twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಸೈಫ್ 'ಬುಲೆಟ್ ರಾಜ' ಭರ್ಜರಿ ಸವಾರಿ

    By ಜೇಮ್ಸ್ ಮಾರ್ಟಿನ್
    |

    ಗ್ಯಾಂಗ್ಸ್ ಆಫ್ ವಸ್ಸೇಪುರ್ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ಜಗತ್ತನ್ನು ಪರಿಚಯ ಮಾಡಿಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ತಿಗ್ಮಂಶು ಧೂಲಿಯಾ ಅವರ ಹೊಚ್ಚ ಹೊಸ ಚಿತ್ರ ಬುಲೆಟ್ ರಾಜ ಭರ್ಜರಿ ಓಟ ಕಾಣುತ್ತಿದೆ. ಛೋಟೆ ನವಾಬ ಸೈಫ್ ಅಲಿ ಖಾನ್ ಬಹು ದಿನಗಳ ನಂತರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

    ಓಂಕಾರ ಚಿತ್ರದ ನಂತರ ವಿಶಿಷ್ಟ ಪಾತ್ರ ಸಿಕ್ಕಿದ ಖುಷಿಯಲ್ಲಿ ಸೈಫ್ ಅದ್ಭುತವಾಗಿ ನಟಿಸಿದ್ದರೆ, ಸೈಫ್ ಜೋಡಿಯಾಗಿ ಬಹುಬೇಡಿಕೆಯ ನಟಿ ಸೋನಾಕ್ಷಿ ಸಿನ್ಹಾ ಮೊದಲ ಬಾರಿಗೆ ಸೈಫ್ ಜೋಡಿಯಾಗಿ ಮಿಂಚಿದ್ದಾರೆ. ತಿಗ್ಮಂಶು ಸಿನಿಮಾ ಎಂದ ಮೇಲೆ ಡೈಲಾಗ್ ಗಳ ಬಗ್ಗೆ ಹೇಳಲೇಬೇಕು.

    ಬಾಲಿವುಡ್ ನ ಸದ್ಯದ ಹಾಟ್ ತಾರೆ ಸೋನಾಕ್ಷಿ ಜತೆ ಸೈಫ್ ರೋಮ್ಯಾನ್ಸ್, ಸೈಫ್ ಸಾಹಸ ದೃಶ್ಯಗಳು, ಪೊಲೀಸ್ ಅಧಿಕಾರಿಯಾಗಿ ವಿದ್ಯುತ್ ಜಮ್ವಾಲ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

    ಉತ್ತರಪ್ರದೇಶದ ಭೂಗತ ಜಗತ್ತಿನ ಕಥೆಯುಳ್ಳ ಚಿತ್ರದಲ್ಲಿ ರಾಜಕೀಯ-ಉದ್ಯಮಿಗಳ ತಂತ್ರಗಾರಿಕೆ ಕೂಡಾ ಕಾಣ ಸಿಗುತ್ತದೆ. ಗ್ರಾಮೀಣ ಭಾಗದ ರೌಡಿಗಳು, ಡಾನ್ ಗಳು ಅವರ ಮ್ಯಾನರಿಸಂ, ಕಚ್ಚಾ ಡೈಲಾಗ್ ಗಳು ಮೊದಲ ನೋಟಕ್ಕೆ ಸಿನಿರಸಿಕರ ಮನಸೂರೆಗೊಳ್ಳುತ್ತದೆ. ಜಿಮ್ಮಿ ಶೆರ್ಗಲ್, ಚಂಕಿ ಪಾಂಡೆ, ಕಿಶನ್, ಗುಲ್ಶನ್ ಗ್ರೋವರ್ ಸೇರಿದಂತೆ ಬಹು ತಾರಾಗಣ ಇರುವ ಈ ಚಿತ್ರದ ಕಥೆ, ಅಭಿನಯ ಮುಂತಾದ ವರ್ಗಗಳ ಬಗ್ಗೆ ಮುಂದೆ ಓದಿ

    ಚಿತ್ರ ಕಥೆ ಏನು?

    ಚಿತ್ರ ಕಥೆ ಏನು?

