»   » 'ರಾಮ್ ಲೀಲಾ' ವಿಮರ್ಶೆ: ಡೋಂಟ್ ಮಿಸ್

'ರಾಮ್ ಲೀಲಾ' ವಿಮರ್ಶೆ: ಡೋಂಟ್ ಮಿಸ್

By: ರವಿಕಿಶೋರ್
Subscribe to Filmibeat Kannada

ಈ ಹಿಂದೆ ಈ ರೀತಿಯ ಕಥೆಗಳು ಸಾಕಷ್ಟು ಬಂದಿವೆ. ರೋಮಿಯೋ ಜೂಲಿಯಟ್, ಲೈಲಾ ಮಜ್ನು, ಹೀರ್ ರಾಂಜಾ...ಮುಂತಾದವು. ಇದೂ ಒಂದು ರೀತಿ ಅದೇ ರೀತಿಯ ಕೆಟಗರಿಗೆ ಸೇರುವ ಕಥಾನಕ. ಆದರೆ ಇಲ್ಲಿನ ಕಥೆ ಗನ್ ಮತ್ತು ಪ್ರತೀಕಾರದ ಹಿನ್ನೆಲೆಯಲ್ಲಿ ಸಾಗುತ್ತದೆ.

ಚಿತ್ರದ ನಿರೂಪಣೆಯಿಂದಾಗಿ ನೇರವಾಗಿ ಹೃದಯಕ್ಕೆ ತಾಗುತ್ತದೆ. ಈ ಹೈ ವೋಲ್ಟೇಜ್ ಡ್ರಾಮಾದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪ್ರೇಮದ ಬಗ್ಗೆ ಹೊಸ ನಂಬಿಕೆ ಹುಟ್ಟಿಸುತ್ತಾರೆ. ಎರಡು ಮುಖ್ಯಪಾತ್ರಗಳ ಸುತ್ತುವ ಕಥೆ ಇದಾಗಿದೆ. ರಾಮ್ (ರಣವೀರ್ ಸಿಂಗ್) ಹಾಗೂ ಲೀಲಾ (ದೀಪಿಕಾ) ನಡುವಿನ ಅಮರ ಮಧುರ ಪ್ರೇಮ ಕಥೆಯೇ ರಾಮ್ ಲೀಲಾ.

ಹಳ್ಳಿಯ ಸೋಮಾರಿ ಯುವಕನಾಗಿ ರಣವೀರ್ ಸಿಂಗ್ ಅಮೋಘ ಅಭಿನಯ ನೀಡಿದ್ದಾರೆ. ಹಳ್ಳಿಯ ಜೂಲಿಯಟ್ ಆಗಿ ಲೀಲಾ ಪಾತ್ರದಲ್ಲಿ ದೀಪಿಕಾ ಅವರದು ಅಷ್ಟೇ ಅಮೋಘ ಅಭಿನಯ. ಎರಡು ಕುಟುಂಬಗಳ ನಡುವಿನ ದ್ವೇಷದ ದಳ್ಳಿರಿಯಲ್ಲಿ ಇಬ್ಬರು ಪ್ರೇಮಿಗಳು ನಲುಗುತ್ತಾರೆ.

ಬಿಗಿ ನಿರೂಪಣೆಯಲ್ಲಿ ಸಾಗುವ ಕಥೆ

ಸಂಜಯ್ ಲೀಲಾ ಭನ್ಸಾಲಿ ಅವರು ಚಿತ್ರಕಥೆ ಮೇಲೆ ಬಿಗಿ ಹಿಡಿತ ಬಿಟ್ಟಿಲ್ಲ. ಆದರೆ ಕೊನೆಕೊನೆಗೆ ಕಥೆಯ ಮೇಲೆ ಹಿಡಿತ ಸ್ವಲ ಸಡಿಲಗೊಂಡತೆ ಅನ್ನಿಸಿದರೂ ಹೇಗೋ ಮ್ಯಾನೇಜ್ ಮಾಡಿದ್ದಾರೆ.

ದೃಶ್ಯ ಹಾಗೂ ಶ್ರವ್ಯ ವೈಭವದ ಸಂಗಮ

ಇದೊಂದು ದುರಂತ ಪ್ರೇಮಕಥೆಯಾದರೂ ಸಂಜಯ್ ಲೀಲಾ ಭನ್ಸಾಲಿ ಅವರು ಅದನ್ನು ತೆರೆಗೆ ತಂದಿರುವ ರೀತಿ ಭಿನ್ನವಾಗಿದೆ. ಚಿತ್ರದಲ್ಲಿ ನಡುನಡುವೆ ಜುಳುಜುಳು ಎಂದು ಹರಿಯುವ ಸಂಗೀತವೂ ಅಷ್ಟೇ ಸೊಗಸಾಗಿ ಮೂಡಿಬಂದಿದೆ. ದೃಶ್ಯ ಹಾಗೂ ಶ್ರವ್ಯ ವೈಭವದ ಸಂಗಮದಂತೆ ಚಿತ್ರ ಕಾಣುತ್ತದೆ.

ದೀಪಿಕಾ ಸಹ ಅಷ್ಟೇ ಸರಳ ಸೊಗಸು

ಇದೆಲ್ಲಕ್ಕೂ ಸಾಥ್ ನೀಡಿದಂತೆ ದೀಪಿಕಾ ಹಾಗೂ ರಣವೀರ್ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ರಣವೀರ್ ಅವರಂತೂ ಪ್ರಶಸ್ತಿಗೆ ಯೋಗ್ಯವಾದ ಅಭಿನಯ ನೀಡಿದ್ದಾರೆ. ದೀಪಿಕಾ ಸಹ ಅಷ್ಟೇ ಸರಳ ಸೊಗಸು. ಅವರ ವಸ್ತ್ರ, ಉಡುಗೆ ತೊಡುಗೆ ಕಣ್ಣಿಗೆ ಹಬ್ಬ.

ಭನ್ಸಾರಿ ಅವರು ನಿಜಕ್ಕೂ ಪ್ರೀತಿಯ ಬಲೆ ನೇಯ್ದಿದ್ದಾರೆ

ತೆರೆಯ ಮೇಲೆ ಕಾಣಿಸಿಕೊಳ್ಳುವಷ್ಟೂ ಸಮಯ ದೀಪಿಕಾ ಎಲ್ಲರ ಕಣ್ಣು ಕುಕ್ಕುತ್ತಾರೆ. ಭನ್ಸಾರಿ ಅವರು ನಿಜಕ್ಕೂ ಪ್ರೀತಿಯ ಬಲೆ ನೇಯ್ದಿದ್ದಾರೆ. ಅದರ ಜೊತೆಗೆ ಗೂಂಡಾಗಿರಿ, ಪೈಪೋಟಿ ಸನ್ನಿವೇಶಗಳು ಅಷ್ಟೇ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ.

English summary
Bollywood film Ram Leela review. Bhansali creates a web of romance, hooliganism and rivalry, all woven beautifully and with great elan. Ram Leela is visually extravagant, sporting an amazing variety of colours, lighting and visual flair, showing off breathtaking and intricate dance sequences and exuding catchy and melodic music.
Please Wait while comments are loading...