twitter
    For Quick Alerts
    ALLOW NOTIFICATIONS  
    For Daily Alerts

    ಬೇಬಿ ಚಿತ್ರ ವಿಮರ್ಶೆ : ಮೋದಿ ಕೂಡಾ ಮೆಚ್ಚುವಂತಿದೆ

    By ಜೇಮ್ಸ್ ಮಾರ್ಟಿನ್
    |

    ಭಯೋತ್ಪಾದನೆ ವಿರುದ್ಧ ಅಮೆರಿಕ ಅಧ್ಯಕ್ಷ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಂಟಿ ಸಮರ ಸಾರಿರುವ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರ 'ಬೇಬಿ' ಚಿತ್ರವನ್ನು ನೋಡಿದರೆ ನಿಮ್ಮಲ್ಲಿನ ಕಿಚ್ಚು ಹೆಚ್ಚಾಗುತ್ತದೆ.

    ಈ ಚಿತ್ರವನ್ನು ನೋಡಿದರೆ ಮೋದಿ ಅವರು ಮೆಚ್ಚುತ್ತಾರೆ ಎಂಬುದು ವಿಮರ್ಶಕರು ಷರಾ ಬರೆದಿದ್ದಾರೆ. ಬಹುತೇಕ ಎಲ್ಲಾ ವಿಮರ್ಶಕರು ಅಕ್ಕಿ ಚಿತ್ರಕ್ಕೆ ಥಮ್ಸ್ ಅಪ್ ಎಂದಿದ್ದಾರೆ. ಕೆಲವರು ಮಾತ್ರ ಟೆರರಿಸಂ ಕುರಿತ ಹಳೆ ಚಿತ್ರಗಳ ಸೂಪರ್ ರೀಮಿಕ್ಸ್ ಎಂದಿದ್ದಾರೆ. ಅದರೆ, ಯಾರೂ ಚಿತ್ರವನ್ನು ಕಳಪೆ ಎಂದಿಲ್ಲ.

    ನೀರಜ್ ಪಾಂಡೆ ನಿರ್ದೇಶನ ಎ ವೆನ್ಸ್ ಡೇ, ಸ್ಪೆಷಲ್ 26 ನೋಡಿ ಮೆಚ್ಚಿದವರು ಬೇಬಿ ಚಿತ್ರವನ್ನು ಮಿಸ್ ಮಾಡುವಂತಿಲ್ಲ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪಾಂಡೆ ಅವರು ಚಿತ್ರವನ್ನು ನಿರೂಪಿಸಿದ್ದಾರೆ.ಕಳೆದ ವಾರ ತೆರೆ ಕಂಡ ಚಿತ್ರ ಬಾಕ್ಸಾಫೀಸ್ ನಲ್ಲೂ ಸದ್ದು ಮಾಡುತ್ತಿದೆ. [51 ಡಿಗ್ರಿ ತಾಪದಲ್ಲಿ ಕೂಲಾಗಿದ್ದ ಅಕ್ಷಯ್ ಕುಮಾರ್!]

    ಏನಿದು ಬೇಬಿ?: Baby ಎಂಬುದು ಅಂಡರ್ ಕವರ್ ಆಪರೇಷನ್ ಗುಪ್ತ ಹೆಸರು. ಅಕ್ಷಯ್ ಕುಮಾರ್ (ಅಜಯ್ ಸಿಂಗ್) ಇಂಟಲಿಜೆಂಟ್ ಏಜೆಂಟ್ ಡ್ಯಾನಿ (ಫಿರೋಜ್ ಅಲಿ ಖಾನ್) ಅವರ ಬಾಸ್. ರಾಣಾ ದಗ್ಗುಬಾತಿ (ಜೈ ಸಿಂಗ್ ರಾಥೋಡ್) ಹಾಗೂ ತಾಪಸಿ ಪನ್ನು (ಪ್ರಿಯ ಸೂರ್ಯವಂಶಿ) ಅನುಪಮ್ ಖೇರ್(ಓಂ ಪ್ರಕಾಶ್ ಶುಕ್ಲಾ) ಇತರರು ಈ ತಂಡದಲ್ಲಿರುತ್ತಾರೆ. ಈ ಸ್ಟಾರ್ ಗಳ ಜೊತೆಗೆ ಕೆಕೆ ಮೆನನ್, ಸುಶಾಂತ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಮರ್ಥವಾಗಿ ನೀರಜ್ ಪಾಂಡೆ ನಿಭಾಯಿಸಿದ್ದಾರೆ. ವಿಮರ್ಶಕರು ನೀಡಿದ ಅಭಿಪ್ರಾಯದ ಸಂಗ್ರಹ ಇಲ್ಲಿದೆ...