    ರಾಜ ಮಿಶ್ರಾ ಎಂಬ ಜನಸಾಮಾನ್ಯನೊಬ್ಬ ಬುಲೆಟ್ ರಾಜ ಆಗಿ ಮಾರ್ಪಾಟಾಗಿ ಕುಖ್ಯಾತ ಗ್ಯಾಂಗ್ ಸ್ಟರ್ ಎನಿಸಿಕೊಳ್ಳುವ ಕಥೆ ಇದಾಗಿದೆ. ನಾಯಕ ಸೈಫ್ ಗೆ ನಂಬುಗೆಯ ಗೆಳೆಯ, ಪ್ರೀತಿಸುವ ಹುಡುಗಿ ತನ್ನದೇ ಆದ ರೂಲ್ಸ್ ಯಾರಿಗೂ ಹೆದರದ ಜೀವ. ಸಾಹಸ ದೃಶ್ಯಗಳ ಜತೆಗೆ ಸೋನಾಕ್ಷಿ ಜತೆ ಸೈಫ್ ಗೆ ರೋಮ್ಯಾನ್ಸ್ ಸೀನ್ ಗಳೂ ಇವೆ. ಪೂರಕ ಪಾತ್ರಗಳ ಜತೆಗೆ ಗ್ಯಾಂಗಸ್ಟರ್ ಲವ್ ಸ್ಟೋರಿ ಹೇಗೆ ದೊಡ್ಡ ಪ್ರಾಬ್ಲಂ ಆಗುತ್ತೆ ಎಂಬುದು ಮುಂದಿನ ಕಥೆ

    ಸೈಫ್ ಸೂಪರ್

    ಸೈಫ್ ಸೂಪರ್

    ಓಂಕಾರ ಚಿತ್ರದ ಲಂಗ್ಡಾ ತ್ಯಾಗಿ ಪಾತ್ರ ಮತ್ತೊಮ್ಮೆ ಅವತರಿಸಿದ್ದಂತೆ ಸೈಫ್ ನಟಿಸಿದ್ದಾರೆ. ಗ್ರಾಮೀಣ ಭಾಗದ ಗೂಂಡಾಗಳ ಮ್ಯಾನರೀಸಂ, ಹಾಸ್ಯ ಸನ್ನಿವೇಶಗಳಲ್ಲಿ ಟೈಮಿಂಗ್ ಸೂಪರ್. ಉತ್ತಮ ಫಾರ್ಮ್ ನಲ್ಲಿರುವ ಸೋನಾಕ್ಷಿಗೆ ಈ ಚಿತ್ರದಲ್ಲೂ ಮಿಂಚಿದ್ದಾರೆ. ವಿದ್ಯುತ್ ಜಮಾಲ್ ಪಾತ್ರ, ರವಿ ಕಿಶನ್ ಪಾತ್ರ ಪ್ರೇಕ್ಷಕರು ಮರೆಯುವುದು ಕಷ್ಟ.

    ತಿಗ್ಮಂಷು ಬಗ್ಗೆ

    ತಿಗ್ಮಂಷು ಬಗ್ಗೆ

    ದಿಲ್ ಸೆ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದ ತಿಗ್ಮಂಷು ನಟ, ನಿರ್ಮಾಪಕ, ನಿರ್ದೇಶಕ, ಸಾಹಿತಿಯಾಗಿ ಹೆಸರುವಾಸಿ. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ ಆಫ್ ವಸ್ಸೆಪುರ್ ಚಿತ್ರದಲ್ಲಿ ರಾಮಧೀರ್ ಸಿಂಗ್ ಪಾತ್ರದಲ್ಲಿ ಮಿಂಚಿದ್ದರು.

    ಇರ್ಫಾನ್ ಖಾನ್ ಅಭಿನಯದ ಭಾರತೀಯ ಅಥ್ಲೀಟ್ ಬಗ್ಗೆ 'ಪಾನ್ ಸಿಂಗ್ ತೋಮರ್' ಚಿತ್ರ ನಿರ್ದೆಶಿಸಿ ರಾಷ್ಟ್ರಪ್ರಶಸ್ತಿ ಗಳಿಸಿದರು. ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್ ಎರಡು ಭಾಗ ಕೂಡಾ ಜನಪ್ರಿಯತೆ ಗಳಿಸಿತ್ತು.ಕಿರುತೆರೆಯಲ್ಲಿ ಜೀ ಟಿವಿಯ ನಾಯ ದೌರ್, ಸ್ಟಾರ್ ಪ್ಲಸ್ ಮುಸಾಫೀರ್, ಫುರ್ಸತ್ ಮೇ ಮುಂತಾದ ಸರಣಿಗಳನ್ನು ನಿರ್ದೇಶಿಸಿದ ತಿಗ್ಮಂಷು ಮತ್ತೊಮ್ಮೆ ವಿಭಿನ್ನ ಚಿತ್ರ ನೀಡಿ ಗೆದ್ದಿದ್ದಾರೆ.
    ಹೊಸ ಜೋಡಿ ಮೋಡಿ

