರಡು ತಲೆಮಾರಿನ ನಡುವಿನ ಸಂಘರ್ಷ ಮತ್ತೊಂದು ಗಂಭೀರ ಸಮಸ್ಯೆನ್ನು ಪ್ರೇಕ್ಷಕರ ಎದುರು ಇಡುತ್ತೆ. ಇಲ್ಲಿ ಕೈಲಾಗದ ತಾಯಿ ಒಂದೆಡೆಯಾದರೆ ಮತ್ತೊಂಡೆ ಮಗಳು ಮತ್ತು ಪತ್ನಿ ಎಲ್ಲರನ್ನು ಸಂಭಾಳಿಸುವುದು ಸಹ ಚಿತ್ರದ ಪ್ರಮುಖ ಭಾಗವಾಗಿ ಕಾಣುತ್ತದೆ. ಎಲ್ಲ ಸಂದರ್ಭದಲ್ಲೂ ನಿಧಾನವಾಗಿ, ಸಮಾಧಾನದಿಂದ ವರ್ತಿಸುವ ರಾಜೀವನ ಸ್ವಭಾವ ಪ್ರೇಕ್ಷಕರ ಗಮನಕ್ಕೆ ಸೆಳೆಯತ್ತೆ.

  ammana mane kannada movie review

  'ಅಮ್ಮನ ಮನೆ'ಯಲ್ಲಿ ಅಬ್ಬರದ ಸಂಗೀತ, ಪಂಚಿಂಗ್ ಡೈಲಾಗ್, ಹಾಸ್ಯ ಎಲ್ಲವನ್ನು ತಲೆಯಲ್ಲಿಟ್ಟುಕೊಂಡು ಹೋದರೆ ಸಿನಿಮಾ ನಿರಾಸೆ ಮೂಡಿಸುತ್ತೆ. ಆದರೆ, ಉತ್ತಮ ಸಂದೇಶ ಸಾರುವ ಸಿನಿಮಾ ನೋಡಬೇಕು ಅಂದರೆ 'ಅಮ್ಮನ ಮನೆಗೆ' ಹೋಗಿ.

  English summary
  Actor Raghvendra Rajkumar's Ammana Mane kannada movie review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X