For Quick Alerts
  ALLOW NOTIFICATIONS  
  For Daily Alerts

  Avatar 2 Review: ಜೇಮ್ಸ್ ಕ್ಯಾಮರೂನ್‌ ಅವರ ಮತ್ತೊಂದು ಮಾಸ್ಟರ್‌ಪೀಸ್ 'ಅವತಾರ್ ದ ವೇ ಆಫ್ ವಾಟರ್'

  |

  ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅವತಾರ್ 2 ಇಂದು ( ಡಿಸೆಂಬರ್ 16 ) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭಾರತದಲ್ಲಿ ಮುಂಜಾನೆಯಿಂದಲೇ ಪ್ರದರ್ಶನಗಳು ಆರಂಭಗೊಂಡಿವೆ. 2009ರಲ್ಲಿ ಬಿಡುಗಡೆಗೊಂಡಿದ್ದ ಅವತಾರ್ ಚಿತ್ರದ ಮುಂದುವರೆದ ಭಾಗವೇ ಈ ಅವತಾರ್ ದ ವೇ ಆಫ್ ವಾಟರ್.

  ಅವತಾರ್ ಮೊದಲ ಭಾಗದಲ್ಲಿ ಪ್ಯಾಂಡೊರಾ ಎಂಬ ವಿಭಿನ್ನ ಜಗತ್ತು ಹಾಗೂ ಅಲ್ಲಿನ ಕಾಡುವಾಸಿಗಳಿಗೆ ಪ್ಯಾಂಡೊರಾ ಜತೆಗಿದ್ದ ಬಂಧವನ್ನು ಅತ್ಯದ್ಭುತವಾಗಿ ತೆರೆ ಮೇಲೆ ತಂದು ಯಶಸ್ಸು ಸಾಧಿಸಿದ ಬಳಿಕ ಜೇಮ್ಸ್ ಕ್ಯಾಮರೂನ್ ಚಿತ್ರದ ಸೀಕ್ವೆಲ್ ಅನ್ನು ಘೋಷಿಸಿದ್ದರು. ಅಂದೇ ಅವತಾರ್ 2 ಚಿತ್ರದ ಮೇಲೆ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು.

  'ಅವತಾರ್ - 2' ಚಿತ್ರಕ್ಕೂ ಲೀಕಾಸುರರ ಕಾಟ: ಸಂಪೂರ್ಣ ಸಿನಿಮಾ ಪೈರಸಿ ಲಿಂಕ್‌ಗಳು ವೈರಲ್'ಅವತಾರ್ - 2' ಚಿತ್ರಕ್ಕೂ ಲೀಕಾಸುರರ ಕಾಟ: ಸಂಪೂರ್ಣ ಸಿನಿಮಾ ಪೈರಸಿ ಲಿಂಕ್‌ಗಳು ವೈರಲ್

  ಮೊದಲ ಭಾಗದಲ್ಲಿ ಪ್ಯಾಂಡೊರಾವನ್ನು ಮಾನವರ ಅಟ್ಯಾಕ್‌ನಿಂದ ಉಳಿಸಿಕೊಂಡ ನಾವಿಗಳು ನಾಶವಾಗಿದ್ದ ತಮ್ಮ ಸುಂದರ ಜಾಗವನ್ನು ಮತ್ತೆ ಕಟ್ಟಿಕೊಂಡ್ರಾ, ಮತ್ತೆ ಅವರ ಮೇಲೆ ಮಾನವರು ದಾಳಿ ನಡೆಸಬಹುದಾ ಎಂಬ ಪ್ರಶ್ನೆಗಳು ವೀಕ್ಷಕರ ಮನದಲ್ಲಿತ್ತು. ಈ ಪ್ರಶ್ನೆಗಳಿಗೆ ಎರಡನೇ ಭಾಗದಲ್ಲಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಉತ್ತರ ನೀಡಿದ್ದಾರೆ.

  ಚಿತ್ರದ ಕಥೆಯೇನು?

  ಚಿತ್ರದ ಕಥೆಯೇನು?

