»   » 'ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!

'ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!

By: ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ
Subscribe to Filmibeat Kannada

ಬರೀ ಟಾಲಿವುಡ್ ಮಾತ್ರ ಅಲ್ಲ.. ಇಡೀ ಭಾರತ ಕಣ್ತುಂಬಿಕೊಳ್ಳಲು ಕಾದು ಕುಳಿತಿರುವ ಬಹು ನಿರೀಕ್ಷಿತ ಸಿನಿಮಾ 'ಬಾಹುಬಲಿ-2' ಬಿಡುಗಡೆ ಆಗಲು ನಾಳೆಯೊಂದೇ ದಿನ ಬಾಕಿ. ಎಲ್ಲೆಡೆ 'ಬಾಹುಬಲಿ-2' ಚಿತ್ರದ ಮೇನಿಯಾ, ಮಾಸ್ ಹಿಸ್ಟೀರಿಯಾ ಜೋರಾಗಿರುವಾಗಲೇ, ಸಿನಿಮಾದ ಮೊಟ್ಟ ಮೊದಲ ವಿಮರ್ಶೆ ಔಟ್ ಆಗಿದೆ.

ಸೌತ್ ಏಷಿಯನ್ ಸಿನಿಮಾ ಮ್ಯಾಗಝೀನ್ (ಯುಎಇ, ಯು.ಕೆ, ಭಾರತ) ವಿಮರ್ಶಕ ಹಾಗೂ ಯು.ಎ.ಇ ಸೆನ್ಸಾರ್ ಮಂಡಳಿ ಸದಸ್ಯ ಉಮೈರ್ ಸಂಧು, 'ಬಾಹುಬಲಿ-2' ಚಿತ್ರವನ್ನ ಇಂದು ಮಧ್ಯಾಹ್ನ ವೀಕ್ಷಿಸಿ, ತಮ್ಮ ವಿಮರ್ಶೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.['ಬಾಹುಬಲಿ' ಚಿತ್ರಕ್ಕಿಂತ 'ಬಾಹುಬಲಿ-2' ಸೂಪರ್ ಆಗಿದ್ಯಂತೆ.! ಹೇಳಿದವರ್ಯಾರು ಗೊತ್ತೇ.?]

ಹಾಗಾದ್ರೆ, 'ಬಾಹುಬಲಿ-2' ಹೇಗಿರಬಹುದು ಅಂತ ತಿಳಿದುಕೊಳ್ಳುವ ಕುತೂಹಲ ಇದ್ಯಾ.? ಉಮೈರ್ ಸಂಧು ಪ್ರಕಟಿಸಿರುವ ವಿಮರ್ಶೆಯ ತರ್ಜುಮೆ ಇಲ್ಲಿದೆ. ಮಿಸ್ ಮಾಡದೆ ಓದಿರಿ....

ರಾಜಮೌಳಿ ಯಶಸ್ವಿ

''ಒಂದು ಸಿನಿಮಾ ಮಾಡೋದು ಅಂದ್ರೇನೇ ಸುಲಭದ ಮಾತಲ್ಲ. ಅಂಥದ್ರಲ್ಲಿ ಇಡೀ ಭಾರತದಲ್ಲಿಯೇ ಅತ್ಯಂತ ದುಬಾರಿ ಸಿನಿಮಾ ರೆಡಿ ಮಾಡುವುದು ದೊಡ್ಡ ಸವಾಲೇ ಸರಿ. ಆ ಸವಾಲನ್ನು ಸ್ವೀಕರಿಸಿ ಎಸ್.ಎಸ್.ರಾಜಮೌಳಿ ಅಕ್ಷರಶಃ ಯಶಸ್ವಿ ಆಗಿದ್ದಾರೆ'' - ಉಮೈರ್ ಸಂಧು

