»   » ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ

ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ

Posted By:
Subscribe to Filmibeat Kannada

'ರೌಡಿ ಹೆಂಡತಿ ಯಾವತ್ತಿದ್ದರೂ ವಿಧವೆ.!' ಎಂಬ ಮಾತು ಕನ್ನಡದ ಹಲವಾರು ಸಿನಿಮಾಗಳಲ್ಲಿ ಸತ್ಯವಾಗಿದೆ. ರೌಡಿಸಂನಿಂದ ಯಾರೂ ಹೊರಬರಲು ಸಾಧ್ಯವಿಲ್ಲ ಎಂಬ ಸಂದೇಶ ಕೂಡ ಅದೇ ಚಿತ್ರಗಳಲ್ಲಿವೆ. ಹೀಗಿದ್ದರೂ, ಎಲ್ಲರಂತೆ ಯೋಚಿಸದ, ನವ ನಿರ್ದೇಶಕ ರಾಘವೇಂದ್ರ ಹೆಗಡೆ ಸೆಪರೇಟ್ ರೂಟ್ ನಲ್ಲಿ ಸಾಗಿದ್ದಾರೆ.


ರೌಡಿಸಂ ಹಾಗೂ ಮದುವೆ....ಎರಡನ್ನೂ ಕಾಮಿಡಿ ಟ್ರ್ಯಾಕ್ ನಲ್ಲಿ ಹೇಳಿರುವ ನಿರ್ದೇಶಕರ ಪ್ರಯತ್ನ ಓಕೆ. ಆದರೆ, ಅದನ್ನ ತೆರೆಮೇಲೆ ಗಟ್ಟಿಯಾಗಿ ಕಟ್ಟಿಕೊಡುವಲ್ಲಿ ಸಿಕ್ಕಾಪಟ್ಟೆ ಸರ್ಕಸ್ ಮಾಡಿದಂತಿದೆ.

'ಜಗ್ಗುದಾದಾ' ಚಿತ್ರದ ಸಂಪೂರ್ಣ ವಿಮರ್ಶೆ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಓದಿರಿ....


Rating:
3.0/5

ಚಿತ್ರ - ಜಗ್ಗುದಾದಾ
ಕಥೆ-ನಿರ್ಮಾಣ-ನಿರ್ದೇಶನ - ರಾಘವೇಂದ್ರ ಹೆಗಡೆ
ಚಿತ್ರಕಥೆ - ಯೂನಿಸ್
ಸಂಕಲನ - ಪಂಕಜ್ ಶರ್ಮಾ
ಸಂಗೀತ ನಿರ್ದೇಶನ - ವಿ.ಹರಿಕೃಷ್ಣ
ತಾರಾಗಣ - ದರ್ಶನ್, ದೀಕ್ಷಾ ಸೇಠ್, ರವಿಶಂಕರ್, ಸೃಜನ್ ಲೋಕೇಶ್, ಶರತ್ ಲೋಹಿತಾಶ್ವ, ಊರ್ವಶಿ, ಅನಂತ್ ನಾಗ್, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ರಚಿತಾ ರಾಮ್, ದೀಪಿಕಾ ಕಾಮಯ್ಯ, ಗಾಯತ್ರಿ ಐಯ್ಯರ್, ವಿಶಾಲ್ ಹೆಗ್ಡೆ ಮತ್ತು ಇತರರು
ಬಿಡುಗಡೆ - ಜೂನ್ 10, 2016


ಶಂಕರ್ ದಾದಾಗೆ ಏಕೈಕ ಆಸೆ.!

ಇಡೀ ಬೆಂಗಳೂರು ಭೂಗತ ಲೋಕಕ್ಕೆ ದೊರೆ ಆಗಿರುವ ಶಂಕರ್ ದಾದಾ (ರವಿಶಂಕರ್)ಗೆ, ತನ್ನಂತೆ ತನ್ನ ಮೊಮ್ಮಗ ಜಗ್ಗು (ದರ್ಶನ್) 'ದಾದಾ' ಆಗದೆ, ಸದ್ಗುಣ, ಸಂಪನ್ನ, ಸುಶೀಲ ಹುಡುಗಿ ಜೊತೆ ವಿವಾಹವಾಗಬೇಕೆಂಬ ಏಕೈಕ ಆಸೆ.


