Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಮ್ಮ ಐ ಲವ್ ಯು' ವಿಮರ್ಶೆ: ಹೆಂಗಳೆಯರ ಮನಮಿಡಿಯುವ ಚಿತ್ರ
2016 ರಲ್ಲಿ ಬಿಡುಗಡೆ ಆದ ತಮಿಳಿನ 'ಪಿಚೈಕ್ಕಾರನ್' ಸಿನಿಮಾದ ರೀಮೇಕ್ ಆದರೂ, 'ಅಮ್ಮ ಐ ಲವ್ ಯು' ಚಿತ್ರವನ್ನ ಕನ್ನಡ ಮಣ್ಣಿನ ಸೊಗಡಿಗೆ ತಕ್ಕ ಹಾಗೆ ತಯಾರು ಮಾಡಲಾಗಿದೆ. ಅಮ್ಮ-ಮಗನ ಅನುಬಂಧ ಸಾರುವ 'ಅಮ್ಮ ಐ ಲವ್ ಯು' ಚಿತ್ರ ಹೆಂಗಳೆಯರ ಮನಮಿಡಿಯುವಲ್ಲಿ ಯಶಸ್ವಿ ಆಗಿದೆ.

ಕಥಾಹಂದರ
ಸಿದ್ದಾರ್ಥ್ ಶಿವಕುಮಾರ್ (ಚಿರಂಜೀವಿ ಸರ್ಜಾ).. ಅನ್ನಪೂರ್ಣ ಗ್ರೂಪ್ ಆಫ್ ಕಂಪನೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್. ವಿದೇಶದಲ್ಲಿ ಓದು ಮುಗಿಸಿ ಸ್ವದೇಶಕ್ಕೆ ವಾಪಸ್ ಆಗುವ ಕೋಟ್ಯಾಧಿಪತಿ ಸಿದ್ಧಾರ್ಥ್ ಗೆ ದೊಡ್ಡ ಆಘಾತ ಎದುರಾಗುತ್ತದೆ. ಪರಿಣಾಮ, ಭಿಕ್ಷೆ ಬೇಡುವ ಅನಿವಾರ್ಯತೆ ಸಿದ್ದಾರ್ಥ್ ಗೆ ಉಂಟಾಗುತ್ತದೆ.

ಭಿಕ್ಷೆ ಯಾಕೆ ಬೇಡಬೇಕು.?
ಅಕ್ಷರಶಃ ಕುಬೇರನಾಗಿರುವ ಸಿದ್ಧಾರ್ಥ್ ಭಿಕ್ಷೆ ಬೇಡುವುದೇಕೆ.? ಎಂಬುದೇ ಚಿತ್ರದ ಬಹುದೊಡ್ಡ ಸಸ್ಪೆನ್ಸ್. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ತಾಯಿಯ ಪ್ರಾಣ ಉಳಿಸಲು ಮಗ ಪಡುವ ಕಷ್ಟಗಳೇ 'ಅಮ್ಮ ಐ ಲವ್ ಯು' ಚಿತ್ರದ ಕಥಾನಕ.

ಚಿರಂಜೀವಿ ಸರ್ಜಾ ನಟನೆ ಹೇಗಿದೆ.?
ಕೋಟ್ಯಾಧೀಶ್ವರನಾಗಿದ್ದರೂ, ಭಿಕ್ಷೆ ಬೇಡಲು ಮುಂದಾಗುವ ಸಿದ್ಧಾರ್ಥ್ ಪಾತ್ರಕ್ಕೆ ನಟ ಚಿರಂಜೀವಿ ಸರ್ಜಾ ಜೀವ ತುಂಬಿದ್ದಾರೆ. ಕೆಲ ಸನ್ನಿವೇಶಗಳಲ್ಲಂತೂ ಪ್ರೇಕ್ಷಕರ ಕಣ್ಣಾಲಿಗಳನ್ನು ಚಿರಂಜೀವಿ ಸರ್ಜಾ ತೇವ ಗೊಳಿಸುತ್ತಾರೆ. ಹಲವಾರು ಫ್ಲಾಪ್ ಚಿತ್ರಗಳ ನಂತರ, ಚಿರಂಜೀವಿ ಸರ್ಜಾ 'ಅಮ್ಮ ಐ ಲವ್ ಯು'ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

'ಅಮ್ಮ'ನಾಗಿ ಸಿತಾರ
ಸಿದ್ಧಾರ್ಥ್ ಅಮ್ಮನಾಗಿ ಸಿತಾರ ಅಭಿನಯ ಅಚ್ಚುಕಟ್ಟಾಗಿದೆ. ಇನ್ನೂ ನಾಯಕಿ ಆಗಿ ಕಾಣಿಸಿಕೊಂಡಿರುವ ನಿಶ್ಚಿಕಾ ನಾಯ್ದು ಗಮನ ಸೆಳೆಯುತ್ತಾರೆ. ಆಗಾಗ ಕಾಣಿಸಿಕೊಳ್ಳುವ ಚಿಕ್ಕಣ್ಣ ಹಾಗೂ ಬಿರಾದರ್ ಹಾಸ್ಯದ ಹೊನಲನ್ನೇ ಹರಿಸುತ್ತಾರೆ. 'ಜಿಪುಣ'ನಾಗಿ ಪ್ರಕಾಶ್ ಬೆಳವಾಡಿ ಅಭಿನಯ ಚೆನ್ನಾಗಿದೆ. ಪುಟ್ಟ ಪಾತ್ರವಾದರೂ ಗಿರಿ ದ್ವಾರಕೀಶ್ ಮಿಂಚುತ್ತಾರೆ.

ಟೆಕ್ನಿಕಲಿ ಸಿನಿಮಾ ಹೇಗಿದೆ.?
ಚಿತ್ರದ ನಾಯಕ ಶ್ರೀಮಂತನಾಗಿರುವುದರಿಂದ ಸಿನಿಮಾದಲ್ಲಿ ಆತನ ವೈಭೋಗಕ್ಕೇನೂ ಕಮ್ಮಿ ಇಲ್ಲ. ಸಿನಿಮಾದ ಮೇಕಿಂಗ್ ಚೆನ್ನಾಗಿದೆ. ಪ್ರತಿಯೊಂದು ಶಾಟ್ ಮೇಲೂ ನಿರ್ದೇಶಕ ಕೆ.ಎಂ.ಚೈತನ್ಯ ಗಮನ ಹರಿಸಿರುವುದು ತೆರೆಮೇಲೆ ಎದ್ದು ಕಾಣುತ್ತದೆ. ಗುರುಕಿರಣ್ ಸಂಗೀತ ಸಂಯೋಜಿಸಿರುವ ಹಾಡುಗಳು ಸಿನಿಮಾದ ಪ್ಲಸ್ ಪಾಯಿಂಟ್.

ಖಂಡಿತ ಬೋರ್ ಆಗಲ್ಲ
'ಅಮ್ಮ ಐ ಲವ್ ಯು' ರೀಮೇಕ್ ಚಿತ್ರವಾದರೂ, ಕನ್ನಡ ನೇಟಿವಿಟಿಗೆ ತಕ್ಕ ಹಾಗಿದೆ. ತಮಿಳಿನಲ್ಲಿ ನೀವು 'ಪಿಚೈಕ್ಕಾರನ್' ನೋಡಿಲ್ಲ ಅಂದ್ರೆ, 'ಅಮ್ಮ ಐ ಲವ್ ಯು' ಚಿತ್ರವನ್ನ ನೀವು ಆರಾಮಾಗಿ ನೋಡಬಹುದು. ಒಂದ್ವೇಳೆ ತಮಿಳು ಚಿತ್ರವನ್ನ ನೋಡಿದ್ರೂ, ಅಮ್ಮ ಮಗನ ಅನುಬಂಧ ಸಾರುವ 'ಅಮ್ಮ ಐ ಲವ್ ಯು' ಚಿತ್ರ ನಿಮಗೆ ಬೋರ್ ಹೊಡೆಸುವುದಿಲ್ಲ.

ಫೈನಲ್ ಸ್ಟೇಟ್ ಮೆಂಟ್
'ಅಮ್ಮ ಐ ಲವ್ ಯು' ಸಿನಿಮಾ ರೀಮೇಕ್ ಆದರೂ ಖಂಡಿತ ನಿರಾಸೆ ಮಾಡಲ್ಲ. ಚಿರಂಜೀವಿ ಸರ್ಜಾ ವೃತ್ತಿ ಜೀವನದಲ್ಲಿಯೇ ಇದು ಒನ್ ಆಫ್ ದಿ ಬೆಸ್ಟ್ ಚಿತ್ರ. ಇಡೀ ಫ್ಯಾಮಿಲಿ ಕೂತು ಈ ಚಿತ್ರವನ್ನ ನೋಡಬಹುದು. ತಾಯಿಯ ಸೆಂಟಿಮೆಂಟ್ ಹೊಂದಿರುವ 'ಅಮ್ಮ ಐ ಲವ್ ಯು' ಚಿತ್ರ ಫ್ಯಾಮಿಲಿ ಆಡಿಯನ್ಸ್ ಹಾಗೂ ಹೆಂಗಳೆಯರಿಗೆ ಹೇಳಿ ಮಾಡಿಸಿದ ಹಾಗಿದೆ. ಲವ್ ಸ್ಟೋರಿಗಳನ್ನ ನೋಡಿ ನೋಡಿ ಬೇಜಾರಾಗಿರುವವರು 'ಅಮ್ಮ ಐ ಲವ್ ಯು' ಚಿತ್ರವನ್ನ ಮಿಸ್ ಮಾಡಿಕೊಳ್ಳಬೇಡಿ.