»   » 'ಅತಿರಥ'ನ ಆಟಕ್ಕೆ ವಿಮರ್ಶಕರು ಕೊಟ್ಟ ಅಂಕ ಎಷ್ಟು..?

'ಅತಿರಥ'ನ ಆಟಕ್ಕೆ ವಿಮರ್ಶಕರು ಕೊಟ್ಟ ಅಂಕ ಎಷ್ಟು..?

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಅತಿರಥ' ಸಿನಿಮಾ ಈ ವಾರ ತೆರೆಗೆ ಬಂದಿದೆ. ತಮಿಳಿನ 'ಕಂಧಿರನ್' ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರವನ್ನು ಕನ್ನಡದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. 'ನಕಲಿ ಮಾರ್ಕ್ಸ್ ಕಾರ್ಡ್' ಎನ್ನುವ ಅಂಶದ ಮೇಲೆ ಸಿನಿಮಾ ಕಥೆ ಇತ್ತು.

  ವಿಮರ್ಶೆ: 'ನಕಲಿ ಮಾರ್ಕ್ಸ್ ಕಾರ್ಡ್' ವಿರುದ್ಧ ಹೋರಾಡುವ 'ಅತಿರಥ'

  'ಅತಿರಥ' ಸಿನಿಮಾವನ್ನು ವಿಮರ್ಶಕರು ಸಹ ನೋಡಿದ್ದಾರೆ. ಪ್ರತಿ ವಾರದಂತೆ ಈ ವಾರ ಕೂಡ ಈ ಸಿನಿಮಾದ ಬಗ್ಗೆ ತಮ್ಮ ವಿಮರ್ಶೆಯನ್ನು ಜನರ ಮುಂದೆ ಇಟ್ಟಿದ್ದಾರೆ. ಅಂದಹಾಗೆ, ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಬಂದ 'ಅತಿರಥ' ಚಿತ್ರದ ವಿಮರ್ಶೆ ಮುಂದಿದೆ ಓದಿ...

  ಅಚ್ಚುಕಟ್ಟಾದ ಅತಿರಥ - ವಿಜಯ ಕರ್ನಾಟಕ

  ಇಂಥ ಕತೆಗಳನ್ನಿಟ್ಟುಕೊಂಡು ಸಿನಿಮಾ ಮಾಡೋದು ಮಾಮೂಲಿ ಸಂಗತಿಯಾದರೂ, ಈ ಸಿನಿಮಾ ಭಿನ್ನವಾಗಿ ಮೂಡಿಬಂದಿದೆಯಲ್ಲದೆ, ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಪ್ರತಿಕ್ಷಣ ಚಕಿತಗೊಳಿಸುತ್ತಾ ಹೋಗುವ ಚಿತ್ರ ತನ್ನ ನಿರೂಪಣೆಯಿಂದ ಮನ ಗೆಲ್ಲುತ್ತದೆ. ಕಥೆ ಮೇಲ್ನೋಟಕ್ಕೆ ಮಾಮೂಲಿ ಎನ್ನಿಸಿದರೂ ಅದನ್ನು ಬೆಳೆಸಿದ, ನಿರೂಪಿಸಿದ ರೀತಿ ಚೆನ್ನಾಗಿದೆ. ಎಲ್ಲೂ ಬೋರ್‌ ಆಗದಂತೆ ಚುರುಕಾಗಿ ಸಿನಿಮಾ ಸಾಗುತ್ತದೆ. ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಾ ಮುಂದೇನು? ಎಂಬ ಕುತೂಹಲವನ್ನು ಹುಟ್ಟಿಸುತ್ತದೆ. ಸ್ಕ್ರೀನ್ ಪ್ಲೇನಲ್ಲಿ ಸೂಕ್ಷ್ಮತೆ ಕಾಣುತ್ತದೆ. ತಾಂತ್ರಿವಾಗಿಯೂ ಉತ್ತಮವಾಗಿದೆ. ಅಲ್ಲಲ್ಲಿ ಕಂಟೆಂಟ್ನಲ್ಲಿ ಸಣ್ಣಪುಟ್ಟ ನ್ಯೂನತೆಗಳಿದ್ದರೂ ಚೊಕ್ಕವಾಗಿ ಕಟ್ಟಿಕೊಟ್ಟಿದ್ದಾರೆ. ಕಮರ್ಷಿಯಲ್ ಸಿನಿಮಾಗೆ ರಿಯಲಿಸ್ಟಿಕ್ ಟಚ್ ಕೊಟ್ಟಿದ್ದಾರೆ. ತಾರಾಗಣದ ವಿಷಯಕ್ಕೆ ಬಂದರೆ ಎಲ್ಲಾ ನಟರು ಉತ್ತಮವಾಗಿ ನಟಿಸಿದ್ದಾರೆ. - ಪದ್ಮಾ ಶಿವಮೊಗ್ಗ