ಪ್ರೇತವಾಗುವ ತಾತ.!

ಸಾಯುವ ಮುನ್ನ ಮೊಮ್ಮಗನಿಂದ (ಜಗ್ಗುದಾದಾ) ಸಂಪ್ರದಾಯಸ್ಥ ಹೆಣ್ಣು ಮಗಳನ್ನು ವಿವಾಹವಾಗುವಂತೆ ಭಾಷೆ ತೆಗೆದುಕೊಳ್ಳುವ ತಾತಾ, ಸತ್ತ ಮೇಲೆ ದೆವ್ವದ ರೂಪದಲ್ಲಿ ಮೊಮ್ಮಗನನ್ನು 'ಮದುವೆ' ಹೆಸರಲ್ಲಿ ಕಾಡುತ್ತಾನೆ. ಅಲ್ಲಿಂದ ಶುರು 'ಸಂಪ್ರದಾಯಸ್ತ' ಹುಡುಗಿಗಾಗಿ ಹುಡುಕಾಟ.


'ಜಗ್ಗುದಾದಾ' ಸರ್ಕಸ್ ಶುರು.!

ಸದ್ಗುಣ ಹುಡುಗಿಯನ್ನು ಪಡೆಯಲು 'ಜಗ್ಗುದಾದಾ' ಹಾಕುವ ವೇಷ, ಮಾಡುವ ಸರ್ಕಸ್, ತೆಗೆದುಕೊಳ್ಳುವ ರಿಸ್ಕ್ ಬಾಕಿ ಸ್ಟೋರಿ. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿರಿ....


ದರ್ಶನ್ ದಾದಾಗಿರಿ ಹೇಗಿದೆ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ್ಫಾಮೆನ್ಸ್ ಚೆನ್ನಾಗಿದೆ. ಅಬ್ಬರದ ಡೈಲಾಗ್ಸ್, ಭರ್ಜರಿ ಫೈಟ್ಸ್ ನಲ್ಲಿ ದರ್ಶನ್ ಗಮನ ಸೆಳೆಯುತ್ತಾರೆ.


ದೀಕ್ಷಾ ಸೇಠ್ ಅಭಿನಯದ ಬಗ್ಗೆ...

ದರ್ಶನ್ ಗೆ ಮೊದಲ ಬಾರಿ ಜೋಡಿಯಾಗಿರುವ ದೀಕ್ಷಾ ಸೇಠ್ ತೆರೆಮೇಲೆ ಸುಂದರ. ಅಭಿನಯದಲ್ಲಿ ಓಕೆ.


ಅಭಿನಯ ಚತುರ ರವಿಶಂಕರ್

ಯಾವುದೇ ಪಾತ್ರ ಕೊಟ್ಟರೂ, ಅದನ್ನ ಸಲೀಸಾಗಿ ನಿಭಾಯಿಸುವ ಪ್ರತಿಭೆ ರವಿಶಂಕರ್ ಗೆ ಇದೆ ಎನ್ನುವುದಕ್ಕೆ 'ಜಗ್ಗುದಾದಾ' ಸಿನಿಮಾ ಮತ್ತೊಂದು ಉದಾಹರಣೆ. ಅಜ್ಜ ಶಂಕರ್ ದಾದಾ ಪಾತ್ರ ನಿರ್ವಹಿಸಿರುವ ರವಿಶಂಕರ್ ಬ್ಲಾಕ್ ಮೇಲ್ ಮಾಡುವ ಪ್ರೇತವಾಗಿ ಇಷ್ಟವಾಗುತ್ತಾರೆ.