  ಚಿತ್ರದ ಕಥೆ ಪ್ಯಾಂಡೊರಾ ಮೂಲಕವೇ ಆರಂಭವಾಗುತ್ತದೆ. ಮೊದಲ ಭಾಗದಲ್ಲಿ ಒಂದಾಗಿದ್ದ ಜೇಕ್ ಸುಲ್ಲಿ ಹಾಗೂ ನೇಟಿರಿ ಜನರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಜೇಕ್ ಸುಲ್ಲಿ ಹಾಗೂ ನೇಟಿರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಕೂಡ ಜನಿಸುತ್ತಾರೆ. ಎಲ್ಲಾ ಚೆನ್ನಾಗಿಯೇ ಸಾಗುತ್ತಿರುವಾಗ ಮತ್ತೆ ಪ್ಯಾಂಡೊರಾಗೆ ಮಾನವರ ಪ್ರವೇಶವಾಗುತ್ತೆ. ತಮ್ಮ ಯೋಜನೆಗೆ ಅಡ್ಡಿಯಾಗಿರುವ ಜೇಕ್ ಸುಲ್ಲಿಯನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ನಾವಿಗಳ ರೂಪದಲ್ಲಿ ಬರುವ ಮಾನವರ ಯೋಜನೆ ವಿಫಲವಾಗುತ್ತೆ. ಆದರೆ ಜೇಕ್ ಸುಲ್ಲಿ ಕುಟುಂಬದ ಜತೆ ಇದ್ದ 'ಸ್ಪೈಡರ್' ಎಂಬ ಹುಡುಗನನ್ನು ಆ ಮಾನವರ ತಂಡ ತಮ್ಮೊಡನೆ ಕೊಂಡೊಯ್ಯುತ್ತಾರೆ. ಇತ್ತ ತಮ್ಮ ದೈನಂದಿನ ಚಟುವಟಿಕೆ ತಿಳಿದಿದ್ದ ಸ್ಪೈಡರ್ ಮಾನವರ ಬಳಿ ತಮ್ಮ ಬಗ್ಗೆ ಎಲ್ಲವನ್ನೂ ಹೇಳಿಬಿಡಬಹುದು ಎಂಬ ಭಯದೊಂದಿಗೆ ಜೇಕ್ ಸುಲ್ಲಿ ತಮ್ಮ ಕುಟುಂಬ ಹಾಗೂ ದತ್ತು ಪುತ್ರಿ ಕಿರಿ ಜತೆ ದ್ವೀಪವೊಂದಕ್ಕೆ ತೆರಳಿ ತಲೆಮರೆಸಿಕೊಳ್ತಾನೆ. ಇಲ್ಲಿಂದಲೇ ಚಿತ್ರದ ಅಸಲಿ ಆಟ ಶುರುವಾಗಲಿದ್ದು, ಕಾಡಿನಲ್ಲಿ ವಾಸವಾಗಿದ್ದ ಜೇಕ್ ಸುಲ್ಲಿ ಕುಟುಂಬ ಸಮುದ್ರದ ಜೀವನಕ್ಕೆ ಹೊಂದಿಕೊಳ್ಳುತ್ತಾ, ತನ್ನನ್ನು ಹುಡುಕುತ್ತಿರುವ ಮಾನವರಿಂದ ಜೇಕ್ ಸುಲ್ಲಿ ಪಾರಾಗ್ತಾನಾ ಎಂಬುದೇ ಚಿತ್ರದ ಕಥೆ.

  ಮೇಕಿಂಗ್, ವಿಷುಯಲ್ ಚಿತ್ರದ ಹೈಲೈಟ್

  ಮೇಕಿಂಗ್, ವಿಷುಯಲ್ ಚಿತ್ರದ ಹೈಲೈಟ್

  2009ರಲ್ಲಿಯೇ ಅತ್ಯದ್ಭುತ ಎನಿಸುವಂತ ವಿಎಫ್ಎಕ್ಸ್ ಬಳಸಿದ್ದ ಅವತಾರ್ ಚಿತ್ರತಂಡ ಈಗಿನ ಅಪ್‌ಡೇಟೆಡ್ ತಂತ್ರಜ್ಞಾನದೊಂದಿಗೆ ಈ ಬಾರಿಯಂತೂ ಪ್ರೇಕ್ಷಕರು ಶಿಳ್ಳೆಯ ಸುರಿಮಳೆ ಸುರಿಸುವ ಮಟ್ಟಕ್ಕೆ ತೆರೆಮೆಲೆ ಜಾದೂ ಮಾಡಿದೆ. ಅದರಲ್ಲಿಯೂ ಕೊನೆಯ 40 ನಿಮಿಷಗಳ ದೃಶ್ಯ ವೈಭವ ಕಣ್ಣಿಗೆ ಹಬ್ಬ. ತ್ರೀಡಿಯಲ್ಲಿ ಚಿತ್ರ ವೀಕ್ಷಿಸುವ ಜನರಿಗೆ ಚಿತ್ರ ಬೇರೆಯದ್ದೇ ಲೆವೆಲ್ ಕಿಕ್ ನೀಡುವುದು ಖಚಿತ. ಚಿತ್ರ ಆರಂಭವಾದ ಕೂಡಲೇ ಪ್ರೇಕ್ಷಕರನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುವ ಚಿತ್ರ ಮೂರು ಗಂಟೆಯವರೆಗೆ ನೋಡುಗರಿಗೆ ವಿಷ್ಯುಯಲ್ ಟ್ರೀಟ್‌ನ ರಸದೌತಣ ಬಡಿಸಲಿದೆ. ಒಟ್ಟಿನಲ್ಲಿ ಇಷ್ಟು ವರ್ಷ ಸಮಯ ತೆಗೆದುಕೊಂಡಿದ್ದಕ್ಕೂ, ನಾವು ಚಿತ್ರಕ್ಕಾಗಿ ಕಾದಿದ್ದಕ್ಕೂ ಚಿತ್ರತಂಡ ಸಂಪೂರ್ಣ ನ್ಯಾಯ ಒದಗಿಸಿದೆ.