  ನಕಲಿ ಮಾರ್ಕ್ಸ್ ಕಾರ್ಡ್ ಜಾಲದ ವಿರುದ್ಧ ಅತಿರಥ ಪ್ರಯತ್ನ - ಉದಯವಾಣಿ

  'ಅತಿರಥ' ತಮಿಳಿನ 'ಕನಿಧನ್' ಚಿತ್ರದ ರೀಮೇಕು. ನಾಯಕ, ತನಗೆ ಗೊತ್ತಿಲ್ಲದೆಯೇ ನಕಲಿ ಮಾರ್ಕ್ಸ್ ಕಾರ್ಡ್ ಮತ್ತು ಪ್ರಮಾಣಪತ್ರ ದಂಧೆಯಲ್ಲಿ ಒಬ್ಬನಾಗಿರುತ್ತಾನೆ. ನಕಲಿ ಪ್ರಮಾಣ ಪತ್ರ ದಂಧೆಯಲ್ಲಿ ನಾಯಕ ಸಿಕ್ಕಿಬೀಳುವ ಮೂಲಕ, ಚಿತ್ರ ಟೇಕಾಫ್ ಆಗುತ್ತದೆ. ಇನ್ನು ಖಳನಾಯಕನ ಎಂಟ್ರಿ ಮೂಲಕ ಚಿತ್ರಕ್ಕಿನ್ನೂ ವೇಗ ಸಿಗುತ್ತದೆ. ನಂತರ ಅವರಿಬ್ಬರ ತಂತ್ರ-ಕುತಂತ್ರ-ಪ್ರತಿತಂತ್ರಗಳು ಪ್ರೇಕ್ಷಕರನ್ನು ಕಟ್ಟಿ ಹಾಕುತ್ತದೆ. ಕೊನೆಯವರೆಗೂ ಪ್ರೇಕ್ಷಕ ಬಿಗಿ ಹಿಡಿದು ನೋಡುವಂತೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಮೊದಲ ಒಂದು ಗಂಟೆ ಹೆಚ್ಚೇನೂ ಆಗುವುದಿಲ್ಲ. ನಾಯಕ-ನಾಯಕಿಯ ಭೇಟಿ, ಕಿತ್ತಾಟ, ಸ್ನೇಹ, ಸಲುಗೆ ಜೊತೆಗೆ ಹಾಸ್ಯದ ಹೆಸರಿನಲ್ಲಿ ಒಂದಿಷ್ಟು ಮಂಗಾಟಗಳು ಮೊದಲ ಮುಕ್ಕಾಲು ತಾಸು ನಡೆಯುತ್ತದೆ. - ಚೇತನ್‌ ನಾಡಿಗೇರ್

