For Quick Alerts
ALLOW NOTIFICATIONS  
For Daily Alerts

  'ಭೈರವಗೀತ' ನೋಡಿದ ವಿಮರ್ಶಕರು ಏನ್ ಹೇಳ್ತಾರೆ?

  |

  ಡಾಲಿ ಧನಂಜಯ್ 'ಭೈರವಗೀತ' ಸಿನಿಮಾದ ಮೂಲಕ ಟಾಲಿವುಡ್ ನಲ್ಲಿ ಲಾಂಚ್ ಆಗಿದ್ದಾರೆ. ಅವರ ಸಿನಿಮಾ ನಿನ್ನೆ ಕನ್ನಡದಲ್ಲಿ ಬಿಡುಗಡೆಯಾಗಿದ್ದು, ಮುಂದಿನ ವಾರ ತೆಲುಗಿನಲ್ಲಿ ರಿಲೀಸ್ ಆಗಲಿದೆ.

  'ಭೈರವಗೀತ' ರಾಮ್ ಗೋಪಾಲ್ ವರ್ಮ ಸ್ಟೈಲ್ ಆಫ್ ಸಿನಿಮಾ. ನಿರ್ದೇಶಕ ಸಿದ್ದಾರ್ಥ್ ಆರ್ ಜಿ ವಿ ಶಿಷ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ. 'ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟ' ಇಲ್ಲಿದ್ದು, ಸತ್ಯಕಥೆಯನ್ನು 'ರಾ' ಆಗಿ ತೋರಿಸಿದ್ದಾರೆ. ಇನ್ನೊಂದು ಕಡೆ ಸಿನಿಮಾದಲ್ಲಿ ಬರೀ ರಕ್ತವೇ ತುಂಬಿಕೊಂಡಿದ್ದು, ನೋಡುಗರಿಗೆ ಕಿರಿಕಿರಿ ಉಂಟು ಮಾಡುತ್ತದೆ

  ವಿಮರ್ಶೆ : ಭೈರವನ ಕಥೆಯಲ್ಲ.. ಸ್ವಲ್ಪ 'ಬೋರ್' ಇವನ ಕಥೆ..

  ಅಂದಹಾಗೆ, 'ಭೈರವಗೀತ' ಸಿನಿಮಾದ ಬಗ್ಗೆ ದಿನಪತ್ರಿಕೆಗಳಲ್ಲಿ ಬಂದಿರುವ ವಿಮರ್ಶೆ ಮುಂದಿದೆ ಓದಿ..

  ಭೈರವನ ಬಂಡಾಯಕ್ಕೆ ಪ್ರೇಮವೇ ಆಯುಧ - ವಿಜಯ ಕರ್ನಾಟಕ

  ಇತಿಹಾಸ ಪುಟಗಳಲ್ಲಿ ಹೆಚ್ಚೆಚ್ಚು ದಾಖಲಾಗಿರುವ ಉಳ್ಳವರಿಂದಾದ ಶೋಷಿತ ಕಥೆಗಳು, ಮತ್ತೆ ಮತ್ತೆ ರೊಚ್ಚಿಗೆಬ್ಬಿಸುತ್ತವೆ. ರಕ್ತ ಚರಿತ್ರೆಗಳು ಚರಮಗೀತೆಯಾಗಿ ಢಣಗುನಿಸುತ್ತವೆ. ಅಂತಹ ಚರಮಗೀತೆಯಿಂದಾದ ಚಿತ್ರವೇ ‘ಭೈರವ ಗೀತ'. ಮೇಲ್ನೋಟಕ್ಕೆ ಅದು ಪ್ರೇಮಕಥೆಯೆಂದು ಬಿಂಬಿತವಾದರೂ, ಅಲ್ಲೊಂದು ಉಳ್ಳವರ ವಿರುದ್ಧದ ತಾತ್ವಿಕ ಸಿಟ್ಟಿದೆ. ಡಾಲಿ ಧನಂಜಯ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಬಂಡಾಯಗಾರನಲ್ಲೂ ತುಂಟತನ ಮೆರೆಯುತ್ತಾರೆ. ಡಾಲಿಯನ್ನು ಇಷ್ಟ ಪಡುವ ಮಾಸ್‌ ಪ್ರೇಕ್ಷಕರು ಭೈರವನನ್ನು ತಬ್ಬಿಕೊಳ್ಳಬಹುದು.

  ಹೇಗಿವೆ ಈ ವಾರದ ಸಿನಿಮಾಗಳು?: ಒಂದು 'ಆರೆಂಜ್' ಮತ್ತೊಂದು ರಕ್ತ ಕೆಂಪು!

  ದ್ವೇಷಕ್ಕೆ ವಯಸ್ಸಾಗಿದೆ, ಪ್ರೇಮ ಹೊಸತಾಗಿದೆ - ಕನ್ನಡ ಪ್ರಭ

  ಎರಡು ಗಂಟೆ ಒಂಬತ್ತು ನಿಮಿಷ ಕಣ್ಣುಗಳಲ್ಲಿ ಬೆಂಕಿಯುಗುಳುವ ಭೈರವ ಪಾತ್ರಧಾರಿ ಧನಂಜಯ್ ಈ ಚಿತ್ರಕ್ಕೆ ಹೆಗ್ಗಳಿಕೆ ಮತ್ತು ಶಕ್ತಿ. ಜಗತ್ತಿನ ಎಲ್ಲ ಕ್ರೌರ್ಯವನ್ನು ತನ್ನೊಳಗೆ ಆಹ್ವಾನಿಸಿಕೊಂಡಂತೆ ಕಾಣಿಸುತ್ತಾರೆ. ವರ್ಗ ಸಂಘರ್ಷದ ಕಥೆ ನಮಗೆ ಹೊಸದಲ್ಲ ಆಳುವವರ ವಿರುದ್ಧ ದಂಗೆ ಹೇಳುವ ಕೆಲಸಗಾರರ ವರ್ಗದ ಕಥೆಯನ್ನು ಅರೆದು ಕುಡಿದಿರುವರ ಸಂಖ್ಯೆ ಜಾಸ್ತಿ ಇದೆ ಹಾಗಾಗಿ ಈ ತರದ ಕಥೆಗಳಲ್ಲಿ ಯಾವಾಗ ಎಲ್ಲೆಲ್ಲಿ ಏನೇನು ಆಗುತ್ತದೆ ಅನ್ನುವುದನ್ನು ಕಥೆ ಶುರುವಾಗಲ್ಲ ಗೊತ್ತಾಗುತ್ತದೆ ಅಂತಹುದೇ ಕಥೆ ಭೈರವ ಗೀತ.

  ಭೈರವಗೀತ ನೆತ್ತರಿನಲ್ಲಿ ಕಮರಿದ ಗುಲಾಬಿ - ಪ್ರಜಾವಾಣಿ

  ರಕ್ತ ಚರಿತ್ರೆಯಲ್ಲಿ ಉಳ್ಳವರ ನಡುವಿನ ಹೋರಾಟವನ್ನು ಹೇಳಿದ್ದ ರಾಮ್ ಗೋಪಾಲ್ ಅವರ ಮೇಲೆ ಉಳ್ಳವರು ಮತ್ತು ಗುಲಾಮರ ನಡುವಿನ ಸಂಘರ್ಷದಲ್ಲಿ ನಿತ್ತುಕೊಂಡು ಕಥೆ ಕಟ್ಟಿದ್ದಾರೆ ಅಲ್ಲಿ ಪೊಲೀಸರು ಪಿಸ್ತೂಲುಗಳು ಇದ್ದವು ಇಲ್ಲಿ ಬರೀ ಕತ್ತಿ ಕೊಡಲಿಗಳಿಗೆ ಅರಿಯುವ ನೆತ್ತರು ಉರುಳುವ ತಲೆಗಳು ಅರಚಾಟ ಕಿರುಚಾಟ ಎಲ್ಲವೂ ಇದೆ. ಆರ್ ಜಿವಿ ಗರಡಿಯಲ್ಲಿ ಪಳಗಿದ ಸಿದ್ದಾರ್ಥ ಕೊರಿಯವನ್ನು ಬಗೆಬಗೆಯಾಗಿ ಗುರುವಿನ ಸರಿಸಮವಾಗಿ ನಿಲ್ಲುತ್ತಾರೆ. ಹಲವು ಪಾತ್ರಗಳು ತುಟಿ ಚಲನೆಗೂ ಮಾತಿಗೂ ಹೊಂದಿಕೆಯಾಗದೇ ಡಬ್ಬಿಂಗ್ ಸಿನಿಮಾದಂತೆ ಭಾಸವಾಗುತ್ತದೆ.

  Bhairava Geetha Review - The Indian Express

  Bhairava Geetha is directed by 23-year-old debutant Siddhartha Shankar. He deserves a pat on the back for making this tiresome movie look promising in the trailer. The tagline of the movie is ‘A love story'. After watching the movie, you realize how misleading the tagline was. Like most of Ram Gopal Varma's films, Bhairava Geetha also claims to be based on a true story. But the story strives to be a variation of Jayam (2002) and is presented through the bloodied filters that resemble the trademark style of RGV


  Dhananjaya, who was impressive as the bad guy in blockbuster Tagaru, tries his best to energize dull scenes that seem to have been written while the writers were drunk.

  English summary
  Actor Dhananjay's 'Bhairava Geetha' kannada movie critics review.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more