ಚಿತ್ರಕ್ಕೆ ಇವರೆಲ್ಲಾ ಕಳೆ.!

ಅನಂತ್ ನಾಗ್, ಅಚ್ಯುತ್ ಕುಮಾರ್, ಊರ್ವಶಿ, ಸೃಜನ್ ಲೋಕೇಶ್, ವಿಶಾಲ್ ಹೆಗಡೆ ಅಭಿನಯ ಅಚ್ಚುಕಟ್ಟಾಗಿದೆ.


ಇವರೆಲ್ಲಾ ಆಟಕ್ಕುಂಟ್ಟು, ಲೆಕ್ಕಕ್ಕಿಲ್ಲ.!

ಗಾಯತ್ರಿ ಐಯ್ಯರ್ ಆಗೊಮ್ಮೆ ಈಗೊಮ್ಮೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೆ, ರಚಿತಾ ರಾಮ್ ಮತ್ತು ದೀಪಿಕಾ ಕಾಮಯ್ಯ ಒಂದು ಸೀನ್ ಗೆ ಮಾತ್ರ ಸೀಮಿತ.


ಕಾಮಿಡಿ ಅಷ್ಟಕಷ್ಟೆ.!

ಸಾಧು ಕೋಕಿಲ ಕೂಡ ಹೀಗೆ ಬಂದು ಹಾಗೆ ಹೋಗುತ್ತಾರೆ. ಬುಲೆಟ್ ಪ್ರಕಾಶ್ ತೆರೆಮೇಲೆ ಬಂದಾಗ ಸ್ವಲ್ಪ ಕಚಗುಳಿ ಇಡುತ್ತಾರೆ. ನಿಜ ಹೇಳ್ಬೇಕಂದ್ರೆ, ಸೃಜನ್ ಲೋಕೇಶ್, ಸಾಧು ಕೋಕಿಲ ಹಾಗೂ ಬುಲೆಟ್ ಪ್ರಕಾಶ್ ರಂತಹ ಕಾಮಿಡಿ ಕಿಲಾಡಿಗಳು ಇದ್ದರೂ, ಅವರನ್ನ ನಿರ್ದೇಶಕರು ಸದ್ಬಳಕೆ ಮಾಡಿಕೊಂಡಿಲ್ಲ. ಹೀಗಾಗಿ, 'ಜಗ್ಗುದಾದಾ' ನೋಡುವ ಪ್ರೇಕ್ಷಕರು ನಗಲು ಸ್ವಲ್ಪ ಕಷ್ಟ ಪಡಬೇಕು.


ಫಸ್ಟ್ ಹಾಫ್ ಬರೀ ಬಿಲ್ಡಪ್.!

ದರ್ಶನ್ ಇಮೇಜ್ ಗೆ ತಕ್ಕಹಾಗೆ, 'ಜಗ್ಗುದಾದಾ' ಚಿತ್ರದಲ್ಲಿ ಬಿಲ್ಡಪ್ ಹೆಚ್ಚು. ದರ್ಶನ್ ಎಂಟ್ರಿಕೊಟ್ಟಾಗ ಬಂಡೆ ಸಿಡಿದು ಪೀಸ್ ಪೀಸ್ ಆಗೋದು, ಕೈಯಲ್ಲಿ ಅಚ್ಚಾಗಿರುವ ಹುಲಿ ಘರ್ಜಿಸುವುದು, ಅಬ್ಬರದ ಡೈಲಾಗ್ ಹೊಡೆಯುವುದು, ಪಂಚ್ ಕೊಟ್ಟರೆ ಎದುರಾಳಿ ಉಡೀಸ್ ಆಗುವುದು...ಇವೆಲ್ಲಾ ಮೊದಲಾರ್ಧದಲ್ಲಿ ಕಾಮನ್.


ಕೆಲವು ಕಡೆ ಬಂಡಲ್.!