  ಅತಿರಂಜಿತ ಅತಿರಥ - ವಿಜಯವಾಣಿ

  ಇಲ್ಲಿ ನಾಯಕನೇ ಅತಿರಥ. ಅವನಿಗೇ ಫುಲ್ ಸ್ಕೋಪು. ಗ್ಲಾಮರಸ್ ಬೆಡಗಿ ಲತಾ ಹೆಗಡೆ ನಾಯಕಿಯಾಗಿದ್ದರೂ ನಟನೆಗೆ ಅಷ್ಟು ಅವಕಾಶವಿಲ್ಲ. ಅವರು ಕೆಲವು ದೃಶ್ಯಗಳಲ್ಲಿ ಕಣ್ಮನ ಸೆಳೆಯಲಷ್ಟೇ ಸೀಮಿತ ಎಂಬಂತಾಗಿರುತ್ತಾರೆ. ಇನ್ನು ವಿಲನ್ ಕಬೀರ್ ಸಿಂಗ್​ಗೆ ಹೆಚ್ಚು ಮಾತಿರದಿದ್ದರೂ, ಮುಖಭಾವ ಹಾಗೂ ಆಂಗಿಕ ಅಭಿನಯದಿಂದಲೇ ಗಮನ ಸೆಳೆಯುತ್ತಾರೆ. ಸಾಧುಕೋಕಿಲ ಸಿಲ್ಲಿಯಾಗಿ ನಗಿಸಿದರೆ, ರವಿಶಂಕರ್ ಭಾವುಕರಾಗಿಸುತ್ತ ನಗಿಸುತ್ತಾರೆ. ಉಳಿದಂತೆ ಅವಿನಾಶ್, ಅಚ್ಯುತ್​ಕುಮಾರ್ ಅವರದು ಎಂದಿನಂತೆ ಮಾಗಿದ ಅಭಿನಯ. ಸಾಧು ಕೋಕಿಲ ಪುತ್ರ ಸುರಾಗ್ ಸಂಯೋಜಿಸಿರುವ ಸಂಗೀತದಲ್ಲಿ ಅಬ್ಬರ ಹೆಚ್ಚಿದ್ದರಿಂದ ಸಾಹಿತ್ಯದಲ್ಲಿನ ಮಾಧುರ್ಯ ಮಸುಕಾದಂತೆನಿಸುತ್ತದೆ. ಆದರೆ ಹಾಡು ಹಾಗೂ ಚೇಸಿಂಗ್, ಫೈಟಿಂಗ್ ದೃಶ್ಯಗಳಲ್ಲಿ ಛಾಯಾಗ್ರಾಹಕ ಜೈ ಆನಂದ್ ಕೈಚಳಕ ಶ್ಲಾಘನೀಯ. - ವಿಜಯವಾಣಿ

  Athiratha Movie Review - Times Of India

  Athiratha, by Mahesh Babu, is the remake of the Tamil drama Kanithan. The original had some taut sequences that unearthed the fake certificate racket. At the same time, the original also drew flak for a rather delayed first half and some unnecessary songs in the film that hindered the thrill element in the film. While Athiratha has the thriller element intact, it also keeps the shortcomings of the original ensuring it is a rather too faithful remake.

  The film begins on a jagged note and it only gains pace towards the interval. The same pace of the film continues after the interval, but there is an unnecessary item song that breaks that flow. This is also followed by a rather melodramatic build-up to the climax. The forcefully inserted comic track doesn't work, but the actual dose of laughter happens in the end when the intended irony hits hard. The only worry is that whether or not one has the patience to endure the run up to the end. When it comes to performances, the good-looking lead pair of Chetan and Latha Hegde perform well. Kabir Duhan Singh has a menacing presence in the film and proves that he can be a good option for a villain in Sandalwood.

  English summary
  Read 'Athiratha' kannada movie critics review. ಕನ್ನಡ ದಿನಪತ್ರಿಕೆಗಳಲ್ಲಿ ಬಂದ 'ಅತಿರಥ' ಕನ್ನಡ ಸಿನಿಮಾದ ವಿಮರ್ಶೆ.
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more