For Quick Alerts
  ALLOW NOTIFICATIONS  
  For Daily Alerts

  ಸಸ್ಪೆನ್ಸ್ ಥ್ರಿಲ್ಲರ್ 'ಮರ್ಡರ್ 3' ಚಿತ್ರವಿಮರ್ಶೆ

  By ನಬನಿತಾ
  |

  ಪ್ರೀತಿ ಪ್ರೇಮ, ಜೊತೆಗೊಂದಿಷ್ಟು ಕಾಮ. ಪ್ರೀತಿಯಲ್ಲಿ ಜೀವವೂ ತುಂಬಿದೆ, ಸ್ವಲ್ಪ ಹೆಚ್ಚಾದರೆ ಸಾವೂ ಕದತಟ್ಟುತ್ತದೆ. ಪ್ರೀತಿ, ಪ್ರೇಮ, ಕಾಮ, ಮರ್ಡರ್ ಸುತ್ತ ಕಥೆಯನ್ನು ಹೆಣೆದು, ರೋಮ್ಯಾನ್ಸ್ ಜೊತೆಗೆ ರೋಚಕತೆಯನ್ನೂ ತುಂಬಿದರೆ ಅದು ಭಟ್ ಕಂಪನಿಯ ಚಿತ್ರವಾಗುತ್ತದೆ.

  ಮರ್ಡರ್ ಸರಣಿಯ ಮೂರನೇ ಅವತಾರ ಸಸ್ಪೆನ್ಸ್ ಥ್ರಿಲ್ಲರ್ 'ಮರ್ಡರ್ 3' ಇಂಥ ಹಸಿಬಿಸಿ ಪ್ರೇಮ ಕಥಾನಕಕ್ಕೆ ರಕ್ತದ ಲೇಪವನ್ನು ಅಂಟಿಸಿದೆ. ಕಥೆ ಹೀಗೇ ಇರುತ್ತದೆ ಎಂದು ನಿರೀಕ್ಷಿಸಿ ಹೋದವರಿಗೆ ಭಟ್ ಕುಟುಂಬದ ಕುಡಿ ವಿಶೇಷ್ ಭಟ್ ಅನಿರೀಕ್ಷಿತ ತಿರುವುಗಳನ್ನು ನೀಡುತ್ತ ಭರ್ಜರಿ ರಸದೌತಣವನ್ನು ನೀಡಿದ್ದಾರೆ.

  ಚಿತ್ರಕಥೆ : ವೈಲ್ಡ್ ಮೃಗಗಳನ್ನು, ಮತ್ತೆ ವೈಲ್ಡ್ ಕಾಮನೆ ತುಂಬಿದ ಹೆಣ್ಣುಗಳನ್ನು ಕ್ಯಾಮೆರಾ ಮುಖಾಂತರ ಬೇಟೆಯಾಡುವುದರಲ್ಲಿ ನಿಸ್ಸೀಮ. ರಾತ್ರಿಯ ಹೊತ್ತು ಕೆರಳಿದ ಸರ್ಪದಂತೆ ಹಾಸಿಗೆಯಲ್ಲಿ ಸರಿದಾಡುವ ಮತ್ತು ಹಗಲುಹೊತ್ತಿನಲ್ಲಿ ತತ್ತ್ವಜ್ಞಾನಿಯಂತೆ ವರ್ತಿಸುವ ವಿವೇಕ್ (ರಣದೀಪ್ ಹೂಡಾ) ಕ್ಯಾಮೆರಾ ಕಣ್ಣಿಗೆ ನಿಶಾ (ಸಾರಾ ಲೋರೆನ್) ಸಿಲಿಕಿಕೊಳ್ಳುತ್ತಾಳೆ.

  ಕಥೆ ಹೀಗೆ ಸಾಗುತ್ತಿದ್ದಾಗ ಒಂದು ರೋಚಕ ತಿರುವನ್ನು ಪಡೆದುಕೊಳ್ಳುತ್ತದೆ. ವಿವೇಕ್‌ನ ಮಾಜಿ ಪ್ರೇಯಸಿ ರೋಶನಿ (ಅದಿತಿ ರಾವ್ ಹೈದರಿ) ಇದ್ದಕ್ಕಿದ್ದಂತೆ ಕಾಣೆಯಾಗಿಬಿಡುತ್ತಾಳೆ. ಸಹಜವಾಗಿ ಅನುಮಾನದ ಬೆರಳು ವಿವೇಕ್‌ನತ್ತ ತಿರುಗುತ್ತದೆ. ಮುಂದೆ ಏನಾಗುತ್ತದೆ? ಕೊಲೆಗಾರ ಯಾರು? ಕೊಲೆ ನಡೆದದ್ದು ಯಾವ ಕಾರಣಕ್ಕೆ ಎಂದು ಚಿತ್ರ ನೋಡಿಯೇ ತಿಳಿಯಬೇಕು.

  ಪ್ರಥಮ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿರುವ ಮಹೇಶ್ ಭಟ್ ಮಗ ವಿಶೇಷ್ ಭಟ್ ಇಡೀ ಪ್ಲಾಟನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸ್ಪ್ಯಾನಿಷ್ ಥ್ರಿಲ್ಲರ್ ಚಿತ್ರದ ನಕಲಾಗಿರುವ ಮರ್ಡರ್ 3 ಚಿತ್ರದಲ್ಲಿ ಅದ್ಭುತ ಸೆಟ್ಟಿಂಗ್, ಸಸ್ಪೆನ್ಸ್ ಇಮ್ಮಡಿಗೊಳಿರುವ ಹಿನ್ನೆಲೆ ಸಂಗೀತ, ಸೌಂದರ್ಯದ ಸಾರವನ್ನೆಲ್ಲ ಹಿಡಿದಿಟ್ಟುಕೊಳ್ಳುವ ಕ್ಯಾಮೆರಾ ವರ್ಕ್ ಚಿತ್ರಕಥೆಯ ಮೂಡನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ಮೊದಲಾರ್ಧ ರೋಮ್ಯಾಂಟಿಕ್ ಆಗಿದ್ದರೆ, ದ್ವಿತೀಯಾರ್ಧ ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದೆ.

  ಒಟ್ಟಿನಲ್ಲಿ ಕೊಟ್ಟ ಕಾಸಿಗಂತೂ ಮೋಸವಿಲ್ಲ. ರಣದೀಪ್ ಹೂಡಾ ಮೌನದಿಂದಲೇ ಸಸ್ಪೆನ್ಸ್ ಬಿಲ್ಡಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ವಿಶಿಷ್ಟವಾದ ಅಭಿನಯ ವಿಬಿನ್ನವಾಗಿದೆ. ಅದಿತಿ ರಾವ್ ಹೈದರಿ ಭಾವನಾತ್ಮಕ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ, ಹೊಸ ನಟಿ ಸಾರಾ ಲೋರೆನ್ ಸೌಂದರ್ಯ ಪ್ರದರ್ಶನಕ್ಕಷ್ಟೆ ಸೀಮಿತವಾಗಿದ್ದಾರೆ. ಮತ್ತೆ ಮತ್ತೆ ನೋಡಬೇಕೆಂದು ಅನಿಸದಿದ್ದರೂ ಒಂದು ಬಾರಿ ನೋಡಿ ಆನಂದಿಸಲು ಅಡ್ಡಿಯಿಲ್ಲ.

  English summary
  Bollywood movie Murder 3 review. This suspense thriller murder mystery by debutant director Vishesh Bhatt (son of Mahesh Bhatt) has enough thrilling moments, twists and turns to keep the audience engaged.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X