ರಿಯಲಿಸ್ಟಿಕ್ ಆಗಿದೆ ಗ್ರಾಫಿಕ್ಸ್ ವರ್ಕ್

''ಬಾಹುಬಲಿ-2' ಚಿತ್ರದ ಗ್ರಾಫಿಕ್ಸ್ ವರ್ಕ್ ಹಾಲಿವುಡ್ ನ ಯಶಸ್ವಿ ಚಿತ್ರಗಳಾದ 'ದಿ ಲಾರ್ಡ್ ಆಫ್ ದಿ ರಿಂಗ್ಸ್', 'ಹ್ಯಾರಿ ಪಾಟರ್' ಆವೃತ್ತಿಗಳಿಗೆ ಸುಲಭವಾಗಿ ಹೋಲಿಸಬಹುದು. ಈ ಚಿತ್ರಗಳಲ್ಲಿ ಗ್ರಾಫಿಕ್ಸ್ ಮೂಲಕ ಇಡೀ ಪ್ರಾಂತ್ಯಗಳನ್ನ ಸೃಷ್ಟಿಸಿದ್ರೆ, 'ಬಾಹುಬಲಿ-2' ಚಿತ್ರದಲ್ಲಿ ಮಾಹಿಷ್ಮತಿ ರಾಜ್ಯ, ಭೋರ್ಗರೆಯುವ ಜಲಪಾತ, ಯುದ್ಧ ಸನ್ನಿವೇಶಗಳಿಗೆ ಗ್ರಾಫಿಕ್ಸ್ ಬಳಕೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ರಿಯಲಿಸ್ಟಿಕ್ ಆಗಿ ಕಾಣುವಲ್ಲಿ 'ಬಾಹುಬಲಿ-2' ಚಿತ್ರದ ಗ್ರಾಫಿಕ್ಸ್ ತಂಡ ಪಟ್ಟಿರುವ ಶ್ರಮ ತೆರೆಮೇಲೆ ಎದ್ದು ಕಾಣುತ್ತೆ'' - ಉಮೈರ್ ಸಂಧು

ನಟರ ಪರ್ಫಾಮೆನ್ಸ್ ಹೇಗಿದೆ.?

''ಪರ್ಫಾಮೆನ್ಸ್ ಬಗ್ಗೆ ಮಾತನಾಡಬೇಕು ಅಂದ್ರೆ, 'ಬಾಹುಬಲಿ-2' ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಪಾತ್ರಧಾರಿಗಳ ಆಯ್ಕೆ ಪರ್ಫೆಕ್ಟ್ ಆಗಿದೆ. ಕೊಟ್ಟಿರುವ ಪಾತ್ರಗಳನ್ನ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ. ಅದ್ರಲ್ಲೂ, ಪ್ರಭಾಸ್ ಪರ್ಫಾಮೆನ್ಸ್ ಸೂಪರ್'' - ಉಮೈರ್ ಸಂಧು

ನೆನಪಿನಲ್ಲಿ ಉಳಿಯುವ ಶಿವಗಾಮಿ

''ರಾಜ ಬಲ್ಲಾಳ'ನಾಗಿ ಕಾಣಿಸಿಕೊಂಡಿರುವ ರಾಣಾ ನಟನೆ ಹುಬ್ಬೇರಿಸುವಂಥದ್ದು. ಪೋಷಕ ಪಾತ್ರದಲ್ಲಿ ಮಿಂಚಿದರೂ, 'ಶಿವಗಾಮಿ' ರಮ್ಯಾ ಕೃಷ್ಣನ್ ನೆನಪಿನಲ್ಲಿ ಉಳಿಯುತ್ತಾರೆ. ಬಿಜ್ಜಳದೇವ ಪಾತ್ರಧಾರಿ ನಾಸರ್ ಮತ್ತು 'ಕಟ್ಟಪ್ಪ' ಸತ್ಯರಾಜ್ ನಟನೆ ಇಷ್ಟವಾಗುತ್ತದೆ'' - ಉಮೈರ್ ಸಂಧು

ರಾಜಮೌಳಿಯನ್ನ ಮೀರಿಸುವವರಿಲ್ಲ.!

''ಒಂದು ಅದ್ಭುತ ಕಥೆಯನ್ನ ತೆರೆಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವಲ್ಲಿ ಎಸ್.ಎಸ್. ರಾಜಮೌಳಿ ರವರನ್ನ ಬಿಟ್ಟರೆ ಇಡೀ ಭಾರತದಲ್ಲಿ ಮತ್ತಿನ್ಯಾರೂ ಇಲ್ಲ'' - ಉಮೈರ್ ಸಂಧು

'ಬಾಹುಬಲಿ-2' ಚಿತ್ರಕಥೆ ಬೊಂಬಾಟ್

''ಮಾಹಿಷ್ಮತಿ ರಾಜ್ಯವನ್ನ ಸೆರೆಹಿಡಿದಿರುವ ರೀತಿ ಅದ್ಭುತ. ತಾಂತ್ರಿಕವಾಗಿ ಪ್ರತಿಯೊಂದು ಸನ್ನಿವೇಶ ಕೂಡ ಹಾಲಿವುಡ್ ಗುಣಮಟ್ಟದಲ್ಲಿದೆ. ಸೆಟ್ ವರ್ಕ್, ವಿ.ಎಫ್.ಎಕ್ಸ್, ಸೌಂಡ್, ಸಂಕಲನ.... ಎಲ್ಲಕ್ಕಿಂತ ಹೆಚ್ಚಾಗಿ 'ಬಾಹುಬಲಿ-2' ಚಿತ್ರಕಥೆ ಬೊಂಬಾಟ್ ಆಗಿದೆ. ಕಥೆ, ಸಂಭಾಷಣೆ, ಸಂಗೀತ.. ಎಲ್ಲವೂ ಮನ ಮುಟ್ಟುತ್ತದೆ'' - ಉಮೈರ್ ಸಂಧು

ಪ್ರಭಾಸ್ 'ಬೆಸ್ಟ್ ಪರ್ಫಾಮೆನ್ಸ್'

''ತಮ್ಮ ವೃತ್ತಿ ಜೀವನದಲ್ಲಿಯೇ ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದಾರೆ ಪ್ರಭಾಸ್. ರಾಣಾ, ಅನುಷ್ಕಾ ಶೆಟ್ಟಿ, ತಮನ್ನಾ ಕೊಟ್ಟ ಪಾತ್ರಗಳನ್ನ ಸೊಗಸಾಗಿ ನಿಭಾಯಿಸಿದ್ದಾರೆ'' - ಉಮೈರ್ ಸಂಧು

'ಬಾಹುಬಲಿ-2' ಮಿಸ್ ಮಾಡ್ಬೇಡಿ

''ಒಟ್ಟಾರೆಯಾಗಿ, ವಿಶ್ವ ದರ್ಜೆಯ ಸಿನಿಮಾ 'ಬಾಹುಬಲಿ-2' ಎನ್ನುವ ಹೆಮ್ಮೆಯ ಅನುಭವ ನಮಗಾಗುವುದು ಖಚಿತ. ತಾಂತ್ರಿಕವಾಗಿ 'ಬಾಹುಬಲಿ-2' ದಿ ಬೆಸ್ಟ್ ಸಿನಿಮಾ. ಈ ಚಿತ್ರವನ್ನ ನೀವು ಮಿಸ್ ಮಾಡುವ ಹಾಗಿಲ್ಲ'' - ಉಮೈರ್ ಸಂಧು

ರೇಟಿಂಗ್ ಎಷ್ಟು.?

'ಬಾಹುಬಲಿ-2' ಚಿತ್ರಕ್ಕೆ ಉಮೈರ್ ಸಂಧು 5ಕ್ಕೆ 5 ರೇಟಿಂಗ್ ನೀಡಿದ್ದಾರೆ.

ಫಸ್ಟ್ ಹಾಫ್ ಹೇಗಿದೆ.?

''ಬಾಹುಬಲಿ-2' ಚಿತ್ರದ ಮೊದಲಾರ್ಧದಲ್ಲಿ ಎಲ್ಲೂ ಡಲ್ ಅನಿಸೋಲ್ಲ. ಪ್ರಭಾಸ್ ನಟನೆಗೆ ಹ್ಯಾಟ್ಸ್ ಆಫ್'' ಎಂದು ಯುಎಇ ಸೆನ್ಸಾರ್ ಬೋರ್ಡ್ ಸದಸ್ಯ ಉಮೈರ್ ಸಂಧು ಟ್ವೀಟ್ ಕೂಡ ಮಾಡಿದ್ದಾರೆ.

ಅತ್ಯುತ್ತಮ ಚಿತ್ರ

''ನಾನು ಕಂಡ ಭಾರತದ ಅತಿ ಶ್ರೇಷ್ಠ ಸಿನಿಮಾ 'ಬಾಹುಬಲಿ-2'. ಈ ಶುಕ್ರವಾರ ಇತಿಹಾಸ ಮರುಸೃಷ್ಟಿಯಾಗಲಿದೆ. ಆಲ್ ಟೈಮ್ ಬ್ಲಾಕ್ ಬಸ್ಟರ್'' ಎಂದು ಟ್ವೀಟಿಸಿದ್ದಾರೆ ಉಮೈರ್ ಸಂಧು.

'ಬಾಹುಬಲಿ-2' ಚಿತ್ರಕ್ಕೆ ಗೌರವ

'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಿದ ಬಳಿಕ ಯು.ಎ.ಇ ಸೆನ್ಸಾರ್ ಮಂಡಳಿ ನಿಂತು ಗೌರವ ಸಲ್ಲಿಸಿದೆ. ಭಾರತಕ್ಕೆ ಇದು ಹೆಮ್ಮೆಯ ಸಂಗತಿ. ಜೈ ಹಿಂದ್'' - ಉಮೈರ್ ಸಂಧು.

ರಾಜಮೌಳಿಗೆ ಧನ್ಯವಾದ

ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿರುವ ರಾಜಮೌಳಿ ರವರಿಗೆ ಉಮೈರ್ ಸಂಧು ಧನ್ಯವಾದ ಅರ್ಪಿಸಿದ್ದಾರೆ.

English summary
Read the most expected 'Baahubali-2' first review by UAE Censor Board member Umair Sandhu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada