For Quick Alerts
  ALLOW NOTIFICATIONS  
  For Daily Alerts

  Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ

  By ಫಿಲ್ಮ್ ಡೆಸ್ಕ್
  |

  ಚಿತ್ರ: ಅಳಿದು ಉಳಿದವರು

  ನಿರ್ದೇಶಕ: ಅರವಿಂದ್ ಶಾಸ್ತ್ರಿ

  ನಿರ್ಮಾಪಕ: ಅಶು ಬೇದ್ರ

  ಕಲಾವಿದರು: ಅಶು ಬೇದ್ರ, ಪವನ್ ಕುಮಾರ್, ಸಂಗೀತಾ ಭಟ್, ಬಿ.ಸುರೇಶ್ ಇತರರು

  ಬಿಡುಗಡೆ: 6 ಡಿಸೆಂಬರ್ 2019

  Rating:
  3.5/5

  ಹುಟ್ಟಿಗೂ, ಸಾವಿಗೂ, ನೋವಿಗೂ ನಲಿವಿಗೂ ಒಂದು ಕಾರಣ ಇದ್ದೇ ಇದೆ. ಕಾಣಿಸುವುದರ ಬಗ್ಗೆ ಯಾರಿಗೂ ಚಿಂತೆ ಇರುವುದಿಲ್ಲ. ಆದರೆ ಕಾಣದೆ ಇರುವುದರ ಬಗ್ಗೆ ಭ್ರಮೆ, ಭಯ ಇದ್ದೇ ಇರುತ್ತೆ. ಚಿತ್ರದ ನಾಯಕ ಶೀಲಂ(ಅಶು ಬೆದ್ರ) ಸುದ್ದಿ ವಾಹಿನಿಯ ನಿರೂಪನಾಗಿರುತ್ತಾನೆ. 'ಕಾರಣ' ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿರುತ್ತಾರೆ. ಇದು ನಂಬಿಕೆ ಮತ್ತು ಮೂಢನಂಬಿಕೆ ನಡುವಿನ ವಿಶೇಷ ಕಾರಣಗಳನ್ನು ಹುಡುಕುವ ಸರಣಿ ಕಾರ್ಯಕ್ರಮ.

  99 ಎಪಿಸೋಡ್ ಅನ್ನು ನಡೆಸಿಕೊಟ್ಟ ಶೀಲಂ 100ನೇ ಎಪಿಸೋಡ್ ಅನ್ನು ವಿಶೇಷವಾಗಿ ನಡೆಸಿಕೊಡಲು ನಿರ್ಧರಿಸುತ್ತಾರೆ. ಆಗ ಒಬ್ಬ ದೆವ್ವ ಇಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ಮಾರಾಟವಾಗದೆ ಇರುವ ಮನೆಯಲ್ಲಿ ದೆವ್ವ ಇಲ್ಲ ಎನ್ನುವುದುನ್ನು ನಿರೂಪಿಸಲು ಸವಾಲು ಹಾಕುತ್ತಾರೆ. ಸವಾಲೂ ಹಾಕುವ ವ್ಯಕ್ತಿ ನಟ ಪವನ್ ಕುಮಾರ್. ಪವನ್ ಇಲ್ಲಿ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.

  Ashu Bedra, Pavan Kumar, Sangeetha Bhat Sartre Alidu Ulidavaru Movie Review

  ನಿರೂಪಕನಿಗೆ ದೆವ್ವದ ದರ್ಶನವಾಗುತ್ತಾ, 100ನೇ ಎಪಿಸೋಡ್ ಹೇಗಿರುತ್ತೆ ಎನ್ನುವುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು. ಕ್ಷಣಕ್ಷಣಕ್ಕು ಕುತೂಹಲ ಕೆರಳಿಸುವ ದೃಶ್ಯಗಳು ಪ್ರೇಕ್ಷರನ್ನು ಕೊನೆಯವರೆಗು ಹಿಡಿದಿಡುತ್ತೆ. ಅಬ್ಬರ ಆಡಂಭರವಿಲ್ಲದೆ ಅದ್ಭುತವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅರವಿಂದ್ ಶಾಸ್ತ್ರಿ.

  ಮೊದಲ ಚಿತ್ರದಲ್ಲೆ ರಾಜ್ಯ ಪ್ರಶಸ್ತಿ ಗೆದ್ದು ಬೀಗಿದ್ದ ನಿರ್ದೇಶಕ ಅರವಿಂದ್ ಶಾಸ್ತ್ರಿ, ಅಳಿದು ಉಳಿದವರು ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಹಿ ಚಿತ್ರದ ನಂತರ ಅರವಿಂದ್ ಶಾಸ್ತ್ರಿ ಎರಡನೆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಪ್ರೇಕ್ಷಕರ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ಅಳಿದು ಉಳಿದವರು ಯಶಸ್ವಿಯಾಗಿದೆ.

  ನಂಬಿಕೆ ಮೂಢನಂಬಿಕೆಯ ಜೊತೆಗೆ ಟಿ ಆರ್ ಪಿ ಹಿಂದೆ ಬಿದ್ದಿರುವ ಖಾಸಗಿ ಸುದ್ದಿವಾಹಿನಿಗಳ ನಾನಾ ಮುಖಗಳನ್ನು ಬಿಚ್ಚಿಡುವ ಪ್ರಯತ್ನವೂ ಇಲ್ಲಿ ಮಾಡಿದ್ದಾರೆ. ಅಮೃತಾ ಪಾತ್ರಧಾರಿ ಸಂಗೀತ ಭಟ್, ಪೋಲೀಸ್ ಅಧಿಕಾರಿ ಅತುಲ್ ಕುಲಕರ್ಣಿ, ಧರ್ಮಣ್ಣ ಕಡೂರು ಪ್ರತಿಯೊಬ್ಬರ ಪಾತ್ರಗಳು ಅದ್ಭುತವಾಗಿದೆ. ಬಿ. ಸುರೇಶ್ ಮತ್ತು ಅರವಿಂದ್ ರಾವ್ ಇಬ್ಬರು ಪ್ರತಿಸ್ಪರ್ಧಿ ಸುದ್ದಿ ವಾಹಿನಿಯ ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದಾರೆ.

  ಹೊಡಿ ಬಡಿ ದೃಶ್ಯಗಳಿಲ್ಲದೆ, ಹೀರೋಯಿಸಂ, ಡೈಲಾಗ್ಸ್ ಅಬ್ಬರ ಯಾವುದು ಇಲ್ಲದೆ ಆರಾಮವಾಗಿ ಸಿನಿಮಾ ವೀಕ್ಷಿಸ ಬಹುದು. ಕಥಾವಸ್ತುವೆ ಇಲ್ಲಿ ಹೀರೋ. ಇದೊಂದು ವಿಭಿನ್ನ ಸಿನಿಮಾವಾಗಿದ್ದು ಕೊಟ್ಟ ದುಡ್ಡಿಗೆ ಯಾವುದೆ ಮೋಸವಿಲ್ಲದೆ ಸಿನಿಮಾ ವೀಕ್ಷಿಸಬಹುದು.

  English summary
  Actor Ashu Bedra, Pavan Kumar, Sangeetha Bhat sartre Alidu Ulidavaru movie review. This movie directed by Arvind Shastri.
  Monday, January 6, 2020, 18:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X