For Quick Alerts
  ALLOW NOTIFICATIONS  
  For Daily Alerts

  ಗಾಡ್‌ಫಾದರ್ ಟ್ರೈಲರ್ ರಿಲೀಸ್; ಬದಲಾವಣೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ

  |
  Chiranjeevi starrer Godfather movie trailer is out now

  ಇತ್ತೀಚೆಗಷ್ಟೇ ಆಚಾರ್ಯ ಎಂಬ ಸಿನಿಮಾ ಮಾಡಿ ಹೀನಾಯವಾಗಿ ಸೋತಿದ್ದ ಚಿರಂಜೀವಿಗೆ ಸದ್ಯ ಗಾಡ್‌ಫಾದರ್ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯವಿದೆ. ಮೊದಲಿಗೆ ಚಿತ್ರದ ಟೀಸರ್ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕೆಲವೊಂದು ದೃಶ್ಯಗಳ ಬಗ್ಗೆ ವೀಕ್ಷಿಕರು ಕೊಂಕು ನುಡಿದಿದ್ದರು. ನಂತರ ಹಾಡಿನ ವಿಚಾರವಾಗಿಯೂ ಟ್ರೋಲ್ ಆಗಿದ್ದ ಗಾಡ್‌ಫಾದರ್ ಚಿತ್ರತಂಡ ಜನರಲ್ಲಿ ನಿರೀಕ್ಷೆ ಮೂಡಿಸುವಲ್ಲಿ ವಿಫಲವಾಗಿತ್ತು.

  ಸದ್ಯ ಈ ನಿರೀಕ್ಷೆ ಹುಟ್ಟುಹಾಕುವ ಯತ್ನ ಟ್ರೈಲರ್ ಮೂಲಕ ನಡೆದಿದ್ದು, ಈ ಬಾರಿಯೂ ಚಿತ್ರತಂಡ ಯಶಸ್ಸು ಕಂಡಂತೆ ಕಾಣುತ್ತಿಲ್ಲ. ಚಿತ್ರದ ಟ್ರೈಲರ್ ವೀಕ್ಷಿಸಿದ ಪ್ರೇಕ್ಷಕ ಇದು ಮಲಯಾಳಂ ಚಿತ್ರದ ಪಡಿಯಚ್ಚಿನಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ರೀಚ್ ಆಗಿದ್ದ ಲೂಸಿಫರ್ ಚಿತ್ರವನ್ನು ಹಲವಾರು ಮಂದಿ ವೀಕ್ಷಿಸಿರುವ ಕಾರಣ ಇಂಥ ಅಭಿಪ್ರಾಯಗಳು ಹೆಚ್ಚಾಗಿ ವ್ಯಕ್ತವಾಗಿವೆ. ಅದರಲ್ಲೂ ರಿಮೇಕ್ ಚಿತ್ರಗಳಲ್ಲಿ ಕೆಲ ಬದಲಾವಣೆಗಳನ್ನು ಬಯಸುವ ಈಗಿನ ಕಾಲದಲ್ಲಿ ವ್ಯತ್ಯಾಸವಿಲ್ಲದೇ ಚಿತ್ರವನ್ನು ನಿರ್ಮಿಸುವುದು ಚಿತ್ರಕ್ಕೆ ಹಿನ್ನಡೆ.

  ಸದ್ಯ ಚಿರಂಜೀವಿ ಅಭಿನಯದ ಗಾಡ್‌ಫಾದರ್‌ ಸಿನಿಮಾ ಇದೇ ರೀತಿಯ ಹಿನ್ನಡೆ ಅನುಭವಿಸುತ್ತಾ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿದೆ ಟ್ರೈಲರ್.

  ಮಲಯಾಳಂಗಿಂತ ಭಿನ್ನವೇನಿಲ್ಲ

  ಮಲಯಾಳಂಗಿಂತ ಭಿನ್ನವೇನಿಲ್ಲ

  ಯಥಾವತ್ತಾಗಿ ರಾಜ್ಯದ ಮುಖ್ಯಮಂತ್ರಿ ಮರಣ ಹಾಗೂ ಆತನ ಜಾಗ ತುಂಬಲು ಪಕ್ಷದಲ್ಲೇ ಕಿತ್ತಾಟ, ಸಿಎಂ ಮನೆಯಲ್ಲೇ ರಾಜಕಾರಣ ನಡೆಯುವ ದೃಶ್ಯಗಳು ಇಲ್ಲಿಯೂ ಇದ್ದು, ಟ್ರೈಲರ್ ಮೂಲಕ ರಿವೀಲ್ ಆಗಿದೆ. ಇದೇ ಸಂದರ್ಭಕ್ಕೆ ನಾಯಕ ಪ್ರವೇಶಿಸಲಿದ್ದು, ಎಲ್ಲವನ್ನೂ ಸರಿಪಡಿಸುವ ಕಾರ್ಯಕ್ಕೆ ಸಿದ್ಧನಾಗ್ತಾನೆ ಸೇಮ್ ಮಲಯಾಳಂ ಥರಾನೇ. ಇನ್ನು ಅಲ್ಲಿ ಪೃಥ್ವಿರಾಜ್ ಸುಕುಮಾರನ್ ಮೋಹನ್ ಲಾಲ್ ಬೆನ್ನಿಗೆ ನಿಂತು ಸಹಾಯ ಮಾಡಿದರೆ ಇಲ್ಲಿ ಸಲ್ಮಾನ್ ಖಾನ್.