ಪೂಣೆಯ ಹೊಟೇಲ್ ಗೆ ಹೋಗಲು ನಿರ್ಧರಿಸುವ ಜಗ್ಗುದಾದಾ (ದರ್ಶನ್) ಹಾಗೂ ಗೌರಿ (ದೀಕ್ಷಾ ಸೇಠ್) ಬರುವುದು ಮಾತ್ರ ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ವರ್ಲ್ಡ್ ಟ್ರೇಡ್ ಸೆಂಟರ್ ಗೆ..! ಹೀಗೇ, 'ಜಗ್ಗುದಾದಾ' ಚಿತ್ರದ ಕಥೆ ಬಹುತೇಕ ನಡೆಯುವುದು ಮುಂಬೈ-ಪೂಣೆಯಲ್ಲಿ. ಆದರೆ ಕೆಲವು ಕಡೆ ಮಾತ್ರ ಬೆಂಗಳೂರನ್ನು ತೋರಿಸಿ ಪ್ರೇಕ್ಷಕರನ್ನ ಚಿತ್ರತಂಡ ಫೂಲ್ ಮಾಡಿದೆ.


ಟೆಕ್ನಿಕಲಿ ಸಿನಿಮಾ ಹೇಗಿದೆ.?

'ಜಗ್ಗುದಾದಾ' ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಕ್ಯಾಮರಾ ವರ್ಕ್. ವಿದೇಶಗಳಲ್ಲಿ ಚಿತ್ರೀಕರಣಗೊಂಡಿರುವ 'ಜಗ್ಗುದಾದಾ' ಹಾಡುಗಳು ಪ್ರೇಕ್ಷಕರ ಕಣ್ಣಿಗೆ ಹಬ್ಬ. ಫಸ್ಟ್ ಹಾಫ್ ನಲ್ಲಿ ಸಂಕಲನ ಸ್ವಲ್ಪ ಚುರುಕಾಗಿರಬೇಕಿತ್ತು.


ಮಾಸ್ ಹಾಗೂ ಕ್ಲಾಸ್ ಅಭಿಮಾನಿಗಳು ನೋಡಬಹುದು.!

'ಜಗ್ಗುದಾದಾ' ಚಿತ್ರವನ್ನ ಬರೀ ಮಾಸ್ ಅಭಿಮಾನಿಗಳು ಮಾತ್ರ ಅಲ್ಲ, ಕ್ಲಾಸ್ ಅಭಿಮಾನಿಗಳು ಕೂಡ ಫ್ಯಾಮಿಲಿ ಸಮೇತ ಕೂತು ನೋಡಬಹುದು.


ಫೈನಲ್ ಸ್ಟೇಟ್ ಮೆಂಟ್.!

ಮಾಸ್ ಮಸಾಲಾ ಮಿಕ್ಸ್ ಆಗಿರುವ ಅಪ್ಪಟ ಫ್ಯಾಮಿಲಿ ಎಂಟರ್ಟೇನಿಂಗ್ ಸಿನಿಮಾ 'ಜಗ್ಗುದಾದಾ'. ಅತಿಯಾದ ನಿರೀಕ್ಷೆ ಮಾಡದೆ, ಲಾಜಿಕ್ ಬಗ್ಗೆ ಹೆಚ್ಚು ಯೋಚಿಸದೆ ''ದರ್ಶನ್ ಅಭಿಮಾನಿಗಳು'' 'ಜಗ್ಗುದಾದಾ' ಚಿತ್ರವನ್ನ ನೋಡಬಹುದು.


ವಿಡಿಯೋ ನೋಡಿ...

'ಜಗ್ಗುದಾದಾ' ಚಿತ್ರದ ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಏನಂದ್ರು ಅಂತ ತಿಳಿಯಲು ಈ ವಿಡಿಯೋ ನೋಡಿ....ಲಿಂಕ್ ಇಲ್ಲಿದೆ....


English summary
Kannada Actor, Challenging Star Darshan starrer 'Jaggu Dada' movie has hit the screens today (June 10th). The movie is a treat for Darshan Fans. Complete review of the movie is here...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada