twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ತಪ್ಪು ದಾರಿಯಲ್ಲಿ ನಡೆದರೂ ನೊಂದವರ ಕಣ್ಣೀರು ಒರೆಸುವ 'ಪಂಟ'

    |

    ಜೀವನಕ್ಕೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೊತೆಗೆ ತಮ್ಮ ಸ್ಕೂಟರ್ ಮಾರಿ ಮತ್ತೆ ಅದನ್ನು ಕದ್ದು ದುಡ್ಡು ಮಾಡುವ ಮೂರು ಹುಡುಗರ ಒಂದು ಗುಂಪು. ಇದು ಅನ್ಯಾಯ ಎಂದು ಗೊತ್ತಿದ್ದರೂ 'ಏನ್ ಮಾಡೋದು.. ಊಟ ಮಾಡ್ತೀವೋ ಇಲ್ಲವೋ ಮನೆಗೆ ಮಾತ್ರ ಇಂತಿಷ್ಟು ಹಣ ತಿಂಗಳಿಗೆ ಕಳುಹಿಸಲೇ ಬೇಕು' ಎಂದು ಹೇಳುತ್ತ ತನ್ನ ಕೆಲಸಕ್ಕೆ ತಾನೇ ಸಮಜಾಯಿಸಿ ಕೊಟ್ಟುಕೊಳ್ಳುವ ಹೀರೋ. ಮೊದಲು ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ಹೀರೋ ಪ್ರೀತಿಯಲ್ಲಿ ಬಿದ್ದ ನಂತರ ಪ್ರಿಯತಮೆಯ ಸಮಸ್ಯೆ ಬರೆಹರಿಸಲು ಹಣಕ್ಕಾಗಿ ದೊಡ್ಡ ಡೀಲ್ ಗೆ ಕೈ ಹಾಕಿ ಸಮಸ್ಯೆಗೆ ಸಿಲುಕುತ್ತಾನೆ. ತಪ್ಪು ದಾರಿಯಲ್ಲಿ ನಡೆದರೂ ಸಮಸ್ಯೆಯಿಂದ ಹೊರಬರುವ ವೇಳೆಗೆ ನೊಂದವರ ಕಣ್ಣೀರು ಒರೆಸುವ ವ್ಯಕ್ತಿ ಎಂದು ಖ್ಯಾತಿ ಪಡೆಯುವವನೇ ಈ 'ಪಂಟ'

    'ಲಕ್ಷ್ಮಣ' ಚಿತ್ರದ ನಂತರ ಮತ್ತೆ ಹೀರೋ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಅನೂಪ್ ರೇವಣ್ಣ ಅಭಿನಯದ 'ನಾ ಪಂಟ ಕಣೋ' ಚಿತ್ರದ ಸಂಪೂರ್ಣ ವಿಮರ್ಶೆ ಈ ಕೆಳಗಿನಂತಿದೆ.

    Rating:
    3.0/5
    Star Cast: ಅನೂಪ್ ರೇವಣ್ಣ
    Director: ಎಸ್.ನಾರಾಯಣ್

    ಕಥಾಹಂದರ

    ಕಥಾಹಂದರ

    ಅರ್ಜುನ್(ಅನೂಪ್ ರೇವಣ್ಣ) ಮತ್ತು ಆತನ ಇಬ್ಬರು ಸ್ನೇಹಿತರು ಒಂದೇ ರೂಮಿನಲ್ಲಿ ವಾಸವಿರುವ ಆತ್ಮೀಯ ಗೆಳೆಯರು. ಹಣಕ್ಕಾಗಿ ಸಣ್ಣ ಪುಟ್ಟ ಕಳ್ಳತನ ಮಾಡುವ ಇವರು ಹಣಕ್ಕಾಗಿ ಸದಾ ದೊಡ್ಡ ಡೀಲ್‌ಗಳಿಗೆ ಕೈ ಹಾಕುವ ಪ್ಲಾನ್ ಮಾಡುತ್ತಿರುತ್ತಾರೆ. ಅದರೆ ಅತಿ ಆಸೆ ಬೇಡ ಎನ್ನುವ ನಾಯಕ ಅರ್ಜುನ್ ನಾಯಕಿ ರಿತಿಕ್ಷಾ ಪ್ರೀತಿಯಲ್ಲಿ ಬಿದ್ದ ನಂತರ ಆಕೆ ಸಮಸ್ಯೆ ಪರಿಹಾರಕ್ಕಾಗಿ ದೊಡ್ಡ ಡೀಲ್ ಗೆ ಕೈ ಹಾಕುತ್ತಾನೆ. ಇದರಿಂದ ಸಮಸ್ಯೆಗೆ ಸಿಲುಕುವ ಅರ್ಜುನ್ ಅದರಿಂದ ಹೊರಬರುವ ವೇಳೆಗೆ ಜೈಲಿಗೆ ಸೇರಿದ ಫೈನಾನ್ಸ್ ಕಂಪನಿ ಮಾಲೀಕನಿಗೆ ಮೋಸಮಾಡಿದವನಿಗೆ ತಕ್ಕ ಪಾಠ ಕಲಿಸುವುದೇ ಚಿತ್ರದ ಕಥೆ.