  ಸಲ್ಮಾನ್ ಖಾನ್ ಮಾತ್ರ ತುಸು ವಿಭಿನ್ನ!

  ಸಲ್ಮಾನ್ ಖಾನ್ ಮಾತ್ರ ತುಸು ವಿಭಿನ್ನ!

  ಸದ್ಯ ಟ್ರೈಲರ್ ಗಮನಿಸಿದರೆ ಸಲ್ಮಾನ್ ಖಾನ್ ಬಂದ ನಂತರವಷ್ಟೇ ಚಿತ್ರ ಒರಿಜಿನಲ್‌ಗಿಂತ ವಿಭಿನ್ನವೆಂಬ ಕೊಂಚ ಮಟ್ಟದ ಫೀಲ್ ಸಿಕ್ಕಿದೆ. ಯಾಕೆಂದ್ರೆ ಅಲ್ಲಿ ಪೃಥ್ವಿರಾಜ್ ಸುಕುಮಾರನ್ ಎಲ್ಲಾ ದೃಶ್ಯಗಳಲ್ಲೂ ಬಹಳ ಸೀರಿಯಸ್ ಆಗಿ ಡೀಲ್ ಮಾಡಿದರೆ ಇಲ್ಲಿ ಸಲ್ಮಾನ್ ಖಾನ್ ಗನ್ ಫೈರ್ ಮಾಡಲು ಎದುರಾಳಿಯನ್ನು ಶಿಳ್ಳೆ ಹೊಡೆದು ಕರಿತಾರೆ. ಈ ಅಂಶ ಬಿಟ್ರೆ ಟ್ರೈಲರ್‌ನ ಉಳಿದ ಭಾಗ 'ಕಂಟ್ರೋಲ್ ಪ್ಲಸ್ ಸಿ & ಕಂಟ್ರೋಲ್ ಪ್ಲಸ್ ವಿ' ಅಷ್ತೇ! ಅಂದಹಾಗೆ ಸಿನಿಮಾ ವಿಜಯದಶಮಿ ಪ್ರಯುಕ್ತ ಅಕ್ಟೋಬರ್ 5ಕ್ಕೆ ಬಿಡುಗಡೆಯಾಗಲಿದ್ದು, ಇದು ಮತ್ತೊಂದು ಆಚಾರ್ಯ ಆಗದಿದ್ದರೆ ಸಾಕು ಎನ್ನುತ್ತಿದ್ದಾರೆ ಪ್ರೇಕ್ಷಕರು.

  ಈ ಮಾದರಿಯಲ್ಲಿರಲಿಲ್ಲ ಭೀಮ್ಲಾ ನಾಯಕ್

  ಈ ಮಾದರಿಯಲ್ಲಿರಲಿಲ್ಲ ಭೀಮ್ಲಾ ನಾಯಕ್

  ಇನ್ನು ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಚಿತ್ರ ಇದೇ ವರ್ಷ ತೆರೆಕಂಡಿತ್ತು. ಇದೂ ಸಹ ಮಲಯಾಳಂನ ಸೂಪರ್ ಹಿಟ್ ಸಿನಿಮಾ ಅಯ್ಯಪ್ಪುನುಮ್ ಕೋಶಿಯುಮ್ ಚಿತ್ರದ ರಿಮೇಕ್ ಆಗಿತ್ತು. ಆದರೆ ಈ ಚಿತ್ರ ತನ್ನ ಹಾಡು, ಟೀಸರ್ ಹಾಗೂ ಟ್ರೈಲರ್ ಮೂಲಕವೇ ಮೂಲ ಚಿತ್ರಕ್ಕಿಂತ ತುಸು ವಿಭಿನ್ನ, ತೆಲುಗು ನೇಟಿವಿಟಿಗೆ ತಕ್ಕಂತೆ ಕೆಲ ಬದಲಾವಣೆ ಮತ್ತು ಸೇರ್ಪಡೆಗಳನ್ನು ಮಾಡಲಾಗಿತ್ತು. ಇನ್ನು ಈ ಬದಲಾವಣೆಗೆ ತೆಲುಗಿನ ಪ್ರೇಕ್ಷಕ ಕೂಡ ಸರಿ ಎಂದಿದ್ದ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿತ್ತು. ಇದೀಗ ಗಾಡ್‌ಫಾದರ್ ಟ್ರೈಲರ್‌ನಲ್ಲಿ ಅಂತಹ ಬದಲಾವಣೆಗಳು ಕಂಡುಬರದಿದ್ದು ಚಿತ್ರದಲ್ಲಾದರೂ ತೆಲುಗು ಪ್ರೇಕ್ಷಕರ ಅಭಿರುಚಿಗೆ ತಕ್ಕಂತ ದೃಶ್ಯಗಳನ್ನು ಇಟ್ಟಿರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  English summary
  Chiranjeevi starrer Godfather movie trailer is out now
  Thursday, September 29, 2022, 11:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X