twitter
    For Quick Alerts
    ALLOW NOTIFICATIONS  
    For Daily Alerts

    ಅಟ್ಟಹಾಸ : ರಾಜಣ್ಣನೇ ದಿಕ್ಕು, ಟ್ವೀಟ್ ವಿಮರ್ಶೆ

    By Mahesh
    |

    ಕಾಡುಗಳ್ಳ, ನರಹಂತಕ ವೀರಪ್ಪನ್ ಚಿತ್ರ ಹಲವು ವಿಷಯಕ್ಕಾಗಿ ಕುತೂಹಲ ಕೆರಳಿಸಿರುವುದು ನಿಜ. ಆದರೆ, ಜನರ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿ ಬಂದಿದೆಯೇ? ಪ್ರತಿಭಾವಂತ ನಿರ್ದೇಶಕ ಎಎಂಆರ್ ರಮೇಶ್ ಅವರು ತಮ್ಮ ಹಿಂದಿನ ಚಿತ್ರಗಳ ಬಿಗಿ ನಿರೂಪಣೆ, ಚಿತ್ರಕಥೆ ಈ ಚಿತ್ರದಲ್ಲೂ ಕಾಯ್ದುಕೊಂಡಿದ್ದಾರೆಯೇ?

    ಅಟ್ಟಹಾಸ ಚಿತ್ರದಲ್ಲಿ ರಾಜಣ್ಣ(ಡಾ. ರಾಜ್ ಕುಮಾರ್) ಅವರ ಎಪಿಸೋಡ್ ಹೇಗೆ ಬಂದಿದೆ ಎಂಬುದಕ್ಕೆ ಥೇಟರ್ ನಲ್ಲೇ ಕುಳಿತೇ ಕೆಲ ಉತ್ಸಾಹಿ ಕ್ರೇಜಿ ಸಿನಿ ಪ್ರೇಮಿಗಳು ಟ್ವೀಟ್ ಮೂಲಕ ತಮ್ಮ ಅನಿಸಿಕೆಯನ್ನು 140 characters ನಲ್ಲಿ ತುಂಬಿಸಿ ಪ್ರಕಟಿಸಿದ್ದಾರೆ. ಗಂಧದಗುಡಿ ಚಿತ್ರ ಫೋರಂನ ಹುಡುಗರ ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ ಇಲ್ಲಿದೆ.. ಪೂರ್ಣ ವಿಮರ್ಶೆಗಾಗಿ ಕಾಯಿರಿ...

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    * ಟ್ವೀಟ್ ಮೂಲಕ ಸಿಕ್ಕ ಒನ್ ಲೈನ್ ವಿಮರ್ಶೆ, ಚಿತ್ರ ಓಕೆ,, ಮೊದಲಾರ್ಥ ಡ್ರಾಗ್ ಮಾಡಿರೋದು ಏಕೆ?
    * ವೀರಪ್ಪನ್ ವಾಸಿಸುತ್ತಿದ್ದಂತಹ ಸ್ಥಳಗಳಲ್ಲೇ ಚಿತ್ರೀಕರಿಸಿರುವುದು ಕಥೆ ತಕ್ಕಂತೆ ದೃಶ್ಯಗಳು ಬಂದಿದೆ.
    * ಇಡೀ ಚಿತ್ರವನ್ನು ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಕೆಲವೊಮ್ಮೆ ರಾಮ್ ಗೋಪಾಲ್ ವರ್ಮಾ ಚಿತ್ರ ಅನ್ನಿಸೋಕೆ ಶುರು ವಾಗುತ್ತೆ.

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    * ಸಂದೀಪ್ ಚೌಟ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಸೂಕ್ತವಾಗಿ ಬಳಕೆಯಾಗಿದೆ.
    * ಕನ್ನಡದ ಪ್ರತಿಭಾನ್ವಿತ ನಟ ಕಿಶೋರ್ ಅವರು ವೀರಪ್ಪನ್ ಪಾತ್ರವೇ ತಾನಾಗಿದ್ದಾರೆ.
    * ವೀರಪ್ಪನ್ ಪತ್ನಿ ಪಾತ್ರದಲ್ಲಿ ವಿಜಯಲಕ್ಷ್ಮಿ ಇದ್ದಾರೆ. ಆದರೆ, ಹೆಚ್ಚಿನ ಕೆಲಸವಿಲ್ಲ. ಮುಖ ಕೂಡಾ ಬ್ಲರ್ ಆಗಿ ತೋರಿಸಲಾಗಿದೆ ಯಾಕೋ ಗೊತ್ತಿಲ್ಲ.

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    * ಮೊದಲ ಅರ್ಧದಲ್ಲಿ ಚಿತ್ರ ಡಿಸ್ಕವರಿ ಚಾನೆಲ್ ಡ್ಯಾಕುಮೆಂಟರಿ ಥರಾ ಇದೆ. ಒಂದಿಷ್ಟು ಮಸಾಲೆ ಬೇಕಿತ್ತು. ಆದರೆ, ಬೋರ್ ಆಗಲ್ಲ
    * ವೀರಪ್ಪನ್ ಅಟ್ಟಹಾಸದ ಅನಾವರಣಕ್ಕೆ ಫಸ್ಟ್ ಆಫ್ ಮೀಸಲು. ಆನೆಗಳ ಕೊಲ್ಲುವುದು, ದಂತ ಕಳ್ಳತನ, ಗಂಧದ ಮರ ಸ್ಮಗಲ್ಲಿಂಗ್, ಪೊಲೀಸರ ಕೊಲ್ಲುವುದು ಇದೇ ಕಥೆ
    * ನೈಜ ಘಟನೆ ಆಧಾರಿಸಿದ ಚಿತ್ರ ತೆಗೆಯುವಲ್ಲಿ ರಮೇಶ್ ಪಳಗಿದ್ದಾರೆ. ಇನ್ನಷ್ಟು ಪಕ್ವವಾಗಿದ್ದಾರೆ.

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    * ತಾಂತ್ರಿಕವಾಗಿ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ ಕನ್ನಡ ಚಿತ್ರ ಇದಾಗಿದೆ. ಪ್ರತಿ ಫ್ರೇಮ್ ನಲ್ಲೂ ನಿರ್ದೇಶಕನ ಕೆಲಸ ಎದ್ದು ಕಾಣುತ್ತದೆ
    * ಮಧ್ಯಂತರ ನಂತರ ಅರ್ಜುನ್ ಸರ್ಜಾ ಎಂಟ್ರಿ, ಡಾ. ರಾಜ್ ಕುಮಾರ್ ಕಿಡ್ನಾಪ್
    * ಕಿಶೋರ್ ಗೆ ಫುಲ್ ಮಾರ್ಕ್ಸ್, ವಿಜಯ್ ಮಿಲ್ಟನ್ ಛಾಯಾಗ್ರಹಣ ಅದ್ಭುತ

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    ಟ್ವೀಟ್ ಆಧಾರಿತ ಚಿತ್ರ ವಿಮರ್ಶೆ

    * ಜಂಗಲ್ ಸಫಾರಿ ಜೊತೆಗೆ ಒಂದಿಷ್ಟು ಥ್ರಿಲ್ ಇಲ್ಲಿದೆ. ಆದರೆ, ಸಂಭಾಷಣೆ ಮೊನಚು ಇನ್ನಷ್ಟು ಬೇಕಿತ್ತು.
    * ಸುಚೇಂದ್ರ ಪ್ರಸಾದ್ ವಾಯ್ಸ್ ಓವರ್ ಕಥೆಗೆ ಒಳ್ಳೆ ವೇಗ ಕೊಟ್ಟಿದೆ.
    * ಕೊನೆಗೂ ನೆನಪಲ್ಲಿ ಉಳಿಯುವುದು ಡಾ.ರಾಜ್ ಎಪಿಸೋಡ್ ಹಾಗೂ ಕಿಶೋರ್ ನಟನೆ..
    * ತಮಿಳುನಾಡು ಪೊಲೀಸರು ಮಾತ್ರ ಸೂಪರ್ ಕಾಪ್ ಗಳಾ? ಗೊತ್ತಿಲ್ಲ.. ಮಿಕ್ಕ ವಿಮರ್ಶೆಗೆ ಸಿದ್ಧರಾಗಿ

    English summary
    Attahasa Movie Twitter Review by enthusatic fans from Gandhadagudi forum and others. Movie first half is like visual documentary and second half catches up with entry of Dr. Rajkumar character played by Suresh Oberoai
    Thursday, February 14, 2013, 14:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X