    ಅಕ್ಷಯ್- ಪಾಂಡೆ ಜೋಡಿ ಮತ್ತೆ ಗೆದ್ದಿದೆ

    ಅಕ್ಷಯ್- ಪಾಂಡೆ ಜೋಡಿ ಮತ್ತೆ ಗೆದ್ದಿದೆ

    ನೀರಜ್ ಪಾಂಡೆ ನಿರ್ದೇಶನ ಎ ವೆನ್ಸ್ ಡೇ, ಸ್ಪೆಷಲ್ 26 ನೋಡಿ ಮೆಚ್ಚಿದವರು ಬೇಬಿ ಚಿತ್ರವನ್ನು ಮಿಸ್ ಮಾಡುವಂತಿಲ್ಲ. ಎರಡೂವರೆ ಅವಧಿಯಲ್ಲಿ ಭಯೋತ್ಪಾದನೆ ಹತ್ತಿಕ್ಕುವ ಮಾರ್ಗವನ್ನು ವಿಷದಪಡಿಸಿದ್ದಲ್ಲದೆ, ಮೋದಿ ಸರ್ಕಾರಕ್ಕೂ ಪಾಠ ಹೇಳುವಂಥ ನಿರೂಪಣೆ ಇದೆ. ಟೆರರಿಸಂ ವಿರುದ್ಧದ ಹೋರಾಟದ ಎಲ್ಲೋ ಹಾದಿ ತಪ್ಪುತ್ತಿದೆ ಎಂದು ತೋರಿಸಲಾಗಿದೆ. ಹೀಗಾಗಿ ಮೋದಿ ಕೂಡಾ ಚಿತ್ರ ನೋಡಿ ಮೆಚ್ಚಬಹುದು

    ಹಲವು ಚಿತ್ರಗಳ ಕಿಚಡಿಯಂತಿದೆ: ರಾಜೀವ್ ಮಸಂದ್

    ಹಲವು ಚಿತ್ರಗಳ ಕಿಚಡಿಯಂತಿದೆ: ರಾಜೀವ್ ಮಸಂದ್

    ಜೀರೋ ಡಾರ್ಕ್ ಥರ್ಟಿ, ಆರ್ಗೋ ಚಿತ್ರದ ಕ್ಲೈಮ್ಯಾಕ್ಸ್, ನಿಖಿಲ್ ಅಡ್ವಾಣಿಯ ಡಿ-ಡೇಯಿಂದ ಮುಖ್ಯ ಉದ್ದೇಶಗಳನ್ನು ಗ್ರಹಿಸಿಕೊಂಡು ಒಳ್ಳೆ ಕಿಚಡಿಯನ್ನು ಪಾಂಡೆ ನೀಡಿದ್ದಾರೆ.ಚಿತ್ರದ ಹಲವು ದೃಶ್ಯಗಳು ಎಂದೋ ನೋಡಿದಂತೆ ಭಾಸವಾಗುತ್ತದೆ. ಆಕ್ಷನ್ ಥ್ರಿಲ್ಲಿಂಗ್ ಸೀನ್ ಗಳಿಗಾಗಿ ಅಕ್ಷಯ್ ಕುಮಾರ್ ಗಾಗಿ ಚಿತ್ರ ನೋಡುವವರಿಗಾಗಿ 3/5-ಐಬಿಎನ್ ಲೈವ್

    ಕೆಟ್ಟ ಚಿತ್ರವಲ್ಲ, ಆದರೆ ಕೆಟ್ಟ ಸಂದೇಶ ನೀಡಿದರೆ ಕಷ್ಟ

    ಕೆಟ್ಟ ಚಿತ್ರವಲ್ಲ, ಆದರೆ ಕೆಟ್ಟ ಸಂದೇಶ ನೀಡಿದರೆ ಕಷ್ಟ

    ಬಾಲಿವುಡ್ ಮಟ್ಟಕ್ಕೆ ಹೋಲಿಸಿದರೆ ಬೇಬಿ ಕೆಟ್ಟ ಚಿತ್ರವಲ್ಲ, ಆದರೆ ಕೆಟ್ಟ ಸಂದೇಶ ನೀಡಿದರೆ ಕಷ್ಟ. ಸ್ಕ್ರಿಪ್ಟ್ ನಲ್ಲಿ ಹಲವು ದೋಷಗಳಿವೆ. ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ ಎಂಬುದನ್ನು ತೋರಿಸಲು ಪಾಂಡೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಭಾರತ-ಪಾಕಿಸ್ತಾನವಷ್ಟೇ ಅಲ್ಲದೆ ಮಧ್ಯಪ್ರಾಚ್ಯದ ತನಕ ಸುತ್ತಿದ್ದಾರೆ. ಚಿತ್ರಕಥೆ ಇನ್ನಷ್ಟು ಬಿಗಿಗೊಂಡಿದ್ದರೆ ಚಿತ್ರ ಸರ್ವಶ್ರೇಷ್ಠವಾಗುತ್ತಿತ್ತು-ದೀಪಾಂಜನಾ ಪಾಲ್, ಫಸ್ಟ್ ಪೋಸ್ಟ್