  ಚಿತ್ರದ ಪ್ಲಸ್ ಪಾಯಿಂಟ್ಸ್

  ಚಿತ್ರದ ಪ್ಲಸ್ ಪಾಯಿಂಟ್ಸ್

  ಅವತಾರ್ ದ ವೇ ಆಫ್ ವಾಟರ್ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಜೇಮ್ಸ್ ಕ್ಯಾಮರೂನ್ ಕಥೆ ಹಾಗೂ ನಿರ್ದೇಶನ. ಇದಕ್ಕೆ ಅನುಗುಣವಾಗಿ ಚಿತ್ರದ ಛಾಯಾಗ್ರಹಣ ಅದ್ಭುತವಾಗಿದೆ. ಇನ್ನು ಚಿತ್ರದ ಸಂಗೀತ ಹಾಗೂ ಸಂಕಲನ ಮತ್ತೊಂದು ಹಂತದಲ್ಲಿದ್ದು, ಚಿತ್ರದ ವಿಷ್ಯುಯಲ್ ಮಾತ್ರ ಅತ್ಯದ್ಭುತ ಹಾಗೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿವೆ. ಇನ್ನು ಚಿತ್ರದಲ್ಲಿ ಎಲ್ಲಾ ಕಲಾವಿದರೂ ಸಹ ತಮ್ಮ ಅಮೋಘ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಮೊದಲ ಭಾಗದಂತೆ ಇಲ್ಲಿಯೂ ಸಹ ನಾವಿಗಳಿಗೆ ಕಾಡು, ನೀರು ಹಾಗೂ ಅಲ್ಲಿನ ಜೀವಿಗಳ ಜತೆ ಇರುವ ಬಂಧಕ್ಕೆ ಎಮೋಷನಲ್ ಟಚ್ ನೀಡಲಾಗಿದ್ದು, ಇದು ವೀಕ್ಷಕರಿಗೆ ಕನೆಕ್ಟ್ ಆಗಲಿದೆ.

  ಮೈನಸ್ ಪಾಯಿಂಟ್

  ಮೈನಸ್ ಪಾಯಿಂಟ್

  ಚಿತ್ರದಲ್ಲಿ ಹೆಚ್ಚೇನೂ ಮೈನಸ್ ಪಾಯಿಂಟ್ ಇಲ್ಲ. ಆದರೆ ಚಿತ್ರದ ಕ್ಲೈಮ್ಯಾಕ್ಸ್‌ನ ಪ್ರಮುಖ ಸನ್ನಿವೇಶದಲ್ಲಿ ಜೇಕ್ ಸುಲ್ಲಿ ಬೆಂಬಲಿಗರು ದಿಢೀರನೆ ಯಾವುದೇ ಕಾರಣವಿಲ್ಲದೇ ಮಾಯವಾಗುವುದು ಹಾಗೂ ಆ ಸನ್ನಿವೇಶದ ನಂತರ ಮತ್ತೆ ಕಾಣಿಸಿಕೊಳ್ಳುತ್ತಾರೆ, ಇದಕ್ಕೆ ಯಾವುದೇ ಲಾಜಿಕ್ ಇಲ್ಲದಿರುವುದು ಪ್ರೇಕ್ಷಕರಲ್ಲಿ ಪ್ರಶ್ನೆಯನ್ನೂ ಮೂಡಿಸುತ್ತದೆ ಹಾಗೂ ಅನಗತ್ಯ ಎಂಬ ಭಾವನೆಯನ್ನೂ ಸಹ ಮೂಡಿಸುತ್ತದೆ. ಇದೊಂದು ಮೈನಸ್ ಪಾಯಿಂಟ್ ಚಿತ್ರ ನೋಡಿ ಬಂದ ಹಲವು ಸಮಯದ ನಂತರ ತಲೆಗೆ ಬರುತ್ತದೆಯೇ ಹೊರತು ಚಿತ್ರದ ಸಮಯದಲ್ಲಿ ಸಮಸ್ಯೆಯನ್ನುಂಟು ಮಾಡಿಲ್ಲ.

  English summary
  Avatar 2 review: James Cameron delivered one more masterpiece. Read on
  Friday, December 16, 2022, 13:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X