    ಹೊಸ ಜೋಡಿ ಮೋಡಿ

    ದಬ್ಬಾಂಗ್ ಹುಡುಗಿ ಸೋನಾಕ್ಷಿ ಸಿನ್ಹಾ ಸದ್ಯಕ್ಕೆ ಬಾಲಿವುಡ್ ನ ಬಹುಬೇಡಿಕೆ ನಟಿ. ಸೈಫ್ ಮಾರುಕಟ್ಟೆ ಮತ್ತೆ ಆರಂಭವಾಗಬೇಕಿದೆ. ಆದರೆ, ಈ ಚಿತ್ರದ ನಂತರ ಸೈಫ್ ಜತೆ ಸೋನಾಕ್ಷಿ ಚಿತ್ರ ಹೆಚ್ಚಾಗ ಬಹುದು. ಇಬ್ಬರ ನಡುವಿನ ಹೊಂದಾಣಿಕೆ ಸೂಪರ್ ಆಗಿದೆ.

    ಗುಲ್ಶನ್ ಗ್ರೋವರ್, ಚಂಕಿ ಪಾಂಡೆ ಹಾಗೂ ಜಿಮ್ಮಿ ಶೆರ್ಗಲ್ ಸಿಕ್ಕ ಪಾತ್ರವನ್ನು ಸೊಗಸಾಗಿ ನಿಭಾಯಿಸಿ ಬುಲೆಟ್ ರಾಜನ ವೇಗಕ್ಕೆ ಇಂಬು ನೀಡಿದ್ದಾರೆ.
    ಸಾಹಸ, ಡೈಲಾಗ್

    ಸಾಹಸ, ಡೈಲಾಗ್

    ಚಿತ್ರದಲ್ಲಿ ಸಾಹಸ ಹಾಗೂ ಡೈಲಾಗ್ ಪ್ರಮುಖವಾಗಿ ಎಲ್ಲರನ್ನು ಸೆಳೆಯುತ್ತದೆ. Aayenge toh garmi badjayenge, Auratho ki respect karthe hain ಮುಂತಾದ ಡೈಲಾಗ್ ಗಳಿಗೆ ಶಿಳ್ಳೆ ಬಿದ್ದಿದೆ.

    ಬ್ಯಾಡ್ ಮ್ಯಾನ್ ಬ್ಯಾಕ್

    ಬ್ಯಾಡ್ ಮ್ಯಾನ್ ಬ್ಯಾಕ್

    ಬಾಲಿವುಡ್ ನ ಹೆಸರಾಂತ ಖಳನಟ ಗುಲ್ಶನ್ ಗ್ರೋವರ್ ಒಂದು ಕಾಲದಲ್ಲಿ ರೇಪ್ ಸೀನ್ ಸ್ಪೆಷಲಿಸ್ಟ್ ಎಂದೇ ಕುಖ್ಯಾತಿ ಗಳಿಸಿದ್ದ ಗುಲ್ಶನ್ ಗ್ರೋವರ್ ಈ ಚಿತ್ರದಲ್ಲಿ ಪ್ರಮುಖ ಖಳನಾಗಿ ಕಾಣಿಸಿಕೊಂಡು ಗೆದ್ದಿದ್ದಾರೆ.

    ರವಿ ಕಿಶನ್ ಹಾಗೂ ಸಾಹಸ ಕಲಾವಿದ ವಿದ್ಯುತ್ ಪಾತ್ರಕ್ಕೆ ತುಂಬಾ ಸ್ಕೋಪ್ ಇದೆ. ಎಲ್ಲಾ ಪುರುಷ ಪಾತ್ರಧಾರಿಗಳಿಗೆ ಮೀಸೆ ಇರಲಿದೆಯಂತೆ. ಜಿಮ್ಮಿ ಹಾಗೂ ಸೈಫ್ ಜೋಡಿ ಅಭಿಮಾನಿಗಳನ್ನು ರಂಜಿಸಿದೆ

    English summary
    After winning acclodes for Gangs Of Wasseypur, filmmaker Tigmanshu Dhulia is back with his hi-octane drama flick Bullet Raja, that features Saif Ali Khan and Sonakshi Sinha in the leads. Read Bullet Raja movie review.
    Friday, November 29, 2013, 11:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X