    ಪಾತ್ರಗಳು ಮಾತಾಡುತ್ತವೆ, ಚಿತ್ರಕಥೆ ನಿದ್ರಿಸುತ್ತದೆ

    ಪಾತ್ರಗಳು ಮಾತಾಡುತ್ತವೆ, ಚಿತ್ರಕಥೆ ನಿದ್ರಿಸುತ್ತದೆ

    ಪಾತ್ರಗಳು ಮಾತಾಡುತ್ತವೆ, ಚಿತ್ರಕಥೆ ನಿದ್ರಿಸುತ್ತದೆ, ಕೆಕೆ ಮೆನನ್, ಅನುಪಮ್ ಖೇರ್ ಪಾತ್ರಗಳಿಗೆ ನೀಡಿರುವ ಆದ್ಯತೆ ಕಡಿಮೆಯಾಗಿದೆ. ಚಿತ್ರದ ಮೂಲ ಉದ್ದೇಶ ಜನರನ್ನು ತಲುಪುವ ವೇಳೆಗೆ ಚಿತ್ರ ತಕ್ಕಮಟ್ಟಿಗೆ ಬೋರ್ ಹೊಡೆಸುತ್ತದೆ. ಹಳೆ ವೈನ್ ಹಳೆ ಬಾಟ್ಲಿಯಲ್ಲೇ ಕುಡಿದ ಆನಂದದಿಂದ ಚಿತ್ರವನ್ನು ಆಸ್ವಾದಿಸಬಹುದು. ಚಿತ್ರದ ಸ್ಕ್ರಿಪ್ಟ್ ಪೇಲವವಾಗಿದ್ದು, 2/5 ನೀಡಬಹುದು ಅಷ್ಟೇ ಅನುಭವ್ ಪಿ, ಇಂಡಿಯಾ ಟುಡೇ

    ತುಂಬಾ ಸಿಂಪಲ್ ಎನಿಸುತ್ತದೆ ಈ ಬೇಬಿ: ಎಕ್ಸ್ ಪ್ರೆಸ್

    ತುಂಬಾ ಸಿಂಪಲ್ ಎನಿಸುತ್ತದೆ ಈ ಬೇಬಿ: ಎಕ್ಸ್ ಪ್ರೆಸ್

    ಚಿತ್ರದ ವೇಗ, ಅಕ್ಷಯ್ ಕುಮಾರ್ ನಟನೆ, ಕಥಾವಸ್ತು ಎಲ್ಲವೂ ಚಿತ್ರವನ್ನು ಒಮ್ಮೆ ನೋಡುವಂತೆ ಮಾಡುತ್ತದೆ. ತಕ್ಕಮಟ್ಟಿಗೆ ಚಿಂತನೆಗೆ ಹಚ್ಚುವ ಈ ಚಿತ್ರಕ್ಕೆ ಕಥೆಯೇ ಹೀರೋ, ಕಥೆಯೇ ಶತ್ರು, ತುಂಬಾ ಸಿಂಪಲ್ ಚಿತ್ರ 2/5 ಶುಭ್ರ ಗುಪ್ತ, ಇಂಡಿಯನ್ ಎಕ್ಸ್ ಪ್ರೆಸ್

    ಅಕ್ಷಯ್ ಕುಮಾರ್ ಬೆಸ್ಟ್ ಡಿಎನ್ಎ 4/5

    ಅಕ್ಷಯ್ ಕುಮಾರ್ ಬೆಸ್ಟ್ ಡಿಎನ್ಎ 4/5

    ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಸಸ್ಪೆನ್ ನಂತರದ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಎರಡೂವರೆ ಚಿತ್ರ ಇನ್ನಷ್ಟು ಚೆನ್ನಾಗಿ ಮೂಡುತ್ತಿತ್ತು. ಆರ್ಗೋ ಇಂಗ್ಲೀಷ್ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಬೇಬಿ ಚಿತ್ರದ ಅಂತಿಮ ದೃಶ್ಯಗಳ ಹೋಲಿಕೆ ಇದ್ದರೂ ಕಥಾ ಹಂದರದಲ್ಲಿ ವ್ಯತ್ಯಾಸ ಇರುವುದರಿಂದ ಈ ಚಿತ್ರ ಆಪ್ತವೆನಿಸುತ್ತದೆ.

    English summary
    Baby Movie Critics Review: The much awaited Bollywood movie Baby starring Akshay Kumar in lead role is the first big movie of this year and the film is likely to make it big in all aspects.
    Tuesday, January 27, 2015, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X