Just In
Don't Miss!
- Finance
ಫಾಸ್ಟ್ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
- Automobiles
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಪೆಟ್ರೋಲಿಯಂ ಸಚಿವ
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Ramarjuna Review: ಜನರಿಗಾಗಿ ಧರೆಗಿಳಿದು ಬಂದ 'ರಾಮಾರ್ಜುನ'
ನಟನೆ, ಡ್ಯಾನ್ಸ್, ಫೈಟ್, ಕಾಮಿಡಿ ಹೀಗೆ ಎಲ್ಲದರಲ್ಲೂ ಅನಿಶ್ ತೇಜೇಶ್ವರ್ ಪರಿಪೂರ್ಣ ಕಲಾವಿದ. ಪ್ರತಿಭೆ ಇದ್ದರೂ ಅದೃಷ್ಟ ಕೈಹಿಡಿಯುತ್ತಿರಲಿಲ್ಲ. ಆದರೆ, ರಾಮಾರ್ಜುನ ಚಿತ್ರದ ಬಳಿಕ ಅನಿಶ್ ಸ್ಟಾರ್‌ಗಿರಿ ಬದಲಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಾಸ್ ಮಹಾರಾಜನಿಗೆ ಎದ್ದು ನಿಲ್ಲಲಿದ್ದಾರೆ. ರಾಮಾರ್ಜುನ ಚಿತ್ರದಲ್ಲಿ ಅನಿಶ್ ತಾಕತ್ ಏನೆಂದು ಸಾಬೀತಾಗಿದೆ.
{rating}
ಚಿತ್ರ: ರಾಮಾರ್ಜುನ
ನಿರ್ದೇಶನ: ಅನಿಶ್ ತೇಜೇಶ್ವರ್
ಕಲಾವಿದರು: ಅನಿಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಹರೀಶ್ ರಾಜ್, ಶರತ್ ಲೋಹಿತಾಶ್ವ ಮತ್ತು ಇತರರು
ಬಿಡುಗಡೆ: ಜನವರಿ 29, 2021
ಶುಕ್ರವಾರದಿಂದ ರಾಜ್ಯಾದ್ಯಂತ 'ರಾಮಾರ್ಜುನ'ನ ಅಬ್ಬರ ಶುರು
ರಾಮಾರ್ಜುನ ಹೆಸರಿಗೆ ತಕ್ಕಂತೆ ಜನರಿಗಾಗಿ ಮಿಡಿಯುವ ರಾಮನ ಗುಣವೂ ಇದೆ, ಅದೇ ಜನರಿಗಾಗಿ ರಣರಂಗದಲ್ಲಿ ಹೋರಾಡುವ ಅರ್ಜುನನ ಶೌರ್ಯವೂ ಇದೆ. ಈ ಇಬ್ಬರು ಮಹಾನ್ ವೀರರ ಸಂಕೇತವಾಗಿ ಅನಿಶ್ ತೆರೆಮೇಲೆ ಮಿಂಚಿದ್ದಾರೆ. ಅದರಲ್ಲಿ ಯಶಸ್ಸು ಕಂಡಿದ್ದಾರೆ.
ರಾಮಾರ್ಜುನ ಪಕ್ಕಾ ಪೈಸಾ ವಸೂಲ್ ಸಿನಿಮಾ. ಮಾಸ್ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುವ ಚಿತ್ರ. ಹಾಗಂತ ಕ್ಲಾಸ್ ಪ್ರೇಕ್ಷಕರಿಗೆ ನಿರಾಸೆ ಮಾಡಿಲ್ಲ. ಲವ್, ಕಾಮಿಡಿ, ಸೆಂಟಿಮೆಂಟ್, ಜಬರ್‌ದಸ್ತ್ ಆಕ್ಷನ್ ಹಾಗೂ ಸಖತ್ ಟ್ವಿಸ್ಟ್‌ಗಳ ಜೊತೆಗೆ ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡ ಪಕ್ಕಾ ಕಮರ್ಷಿಯಲ್ ಸಿನಿಮಾ.