    ಫ್ಲ್ಯಾಶ್ ಬ್ಯಾಕ್

    ಫ್ಲ್ಯಾಶ್ ಬ್ಯಾಕ್

    ಚಿತ್ರ ಮೇನ್ ಸ್ಟ್ರೀಮ್ ಗೆ ಬರುವುದಕ್ಕೂ ಮೊದಲು ಫೈನಾನ್ಸ್ ಕಂಪನಿಯ ಮಾಲೀಕ ಜನರಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಜೈಲಿಗೆ ಹೋಗುತ್ತಾನೆ. ಆತನ ಪಿಎ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಒಂದು ಫ್ಲ್ಯಾಶ್ ಬ್ಯಾಕ್ ಕಣ್ಣ ಮುಂದೆ ಬಂದು ಹೋಗುತ್ತದೆ. ಆತ ಯಾರು? ನಿಜವಾಗಲು ಮೋಸ ಮಾಡಿದ್ದಾನ, ಆತನಿಗೂ ಚಿತ್ರದ ನಾಯಕ ಅರ್ಜುನ್ ಗೂ ಏನು ಸಂಬಂಧ ಇದಕ್ಕೆಲ್ಲಾ ಉತ್ತರ ಸಿಗಬೇಕು ಅಂದ್ರೆ ಚಿತ್ರಮಂದಿರಕ್ಕೆ ಭೇಟಿ ನೀಡಿ.

    'ಪಂಟ' ಅನೂಪ್ ರೇವಣ್ಣ ಅಭಿನಯ

    'ಪಂಟ' ಅನೂಪ್ ರೇವಣ್ಣ ಅಭಿನಯ

    'ಲಕ್ಷ್ಮಣ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಆಕ್ಷನ್ ಹೀರೋ ಹುಟ್ಟಿಕೊಂಡ ಎಂಬ ಭರವಸೆ ಮೂಡಿಸಿದ್ದ ಅನೂಪ್ ರೇವಣ್ಣ ರ ಪಾತ್ರ 'ಪಂಟ' ಚಿತ್ರದಲ್ಲಿ ಬಹಳ ಸಪ್ಪೆ ಎನಿಸುತ್ತದೆ. ಚಿತ್ರದಲ್ಲಿ ಇರುವ ಒಂದು ಫೈಟ್ ನಲ್ಲೂ ಸಹ ಮಾಸ್ ಪ್ರೇಕ್ಷಕರ ನಿರೀಕ್ಷೆ ಹುಸಿಯಾದಂತೆ ಕಾಣುತ್ತದೆ. ಅವರ ಡೈಲಾಗ್ ಗಳಲ್ಲೂ ಅಷ್ಟು ಖದರ್ ಇಲ್ಲ.

    ಚಿತ್ರದ ನಾಯಕಿ ರಿತಿಕ್ಷಾ

    ಚಿತ್ರದ ನಾಯಕಿ ರಿತಿಕ್ಷಾ

    ಸಿನಿಮಾದ ನಾಯಕಿ ರಿತಿಕ್ಷಾ ರವರಿಗೆ ಇದು ಮೊದಲ ಚಿತ್ರ. ಫಸ್ಟ್ ಟೈಮ್ ಕ್ಯಾಮೆರಾ ಫೇಸ್ ಮಾಡಿದ್ದರೂ ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ಅವರ ಪಾತ್ರ ಅಷ್ಟೊಂದು ಗಮನ ಸೆಳೆಯುವುದಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಫೀಲ್ ಆಗುತ್ತದೆ.

    ಉಳಿದವರು

    ಉಳಿದವರು

    ನಟ-ನಟಿ ಹೊರತು ಪಡಿಸಿ ತರಂಗ ವಿಶ್ವ, ರವಿ ಕಾಳೆ, ಕುಸ್ತಿ ರಮೇಶ್, ಇಂದ್ರಕುಮಾರ್ ಮತ್ತು ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ನಟ ಅನೂಪ್ ರೇವಣ್ಣ ಬಿಟ್ಟರೆ ಹೆಚ್ಚು ಗಮನಸೆಳೆಯುವುದು ತರಂ ವಿಶ್ವ ರವರ ಪಾತ್ರವಷ್ಟೆ.

    ಮನರಂಜನೆ ಕಡಿಮೆ

    ಮನರಂಜನೆ ಕಡಿಮೆ

    ಅನೂಪ್ ರೇವಣ್ಣ ಆಕ್ಟಿಂಗ್ ಚೆನ್ನಾಗಿದೆ. ತರಂಗ ವಿಶ್ವ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡು ಕಚುಗುಳಿ ಇಟ್ಟಿದ್ದಾರೆ.

    ನಿರ್ದೇಶನ ಹೇಗಿದೆ?

    ನಿರ್ದೇಶನ ಹೇಗಿದೆ?

    ಕಲಾ ಸಾಮ್ರಾಟ್ ಎಸ್.ನಾರಾಯಣ್ 'ನಾ ಪಂಟ ಕಣೋ' ಚಿತ್ರಕ್ಕೆ ತಾವೇ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಆದರೆ ನಾಯಕ ನಟ ಅನೂಪ್ ರೇವಣ್ಣ ನ ಎರಡನೇ ಚಿತ್ರ ಇದಾಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿಬಂದಿಲ್ಲ. ಹಾಸ್ಯಕ್ಕೂ ಹೆಚ್ಚು ಪ್ರಾಧಾನ್ಯತೆ ನೀಡದೆ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಗೆ ಪ್ರಾಮುಖ್ಯತೆ ನೀಡಿದ್ದರೂ ಇದಕ್ಕಾಗಿ ಪ್ರೇಕ್ಷಕರೂ ಚಿತ್ರದ ಕೊನೆಯ ಅರ್ಧಗಂಟೆ ವರೆಗೆ ಕಾದು ಕುಳಿತುಕೊಳ್ಳಬೇಕಿದೆ.

    ಸಂಗೀತ

    ಸಂಗೀತ

    ಚಿತ್ರದಲ್ಲಿ ಮೂರು ಹಾಡುಗಳಿದ್ದು ಅವುಗಳಲ್ಲಿ ಎರಡು ಹಾಡು ಅನವಶ್ಯಕವಾಗಿ ತುರುಕಿದಂತಿದೆ. ಆರಂಭದಲ್ಲೇ ಇರುವ ಪಬ್ ಹಾಡಿನಲ್ಲಿ 'ತಿಥಿ' ಚಿತ್ರ ಖ್ಯಾತಿಯ ಸೆಂಚುರಿ ಗೌಡ ಮತ್ತು ಗಡ್ಡಪ್ಪ ಇಬ್ಬರಿಂದಲೂ ಡ್ಯಾನ್ಸ್ ಮಾಡಿಸಲಾಗಿದೆ. ಎಸ್ ನಾರಾಯಣ್ ರವರೇ ನೀಡಿರುವ ಸಂಗೀತ ನಿರ್ದೇಶನದ 'ತುಂತುರು ನೀನಾ ನಾನಾ ಏನೋ ಒಂಥರಾ' ಹಾಡೊಂದು ಮಾತ್ರ ಗಮನಸೆಳೆಯುತ್ತದೆ.

    ಟೆಕ್ನಿಕಲಿ ಸಿನಿಮಾ

    ಟೆಕ್ನಿಕಲಿ ಸಿನಿಮಾ

    ಮ್ಯಾಥಿವ್ ರಂಜನ್ ನಿರ್ವಹಣೆಯ ಕ್ಯಾಮೆರಾ ಕೈಚಳಕದಲ್ಲಿ ಅಷ್ಟೊಂದು ರಿಚ್ ನೆಸ್ ಇಲ್ಲ. ನಾಯಕ-ನಾಯಕಿಯ ಜೊತೆಯಲ್ಲಿ ಮೂಡಿಬಂದಿರುವ ''ತುಂತುರು ನೀನಾ ನಾನಾ ಏನೋ ಒಂಥರಾ' ಹಾಡಿನಲ್ಲಿನ ಗ್ರಾಫಿಕ್ಸ್ ಹೆಚ್ಚು ಮಂಕಾಗಿದ್ದು, ಆ ಹಾಡಿನ ದೃಶ್ಯಗಳು ಚಿತ್ರ ನೋಡಲು ಬೇಸರ ತರಿಸುತ್ತದೆ.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    'ಪಂಟ' ಚಿತ್ರ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಈ ಚಿತ್ರವನ್ನ ನೋಡದೇ ಇದ್ದರೂ ಚಿಂತೆಯಿಲ್ಲ.

    English summary
    Anup Revanna Starrer Kannada Movie 'Panta' has hit the screens today(June 23). The movie is out and out suspence thriller and is a treat for mass audience. 'Panta' Review is here.
    Saturday, September 29, 2018, 15:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X