ಚಿತ್ರದ ಕಥಾಹಂದರ
ಇನ್ಸೂರೆನ್ಸ್ ಏಜೆಂಟ್ ರಾಮ್ ತಮ್ಮ ಏರಿಯಾ ಜನರಿಗಾಗಿ ಪ್ರಾಣ ಬೇಕಾದರು ಕೊಡ್ತಾನೆ. ಜನರ ಕಷ್ಟ, ನಷ್ಟವನ್ನು ತನ್ನದೆಂದು ಅವರ ಜೊತೆಯಾಗಿರ್ತಾನೆ. ಆದರೆ, ಆ ಜಾಗದ ಮೇಲೆ ದುಷ್ಟರ ಕಣ್ಣು ಬೀಳುತ್ತೆ. ಅಲ್ಲಿರುವ ಜನರನ್ನು ಓಡಿಸಿ ಅಲ್ಲಿ ಸ್ಟಾರ್ ಹೋಟೆಲ್ ಕಟ್ಟಬೇಕು ಎಂದು ಭ್ರಷ್ಟರು ಸಂಚು ರೂಪಿಸುತ್ತಾರೆ. ಜನರ ಪಾಲಿಗೆ ರಾಮನಾಗಿದ್ದವನು ಅರ್ಜುನನಂತೆ ಹೇಗೆ ಹೋರಾಡುತ್ತಾನೆ, ಆ ಭ್ರಷ್ಟರಿಂದ ತಮ್ಮವರನ್ನು ಹಾಗೂ ತಮ್ಮ ಹಕ್ಕನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದು ಕಥೆ. ಈ ಕಥೆಯನ್ನು ಬಹಳ ಚೆನ್ನಾಗಿ, ಮನರಂಜನೆಯೊಂದಿಗೆ ನಿರೂಪಿಸುವಲ್ಲಿ ನಿರ್ದೇಶಕ ಅನಿಶ್ ಗೆದ್ದಿದ್ದಾರೆ.
ನಟನಾಗಿ ಅನಿಶ್ ಉತ್ತಮ ಪರ್ಫಾಮರ್. ಡ್ಯಾನ್ಸ್, ಫೈಟ್, ಡ್ಯಾನ್ಸ್, ಕಾಮಿಡಿ ಎಲ್ಲದರಲ್ಲೂ ಇಷ್ಟ ಆಗ್ತಾರೆ. ಅನಿಶ್‌ಗೆ ತಕ್ಕಂತೆ ನಿಶ್ವಿಕಾ ನಾಯ್ಡು ನಟಿಸಿದ್ದು, ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹಾಸ್ಯನಟ ಅಪ್ಪಣ್ಣ, 'ಮಜಾಭಾರತ' ಮಂಜು ಜೊತೆ ಅನಿಶ್ ಹಾಸ್ಯ ನಗು ತರಿಸುತ್ತದೆ. ರಂಗಾಯಣ ರಘು ಅವರದ್ದು ಬಹಳ ಪ್ರಮುಖ ಪಾತ್ರ. ಅಪ್ಪ-ಮಗಳ ಬಾಂಧವ್ಯದ ದೃಶ್ಯಗಳಲ್ಲಿ ಪ್ರೇಕ್ಷಕರ ಮನ ಮುಟ್ಟುತ್ತಾರೆ. ಶರತ್ ಲೋಹಿತಾಶ್ವ, ಹರೀಶ್ ರಾಜ್, ರವಿಕಾಳೆ, ಉಗ್ರಂ ಮಂಜು ಅವರ ಪಾತ್ರಗಳು ಚಿತ್ರಕ್ಕೆ ಹೆಚ್ಚು ಬಲ ತುಂಬಿದೆ.
ರಾಮಾರ್ಜುನ ಸಿನಿಮಾ ಮನರಂಜನೆಯ ಜೊತೆಗೆ ಸಮಾಜಕ್ಕೊಂದು ಗಟ್ಟಿ ಸಂದೇಶ ರವಾನಿಸಿದೆ. ಪ್ರಭಾವಿ ವ್ಯಕ್ತಿಗಳು ಅಮಾಯಕರು, ಬಡವರನ್ನು ತಮ್ಮ ಸ್ವಾರ್ಥಕ್ಕಾಗಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬ ವಿಷಯದ ಕುರಿತು ಗಂಭೀರವಾಗಿ ಚರ್ಚಿಸಿದೆ. ಈ ಅಂಶ ಪ್ರಸ್ತುತ ಸಂದರ್ಭಕ್ಕೆ ಹಿಡಿದ ಕನ್ನಡಿ ಆಗಿದೆ. ಕ್ಲೈಮ್ಯಾಕ್ಸ್‌ವೊತ್ತಿಗೆ ಊಹಿಸಲಾಗದ ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತದೆ.
ಪುನೀತ್ ರಾಜ್ ಕುಮಾರ್ ಹಾಡಿರುವ ಮೆಲೋಡಿ ಹಾಡು ಹಾಗೂ ವಸಿಷ್ಠ ಸಿಂಹ ಹಾಡಿರುವ ಪವರ್‌ಫುಲ್ ಹಾಡು ರಾಮಾರ್ಜುನನಿಗೆ ಜೋಶ್ ತುಂಬಿದೆ. ಆನಂದ್ ರಾಜವಿಕ್ರಮ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ, ಶರತ್ ಕುಮಾರ್ ಸಂಕಲನ ಉತ್ತಮ ಸಾಥ್ ನೀಡಿದೆ.
ಬಹಳ ದಿನಗಳ ನಂತರ ಚಿತ್ರಮಂದಿರಕ್ಕೆ ಸಿನಿಮಾ ಬಂದಿದೆ. ಒಳ್ಳೆಯ ಆರಂಭ. ನಟನೆಯ ಜೊತೆ ನಿರ್ದೇಶನದಲ್ಲೂ ಅನಿಶ್ ಗಮನ ಸೆಳೆದಿದ್ದಾರೆ.